ಮತ್ತೊಂದು ಹೊಸ ಚಿತ್ರ ಜುಲೈ 5 ರಂದು ಬಿಡುಗಡೆಯಾಗುತ್ತಿದೆ. ಅದರ ಹೆಸರು ಜಿಗರ್. ಪ್ರವೀಣ್ ತೇಜ್ ಇದರ ನಾಯಕ ನಟ. ನಾಯಕಿ ವಿಜಯಶ್ರೀ. ಕಥೆಯ ಎಳೆಯನ್ನು ಕಂಡರೆ ಇದು ಕರಾವಳಿಯ ಕಥೆ. ಅದರಲ್ಲೂ ಮೀನುಗಾರರ ಕಥೆ.
Rakshith Shetty : ಊರ ಹಾದಿಯ ಹುಡುಗನ ಹಂಬಲದ ಪಯಣ
ಒಂದು ವೃತ್ತಿ ಸಮುದಾಯ, ಅದರೊಳಗೆ ಒಂದಿಷ್ಟು ಸಂಘಟನೆ-ಸಂಸ್ಥೆಗಳು, ಅದರಲ್ಲಿನ ಒಳ ರಾಜಕೀಯ, ಅವುಗಳ ಕಾಣದ ಮುಖ-ಹೀಗೆ ಇಂಥ ಬಿಂದುಗಳನ್ನು ಸೇರಿಸಿ ಹೆಣೆದಂತಿದೆ ಕಥೆ. ಇದಕ್ಕೆ ಪೂರಕವಾಗಿ ಪ್ರೀತಿ, ಪ್ರಣಯ, ಹಾಸ್ಯ ಎಲ್ಲವೂ ಸೇರಿರುತ್ತದಂತೆ.
ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಸೂರಿ ಕುಂದರ್. ಸುಮಾರು 15 ವರ್ಷಗಳಿಂದ ಚಿತ್ರರಂಗದಲ್ಲಿರುವ ಸೂರಿ ಈ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಪೂಜಾ ವಸಂತಕುಮಾರ್ ನಿರ್ಮಿಸಿದ್ದಾರೆ.
New Movie : ನಾ ನಿನ್ನ ಬಿಡಲಾರೆ 2.0 ಗೆ ಹೇಮಂತ್ ಹೆಗಡೆ ತಯಾರಿ
ಇತ್ತೀಚೆಗೆ ಟ್ರೇಲರ್ ಬಿಡುಗಡೆ ಮಾಡಿದ ಸಂದರ್ಭದಲ್ಲೂ ಇಂಥ ಮಾಹಿತಿ ಹಂಚಿಕೊಳ್ಳಲಾಯಿತು. ಅದರ ಪ್ರಕಾರ, ಕಥಾನಾಯಕ ಮೀನುಗಾರಿಕೆಯ ಟೆಂಡರ್ ನಲ್ಲಿ ಭಾಗವಹಿಸುತ್ತಾನೆ. ಅದು ಅವನನ್ನು ಭೂಗತಲೋಕದವರೆಗೆ ಕರೆದೊಯ್ಯುತ್ತದೆ. ಅಲ್ಲಿನ ಮೂರ್ನಾಲ್ಕು ಸಂಘಗಳು, ಅದರ ಸಂಘರ್ಷಗಳು ಕಥಾನಾಯಕನಿಗೆ ಬೇರೆ ಕಥೆಯನ್ನು ಪರಿಚಯಿಸುತ್ತವೆ. ಇದು ಕಥೆಯ ಸ್ಥೂಲ ರೂಪ.
ಕಥೆಗೆ ತಕ್ಕಂತೆ ಕಡಲು, ಮೀನು ಇತ್ಯಾದಿಯೇ ಹೂರಣವಾದ ಕಾರಣ ಚಿತ್ರೀಕರಣವೂ ಮಲ್ಪೆ, ಉಡುಪಿ, ಕುಂದಾಪುರ ಸುತ್ತಮುತ್ತ ಕೈಗೊಳ್ಳಲಾಗಿತ್ತು.
FireFly: ಮೂರು ಮಿಣುಕು ಹುಳಗಳ ಕಥೆ ಬೆಳಕಿನ ಹಬ್ಬಕ್ಕೆ ಫೈರ್ ಫ್ಲೈ
ಸಂಗೀತ ನಿರ್ದೇಶನ ರಿತ್ವಿಕ್ ಮುರಳೀಧರ್ ರದ್ದು. ಗಣೇಶ್ ಗೀತೆ ಬರೆದಿದ್ದರೆ, ಶಿವಸೇನರದ್ದು ಛಾಯಾಗ್ರಹಣ.