Sunday, December 22, 2024
spot_img
More

    Latest Posts

    ‌National Film Awards:ರಾಷ್ಟ್ರೀಯ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಸಿಕ್ಕ ಪ್ರಶಸ್ತಿ ಆರು ವರ್ಷದ ಬಳಿಕ ಹೆಚ್ಚು

    ಈ ಬಾರಿ ರಾಷ್ಟ್ರೀಯ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಬಹು ವರ್ಷಗಳ ಮೇಲೆ ಹಲವು ಪ್ರಶಸ್ತಿಗಳು ಬಂದಿವೆ. ಬಹಳ ಮುಖ್ಯವಾಗಿ ಹತ್ತು ವರ್ಷಗಳ ಬಳಿಕ ಅತ್ಯುತ್ತಮ ನಟ ಪ್ರಶಸ್ತಿ ಕನ್ನಡದ ನಟ-ನಿರ್ದೇಶಕನಿಗೆ ಬಂದಿತು. ಕಾಂತಾರದಲ್ಲಿನ ನಟನೆಗಾಗಿ ರಿಷಭ್‌ ಶೆಟ್ಟಿ ಪುರಸ್ಕಾರ ಪಡೆದರು.

    ಅದರೊಂದಿಗೆ ಜನಪ್ರಿಯ ಅಥವಾ ಮನರಂಜನಾ ಚಿತ್ರದ ವಿಭಾಗದಲ್ಲಿ ಕಾಂತಾರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿತು. ಆರು ವರ್ಷದ ಬಳಿಕ ಈ ಬಾರಿ ಹೆಚ್ಚು ಪ್ರಶಸ್ತಿಗಳು ಕನ್ನಡ ಚಿತ್ರರಂಗಕ್ಕೆ ಲಭಿಸಿವೆ. 2018 ರಲ್ಲಿ 13 ಪುರಸ್ಕಾರಗಳು ಲಭಿಸಿತ್ತು.

    ಹಾಗೆಯೇ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ನಟ ಯಶ್‌ ಅಭಿನಯಿಸಿ ಪ್ರಶಾಂತ್‌ ನೀಲ್‌ ನಿರ್ದೇಶಿಸಿದ ಕೆಜಿಎಫ್‌ 2 ಚಿತ್ರಕ್ಕೆ ಲಭಿಸಿತು. ಇದರೊಂದಿಗೆ ಕೆಜಿಎಫ್‌ ಗೆ ಸ್ಟಂಟ್‌ ಕೊರಿಯೋಗ್ರಫಿಗೂ ಪ್ರಶಸ್ತಿ ಬಂದಿದೆ.

    ಬಹಳ ವಿಶೇಷವೆಂದರೆ ಕಥೇತರ ವಿಭಾಗದಲ್ಲೂ ಮೂರು ಪ್ರಶಸ್ತಿಗಳು ಬಂದಿವೆ. ದಿನೇಶ್‌ ಶೆಣೈ ಅವರ ಮಧ್ಯಂತರ ಚಿತ್ರಕ್ಕೆ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಬಂದಿದೆ. ಅದೇ ಚಿತ್ರದ ಸಂಕಲನಕ್ಕೆ ಸುರೇಶ್‌ ಅರಸ್‌ ಪ್ರಶಸ್ತಿ ಪಡೆದಿದ್ದಾರೆ. ಅದರೊಂದಿಗೆ ರಂಗ ವೈಭೋಗ ಕ್ಕೆ ಸುನಿಲ್‌ ಪುರಾಣಿಕ್‌ ರಿಗೆ ಪ್ರಶಸ್ತಿ ಲಭಿಸಿದೆ.

    Girish Kasaravalli-ಗಿರೀಶರ ಪುನರಾಗಮನ:ಆಕಾಶ-ಬೆಕ್ಕು ಮತ್ತು ಘಟಶ್ರಾದ್ಧ !

    ಪ್ರಶಸ್ತಿಗಳ ವಿವರ

    • ಅತ್ಯುತ್ತಮ ಮನರಂಜನಾ ಚಿತ್ರ ಕಾಂತಾರ (ಕನ್ನಡ)
    • ಅತ್ಯುತ್ತಮ ನಟ- ರಿಷಬ್ ಶೆಟ್ಟಿ (ಕಾಂತಾರ)
    • ಅತ್ಯುತ್ತಮ ಕನ್ನಡ ಚಿತ್ರ – ಕೆಜಿಎಫ್: ಚಾಪ್ಟರ್ 2
    • ಅತ್ಯುತ್ತಮ ಆಕ್ಷನ್ ನಿರ್ದೇಶನ – ಕೆಜಿಎಫ್: ಚಾಪ್ಟರ್ 2
    • ಕಥೇತರ ವಿಭಾಗ
    • ಚೊಚ್ಚಲ ನಿರ್ದೇಶನ ಚಿತ್ರ – ಮಧ್ಯಂತರ – ದಿನೇಶ್‌ ಶೆಣೈ
    • ಸಂಕಲನ – ಸುರೇಶ್‌ ಅರಸ್‌ (ಮಧ್ಯಂತರ)
    • ಕಲೆ-ಸಾಂಸ್ಕೃತಿಕ ಪ್ರಶಸ್ತಿ – ರಂಗ ವೈಭೋಗ (ಸುನಿಲ್‌ ಪುರಾಣಿಕ್)‌
    • ಉಳಿದಂತೆ ವಿವಿಧ ಆತ್ಯುತ್ತಮ ಪ್ರಶಸ್ತಿಗಳು
    • ಅತ್ಯುತ್ತಮ ಚಲನಚಿತ್ರ- ಆಟ್ಟಂ (ಮಲಯಾಳಂ)
    • ನಟಿ – ನಿತ್ಯಾ ಮೆನನ್ ಮತ್ತು ಮಾನಸಿ ಪರೇಖ್
    • ನಿರ್ದೇಶಕ – ಸೂರಜ್ ಬರ್ಜಾತ್ಯ
    • ಪೋಷಕ ನಟ – ಪವನ್ ಮಲ್ಹೋತ್ರಾ
    • ಪೋಷಕ ನಟಿ – ನೀನಾ ಗುಪ್ತಾ
    • ಮಹಿಳಾ ಹಿನ್ನೆಲೆ ಗಾಯಕಿ – ಸೌದಿ ವೇಲಕ್ಕ ಸಿಸಿ.225/2009
    • ಮಹಿಳಾ ಹಿನ್ನೆಲೆ ಗಾಯಕಿ – ಬ್ರಹ್ಮಾಸ್ತ್ರ
    • ಚಿತ್ರಕಥೆ – ಆಟ್ಟಂ
    • ಸಂಭಾಷಣೆ – ಗುಲ್​ಮೊಹರ್​
    • ಛಾಯಾಗ್ರಹಣ – ಪೊನ್ನಿಯಿನ್ ಸೆಲ್ವನ್ -ಭಾಗ 1
    • ಚೊಚ್ಚಲ ಚಿತ್ರ- ಫೌಜಾ, ಪ್ರಮೋದ್ ಕುಮಾರ್
    • ತೆಲುಗು ಚಿತ್ರ – ಕಾರ್ತಿಕೇಯ 2
    • ತಮಿಳು ಚಿತ್ರ – ಪೊನ್ನಿಯಿನ್ ಸೆಲ್ವನ್ -ಭಾಗ 1
    • ಪಂಜಾಬಿ ಚಿತ್ರ – ಬಾಘಿ ದಿ ಧೀ
    • ಒಡಿಯಾ ಚಿತ್ರ – ದಮನ್
    • ಮಲಯಾಳಂ ಚಿತ್ರ – ಸೌದಿ ವೇಲಕ್ಕ ಸಿಸಿ.225/2009
    • ಮರಾಠಿ ಚಿತ್ರ – ವಾಲ್ವಿ
    • ಹಿಂದಿ ಚಿತ್ರ – ಗುಲ್​ಮೊಹರ್​
    • ವಿಶೇಷ ಪ್ರಶಸ್ತಿ – ಮನೋಜ್ ಬಾಜಪೇಯಿ ಮತ್ತು ಸಂಜೋಯ್ ಸಲಿಲ್ ಚೌಧರಿ
    • ನೃತ್ಯ ನಿರ್ದೇಶನ – ತಿರುಚಿತ್ರಾಂಬಲಂ
    • ಸಾಹಿತ್ಯ – ಫೌಜ
    • ಸಂಗೀತ ನಿರ್ದೇಶನ – ಪ್ರೀತಮ್ (ಹಾಡುಗಳು),
    • ಹಿನ್ನೆಲೆ ಸಂಗೀತ- ಎ.ಆರ್.ರೆಹಮಾನ್
    • ಮೇಕಪ್ – ಅಪರಾಜಿತೋ
    • ವಸ್ತ್ರ ವಿನ್ಯಾಸ – ಕಛ್ ಎಕ್ಸ್ ಪ್ರೆಸ್
    • ಪ್ರೊಡಕ್ಷನ್ ವಿನ್ಯಾಸ – ಅಪರಾಜಿತೋ
    • ಸಂಕಲನ – ಆಟ್ಟಂ
    • ಧ್ವನಿ ವಿನ್ಯಾಸ – ಪೊನ್ನಿಯಿನ್ ಸೆಲ್ವನ್ -ಪಾರ್ಟ್ 1

    National Film Awards: ಕಾಂತಾರ ಗೆದ್ದರೆ ಕೆಜಿಎಫ್‌ 2 ಸೋಲುತ್ತಾ ಅಥವಾ ಎರಡೂ ಗೆಲ್ಲುತ್ತಾ? ಉಳಿದವು ಸೋಲುತ್ತಾ? ಅವೂ ಗೆಲ್ಲುತ್ತಾ?

    Latest Posts

    spot_imgspot_img

    Don't Miss

    [tdn_block_newsletter_subscribe title_text="Stay in touch" description="VG8gYmUgdXBkYXRlZCB3aXRoIGFsbCB0aGUgbGF0ZXN0IG5ld3MsIG9mZmVycyBhbmQgc3BlY2lhbCBhbm5vdW5jZW1lbnRzLg==" input_placeholder="Email address" tds_newsletter2-image="5" tds_newsletter2-image_bg_color="#c3ecff" tds_newsletter3-input_bar_display="row" tds_newsletter4-image="6" tds_newsletter4-image_bg_color="#fffbcf" tds_newsletter4-btn_bg_color="#f3b700" tds_newsletter4-check_accent="#f3b700" tds_newsletter5-tdicon="tdc-font-fa tdc-font-fa-envelope-o" tds_newsletter5-btn_bg_color="#000000" tds_newsletter5-btn_bg_color_hover="#4db2ec" tds_newsletter5-check_accent="#000000" tds_newsletter6-input_bar_display="row" tds_newsletter6-btn_bg_color="#da1414" tds_newsletter6-check_accent="#da1414" tds_newsletter7-image="7" tds_newsletter7-btn_bg_color="#1c69ad" tds_newsletter7-check_accent="#1c69ad" tds_newsletter7-f_title_font_size="20" tds_newsletter7-f_title_font_line_height="28px" tds_newsletter8-input_bar_display="row" tds_newsletter8-btn_bg_color="#00649e" tds_newsletter8-btn_bg_color_hover="#21709e" tds_newsletter8-check_accent="#00649e" embedded_form_code="JTNDIS0tJTIwQmVnaW4lMjBNYWlsQ2hpbXAlMjBTaWdudXAlMjBGb3JtJTIwLS0lM0UlMEElMEElM0Nmb3JtJTIwYWN0aW9uJTNEJTIyaHR0cHMlM0ElMkYlMkZ0YWdkaXYudXMxNi5saXN0LW1hbmFnZS5jb20lMkZzdWJzY3JpYmUlMkZwb3N0JTNGdSUzRDZlYmQzMWU5NGNjYzVhZGRkYmZhZGFhNTUlMjZhbXAlM0JpZCUzRGVkODQwMzZmNGMlMjIlMjBtZXRob2QlM0QlMjJwb3N0JTIyJTIwaWQlM0QlMjJtYy1lbWJlZGRlZC1zdWJzY3JpYmUtZm9ybSUyMiUyMG5hbWUlM0QlMjJtYy1lbWJlZGRlZC1zdWJzY3JpYmUtZm9ybSUyMiUyMGNsYXNzJTNEJTIydmFsaWRhdGUlMjIlMjB0YXJnZXQlM0QlMjJfYmxhbmslMjIlMjBub3ZhbGlkYXRlJTNFJTNDJTJGZm9ybSUzRSUwQSUwQSUzQyEtLUVuZCUyMG1jX2VtYmVkX3NpZ251cC0tJTNF" descr_space="eyJhbGwiOiIxNSIsImxhbmRzY2FwZSI6IjE1In0=" tds_newsletter="tds_newsletter3" tds_newsletter3-all_border_width="0" btn_text="Sign up" tds_newsletter3-btn_bg_color="#ea1717" tds_newsletter3-btn_bg_color_hover="#000000" tds_newsletter3-btn_border_size="0" tdc_css="eyJhbGwiOnsibWFyZ2luLWJvdHRvbSI6IjAiLCJiYWNrZ3JvdW5kLWNvbG9yIjoiI2E3ZTBlNSIsImRpc3BsYXkiOiIifSwicG9ydHJhaXQiOnsiZGlzcGxheSI6IiJ9LCJwb3J0cmFpdF9tYXhfd2lkdGgiOjEwMTgsInBvcnRyYWl0X21pbl93aWR0aCI6NzY4fQ==" tds_newsletter3-input_border_size="0" tds_newsletter3-f_title_font_family="445" tds_newsletter3-f_title_font_transform="uppercase" tds_newsletter3-f_descr_font_family="394" tds_newsletter3-f_descr_font_size="eyJhbGwiOiIxMiIsInBvcnRyYWl0IjoiMTEifQ==" tds_newsletter3-f_descr_font_line_height="eyJhbGwiOiIxLjYiLCJwb3J0cmFpdCI6IjEuNCJ9" tds_newsletter3-title_color="#000000" tds_newsletter3-description_color="#000000" tds_newsletter3-f_title_font_weight="600" tds_newsletter3-f_title_font_size="eyJhbGwiOiIyMCIsImxhbmRzY2FwZSI6IjE4IiwicG9ydHJhaXQiOiIxNiJ9" tds_newsletter3-f_input_font_family="394" tds_newsletter3-f_btn_font_family="" tds_newsletter3-f_btn_font_transform="uppercase" tds_newsletter3-f_title_font_line_height="1" title_space="eyJsYW5kc2NhcGUiOiIxMCJ9"]