Sunday, December 22, 2024
spot_img
More

    Latest Posts

    National Film Awards: ಕಾಂತಾರ ಗೆದ್ದರೆ ಕೆಜಿಎಫ್‌ 2 ಸೋಲುತ್ತಾ ಅಥವಾ ಎರಡೂ ಗೆಲ್ಲುತ್ತಾ? ಉಳಿದವು ಸೋಲುತ್ತಾ? ಅವೂ ಗೆಲ್ಲುತ್ತಾ?

    ಕಾಂತಾರ ಗೆದ್ದರೆ ಕೆಜಿಎಫ್‌ 2 ಸೋಲುತ್ತದೆಯೇ? ಅಥವಾ ಎರಡೂ ಗೆದ್ದು ಬಿಟ್ಟರೆ? – ಇಂಥದೊಂದು ಪ್ರಶ್ನೆಗೆ ಕೆಲವೇ ಗಂಟೆಗಳಲ್ಲಿ ಉತ್ತರ ದೊರಕಲಿದೆ.

    2022 ನೇ ಸಾಲಿನ ರಾಷ್ಟ್ರೀಯ ಚಿತ್ರ ಪ್ರಶಸ್ತಿ ಪುರಸ್ಕಾರಗಳ ಪ್ರಕಟಣೆಗೆ ಕೆಲವೇ ಗಂಟೆಗಳು ಬಾಕಿ ಇವೆ. ಸಮಿತಿಯ ಕಾರ್ಯಭಾರವೆಲ್ಲ ಮುಗಿದಿದ್ದು, ಹೆಸರುಗಳ ಪ್ರಕಟಣೆಯಷ್ಟೇ ಬಾಕಿ ಇದೆ. ಇಂದು ಸಂಜೆ ವೇಳೆಗೆ ಎಲ್ಲವೂ ಬಹಿರಂಗಗೊಳ್ಳಲಿದೆ.

    Girish Kasaravalli-ಗಿರೀಶರ ಪುನರಾಗಮನ:ಆಕಾಶ-ಬೆಕ್ಕು ಮತ್ತು ಘಟಶ್ರಾದ್ಧ !

    ಈ ಬಾರಿಯ ಪ್ರಶಸ್ತಿಯ ಸೆಣಸಿನಲ್ಲಿಜನಪ್ರಿಯ ಸಿನಿಮಾಗಳ ಸಾಲಿನಲ್ಲಿ ಕಾಂತಾರ, ಕೆಜಿಎಫ್‌ 2 ಮತ್ತಿತರ ಸಿನಿಮಾಗಳು ಇವೆ. ಕಾಂತಾರ ಬಹಳಷ್ಟು ಸುದ್ದಿ ಮತ್ತು ಜನಪ್ರಿಯತೆ ಗಳಿಸಿದ ಸಿನಿಮಾ. ಕೆಜಿಎಫ್‌ 2 ಸಹ ಸದ್ದು ಮಾಡಿದ ಸಿನಿಮಾವೇ. ಈಗ ಪ್ರಶಸ್ತಿಯಲ್ಲೂ ಸೆಣಸಿನಲ್ಲಿವೆ. ಇದಲ್ಲದೇ ಇನ್ನೊಂದು ನೆಲೆಯಲ್ಲಿ ಕಾಂತಾರದ ರಿಷಭ್‌ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯಲ್ಲೂ ಸೆಣಸುವ ಸಾಧ್ಯತೆ ಇದೆ. ಇಲ್ಲೂ ಹಲವಾರು ನಟರು ಪೈಪೋಟಿಯಲ್ಲಿದ್ದಾರೆ.

    ಇವುಗಳಲ್ಲದೇ ಗ್ರೀಷ್ಮಾ ಶ್ರೀಧರ್‌ ಅಭಿನಯದ ನಾನು ಕುಸುಮ, ನಟೇಶ್‌ ಹೆಗಡೆ ನಿರ್ದೇಶಿಸಿದ ಪೆದ್ರೋ, ಚಂಪಾ ಪಿ. ಶೆಟ್ಟಿ ನಿರ್ದೇಶನದ ಕೋಳಿ ಎಸ್ರು. ಪೃಥ್ವಿ ಕೊಣನೂರು ಅವರ ʼಹದಿನೇಳೆಂಟುʼ, ಉತ್ಸವ್‌ ಗೋನವಾರರ ಫೋಟೋ, ಬಿ.ಎಸ್.‌ ಲಿಂಗದೇವರು ಅವರ ವಿರಾಟಪುರದ ವಿರಾಗಿ, ಮಂಸೋರೆ ಅವರ 19.20.21 ಚಲನಚಿತ್ರಗಳು ಪ್ರಶಸ್ತಿಗೆ ಸೆಣಸುತ್ತಿವೆ. ಇವೂ ಸಹ ವಿವಿಧ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಪುರಸ್ಕಾರಗಳನ್ನೂ ಪಡೆದಿವೆ.

    ಈಗ ಚರ್ಚೆಯಲ್ಲಿರುವ ಸಂಗತಿಯೆಂದರೆ ಕಾಂತಾರ ಈಗಾಗಲೇ ಕೆಲವು ಪ್ರಶಸ್ತಿಗಳನ್ನೂ ಪಡೆದಿದೆ. ಕಳೆದ ಗೋವಾ ಚಲನಚಿತ್ರೋತ್ಸವದಲ್ಲೂ ಪ್ರಶಸ್ತಿ ಪಡೆದಿತ್ತು. ಅದರಂತೆಯೇ ಕೆಜಿಎಫ್‌ 2 ಸಹ ಸಾಹಸ ನಿರ್ದೇಶನ ಸೇರಿದಂತೆ ಕೆಲವು ವಿಭಾಗಗಳಲ್ಲಿ ಬೇರೆ ಬೇರೆ ಪ್ರಶಸ್ತಿಗಳು ಪಡೆದಿವೆ. ಹಾಗಾಗಿ ಆಯಾಚಿತವಾಗಿ ಅತ್ಯುತ್ತಮ ಚಿತ್ರಗಳ ಸಾಲಿನಲ್ಲೂ ಪ್ರಶಸ್ತಿಗೆ ಸೆಣಸುತ್ತಿವೆ.

    Thangalan Review: ವಿಕ್ರಮರ ನಿರೀಕ್ಷೆಯ ಬಲೂನು ಅನುಭವದ ದೃಷ್ಟಿಯಿಂದ ಠುಸ್ಸಾಗಿಲ್ಲ !

    ಒಂದುವೇಳೆ ಕಾಂತಾರಕ್ಕೆ ಅತ್ಯುತ್ತಮ ಚಿತ್ರ ನೀಡಿದರೆ ಕೆಜಿಎಫ್‌ 2 ಕ್ಕೆ ಪ್ರಶಸ್ತಿ ಸಿಗುವುದಿಲ್ಲವೇ? ಎಂಬ ಪ್ರಶ್ನೆ ಎದ್ದಿದ್ದರೆ, ಅದರೊಟ್ಟಿಗೇ ಕಾಂತಾರ ಜನಪ್ರಿಯ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾದರೆ ಕೆಜಿಎಫ್‌ 2 ಪ್ರಾದೇಶಿಕ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಲು ಅವಕಾಶವಿದೆ ಎಂಬ ಚರ್ಚೆಯೂ ಚಾಲ್ತಿಯಲ್ಲಿದೆ. ಆದರೆ ಒಂದುವೇಳೆ ಎರಡೂ ಜನಪ್ರಿಯ ಚಿತ್ರಗಳ ಮಾಲಿಕೆಯ ಚಿತ್ರಗಳೇ ಪ್ರಶಸ್ತಿಯನ್ನು ಪಡೆದರೆ, ಉಳಿದ ಹಲವಾರು ಚಿತ್ರಗಳು (ಕಲಾತ್ಮಕ ಚಿತ್ರಗಳೆನ್ನುವ ವಿಭಾಗದ) ಅವಕಾಶ ವಂಚಿತವಾಗಲಿವೆ ಎಂಬ ಸಣ್ಣ ಆತಂಕವೂ ಇದೆ.

    ಯಾಕೆಂದರೆ ಜನಪ್ರಿಯ ಪ್ರಶಸ್ತಿಗಳಿಗೆ ಹಲವಾರು ಪ್ರತ್ಯೇಕ ಸಂಸ್ಥೆಗಳ ಪುರಸ್ಕಾರಗಳೂ ಇವೆ. ಆದರೆ ಉಳಿದ ಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿಯೇ ಪ್ರಮುಖವಾದುದು ಎಂಬುದೂ ಇಲ್ಲಿ ಗಮನಿಸಬೇಕಾದ ಅಂಶ.

    ಅತ್ಯುತ್ತಮ ಚಿತ್ರ ವಿಭಾಗ ಬಿಟ್ಟು ಬೇರೆ ವಿಭಾಗಗಳಲ್ಲಿ ಎಷ್ಟು ಪ್ರಶಸ್ತಿಗಳು ಬಂದರೂ ಮೇಲಿನ ಆತಂಕವನ್ನು ಹೆಚ್ಚಿಸುವುದಿಲ್ಲ. ಹಾಗಾಗಿ ಅತ್ಯುತ್ತಮ ಚಿತ್ರ ವಿಭಾಗವೇ ಎಲ್ಲರ ಕುತೂಹಲದ ಕೇಂದ್ರವಾಗಿದೆ.

    ಈ ಬಾರಿ ಪ್ರಶಸ್ತಿಗೆ ಹಲವಾರು ಒಳ್ಳೆಯ ಚಿತ್ರಗಳು ಇದ್ದವು. ಕೆಲವು ವರ್ಷಗಳಲ್ಲಿ ಪ್ರಶಸ್ತಿಯ ಪಟ್ಟಿಯಲ್ಲೇ ಒಂದೆರಡು ಚಿತ್ರಗಳಷ್ಟೇ ಇರುತ್ತವೆ. ಈ ವರ್ಷ ಹಾಗಲ್ಲ. ಪೆದ್ರೋವಿನಿಂದ ಹಿಡಿದು 19.20.21 ರವರೆಗೆ ಎಲ್ಲವೂ ವಿಭಿನ್ನ ನೆಲೆಯ ಚಿತ್ರಗಳು. ಜನಪ್ರಿಯ ಸಿನಿಮಾಗಳ ಅಬ್ಬರದಲ್ಲಿ ಇವುಗಳೆಲ್ಲ ಕಳೆದು ಹೋದರೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.

    IFFM:ಕಿರುಚಿತ್ರಗಳೆಂದು ಕಡೆಗಣಿಸಬೇಡಿ, ಗಂಭೀರವಾಗಿ ಪರಿಗಣಿಸಿ

    ಮತ್ತೊಂದು ಒಳ್ಳೆಯ ಬೆಳವಣಿಗೆ ಎಂದರೆ ಜನಪ್ರಿಯ ಸಿನಿಮಾಗಳ ತಂಡಗಳು ಇಂಥ ಕಲಾತ್ಮಕ ಚಿತ್ರಗಳನ್ನು ನಿರ್ಮಿಸುವ ಒಳ್ಳೆಯ ಬೆಳವಣಿಗೆ ಆರಂಭವಾಗಿದೆ. ಆಯ್ಕೆ ಸಮಿತಿ ಸಮತೋಲನ ಕಾಯ್ದುಕೊಂಡು ಪ್ರೋತ್ಸಾಹ ಕ್ರಮದ ನೆಲೆಯಲ್ಲಿ ಆಲೋಚಿಸಿದರೆ ಈ ಹೊಸ ಬೆಳವಣಿಗೆ ಒಳ್ಳೆಯ ಚಳವಳಿಯಾಗಿ ಬೆಳೆಯುವ ಲಕ್ಷಣಗಳೂ ಇವೆ. ಯಾವ ರೀತಿಯಲ್ಲಿ ಸಮಿತಿ ಸಮತೋಲನ ಕಾಯ್ದುಕೊಳ್ಳುತ್ತದೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

    ಅಂದ ಹಾಗೆ ಇದು 70 ನೇ ರಾಷ್ಟ್ರೀಯ ಪ್ರಶಸ್ತಿ. ಒಂದಿಷ್ಟು ಬದಲಾವಣೆಗಳೊಂದಿಗೆ ಆಗಮಿಸುತ್ತಿರುವ ಪ್ರಥಮ ಪ್ರಶಸ್ತಿ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಪ್ರಶಸ್ತಿಯ ನಿಯಮಗಳಿಗೆ ಕೆಲವು ತಿದ್ದುಪಡಿಗಳನ್ನು ತಂದಿದೆ.

    ಅತ್ಯುತ್ತಮ ಚೊಚ್ಚಲ ಸಿನಿಮಾಕ್ಕೆ ನೀಡುವ ಪ್ರಶಸ್ತಿಯಿಂದ ಹಿಡಿದು ಕೆಲವು ವಿಶೇಷ ಪ್ರಶಸ್ತಿಗಳನ್ನು ತೆಗೆದು ಅದರ ಬದಲಿಗೆ ವಿಭಾಗಗಳನ್ನು ಪರಿಚಯಿಸಿದೆ. ಸಾಮಾಜಿಕ ಹಾಗೂ ಪಾರಿಸರಿಕ ವಿಭಾಗವೆಂಬುದನ್ನೂ ಪ್ರತ್ಯೇಕವಾಗಿ ಪರಿಗಣಿಸಲಾಗುತ್ತಿದೆ. ಅಲ್ಲದೇ ಅನಿಮೇಷನ್‌ ಸಿನಿಮಾ ಸೇರಿದಂತೆ ಸಿನಿಮಾ ದ ತಾಂತ್ರಿಕ ವಿಭಾಗಗಳಲ್ಲೂ ಕೆಲವು ಪ್ರಶಸ್ತಿಗಳನ್ನು ನೀಡುತ್ತಿದೆ. ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಕೈ ಬಿಟ್ಟಿದೆ. ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕಾರದ ಮೊತ್ತವನ್ನೂ ಹೆಚ್ಚು ಮಾಡಿದೆ.

    New Release:ಆಕೆ ಭಯಾನಕಿಯಾದರೆ ಹಗ್ಗ ಯಾರನ್ನು ಉಳಿಸುತ್ತದೋ?

    ಹಾಗೆಯೇ ಸ್ವರ್ಣ ಕಮಲ, ರಜತ ಕಮಲಕ್ಕೆ ನೀಡುವ ಪ್ರಶಸ್ತಿಯ ಮೊತ್ತವನ್ನೂ ಹೆಚ್ಚಳ ಮಾಡಿದೆ. ಬಹಳ ಮುಖ್ಯವಾಗಿ ಈ ಹಿಂದೆ ಅತ್ಯುತ್ತಮ ಚಿತ್ರ ಪುರಸ್ಕಾರವನ್ನು ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಹಂಚಿ ಕೊಡಲಾಗುತ್ತಿತ್ತು. ಈ ವರ್ಷದಿಂದ ನಿರ್ದೇಶಕನಿಗೆ ಮಾತ್ರ ನೀಡಲಾಗುತ್ತದೆ. ಇಂಥ ಕೆಲವು ತಿದ್ದುಪಡಿಗಳನ್ನು ಕೈಗೊಳ್ಳಲಾಗಿದೆ.

    Latest Posts

    spot_imgspot_img

    Don't Miss

    [tdn_block_newsletter_subscribe title_text="Stay in touch" description="VG8gYmUgdXBkYXRlZCB3aXRoIGFsbCB0aGUgbGF0ZXN0IG5ld3MsIG9mZmVycyBhbmQgc3BlY2lhbCBhbm5vdW5jZW1lbnRzLg==" input_placeholder="Email address" tds_newsletter2-image="5" tds_newsletter2-image_bg_color="#c3ecff" tds_newsletter3-input_bar_display="row" tds_newsletter4-image="6" tds_newsletter4-image_bg_color="#fffbcf" tds_newsletter4-btn_bg_color="#f3b700" tds_newsletter4-check_accent="#f3b700" tds_newsletter5-tdicon="tdc-font-fa tdc-font-fa-envelope-o" tds_newsletter5-btn_bg_color="#000000" tds_newsletter5-btn_bg_color_hover="#4db2ec" tds_newsletter5-check_accent="#000000" tds_newsletter6-input_bar_display="row" tds_newsletter6-btn_bg_color="#da1414" tds_newsletter6-check_accent="#da1414" tds_newsletter7-image="7" tds_newsletter7-btn_bg_color="#1c69ad" tds_newsletter7-check_accent="#1c69ad" tds_newsletter7-f_title_font_size="20" tds_newsletter7-f_title_font_line_height="28px" tds_newsletter8-input_bar_display="row" tds_newsletter8-btn_bg_color="#00649e" tds_newsletter8-btn_bg_color_hover="#21709e" tds_newsletter8-check_accent="#00649e" embedded_form_code="JTNDIS0tJTIwQmVnaW4lMjBNYWlsQ2hpbXAlMjBTaWdudXAlMjBGb3JtJTIwLS0lM0UlMEElMEElM0Nmb3JtJTIwYWN0aW9uJTNEJTIyaHR0cHMlM0ElMkYlMkZ0YWdkaXYudXMxNi5saXN0LW1hbmFnZS5jb20lMkZzdWJzY3JpYmUlMkZwb3N0JTNGdSUzRDZlYmQzMWU5NGNjYzVhZGRkYmZhZGFhNTUlMjZhbXAlM0JpZCUzRGVkODQwMzZmNGMlMjIlMjBtZXRob2QlM0QlMjJwb3N0JTIyJTIwaWQlM0QlMjJtYy1lbWJlZGRlZC1zdWJzY3JpYmUtZm9ybSUyMiUyMG5hbWUlM0QlMjJtYy1lbWJlZGRlZC1zdWJzY3JpYmUtZm9ybSUyMiUyMGNsYXNzJTNEJTIydmFsaWRhdGUlMjIlMjB0YXJnZXQlM0QlMjJfYmxhbmslMjIlMjBub3ZhbGlkYXRlJTNFJTNDJTJGZm9ybSUzRSUwQSUwQSUzQyEtLUVuZCUyMG1jX2VtYmVkX3NpZ251cC0tJTNF" descr_space="eyJhbGwiOiIxNSIsImxhbmRzY2FwZSI6IjE1In0=" tds_newsletter="tds_newsletter3" tds_newsletter3-all_border_width="0" btn_text="Sign up" tds_newsletter3-btn_bg_color="#ea1717" tds_newsletter3-btn_bg_color_hover="#000000" tds_newsletter3-btn_border_size="0" tdc_css="eyJhbGwiOnsibWFyZ2luLWJvdHRvbSI6IjAiLCJiYWNrZ3JvdW5kLWNvbG9yIjoiI2E3ZTBlNSIsImRpc3BsYXkiOiIifSwicG9ydHJhaXQiOnsiZGlzcGxheSI6IiJ9LCJwb3J0cmFpdF9tYXhfd2lkdGgiOjEwMTgsInBvcnRyYWl0X21pbl93aWR0aCI6NzY4fQ==" tds_newsletter3-input_border_size="0" tds_newsletter3-f_title_font_family="445" tds_newsletter3-f_title_font_transform="uppercase" tds_newsletter3-f_descr_font_family="394" tds_newsletter3-f_descr_font_size="eyJhbGwiOiIxMiIsInBvcnRyYWl0IjoiMTEifQ==" tds_newsletter3-f_descr_font_line_height="eyJhbGwiOiIxLjYiLCJwb3J0cmFpdCI6IjEuNCJ9" tds_newsletter3-title_color="#000000" tds_newsletter3-description_color="#000000" tds_newsletter3-f_title_font_weight="600" tds_newsletter3-f_title_font_size="eyJhbGwiOiIyMCIsImxhbmRzY2FwZSI6IjE4IiwicG9ydHJhaXQiOiIxNiJ9" tds_newsletter3-f_input_font_family="394" tds_newsletter3-f_btn_font_family="" tds_newsletter3-f_btn_font_transform="uppercase" tds_newsletter3-f_title_font_line_height="1" title_space="eyJsYW5kc2NhcGUiOiIxMCJ9"]