Friday, March 21, 2025
spot_img
More

    Latest Posts

    New movie : ಸುದೀಪರ ಹೊಸ ಚಿತ್ರಕ್ಕೆ ಇನ್ನೂ ಹೆಸರಿಡಬೇಕು !

    ಸಂದೇಶ್‌ ಪ್ರೊಡಕ್ಷನ್ಸ್‌ ನ ಚಿತ್ರದಲ್ಲಿ ನಟ ಸುದೀಪ್‌ ನಟಿಸುತ್ತಿರುವುದು ತಿಳಿದಿರಬಹುದು. ಇತ್ತೀಚೆಗೆ ನಿರ್ಮಾಪಕ ಸಂದೇಶ್‌ ನಾಗರಾಜ್‌ ಜತೆ ಸುದೀಪ್‌ ಇದ್ದ ಚಿತ್ರ ಪ್ರಕಟವಾಗಿತ್ತು. ಅದೀಗ ಸತ್ಯವಾಗಿದೆ. ಸಂದೇಶ್‌ ನಾಗರಾಜ್‌ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ಸುದೀಪ್‌ ನಟಿಸುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

    ಚಿತ್ರೀಕರಣ, ಲೊಕೇಷನ್‌ ವಿವರ ಯಾವುದೂ ಇನ್ನೂ ಬಹಿರಂಗಗೊಂಡಿಲ್ಲ. ಸುದೀಪರ ಚಿತ್ರವನ್ನು ನಿರ್ದೇಶಿಸುವವರು ಯಾರು ಎಂಬುದೂ ಖಚಿತವಾಗಿಲ್ಲ. ಅವೆಲ್ಲವೂ ಶೀಘ್ರವೇ ಅಂತಿಮಗೊಳ್ಳುವ ಸಾಧ್ಯತೆ ಇದೆ.

    ಸಂದೇಶ್‌ ಪ್ರೊಡಕ್ಷನ್ಸ್‌ ಹಲವಾರು ಪ್ರಮುಖ ಚಲನಚಿತ್ರಗಳನ್ನು ನಿರ್ಮಿಸಿರುವ ಕಂಪೆನಿ.  ಇತ್ತೀಚೆಗೆ ಬಿಡುಗಡೆಗೊಂಡಿದ್ದ ಘೋಸ್ಟ್‌ ಸಹ ಇದೇ ಕಂಪೆನಿಯ ನಿರ್ಮಾಣ. ಈಗ ಪ್ರಭುದೇವ ನಟನೆಯ ʼವುಲ್ಫ್ʼ ಸಿದ್ಧವಾಗಿದೆ. ಹಾಗೆಯೇ ಸೃಜನ್‌ ಲೋಕೇಶರ ಜಿಎಸ್‌ ಟಿ ಚಿತ್ರದ ಕೆಲಸಗಳೂ ಪೂರ್ಣಗೊಂಡು ಬಿಡುಗಡೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ಘೋಸ್ಟ್‌ ೨, ದಳವಾಯಿ ಮುದ್ದಣ್ಣ, ಬೀರಬಲ್‌ ೨ ಸಿನಿಮಾಗಳ ನಿರ್ಮಾಣಕ್ಕೂ ಸಿದ್ಧತೆ ನಡೆದಿದೆಯಂತೆ.

    ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಪ್ರಭುದೇವ ನಟನೆಯ “ವುಲ್ಫ್” ಸಿನಿಮಾ ರೆಡಿಯಾಗಿದೆ. ಸೃಜನ್‌ ಲೋಕೇಶ್‌ ಜತೆಗಿನ ಜಿಎಸ್‌ಟಿ ಚಿತ್ರದ ಶೂಟಿಂಗ್‌ ಕೆಲಸಗಳೂ ಮುಕ್ತಾಯವಾಗಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ. ಇದರ ಜತೆಗೆ “ಘೋಸ್ಟ್‌ 2” ಅಥವಾ ಶಿವಣ್ಣನ ಜತೆಗಿನ “ದಳವಾಯಿ ಮುದ್ದಣ್ಣ”, “ಬೀರಬಲ್ 2” ಸಿನಿಮಾಗಳೂ ಸೆಟ್ಟೇರಲಿವೆ.

    *

    ಚೆಫ್‌ ಚಿದಂಬರ : ಅನಿರುದ್ಧರನ್ನು ಮತ್ತೆ ಬೆಳ್ಳಿತೆರೆಗೆ ಎಳೆದು ತರಲಿದೆಯೇ?

    ಜೂನ್ 14 ರಂದು ಬಿಡುಗಡೆಗೆ ಸಜ್ಜಾಗಿರುವ ಅನಿರುದ್ಧರ ಡಾರ್ಕ್ ಕಾಮಿಡಿ ಜಾನರ್ ನ  “chef ಚಿದಂಬರ” ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ.   ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಜನಪ್ರಿಯರಾದ ಅನಿರುದ್ದ್ ಜತ್ಕರ್ ನಾಯಕನಾಗಿ ಐದು ವರ್ಷಗಳ ಬಳಿಕ ನಟಿಸಿರುವ ಚಿತ್ರವಿದು.

     ರೂಪ ಡಿ.ಎನ್ ನಿರ್ಮಿಸಿ, ಆನಂದರಾಜ್ ಎಂ ನಿರ್ದೇಶಿಸಿರುವ ಈ ಚಿತ್ರದ ಟ್ರೇಲರ್‌ ನ್ನು ಇತ್ತೀಚೆಗೆ ನಟ ರಮೇಶ್ ಅರವಿಂದ್  ಬಿಡುಗಡೆ ಮಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ರಮೇಶ್‌ ಅರವಿಂದ್‌, ಡಾ. ವಿಷ್ಣುವರ್ಧನ್ ಹಾಗೂ ತಮ್ಮ ನಡುವಿನ ಒಡನಾಟವನ್ನು ನೆನಪಿಸಿಕೊಂಡಿದ್ದು ವಿಶೇಷ. ಈ ಚಿತ್ರದ ಟ್ರೇಲರ್ ಚೆನ್ನಾಗಿದೆ.  ಕುತೂಹಲವನ್ನೂ ಮೂಡಿಸಿದೆ ಎಂದವರು ರಮೇಶ್.‌

     ಚಿತ್ರದ ಮುಹೂರ್ತದಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಅವರು ಚಾಲನೆ ನೀಡಿದ್ದನ್ನೂ ವಿವರಿಸಿದರು. ಕಿಚ್ಚ ಸುದೀಪ್ ಟೀಸರ್ ಗೆ ಧ್ವನಿ ನೀಡಿ ಪ್ರೋತ್ಸಾಹಿಸಿದ್ದರೆ, ರಮೇಶ್‌ ಅರವಿಂದ್‌ ಟ್ರೇಲರ್‌ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಚಿತ್ರ ಪ್ರೇಕ್ಷಕರು ಸಿನಿಮಾ ನೋಡಿ ಹಾರೈಸಬೇಕು ಎಂದು ಕೋರಿದವರು ನಟ ಅನಿರುದ್ಧ.

    ಚಿತ್ರದ ಚಿತ್ರೀಕರಣ 29 ದಿನಗಳಲ್ಲೇ ಮುಗಿಯಿತು. ಚಿತ್ರದಲ್ಲಿರುವ ಮೂರು ಹಾಡುಗಳಲ್ಲಿ ಒಂದನ್ನು ಅನಿರುದ್ಧ ಹಾಡಿದ್ದಾರೆ. ಮೂರು ಹಾಡುಗಳಿದೆ. ಅದರಲ್ಲಿ ಒಂದು ಹಾಡನ್ನು ಅನಿರುದ್ದ್ ಅವರೆ ಹಾಡಿದ್ದಾರೆ. ರೂಪ ಡಿ.ಎನ್ ಚಿತ್ರ ನಿರ್ಮಿಸಿದ್ದಾರೆ. ಡಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರ ಪ್ರೇಕ್ಷಕರಿಗೂ ಪ್ರಿಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದವರು ನಿರ್ದೇಶಕ ಆನಂದರಾಜ್.

    ಚಿತ್ರದ ನಾಯಕಿಯರಾದ ನಿಧಿ ಸುಬ್ಬಯ್ಯ ಹಾಗೂ “ಲವ್ ಮಾಕ್ಟೇಲ್” ಖ್ಯಾತಿಯ ರೆಚೆಲ್ ಡೇವಿಡ್ ಅವರು ತಮ್ಮ ಪಾತ್ರದ ಬಗ್ಗೆ ವಿವರಿಸಿದರು. ನಿರ್ಮಾಪಕಿ ರೂಪ ಅವರ ಪತಿ ಸರ್ವೋತ್ತಮ್‌,  ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್, ಛಾಯಾಗ್ರಾಹಕ ಉದಯ್ ಲೀಲ, ಸಂಕಲನಕಾರ ವಿಜೇತ್ ಚಂದ್ರ ಹಾಗೂ ಸಂಭಾಷಣೆಕಾರ ಗಣೇಶ್ ಪರಶುರಾಮ್ ಮತ್ತಿತರರು ಸಾಕ್ಷಿಯಾದರು.

    ಚೆಫ್‌ ಚಿದಂಬರ ಮತ್ತೆ ಅನಿರುದ್ಧರನ್ನು ಬೆಳ್ಳಿತೆರೆಗೆ ಸೆಳೆದು ತರಲಿದೆಯೇ ಕಾದು ನೋಡಬೇಕಿದೆ.

    Latest Posts

    spot_imgspot_img

    Don't Miss