ಈ ರಾಜ್ ಬಿ ಶೆಟ್ಟಿ ಎಲ್ಲೆಲ್ಲಿ ಹೋಗಿ ಬರ್ತಾರೆ? ಅವರ ಎದುರು ಎಷ್ಟು ಸ್ಟಾರ್ ?
ಒಂದು ಮೊಟ್ಟೆಯ ಕಥೆ ಎಂದು ಬಂದವರು ಮೊನ್ನೆ ಮೊನ್ನೆ ಎನ್ನುವಂತೆ ಗರುಡ ಗಮನ ವೃಷಭ ವಾಹನ ಮಾಡಿ ಸದ್ದು ಮಾಡಿದರು. ಕನ್ನಡ ಚಿತ್ರರಂಗದಲ್ಲಿ ಸದ್ದು ಜೋರಾಗಿ ಕೇಳಿಬಾರದಿದ್ದರೂ ಮಲಯಾಳಂ ಚಿತ್ರರಂಗ, ಹಿಂದಿ ಚಿತ್ರರಂಗದಲ್ಲೆಲ್ಲ ಜೋರಾಗಿ ಸದ್ದು ಮಾಡಿತು.
ಬಳಿಕ ಟೋಬಿ ಪ್ರಯೋಗ ಎಲ್ಲರಿಗೂ ಇಷ್ಟವಾಗಲಿಲ್ಲ. ಹಾಗೆಂದು ಪ್ರಯೋಗ ನಿಲ್ಲಿಸಲಿಲ್ಲ. ಇದರ ಮಧ್ಯೆ ತಣ್ಣನೆಯ ರಾಗ ಹಾಡಿಕೊಂಡು ಸ್ವಾತಿ ಮುತ್ತಿನ ಮಳೆ ಹನಿಯೆ ಎಂದುಕೊಂಡು ಸಾಗಿದರು. ಮಲಯಾಳಂನಲ್ಲಿ ಮಮ್ಮುಟ್ಟಿ ಜತೆ ಟರ್ಬೊದಲ್ಲಿ ಅಭಿನಯಿಸಿದ್ದು ಜೋರಾಗಿಯೇ ಇತ್ತು. ರೂಪಾಂತರವೂ ಆಯಿತು. ಕೆಲವು ದಿನಗಳ ಮೊದಲು ಹಿಂದಿ ಚಿತ್ರರಂಗದಲ್ಲೂ ನಟಿಸಲು ಹೊರಟ ಸುದ್ದಿ ಬಂದಿದೆ.
ಇದರ ಮಧ್ಯೆ ರಕ್ಕಸ ಪುರದೊಳ್ ಹೊರಟಿದ್ದಾರಂತೆ. ಸಾಹಸ ನಿರ್ದೇಶಕ ಕೆ.ರವಿವರ್ಮ ನಿರ್ಮಿಸುತ್ತಿರುವ ಚಿತ್ರ. ರವಿ ಸಾರಂಗರ ನಿರ್ದೇಶನವಿದೆ. ಹಾಗೆ ನೋಡಿದರೆ ಈ ಚಿತ್ರ ನಿರ್ಮಾಪಕರ ಹಾಗೂ ನಿರ್ದೇಶಕರ ಚೊಚ್ಚಲ ಚಿತ್ರ. ಅದಕ್ಕೆ ರಾಜ್ ಬಿ ಶೆಟ್ಟಿಯವರ ಅಮೋಘ ಅಭಿನಯ ಸೇರಿಕೊಳ್ಳಲಿದೆ. ಇತ್ತೀಚೆಗಷ್ಟೇ ಚಿತ್ರದ ಪೂಜೆಯೂ ನೆರವೇರಿತು.
“ದಿ ವಿಲನ್”, “ಏಕ್ ಲವ್ ಯಾ” , “ಕೆಡಿ” ಮುಂತಾದ ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದವರು ರವಿ ಸಾರಂಗ. ಈ ಚಿತ್ರದ ಕಥೆ ತುಂಬಾ ಚೆನ್ನಾಗಿದೆಯಂತೆ. ಜನರನ್ನು ಚಿತ್ರಮಂದಿರಕ್ಕೆ ಕರೆ ತರಲಿದೆಯಂತೆ. ಆ ನಿರೀಕ್ಷೆ ಚಿತ್ರತಂಡದ್ದು.
National Film Awards:ರಾಷ್ಟ್ರೀಯ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಸಿಕ್ಕ ಪ್ರಶಸ್ತಿ ಆರು ವರ್ಷದ ಬಳಿಕ ಹೆಚ್ಚು
ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿಯವರು ಪೊಲೀಸ್ ಟೋಪಿ ಧರಿಸಲಿದ್ದಾರೆ. ಅಂದರೆ ಪೊಲೀಸ್ ಅಧಿಕಾರಿ ಪಾತ್ರ. ಎಸ್ ಪಿಯೋ ಡಿವೈ ಎಸ್ ಪಿ ಯೋ ಗೊತ್ತಿಲ್ಲ. ವಿಚಿತ್ರವೆಂದರೆ ಸಿನಿಮಾಗಳಲ್ಲಿ ಹೆಚ್ಚಾಗಿ ಎಸಿಪಿಯೇ ಇರ್ತಾರಪ್ಪ. ಡಿಸಿಪಿ, ಡಿವೈಎಸ್ ಪಿ, ಎಸ್ ಪಿ ಬಹಳ ಕಡಿಮೆ. ಇನ್ನೂ ವಿಶೇಷವೆಂದರೆ ಹೆಚ್ಚು ಎಸ್ ಪಿ ಆಗಿರುವುದು ನಟಿಯರೇ ಎಂದು ಒಂದು ಲೆಕ್ಕಾಚಾರ. ಹಾಗಾಗಿ ರಾಜ್ ಬಿ ಶೆಟ್ಟಿ ಎದುರು ಎಷ್ಟು ಸ್ಟಾರ್ ಗಳೋ ನೋಡಬೇಕು. ರಾಜ್ ಶೆಟ್ಟಿಯವರ ಪ್ರಕಾರ ಇದೊಂದು ವಿಭಿನ್ನ ಪಾತ್ರವಂತೆ.
ನಿರ್ದೇಶಕ ಪ್ರೇಮ್ ಮತ್ತು ನಟಿ ರಕ್ಷಿತಾರ ಬೆಂಬಲವಿರುವ ಚಿತ್ರವಿದು. ಪ್ರೇಮರ ಬಳಿ ಹತ್ತು ವರ್ಷಗಳಿಂದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದವರಂತೆ ರವಿ ಸಾರಂಗ. ಅವರು ಹೇಳುವಂತೆ “ರಕ್ಕಸ” ಎಂದರೆ ರಾಕ್ಷಸ. “ಪುರ” ಎಂದರೆ ಊರು. ರಾಕ್ಷಸರೇ ಇರುವ ಊರು ಎಂಬುದಂತೆ. ಮನುಷ್ಯನ ಎರಡು ಗುಣಗಳಲ್ಲಿ ಕೆಟ್ಟದನ್ನೂ ರಕ್ಕಸ ಎನ್ನಬಹುದು ಎನ್ನುತ್ತಾರೆ ರವಿ. ಒಳ್ಳೆಯ ಕಥೆ ಇದೆ. ಅದಕ್ಕೇ ಚಿತ್ರ ಮಾಡಲು ಒಪ್ಪಿಕೊಂಡೆ ಎನ್ನುತ್ತಾರೆ ರವಿವರ್ಮ.
Girish Kasaravalli-ಗಿರೀಶರ ಪುನರಾಗಮನ:ಆಕಾಶ-ಬೆಕ್ಕು ಮತ್ತು ಘಟಶ್ರಾದ್ಧ !
ನಾಯಕಿ ಸ್ವಾತಿಷ್ಟ ಕೃಷ್ಣ, ನಟ ಬಿ.ಸುರೇಶ್, ಅರ್ಚನಾ ಕೊಟ್ಟಿಗೆ, ಗೌರವ್ ಶೆಟ್ಟಿ, ಸಿದ್ದಣ್ಣ, ಸುಮ, ಅನಿರುದ್ದ್ ಭಟ್ ಮತ್ತಿತರರ ಬಳಗವಿದೆ. ಅರ್ಜುನ್ ಜನ್ಯರ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ರ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನವಿದೆ. ರವಿವರ್ಮರದ್ದೇ ಸಾಹಸ ನಿರ್ದೇಶನವಿದೆ.