ಬಹುಶಃ ಕನ್ನಡ ಚಿತ್ರರಂಗದಲ್ಲಿ ಒಂದು ಯುದ್ಧಭೂಮಿಯ ಕಥೆ ಸಿದ್ಧವಾಗುತ್ತಿದೆ. ಅಕ್ಟೋಬರ್ ನಲ್ಲೇ ಬಿಡುಗಡೆಯಾಗಬಹುದು ಅಥವಾ ಅನಂತರದ ದಿನಗಳಲ್ಲಿ. ಆದರೆ ಜರ್ಮನ್, ಪೋಲಿಷ್ ಭಾಷೆಗಳ ಸಿನಿಮಾದಲ್ಲಿನ ಆ ಯುದ್ಧವನ್ನು ಆವರಿಸಿಕೊಂಡ ಊರು, ನಿಶ್ಶಬ್ದ, ಎಲ್ಲಿ ಕೇಳಿದರೂ ಸೈನಿಕರ ಬೂಟಿನ ಸಪ್ಪಳ, ಬಂದೂಕು, ಶಬ್ದ ಇತ್ಯಾದಿ- ಒಂದು ರೀತಿಯಲ್ಲಿ ಆವರಿಸಿಕೊಳ್ಳುವಂತೆ ಚಿತ್ರಿಸುತ್ತಾರೆ.
ಅಂಥದ್ದೇ ಒಂದು ಚಿತ್ರ ಕನ್ನಡದಲ್ಲೂ ಸಿದ್ಧಗೊಳ್ಳುತ್ತಿದೆ. ದುರಂತ ಕಥೆಯ ಎಳೆಯಲ್ಲಿ ಸಾಗುವಂತೆ ತೋರುವ ಟೀಸರ್ ಮೊದಲ ನೋಟದಲ್ಲೇ ನಿರ್ದೇಶಕ ಏನನ್ನೋ ಹೇಳಲು ಹೊರಟಿದ್ದಾರೆ ಎಂದೆನಿಸುತ್ತದೆ. ಒಳ್ಳೆಯ ಚಿತ್ರವಿರಬಹುದೇನೋ ಎಂಬ ಭಾವವನ್ನೂ ವಿಶ್ವಾಸವನ್ನೂ ಮೂಡಿಸುತ್ತದೆ.
ನಟ ರಮೇಶ್ ಅರವಿಂದ್ ಮತ್ತು ಗಣೇಶ್ ಅಭಿನಯದ ಪ್ರೊಡಕ್ಷನ್ ನಂ. 6 ರ ಹೆಸರು ರಾಮ್ ಎಂದಾಗಿದೆ. ಇದಕ್ಕೆ ಜೋಡಿಸಿಕೊಂಡು ಯುವರ್ ಸಿನ್ಸಿಯರ್ಲಿ ಎಂದಿದೆ. ಇವೆಲ್ಲವೂ ಬಿಡುಗಡೆಯಾದ ಸಿನಿಮಾದ ಟೀಸರ್ ನ ಅಂಶಗಳು. ಗಣೇಶ ಚತುರ್ಥಿಯ ಮುನ್ನಾ ದಿನ ಗೌರಿ ಹಬ್ಬದಂದು ಟೀಸರ್, ಶೀರ್ಷಿಕೆ ಎಲ್ಲವೂ ಬಿಡುಗಡೆಯಾಗಿದೆ.
ಹಾದಿ ಎಲ್ಲಿಗೆ ಮುಗಿಯುತ್ತದೋ ಅಲ್ಲಿಂದ ನಿಜವಾದ ಪಯಣ ಶುರುವಾಗುತ್ತದೆ ಎಂಬುದು ಒಂದು ಅರ್ಥದಲ್ಲಿ ಅಂತ್ಯವೂ ಹೌದು, ಆರಂಭವೂ ಹೌದು. ಇದೇ ಸಾಲನ್ನು ಸಿನಿಮಾದ ಟೀಸರ್ ನಲ್ಲೂ ಬಳಸಲಾಗಿದೆ. ಹಾಗಾಗಿ ನಟರಿಬ್ಬರು ಕಥೆಯನ್ನು ಆರಂಭಿಸುತ್ತಾರೋ, ಮುಗಿಸಲು ತೆರೆಯ ಮೇಲೆ ಬರುತ್ತಾರೋ ಕಾದು ನೋಡಬೇಕಿದೆ.
ಎ. ಆರ್. ವಿಖ್ಯಾತ್ ಈ ಸಿನಿಮಾದ ನಿರ್ದೇಶಕ. ಪುಷ್ಪಕ ವಿಮಾನ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ ವಿಖ್ಯಾತ್ ರಿಗೆ ಒಂದು ಅಭಿರುಚಿಯಂತೂ ಇದೆ. ತಮ್ಮ ನಿರ್ಮಾಣಕ್ಕೆ ತೋರುತ್ತಿದ್ದ ಅಭಿರುಚಿಯೇ ನಿರ್ದೇಶನದ ನೆಲೆಯಲ್ಲೂ ಮುಂದುವರಿಯುತ್ತದೆಯೋ ಗೊತ್ತಿಲ್ಲ.
New Release : ಇಬ್ಬನಿ ತಬ್ಬಿದ ಇಳೆಯಲಿ; ಅಲ್ಲಿ ಇಲ್ಲಿ ನೋಡಬೇಡಿ, ಚಿತ್ರಮಂದಿರಕ್ಕೆ ಬನ್ನಿ
ಯುರೋಪ್ ನೆಲದ ಯುದ್ಧದ ಊರುಗಳನ್ನು ಅದೇ ರೀತಿಯಲ್ಲಿ ಕನ್ನಡದಲ್ಲಿ ಕಂಡದ್ದು ಕಡಿಮೆ. ಅಂಥದೊಂದು ವಾತಾವರಣ ಈ ಸಿನಿಮಾದಲ್ಲಿ ಕಾಣ ಸಿಗುತ್ತದೋ ಗೊತ್ತಿಲ್ಲ. ಒಂದೋ ಎರಡು ತಿಂಗಳು ಕಾಯಬೇಕಿದೆ.
ಸೇನೆಯ ತುಕಡಿ ಸಾಗುತ್ತಿರುವ ಖಾಲಿಯಾದ ಊರಿನಲ್ಲಿ ಗಣೇಶ್ ಸೈಕಲ್ಲಿನಲ್ಲಿ ಮುಂದೆ ರಮೇಶ್ ಅರವಿಂದರನ್ನುಕುಳ್ಳಿರಿಸಿಕೊಂಡು ಸೈಕಲ್ ತುಳಿಯುತ್ತಾ ಬರುವ ದೃಶ್ಯ. ಅರವಿಂದ್ ಸಂಧ್ಯಾ ಎಂದು ಕೂಗುವ ದೃಶ್ಯ. ಸೇನಾಧಿಪತಿ ಇವರನ್ನು ಕೆಕ್ಕರಿಸಿ ನೋಡುವ ದೃಶ್ಯ..
Laughing Buddha: ಶೆಟ್ಟರಿಬ್ಬರು ನಗಲಿಕ್ಕೆ ಮತ್ತೊಂದು ಭರ್ಜರಿ ವೀಕೆಂಡ್
ಎಲ್ಲವೂ ಒಂದು ಫ್ಯ್ಲಾಶ್ ಬ್ಯಾಕ್, ಒಂದು ದುರಂತ, ಒಂದು ಸ್ನೇಹ, ಮತ್ತೊಂದು ಬದುಕಿನ ಅವಿಚ್ಛಿನ್ನತೆಯನ್ನು ಪ್ರತಿನಿಧಿಸುವಂತೆ ತೋರುತ್ತಿದೆ.
ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ಮತ್ತೊಂದು ಒಳ್ಳೆಯ ಚಿತ್ರ ಬರುವ ನಿರೀಕ್ಷೆಯಿದೆ. ಬರಲಿ ಮತ್ತಷ್ಟು ಹೊಸ ಚಿತ್ರಗಳು. ಹೊಸ ಚಿತ್ರಗಳ ವರ್ಷಧಾರೆ ಹರಿಯಲಿ !