ಆಗಸ್ಟ್ 15 ಕ್ಕೆ ಗೋಲ್ಡನ್ ಸ್ಟಾರ್ ಗಣೇಶರ ಕೃಷ್ಣಂ ಪ್ರ ಣಯ ಸಖಿಯೂ ಸೇರಿ ಹತ್ತಾರು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಇವುಗಳೆಲ್ಲ ಬರೆಯುವ ಭವಿಷ್ಯ ಏನು ಎಂಬುದನ್ನು ಕಾದು ನೋಡಬೇಕು. ಮುಖ್ಯವಾಗಿ ಕೌಟುಂಬಿಕ ಚಿತ್ರವಾಗಿ ಕೃಷ್ಣ ಪ್ರಣಯ ಸಖಿ ಸಿದ್ಧವಾಗಿದೆಯಂತೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಇದರ ಮಧ್ಯೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಶಿವರಾಜ ಕುಮಾರ್ ರ ಬಹು ನಿರೀಕ್ಷಿತ ಚಿತ್ರವಿದು.
ಗೀತಾ ಪಿಕ್ಚರ್ಸ್ ಲಾಂಛನದಲ್ಲಿರೂಪುಗೊಂಡಿರುವ ಚಿತ್ರ. ಗೀತಾ ಶಿವರಾಜಕುಮಾರ್ ನಿರ್ಮಸಿದ್ದರೆ, ನರ್ತನ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಗೀತೆ (ಟೈಟಲ್ ಸಾಂಗ್) ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿ ಸದ್ದು ಮಾಡಿದೆ.
ಕೃಷ್ಣಂ ಪ್ರಣಯ ಸಖಿ ಗಣೇಶರ ಮೇಲೆ ಆನಂದದ ಮಳೆ ಸುರಿಸುತ್ತದೆಯೇ?
ಕಿನ್ನಾಳ್ ರಾಜ್ ಬರೆದ “ಇತಿಹಾಸವೇ ನಿಬ್ಬೆರಿಗಿಸುವ ಎತ್ತಿ ಹಿಡಿಯುವ ಮೈಲಿಗಲ್ಲು” ಎಂಬುದು ಇದರ ಶೀರ್ಷಿಕೆ ಗೀತೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಒದಗಿಸಿ, ಸಂತೋಷ್ ವೆಂಕಿ ಹಾಡಿದ್ದಾರೆ. ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಜನರಿಗೆ ಈ ಹಾಡು ತಲುಪಿದೆ.
ನರ್ತನ್ ಈ ಹಿಂದೆ ಶಿವರಾಜಕುಮಾರ್ ಗೆ ಮಫ್ತಿ ಚಿತ್ರ ನಿರ್ದೇಶಿಸಿದ್ದರು. ಇದು ಈ ಜೋಡಿಯ ಎರಡನೇ ಚಿತ್ರ.
New Release:ಆಕೆ ಭಯಾನಕಿಯಾದರೆ ಹಗ್ಗ ಯಾರನ್ನು ಉಳಿಸುತ್ತದೋ?
ಶಿವರಾಜಕುಮಾರ್ ಅವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ನವೀನ್ ಕುಮಾರ್ ರ ಛಾಯಾಗ್ರಹಣ, ಆಕಾಶ್ ಹಿರೇಮಠರ ಸಂಕಲನ, ಗುಣರ ಕಲಾ ನಿರ್ದೇಶನ ಹಾಗೂ ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜ ಅವರ ಸಾಹಸ ನಿರ್ದೇಶನವಿದೆ.