Thursday, April 24, 2025
spot_img
More

    Latest Posts

    New Movies:ಸಂಜು ವೆಡ್ಸ್‌ ಗೀತಾ: ಭಾಗ 2 ಬಿಡುಗಡೆಗೆ ಯಾವಾಗ ಮುಹೂರ್ತ?

    ಸಂಜು ವೆಡ್ಸ್‌ ಗೀತಾ ಬಿಡುಗಡೆಗೆ ಸಜ್ಜಾಗುತ್ತಿದೆ. ನಿರ್ದೇಶಕ ನಾಗಶೇಖರ್‌ ನಿರ್ದೇಶಿಸುತ್ತಿರುವ ಚಿತ್ರವಿದು. ಇದು ಎರಡನೇ ಭಾಗ. ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್‌ ನಟಿಸುತ್ತಿರುವ ಚಿತ್ರವಿದು. ವಾಸ್ತವವಾಗಿ ನಟಿ ರಮ್ಯಾ ಕಿಟ್ಟಿಗೆ ಜೋಡಿಯಾಗಬೇಕಿತ್ತು. ಯಾಕೋ ಅದು ತಪ್ಪಿ ರಚಿತಾ ಸೇರಿಕೊಂಡಿದ್ದಾರೆ.

    ನಾಗಶೇಖರ್‌ ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಮುಕ್ತಾಯಗೊಳಿಸಿರುವ ಸಂಜು ವೆಡ್ಸ್‌ ಗೀತಾ 2 ಗೆ, ಬಿಡುಗಡೆಗೆ ದಿನಾಂಕ ಹುಡುಕುವುದೊಂದೇ ಬಾಕಿ ಇದೆ.

    New Movie:ಇಬ್ಬನಿ ತಬ್ಬಿದ ಇಳೆಯಲಿ; ಪ್ರೇಕ್ಷಕನೆಂಬ ರವಿ ತೇಜ ಕಣ್ಣ ತೆರೆದರೆ…!

    ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಛಲವಾದಿ ಕುಮಾರ್ ನಿರ್ಮಿಸುತ್ತಿರುವ ಚಿತ್ರ. 

    ಸಂಜು ಹಾಗೂ ಗೀತಾರ ಹೊಸ ಕೋನದ ಪ್ರೇಮಕಥೆಯನ್ನು ರೇಷ್ಮೆ ಬೆಳೆಯುವ ಹೋರಾಟದ ಹಿನ್ನೆಲೆಯಲ್ಲಿ ಹೇಳಲಾಗಿದೆಯಂತೆ. ಶಿಡ್ಲಘಟ್ಟ,  ಸ್ವಿಟ್ಜರ್ ಲ್ಯಾಂಡ್, ಬೆಂಗಳೂರು ಸುತ್ತಮುತ್ತ 72 ದಿನಗಳ ಆರು ಹಂತಗಳಲ್ಲಿಚಿತ್ರೀಕರಣ ಮುಗಿದಿದೆ. ಕಿಟ್ಟಪ್ಪ, ರಚಿತಾರಾಮ್, ಸಾಧು ಕೋಕಿಲ, ತಬಲಾನಾಣಿ, ಸಂಪತ್‌ ಕುಮಾರ್‌, ಗಿಚ್ಚಿ ಗಿಲಿಗಿಲಿ ವಿನೋದ್ ಮತ್ತಿತರರು ತಾರಾಗಣದಲ್ಲಿರುವ ಚಿತ್ರವಿದು.

    ಎಡಿಟಿಂಗ್‌, ಡಬ್ಬಿಂಗ್‌ ಪ್ರಗತಿಯಲ್ಲಿದೆ. ಮುಂದಿನ ಬಿಡುಗಡೆ ಆಡಿಯೋ. ಈಗ ಹಾಡುಗಳನ್ನು ಹಾಸನ, ಹಾವೇರಿ ಮತ್ತಿತರ ಊರುಗಳಲ್ಲಿ ಬಿಡುಗಡೆ ಮಾಡಬೇಕೆಂದು ಯೋಜಿಸುತ್ತಿದೆ ಚಿತ್ರತಂಡ.

    Rishab Shetty:ರಿಷಭ್‌ ಶೆಟ್ಟರ ಹೊಸ ಅಡುಗೆ ಮತ್ತು ನವ ವೇಷ

    ರೇಷ್ಮೆ ಬೆಳೆಗಾರನಾಗಿ ಕಾಣಿಸಿಕೊಂಡಿದ್ದಾರೆ ಕಿಟ್ಟಿ. ಸತ್ಯಹೆಗಡೆಯವರ ಛಾಯಾಗ್ರಹಣವಿದೆ.  ನಿರ್ದೇಶಕ ಹಾಗೂ ಚಿತ್ರತಂಡ ಹೇಳಿಕೊಳ್ಳುವಂತೆ ಇದು ರೇಷ್ಮೆ ನೂಲಿಗೆ ಒಳ್ಳೆಯ ಬೆಲೆ ಸಿಗಬೇಕಾದು ಹೋರಾಟ ನಡೆಸುವ ಮಣ್ಣಿನ ಪ್ರೇಮಿಗಳ ಪ್ರೇಮ ಕಾವ್ಯವಂತೆ. ಹಾಗೆ ಹೇಳುವುದಾದರೆ ಬರೀ ಮಣ್ಣಿನ ಕಾವ್ಯವಷ್ಟೇ ಅಲ್ಲ, ಈ ಮಣ್ಣಿನ ಕಾವ್ಯ ಎನ್ನಬಹುದು. ಕಿಟ್ಟಿ ಮತ್ತು ರಚಿತಾ ಈ ಮಣ್ಣಿನವರೇ ತಾನೇ.

    ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಸಹ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ.

    ಶ್ರೀಧರ ವಿ. ಸಂಭ್ರಮ್ರ ಸಂಗೀತ ನಿರ್ದೇಶನ, ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿಯವರು  ಹಾಡಿದ್ದಾರೆ. A 24 ಕ್ರಿಯೇಶನ್ಸ್ ಮೂಲಕ ಗೋಕುಲ್ ಫಿಲಂಸ್ ಈ ಚಿತ್ರವನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡಲು ಕಾಯುತ್ತಿದೆ.

    Latest Posts

    spot_imgspot_img

    Don't Miss