Friday, April 4, 2025
spot_img
More

    Latest Posts

    Oscar: ಆಸ್ಕರ್‌ ನಾಮನಿರ್ದೇಶನದ ಪಟ್ಟಿಯಲ್ಲಿ ಒಂದೂ ಕನ್ನಡ ಚಿತ್ರವಿಲ್ಲ

    ಆಸ್ಕರ್‌ ಎಷ್ಟು ದೊಡ್ಡದೋ? ಎಷ್ಟು ಚಿಕ್ಕದೋ? ಕುಂಬಳಕಾಯಿನೋ ಅಥವಾ ಹಾಗಲಕಾಯಿನೋ? ಈ ಕಥೆ ಎಲ್ಲ ಇದ್ದದ್ದೇ. ಆದರೆ ಮುಂದಿನ ಆಸ್ಕರ್‌ ಗೆ ಭಾರತದ ಚಿತ್ರವಾಗಿ ನಾಮ ನಿರ್ದೇಶನ ಮಾಡುವುದಕ್ಕೆ ಪರಿಶೀಲಿಸಲು ಆಯ್ಕೆ ಮಾಡಿದ ಪಟ್ಟಿಯಲ್ಲಿ ಕನ್ನಡದ ಸಿನಿಮಾ ಒಂದೂ ಇಲ್ಲ.

    ಇದು ಕೊಂಚ ಬೇಸರದ ಸಂಗತಿಯೂ ಹೌದು. ಭಾರತೀಯ ಚಿತ್ರರಂಗಕ್ಕೆ ಹಲವಾರು ಅತ್ಯುತ್ತಮ ಹಾಗೂ ಟ್ರೆಂಡ್‌ ಬದಲಿಸುವಂಥ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ಕನ್ನಡ ಚಿತ್ರರಂಗದ್ದು. ಅಂಥ ಚಿತ್ರರಂಗದ ಒಂದು ಚಿತ್ರವೂ ಈ ಬಾರಿ ಚರ್ಚೆಗೂ ಬರಲಿಲ್ಲ. ಯಾಕೆ ಹೀಗೆ? ನಮ್ಮ ಸಿನಿಮಾಗಳು ಚೆನ್ನಾಗಿಲ್ಲವೋ? ಸಿನಿಮಾಗಳನ್ನು ಆಯ್ಕೆ ಮಾಡುವವರು ಸರಿ ಇಲ್ಲವೋ? ಎಂಬ ಚರ್ಚೆ ಸದಾ ನಡೆದೇ ಇರುತ್ತದೆ. ಸಾಮಾನ್ಯವಾಗಿ ಎರಡು ಸಂಗತಿಗಳಲ್ಲಿ ನಾವು ನೆಲೆಗೊಳ್ಳುತ್ತೇವೆ. ಒಂದು- ಆಸ್ಕರ್‌ ಏನು ಮಹಾ? ಅದು ಹೇಗೆ ಕೊಡ್ತಾರೆ ಅಂತಾ ನಮಗೆ ಗೊತ್ತು ಎನ್ನುವುದು. ಎರಡನೆಯದು – ಆಯ್ಕೆ ಮಾಡುವವರೇ ರಾಜಕೀಯ ಮಾಡುತ್ತಾರೆ ಎಂದು ಹೇಳಿ ಸುಮ್ಮನಾಗುವುದು. ಆದರೆ ಆ ಮಟ್ಟದಲ್ಲಿ ಒಂದು ಚಿತ್ರದ ಚರ್ಚೆ ಆಗುವುದು ಆ ಚಿತ್ರತಂಡಕ್ಕೂ ಹಾಗೂ ಚಿತ್ರರಂಗಕ್ಕೂ ಮಹತ್ವದ ಸಂಗತಿ.

    Kannada cinema:ಲಾಂಗುಗಳ ಸಮಾಧಿಯ ಮೇಲೆ ಒಂದಷ್ಟು ಕೆಂಪು ಗುಲಾಬಿಗಳು ಅರಳಲಿ !

    ಈ ಬಾರಿ ಅಂತಿಮವಾಗಿ ಕಿರಣ್‌ ರಾವ್‌ ನಿರ್ದೇಶನದ ಲಾಪತಾ ಲೇಡೀಸ್‌ ಎಂಬ ಹಿಂದಿ ಚಿತ್ರವನ್ನು ಕಳುಹಿಸಿಕೊಡಲಾಗುತ್ತಿದೆ. ಇದು 2025 ರ ಪ್ರಶಸ್ತಿಗೆ ಕಳುಹಿಸುತ್ತಿರುವ ಚಿತ್ರ. 2024 ರಲ್ಲಿ ಮಲಯಾಳಂನ ಎವೆರೆಒನ್‌ ಹೀರೋ ಚಿತ್ರವನ್ನು ಕಳುಹಿಸಲಾಗಿತ್ತು.

    ಚರ್ಚೆ ಯಾಕಿಲ್ಲ?

    ಈ ಪ್ರಶ್ನೆ ಹಲವು ಬಾರಿ ಏಳುವುದು ಉಂಟು. ಆಯ್ಕೆ ಮಾಡುವುದು ಬೇಡ, ಚರ್ಚೆಗೂ ಕನ್ನಡ ಸಿನಿಮಾವನ್ನು ಸ್ವೀಕರಿಸುತ್ತಾರೆಯೇ ಇಲ್ಲವೇ ಎಂಬ ಪ್ರಶ್ನೆಯೂ ಇದೆ. ಈ ಬಾರಿ ತೆಲುಗು- 3, ಮಲಯಾಳಂ – 4, ತಮಿಳು- 6, ಮರಾಠಿ- 3, ಒಡಿಯಾ – 1, 12 ಚಿತ್ರಗಳು ಹಿಂದಿಯವು ಪರಿಶೀಲನೆಯಲ್ಲಿದ್ದವು.

    ಕಲ್ಕಿ 2898 ಎಡಿ, ಹನುಮಾನ್‌, ಚೋಟಾ ಭೀಮ್‌ ಔರ್‌ ಕರ್ಸ್‌ ಆಪ್‌ ದಾಮಯನ್‌, ಆಟ್ಟಂ, ಅನಿಮಲ್‌, ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌ ಎಲ್ಲ ಚಿತ್ರಗಳೂ ಇದ್ದವು. ಈ ಪೈಕಿ ಲಾಪತಾ ಲೇಡೀಸ್‌ ಆಯ್ಕೆಯಾಗಿದೆ.

    ಹಾಗಾದರೆ ಕನ್ನಡದ ಯಾವ ಚಿತ್ರವೂ ಯಾಕಿಲ್ಲ ಎಂಬುದಕ್ಕೆ ಉತ್ತರವು ಸದ್ಯಕ್ಕಿಲ್ಲ.

    Latest Posts

    spot_imgspot_img

    Don't Miss