Friday, March 21, 2025
spot_img
More

    Latest Posts

    ಸಂಜು ವೆಡ್ಸ್‌ ಗೀತಾ ೨ ರಲ್ಲಿ ರಾಗಿಣಿ ಜತೆ ರಚಿತಾ ರಾಮ್

    ರೇಷ್ಮೆಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ ಅರಳುತ್ತಿರುವ ಸಿನಿಮಾ ಸಂಜು ವೆಡ್ಸ್‌ ಗೀತಾದ ಎರಡನೇ ಭಾಗ. ನಿರ್ದೇಶಕ ನಾಗಶೇಖರ್‌ ರ ಚಿತ್ರವಿದು.

    ರೇಷ್ಮೆ ಬೆಳೆಗಾರನ ಬದುಕಿನ ಹೋರಾಟದ ಕಥೆ ಕಾಂಚೀವರಂ ಕಂಡಿದ್ದೇವೆ. ಆದರೆ ಈ ಚಿತ್ರ ಅದಕ್ಕಿಂತ ಭಿನ್ನವಾಗಿರುವ ಸಂಭವ ಹೆಚ್ಚಿದೆ. ಯಾಕೆಂದರೆ ಇದೊಂದು ಪ್ರೇಮಕಥೆ. ಅದು ಬದುಕಿನ ಪ್ರೇಮ ಕಥೆ. ನಾಗಶೇಖರ್‌ ನವೀನ ಪ್ರೇಮಕಥೆ ಹೇಳುತ್ತಾರಂತೆ. ಒಟ್ಟಿನಲ್ಲಿ ಸಂಜು ಮತ್ತು ಗೀತಾರ ನಡುವಿನ ಪ್ರೇಮಕಥೆ.

    Manorathangal:ಬಹುನಟರ, ಬಹು ನಿರ್ದೇಶಕರ ಕಥಾ ಗುಚ್ಛ ಆಗಸ್ಟ್‌ ನಲ್ಲಿ ಬಿಡುಗಡೆ ಜೀ5 ನಲ್ಲಿ

    ಒಂದು ಸಣ್ಣ ಬದಲಾವಣೆ ಇದೆ. ಮೊನ್ನೆವರೆಗೂ ರಮ್ಯಾ ರ ಮಾತು ಕೇಳಿಬಂದಿತ್ತು. ‍ಶ್ರೀನಗರ ಕಿಟ್ಟಿ ಜತೆ ನಟಿ ರಚಿತಾ ರಾಮ್‌ ಜತೆಯಾಗಲಿದ್ದಾರೆ.‌

    ಜರ್ಮನ್‌ ಸೈನಿಕರ ವಿರುದ್ಧ ಸೆಣಸಾಟ ನಡೆಸಿ ರಾಣಿಯನ್ನು ಬಿಡಿಸಿಕೊಂಡು ಬರುವ ಸನ್ನಿವೇಶವನ್ನು ‍ಶ್ರೀನಗರ ಕಿಟ್ಟಿ ಅಭಿನಯಿಸಿದ್ದರು. ಅದರ ಚಿತ್ರೀಕರಣ ಇತ್ತೀಚೆಗೆ ನಡೆಯಿತು. ಟ್ರೇಲರ್‌ ಇಲ್ಲಿದೆ.

    ರೇಷ್ಮೆ ನೂಲಿಗೆ ಸೂಕ್ತ ಬೆಲೆ ಸಿಗಬೇಕೆಂದು ಹೋರಾಡುವವರ ಕಥೆ. ದೇಸೀ ಎಂದುಕೊಳ್ಳಿ. ನಿರ್ದೇಶಕರ ಪ್ರಕಾರ ಈಗಾಗಲೇ ಚಿತ್ರೀಕರಣ ಮುಗಿದಿದೆ. ನೆದರ್‌ ಲ್ಯಾಂಡ್‌ ನಲ್ಲಿ ಚಿತ್ರೀಕರಣ ಬಾಕಿ ಇದೆಯಂತೆ. ಈಗಾಗಲೇ ಸ್ವಿಟ್ಜರ್‌ ಲ್ಯಾಂಡ್‌ ನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಬಜೆಟ್‌ ಈ ಮೊದಲು ೧೨ ಕೋಟಿ ಎಂದುಕೊಂಡಿದ್ದರು. ಅದು ಹದಿನೈದಕ್ಕೆ ಮುಟ್ಟಿದೆಯಂತೆ.

    ಚಿತ್ರದ ಎಡಿಟಿಂಗ್‌ ಸೇರಿದಂತೆ ಇನ್ನಿತರ ಕೆಲಸಗಳು ಪೂರ್ಣಗೊಳ್ಳುತ್ತಿವೆ. ಚೇತನ್‌ ಆನಂದ್‌ ಗೆ ಜೋಡಿಯಾಗಿ ನಟಿ ರಾಗಿಣಿ ನಟಿಸುತ್ತಿದ್ದಾರೆ.      

    Bhairava: ಭೈರವನ ಕೊನೆ ಪಾಠ, ಶಿವರಾಜಕುಮಾರ್‌ ರ ಹೊಸ ಚಿತ್ರಪಟ

    ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ನಿರ್ಮಾಣವಾಗುತ್ತಿರುವ ಚಿತ್ರವನ್ನು ಛಲವಾದಿ ಕುಮಾರ್ ನಿರ್ಮಿಸುತ್ತಿದ್ದಾರೆ. ಕಥೆ,ಚಿತ್ರಕಥೆ,ನಿರ್ದೇಶಕರದ್ದು. ಸಂಗೀತ ನಿರ್ದೇಶಕ‌  ಶ್ರೀಧರ ವಿ. ಸಂಭ್ರಮರದ್ದು. ಐದು ಹಾಡುಗಳಿವೆಯಂತೆ.

    ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿಹಾಡಿದ್ದಾರೆ.  ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್, ಖಳನಟ ಸಂಪತ್ ಕುಮಾರ್ ಸೇರಿದಂತೆ ಹಲವು ಕಲಾವಿದರ ತಾರಾಗಣವಿದೆ. A 24 ಕ್ರಿಯೇಶನ್ಸ್ ಥ್ರೂ ಗೋಕುಲ್ ಫಿಲಂಸ್ ಈ ಚಿತ್ರವನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡುತ್ತಿದೆ.

    Latest Posts

    spot_imgspot_img

    Don't Miss