ಈ ನವರಾತ್ರಿ ನಟಿ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳಿಗೆ ಬಂಪರ್ ನವರಾತ್ರಿ. ಯಾಕೆಂದರೆ ನವರಾತ್ರಿ ಆರಂಭದ ದಿನವೇ ರಾಧಿಕಾರ ಹೊಸ ಚಿತ್ರ ಭೈರಾದೇವಿ ರಾಜ್ಯದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಭೈರಾದೇವಿ- ಸಿನಿಮಾ ಹೆಸರು ಕೇಳುತ್ತಿದ್ದಂತೆಯೇ ದೇವಿಯ ಕುರಿತಾದದ್ದು, ದೇವಿ, ಅವಳ ಪ್ರಭಾವ, ಅವಳ ಮಹಿಮೆ, ಮಾಟ ಮಂತ್ರ ಇತ್ಯಾದಿ ಇತ್ಯಾದಿ ಎಲ್ಲವೂ ಇದ್ದದ್ದೇ. ಈ ಚಿತ್ರವನ್ನು ನಿರ್ಮಿಸುತ್ತಿರುವವರು ಶಮಿಕಾ ಎಂಟರ್ ಪ್ರೈಸಸ್. ರಾಧಿಕಾರದ್ದೇ ಸಂಸ್ಥೆ ಇದು. ಇತ್ತೀಚೆಗಷ್ಟೇ ಅದರ ಟ್ರೇಲರ್ ಬಿಡುಗಡೆಯಾಯಿತು. ನಟ ರಮೇಶ್ ಅರವಿಂದ್, ನಟಿ ಅನು ಪ್ರಭಾಕರ್ ಎಲ್ಲ ಇದ್ದರು. ಈ ಚಿತ್ರವನ್ನು ಜೈ ನಿರ್ದೇಶಿಸಿದ್ದಾರೆ.
ಹೆಲ್ ಹೆವನ್ ಗೆ ಯಮೇಂದ್ರ; ಸದ್ಯಕ್ಕೆ ಮತ್ತೆ ಈ ಬಾಸೇ ಬಿಗ್ !
ಈ ಚಿತ್ರ ನಿರ್ಮಾಣ ಸಂದರ್ಭದಲ್ಲಿ ಹಲವಾರು ಅಡೆ ತಡೆಗಳು ಬಂದಿವೆಯಂತೆ. ಅದನ್ನೆಲ್ಲ ಮೀರಿ ಈ ಚಿತ್ರ ಬಿಡುಗಡೆಗೆ ಸನ್ನದ್ಧವಾಗಿದೆ ಚಿತ್ರ ತಂಡ. ಇದರ ಮಧ್ಯೆ ಚಿತ್ರದ ನಿರ್ಮಾಪಕಿಯಾದ ರಾಧಿಕಾ ಕಾಳಿ ಪಾತ್ರದಲ್ಲಿ ಕಂಗೊಳಿಸಿದ್ದಾರಂತೆ.
ರಮೇಶ್ ಅರವಿಂದರದ್ದು ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ. ಆದರೆ ಗುದ್ದಾಡುವುದು ಅತೀಂದ್ರೀಯ ಶಕ್ತಿಯೊಟ್ಟಿಗೆ ಅಂತೆ. ಅನು ಪ್ರಭಾಕರ್ ಅವರಿಗೆ ಈ ವರ್ಷ ಸ್ಮರಣೀಯ ವರ್ಷ. ಅವರ ಹೃದಯ ಹೃದಯ ಚಿತ್ರ ಕಂಡು 25 ವರ್ಷವಾಯಿತಂತೆ. ಅದೇ ಖುಷಿಯಲ್ಲಿ ಈ ಚಿತ್ರದಲ್ಲಿ ನಟಿಸಿದ್ದಾರೆ.
Kannada cinema:ಲಾಂಗುಗಳ ಸಮಾಧಿಯ ಮೇಲೆ ಒಂದಷ್ಟು ಕೆಂಪು ಗುಲಾಬಿಗಳು ಅರಳಲಿ !
ರಮೇಶ್ ಅರವಿಂದ್, ಅನು ಪ್ರಭಾಕರ್, ರವಿಶಂಕರ್, ರಂಗಾಯಣ ರಘು ಮತ್ತಿತರರ ಬೃಹತ್ ತಾರಾಗಣವೇ ಚಿತ್ರಕ್ಕಿದೆ. ರಾಧಿಕಾರು ನಿರ್ಮಿಸುತ್ತಿರುವ ಈ ಚಿತ್ರ ಯಶಸ್ಸಾದರೆ ಮತ್ತೊಂದು ಚಿತ್ರ ಮಾಡುತ್ತಾರಂತೆ. ಇಲ್ಲದೇ ಇದ್ದರೆ ಚಿತ್ರರಂಗದಿಂದ ದೂರ ಉಳಿಯುತ್ತಾರಂತೆ.
ದೇವಿ ಮನಸ್ಸು ಗೆಲ್ಲಬಹುದು, ಪ್ರೇಕ್ಷಕರ ಹೃದಯವವನ್ನು ಗೆಲ್ಲುವುದು ತುಸು ಕಷ್ಟ, ಕಾದು ನೋಡೋಣ. ಗೊತ್ತಿಲ್ಲ, ದೇವಿ ಕೈ ಹಿಡಿದು ಎಲ್ಲಿಗೂ ನಡೆಸಬಹುದು. ಎಲ್ಲವೂ ಅತೀಂದ್ರೀಯ ಶಕ್ತಿ ಹಾಗೂ ಅದರ ನಂಬಿಕೆಗೆ, ನಂಬುವವರಿಗೆ ಬಿಟ್ಟದ್ದು.