ಮೊಟ್ಟೆ ಬೆಳೆದು ಒಡೆದು ಹೊರಬಂದರೆ ಮರಿ. ಇದೂ ರೂಪಾಂತರವೇ. ಈಗ ಇಂಥದೊಂದು ಮೊಟ್ಟೆ ಕಥೆ ಹೇಳಿದ ರಾಜ್ ಬಿ ಶೆಟ್ಟಿಯವರು ರೂಪಾಂತರಗೊಳ್ಳುತ್ತಿದ್ದಾರೆ. ತಮ್ಮ ವಿಶಿಷ್ಟ ಪಾತ್ರ ಮತ್ತು ಚಿತ್ರಗಳ ಮೂಲಕ ಹೊಸ ಭರವಸೆ ಹುಟ್ಟಿಸಿದವರು ರಾಜ್ ಬಿ ಶೆಟ್ಟಿ. ಒಂದು ಮೊಟ್ಟೆಯ ಕಥೆ ಮೂಲಕ ವಾಸ್ತವವನ್ನು ನವಿರಾದ ಶೈಲಿಯಲ್ಲಿ ಉಣಬಡಿಸಿ ಅಚ್ಚರಿ ಹುಟ್ಟಿಸಿದವರು. ಗರುಡ ವಾಹನ ವೃಷಭ ವಾಹನದ ಮೂಲಕ ಪ್ರಯೋಗಕ್ಕೆ ಕಾರ್ಯಶೀಲವಾದವರು.
Rakshith Shetty : ಊರ ಹಾದಿಯ ಹುಡುಗನ ಹಂಬಲದ ಪಯಣ
ಇತ್ತೀಚೆಗಷ್ಟೇ ನಟ ಮುಮ್ಮೂಟ್ಟಿಯೊಂದಿಗೆ ಮಲಯಾಳಂನ ಟರ್ಬೊ ಸಿನಿಮಾದಲ್ಲಿ ವೇಟ್ರಿವೇಲ್ ಷಣ್ಮುಗಸುಂದರಂ ಪಾತ್ರದ ಮೂಲಕ ಖಳನಾಯಕ ಪಾತ್ರದಲ್ಲಿ ವಿಜೃಂಭಿಸಿದವರು. ಈಗ ಹೊಸ ಚಿತ್ರ ರೂಪಾಂತರದ ಪೋಸ್ಟರ್ ಹಂಚಿಕೊಂಡಿದ್ದಾರೆ ರಾಜ್ ಬಿ ಶೆಟ್ಟಿ
ಪೋಸ್ಟರ್ ನಲ್ಲೂ ಚಿಟ್ಟೆಯಾಗಿ ರೂಪಾಂತರಗೊಳ್ಳುವ ದೃಶ್ಯಗಳನ್ನು ಬಿಂಬಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತತೆಯಲ್ಲಿ ಪೋಸ್ಟರ್ ಹಂಚಿಕೊಂಡ ರಾಜ್ ಬಿ ಶೆಟ್ಟಿ, ‘ ಕೆಲ ಸಿನೆಮಾಗಳು ಮನಸ್ಸಿಗೆ ಬಲು ಹತ್ತಿರವಾಗುತ್ತವೆ. ಅಂತಹ ಒಂದು ಸುಂದರವಾದ ಚಿತ್ರ ರೂಪಾಂತರ. ಈ ಸಿನಿಮಾದ ಭಾಗವಾಗಿ ನಿಮ್ಮ ಮುಂದೆ ತರಲು ಅವಕಾಶ ಸಿಕ್ಕಿದ್ದೇ ನನ್ನ ವೃತ್ತಿ ಜೀವನದ ಭಾಗ್ಯ’ ಎಂದು ಬರೆದಿರುವುದು ಮತ್ತೂ ವಿಶೇಷ ಎನಿಸಿದೆ.
ಮೊಟ್ಟೆ ತಂಡ ಮತ್ತೆ ಬಂದಿತು
ಮೊಟ್ಟೆಯ ರೂಪಾಂತರಕ್ಕೆ ಸೇರಿದವರೆಲ್ಲ ಈಗ ಮತ್ತೆ ಸೇರಿದ್ದಾರೆ ಈ ರೂಪಾಂತರಕ್ಕೆ. ಮೊಟ್ಟೆಯ ಕಥೆ ನಿರ್ಮಿಸಿದ ಸುಹಾನ್ ಪ್ರಸಾದ್ ಅವರೇ ಈ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಸಂಭಾಷಣೆಯ ಜೊತೆಗೆ ಚಿಕ್ಕ ಪಾತ್ರವನ್ನೂ ನಿರ್ವಹಿಸಿರುವ ರಾಜ್, ತಮ್ಮ ಸಂಸ್ಥೆ ಲೈಟರ್ ಬುದ್ಧ ಫಿಲಂಸ್ ಮೂಲಕ ತೆರೆಗೂ ತರುತ್ತಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಗ್ರಹಣ, ಮಿಥುನ್ ಮುಕುಂದನ್ ರ ಸಂಗೀತವಿದೆ.
Kalki 2898 AD: ಕಲ್ಕಿಯಲ್ಲಿ ತ್ರಿಮೂರ್ತಿಗಳದ್ದೇ ದರಬಾರು
ವಿಭಿನ್ನ ಪ್ರಯತ್ನ
ಚಿತ್ರತಂಡದ ಪ್ರಕಾರ ಕನ್ನಡದಲ್ಲಿ ಇದೊಂದು ಹೊಸ ಪ್ರಯತ್ನ. ಹೊಸತನ ಬೇಕು ಎನ್ನುವ ಬೇಡಿಕೆ ಯಾವಾಗಲೂ ಕೇಳಿಬರುತ್ತದೆ. ಇದರ ಹಿನ್ನೆಲೆಯಲ್ಲೇ ಈ ಬೇಡಿಕೆಯನ್ನು ಈಡೇರಿಸಲು ತಯಾರಾಗಿದೆಯಂತೆ ಚಿತ್ರತಂಡ.
ಕನ್ನಡ ಚಿತ್ರರಂಗದಲ್ಲಿ ಹೊಸತನ ಬರಬೇಕು ಎನ್ನುವ ಕೂಗು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ರೂಪಾಂತರ ಒಂದು ಪ್ರಮುಖ ಪಾತ್ರ ವಹಿಸಲಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಈ ಚಿತ್ರ ನಿರ್ದೇಶನ ಮಿಥಿಲೇಶ್ ಎಡವಲತ್ ಎನ್ನುವವರದ್ದು. ಇದು ಅವರ ಚೊಚ್ಚಲ ಚಿತ್ರ.
ತಾರಾಗಣದಲ್ಲಿ ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮತ್ತಿರರು ಇದ್ದಾರೆ. ಸಂಕಲನ ಭುವನೇಶ್ ಮಣಿವಣ್ಣನ್, ನಿರ್ಮಾಣ ವಿನ್ಯಾಸ ಪ್ರವೀಣ್ ಮತ್ತು ಅರ್ಷದ್ ನಾಕ್ಕೋತ್ ಅವರದ್ದು.
ಟರ್ಬೋ ಚಿತ್ರವನ್ನು ರಾಜ್ಯಾದ್ಯಂತ ಹಂಚಿಕೆ ಮಾಡಿದ ಲೈಟರ್ ಬುಧ್ಧ ಫಿಲಂಮ್ಸ್ ಈ ಚಿತ್ರವನ್ನೂ ಹಂಚಿಕೆ ಹೊಣೆ ಹೊತ್ತಿದೆ.