Friday, March 21, 2025
spot_img
More

    Latest Posts

    ರುದ್ರ ಗರುಡ ಪುರಾಣ ಜುಲೈ ವೇಳೆಗೆ ವೀಕ್ಷಕರಿಗೆ ಲಭ್ಯ

    ನಟ ರಿಷಿ ಅಭಿನಯದ “ರುದ್ರ ಗರುಡ ಪುರಾಣ” ಚಿತ್ರದ ಮೊದಲ ನೋಟ ಸಿನಿಮಾ ವೀಕ್ಷಕರಿಗೆ ಲಭ್ಯವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ ವೇಳೆಗೆ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮೊದಲ ನೋಟವನ್ನು ಬಿಡುಗಡೆ ಮಾಡಿದರು.

    ರಿಷಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಆಪರೇಷನ್‌ ಅಲಮೇಲಮ್ಮ, ಕವಲುದಾರಿ ಚಿತ್ರಗಳಲ್ಲಿ ರಿಷಿ ನಟಿಸಿದ್ದಾರೆ. ಸೈತಾನ ವೆಬ್‌ ಸೀರೀಸ್‌ ಮೂಲಕವೂ ರಿಷಿ ಪರಿಚಿತರಾಗಿದ್ದಾರೆ.

    ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಂಬಲ್‌, ಡಿಯರ್‌ ವಿಕ್ರಮ್‌ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಎಸ್ ನಂದೀಶ್‌ ಈ ಚಿತ್ರದ ನಿರ್ದೇಶಕರು. ಕಥೆ ಹಾಗೂ ಚಿತ್ರಕಥೆ ಅವರದ್ದೇ. ಸಂಭಾಷಣೆ ರಘು ನಿಡುವಳ್ಳಿ, ಕೆಪಿ ಸಂಗೀತ ನಿರ್ದೇಶನ, ಸಂದೀಪ್ ಕುಮಾರ್ ಛಾಯಾಗ್ರಹಣದೊಂದಿಗೆ ಮನು ಶೇಡ್ಗಾರ್‌ ಅವರ ಸಂಕಲನವಿದೆ.

    ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕಾ ಕುಮಾರ್ ನಟಿಸಿದ್ದಾರೆ. ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರಿ, ಕೆ.ಎಸ್ ಶ್ರೀಧರ್, ಅಶ್ವಿನಿ ಗೌಡ,  ರಾಮ್ ಪವನ್, ವಂಶಿ, ಆಕರ್ಷ್, ಜೋಸೆಫ್, ಪ್ರಭಾಕರ್, ಗೌತಮ್ ಮೈಸೂರು, ಸ್ನೇಕ್ ಶ್ಯಾಮ್‌ ಮತ್ತಿತರರು ತಾರಾಬಳಗದಲ್ಲಿದ್ದಾರೆ.

    ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ಉಳಿದ ಎಲ್ಲ ಕಾರ್ಯಗಳೂ ಬಿರುಸಿನಿಂದ ಸಾಗಿದೆ. ಜುಲೈ ವೇಳೆಗೆ ಚಿತ್ರ ವೀಕ್ಷಕರಿಗೆ ವೀಕ್ಷಣೆಗೆ ಲಭ್ಯವಾಗಲಿದೆ.

    *

    ದಿ ಜಡ್ಜ್‌ ಮೆಂಟ್‌ ವಿತರಣೆ ಹಕ್ಕು ರಿಲಯನ್ಸ್‌ ಗೆ

    ವಿ ರವಿಚಂದ್ರನ್‌ ಅಭಿನಯದ ದಿ ಜಡ್ಜ್‌ ಮೆಂಟ್‌ ಸಿನಿಮಾದ ವಿತರಣೆ ಹಕ್ಕನ್ನು ರಿಲಯನ್ಸ್ ಎಂಟರ್ಟೈನ್ಮೆಂಟ್ ಪಡೆದುಕೊಂಡಿದೆ. ಈಗಾಗಲೇ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಜಿ9 ಕಮ್ಯುನಿಕೇಷನ್ಸ್‌  ಮೀಡಿಯಾ ಅಂಡ್‌ ಎಂಟರೈಟ್‌ ನ್ಮೆಂಟ್‌ ಈ ಚಿತ್ರವನ್ನು ನಿರ್ಮಿಸುತ್ತಿದೆ.

    ಕೋರ್ಟ್‌ ಕಥೆಯನ್ನು ಹೊಂದಿರುವ ಚಿತ್ರವನ್ನು ಗುರುರಾಜ್‌ ಕುಲಕರ್ಣಿ ನಿರ್ದೇಶಿಸಿದ್ದಾರೆ. ಈ ಚಿತ್ರದ ವಿತರಣೆಯಲ್ಲದೇ, ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆ ನಿರ್ಮಿಸುವ ಉಳಿದ ಯೋಜನೆಗಳಿಗೂ ಸಹಯೋಗ ನೀಡುವ ಭರವಸೆ ಸಂಸ್ಥೆಯಿಂದ ದೊರೆತಿದೆ ಎಂದಿದೆ ಈ ಸಂಸ್ಥೆ.

    ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಕೆಂಪರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ.

    ವಿ. ರವಿಚಂದ್ರನ್‌ ಜೊತೆಗೆ ದಿಗಂತ್ , ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ನವಿಲ ಮುಂತಾದವರು ತಾರಾಗಣದಲ್ಲಿದ್ದಾರೆ.

    Latest Posts

    spot_imgspot_img

    Don't Miss