ಶಾಂಬಾಲ !
ಈ ಪದವೇ ಹೆಚ್ಚು ಜನಪ್ರಿಯವಾಗಿದ್ದು ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಚಿತ್ರದಲ್ಲಿ. ಅದಕ್ಕಿಂತಲೂ ಮೊದಲು ಕೆಲವು ಗ್ರಂಥಗಳಲ್ಲಿ ಇದರ ಹೆಸರು ಉಲ್ಲೇಖಿತವಾಗಿದ್ದರೂ ಅಷ್ಟೊಂದು ಜನಪ್ರಿಯವಾಗಿರಲಿಲ್ಲ. ಈಗ ಮತ್ತೆ ಶಾಂಬಾಲ ಎನ್ನುವ ಸಿನಿಮಾ ಚಿತ್ರ ಜಗತ್ತಿನ ಬಿಗ್ ಹೌಸ್ ಆಸ್ಕರ್ ನ ಒಳ ಹೊಕ್ಕಿದೆ.
ಈಗ ಇದೇ ಶಾಂಬಾಲ ಚರ್ಚೆಗೆ ಬಂದಿರುವುದು ಸಿನಿಮಾದ ಮೂಲಕ. ಮಿನ್ ಬಹಾದೂರ್ ಭಮ್ ನಿರ್ದೇಶಿಸಿರುವ ಶಾಂಬಾಲ ಚಿತ್ರವೀಗ ಆಸ್ಕರ್ ಪ್ರಶಸ್ತಿಗೆ ಸೆಣಸಲು ಆಯ್ಕೆಯಾಗಿದೆ. ಅಂತಾರಾಷ್ಟ್ರೀಯ ಅತ್ಯುತ್ತಮ ಚಿತ್ರಗಳ ಪ್ರಶಸ್ತಿಗೆ ಸೆಣಸುತ್ತಿರುವ ಉಳಿದ ದೇಶಗಳ ಚಿತ್ರಗಳಲ್ಲಿ ಇದೂ ಒಂದು. ಭಾರತದಿಂದ ಲಾಪತಾ ಲೇಡೀಸ್ ಆಯ್ಕೆಯಾಗಿದೆ.
From Ground Zero: ಪ್ಯಾಲೆಸ್ತೀನ್ ನ ಪ್ರಸ್ತುತ ಸ್ಥಿತಿಗೆ ಈ 22 ಸಿನಿಮಾ ಕನ್ನಡಿ
ಬಹಾದೂರ್ ಅವರ ಶಾಂಬಾಲ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. 74 ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್ ಪ್ರಶಸ್ತಿಗೆ ಸೆಣಸಿತ್ತು. ಈಗ ಆಸ್ಕರ್ ರೇಸ್ ನಲ್ಲಿದೆ. ಸದ್ಯ ಲಭ್ಯ ಮಾಹಿತಿ ಪ್ರಕಾರ ದಕ್ಷಿಣ ಏಷ್ಯಾದಲ್ಲೇ 30 ವರ್ಷಗಳಲ್ಲಿ ಇದೇ ಮೊದಲ ಸಿನಿಮಾ ಬರ್ಲಿನ್ ಸಿನಿಮೋತ್ಸವದ ಸ್ಪರ್ಧೆಗೆ ಆಯ್ಕೆಯಾಗಿದೆಯಂತೆ.
ಈ ಸಿನಿಮಾ ನೇಪಾಳ ಹಾಗೂ ಫ್ರಾನ್ಸ್, ನಾರ್ವೆ, ಹಾಂಗ್ ಕಾಂಗ್, ಚೀನ, ಟರ್ಕಿ, ತೈವಾನ್, ಅಮೆರಿಕ ಹಾಗೂ ಕತಾರ್ ನಡುವೆ ರೂಪಿತವಾದ ಸಿನಿಮಾ. ಬರ್ಲಿನ್ ಚಿತ್ರೋತ್ಸವದಲ್ಲಿ ಇದರ ಪ್ರೀಮಿಯರ್ ಪ್ರದರ್ಶನವಾಗಿದೆ. ಇದಲ್ಲದೇ 71 ನೇ ಸಿಡ್ನಿ ಸಿನಿಮೋತ್ಸವ, 58 ನೇ ಕರ್ಲೋವಿ ವೆರಿ ಚಿತ್ರೋತ್ಸವ, 77 ನೇ ಲೊಕೊರ್ನೊ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿದೆ. ವ್ಯಾನ್ಕೋವರ್ ಹಾಗೂ ಬಿಎಫ್ ಐ ಲಂಡನ್ ಸಿನಿಮೋತ್ಸವಗಳಲ್ಲಿ ಈ ತಿಂಗಳಲ್ಲಿ ಪ್ರದರ್ಶಿತವಾಗಲಿದೆ.
ಇದು ಒಂದು ಹೆಣ್ಣಿನ ಕಥೆ. ಪೆಮಾ ಹೊಸದಾಗಿ ಮದುವೆಯಾದ ಹಳ್ಳಿಯ ಹೆಣ್ಣುಮಗಳು. ಹಳ್ಳಿಯಲ್ಲಿ ತನ್ನ ಪತಿ ತಾಶಿ ಹಾಗೂ ಅವನ ಇಬ್ಬರ ಸೋದರರೊಂದಿಗೆ (ಕರ್ಮ ಮತ್ತು ದಾವ) ಬದುಕುತ್ತಿರುತ್ತಾಳೆ. ಒಂದು ದಿನ ವ್ಯಾಪಾರ ತಿರುಗಾಟಕ್ಕೆಂದು ಹೋಗುವ ತಾಶಿ ವಾಪಸು ಬರುವುದಿಲ್ಲ. ಆಗ ಇಕ್ಕಟ್ಟಿಗೆ ಸಿಲುಕುವ ಪೆಮಾ ತನ್ನ ಹಾದಿಯನ್ನು ಹುಡುಕಿಕೊಳ್ಳಲು ಆರಂಭಿಸುತ್ತಾಳೆ. ಈ ಹಾದಿಯಲ್ಲಿ ತನ್ನನ್ನು ತಾನು ಕಂಡುಕೊಳ್ಳುವ ಪ್ರಯತ್ನ, ತನ್ನ ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳಲು ನಡೆಸುವ ಪ್ರಯತ್ನ ಎಲ್ಲವೂ ಸಿನಿಮಾ ಆಗಿದೆ. ಸಿನಿಮಾದ ಟ್ರೇಲರ್ ಇಲ್ಲಿದೆ, ವೀಕ್ಷಿಸಿ.
IFFI55: ಇಫಿ ಚಿತ್ರೋತ್ಸವಕ್ಕೆ ಸಜ್ಜಾಗಿ; ಪ್ರತಿನಿಧಿಯಾಗಿ ನೋಂದಾಯಿಸಿ
ಅಂತಾರಾಷ್ಟ್ರೀಯವಾಗಿಯೂ ಒಳ್ಳೆಯ ಅಭಿಪ್ರಾಯ ಈ ಸಿನಿಮಾದ ಬಗ್ಗೆ ವ್ಯಕ್ತವಾಗಿದೆ. ಮಿನ್ ಬಹಾದೂರ್ ದಾಮ್ ಹೆಸರಾಂತ ನಿರ್ದೇಶಕ. 2012 ರಲ್ಲಿ ಬಾನ್ಸುಳಿ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. 2015 ರಲ್ಲಿ ನಿರ್ದೇಶಿಸಿದ ದಿ ಬ್ಲ್ಯಾಕ್ ಹೆನ್ ಚಿತ್ರಕ್ಕೆರಾಷ್ಟ್ರೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ, ಅತ್ಯುತ್ತಮ ಸಾಹಿತಿ ಪ್ರಶಸ್ತಿ ಹಾಗೂ ವೆನಿಸ್ ಚಿತ್ರೋತ್ಸವದಲ್ಲೂ ಪ್ರಶಸ್ತಿ ಗಳಿಸಿತ್ತು. ಎ ಇಯರ್ ಆಫ್ ಓಲ್ಡ್ ಚಿತ್ರವು ಕಾನ್ ಚಿತ್ರೋತ್ಸವದಲ್ಲಿ ನಾರ್ವೆ ದೇಶದ ಪುರಸ್ಕಾರ ಪಡೆದಿತ್ತು. ಈಗ ಶಾಂಬಾಲ ಮತ್ತೆ ಪ್ರಶಸ್ತಿಯತ್ತ ಕಣ್ಣು ನೆಟ್ಟಿದೆ.
ನೇಪಾಳಿ ಚಿತ್ರ ಜಗತ್ತು ವಿಶಿಷ್ಟವಾಗಿದ್ದು, ಕೆಲವು ವರ್ಷಗಳ ಹಿಂದೆ ರಾಜಕೀಯ ಸ್ಥಿತ್ಯಂತರ ಕಾರಣಕ್ಕಾಗಿ ತೆರೆಗೆ ಸರಿದಿತ್ತು. ಈಗ ಮತ್ತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಅಲ್ಲಿಯೂ ಹಲವು ಸ್ಥಳೀಯ ಭಾಷೆಗಳಲ್ಲಿ ಸಿನಿಮಾ ನಿರ್ಮಿಸಲಾಗುತ್ತಿದೆ.