Friday, March 21, 2025
spot_img
More

    Latest Posts

    ಎಫ್‌ ಟಿ ಐ ಐ ನ ಸ್ಮಾರ್ಟ್‌ ಫೋನ್‌ ಡಾಕ್ಯುಮೆಂಟರಿ ಕೋರ್ಸ್ ಗೆ ಆಹ್ವಾನ

    ಪುಣೆ: ಪುಣೆಯ ಫಿಲ್ಮ್‌ ಅಂಡ್‌ ಟೆಲಿವಿಷನ್‌ ಇನ್ಸ್‌ ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಫ್‌ ಟಿ ಐಐ) ಮತ್ತು ಸೆಂಟರ್‌ ಫಾರ್‌ ಓಪನ್‌ ಲರ್ನಿಂಗ್‌ (ಸಿಎಫ್‌ ಒಎಲ್)‌ ಜೈಪುರದ ದಿ ಓಪನ್‌ ಸ್ಪೇಸ್‌ ಸೊಸೈಟಿಯು ಸಂಯುಕ್ತವಾಗಿ ಸ್ಮಾರ್ಟ್‌ ಫೋನ್‌ ನಲ್ಲಿ ಡಾಕ್ಯುಮೆಂಟರಿ ಮಾಡುವುದಕ್ಕೆ ಸಂಬಂಧಿಸಿದಂತೆ ಬೇಸಿಕ್‌ ಕೋರ್ಸ್‌ ನ್ನು ಪರಿಚಯಿಸುತ್ತಿದೆ.

    ಏಪ್ರಿಲ್‌ 22 ರಿಂದ 29 ರವರೆಗೆ ಜೈಪುರದಲ್ಲಿ ಈ ಕೋರ್ಸ್‌ ನಡೆಯಲಿದೆ. ಕೋರ್ಸ್‌ ಶುಲ್ಕ 9, 800 ರೂ. ಗಳು ಮಾತ್ರ.

    40 ಜನರಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದವರಿಗೆ ಮೊದಲು ಆದ್ಯತೆ ಎನ್ನುವ ನಿಯಮದಡಿ ನೋಂದಣಿ ಮಾಡಿಕೊಳ್ಳಲಾಗುವುದು. 18 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಪಿಯುಸಿ ಶಿಕ್ಷಣ ಪೂರೈಸಿದವರು ಇದಕ್ಕೆ ಅರ್ಹರು. ಕೆಲವು ವಿಶೇಷ ಸಂದರ್ಭಗಳಲ್ಲಿ ಶೈಕ್ಷಣಿಕ ಅರ್ಹತೆ ನಿಯಮದಲ್ಲಿ ಕೊಂಚ ಸಡಿಲಿಕೆ ಇದ್ದು, ಕೇವಲ ಎಸ್‌ ಎಸ್‌ ಎಲ್‌ ಸಿ ಆದವರನ್ನೂ ಪರಿಗಣಿಸಲಾಗುವುದು ಎನ್ನುತ್ತದೆ ಎಫ್‌ ಟಿ ಐಐ ನ ವೆಬ್‌ ಸೈಟ್.‌

    Smartphone Documentary

    ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಬೋಧನೆ ಇರಲಿದೆ. ಸ್ಥಳೀಯರಲ್ಲದೇ ಬೇರೆ ಊರುಗಳಿಂದ ಬಂದವರು ವಸತಿ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು.

    ಈ ಕೋರ್ಸ್‌ ಗೆ ಪ್ರವೇಶ ಪಡೆಯಲು ಇಚ್ಛಿಸುವವರಿಗೆ ವಿಡಿಯೊಗ್ರಫಿ ಮಾಡಿದ ಅನುಭವ ಅಗತ್ಯವಿಲ್ಲ. ಆದರೆ ಒಳ್ಳೆಯ ಎಚ್‌ ಡಿ ವಿಡಿಯೋ ಮಾಡುವ ಸಾಮರ್ಥ್ಯದ ಸ್ಮಾರ್ಟ್‌ ಫೋನ್‌ ಅನ್ನು ಕಡ್ಡಾಯವಾಗಿ ಹೊಂದಿರಬೇಕು.

    ಶಿಬಿರದ ನಿರ್ದೇಶಕರಾಗಿ ಶಿಲ್ಪ ಬಾತ್ರ ಆಡ್ವಾನಿ ಹಾಗೂ ಕೇವಾ ವಾಸ್ವಾನಿ ಕಾರ್ಯ ನಿರ್ವಹಿಸುವರು.

    ಕೋರ್ಸ್‌ ನಲ್ಲಿ ಡಾಕ್ಯುಮೆಂಟರಿ ಫಿಲ್ಮ್‌ ಮೇಕಿಂಗ್‌ ನ ಬಗ್ಗೆ ವಿವರಗಳು, ಸ್ಮಾರ್ಟ್‌ ಫೋನ್‌ ನಲ್ಲಿ ವಿಡಿಯೋ ಮಾಡುವ ಬಗೆ, ಅದನ್ನು ಎಡಿಟ್‌ ಮಾಡುವ ಕ್ರಮ, ಫಿಲ್ಮ್‌ ಮೇಕಿಂಗ್‌ ನ ಕೆಲವು ಕೌಶಲಗಳನ್ನು ಅನ್ವಯಿಸುವ ಮೂಲಕ ಉತ್ತಮ ಗುಣಮಟ್ಟದ ವಿಡಿಯೋಗಳನ್ನು ಮಾಡುವ ಕೌಶಲದ ಬಗ್ಗೆ ಮಾಹಿತಿ, ಸ್ಮಾರ್ಟ್‌ ಫೋನ್‌ ಅನ್ನು ವಿಡಿಯೋ ಕ್ಯಾಮೆರಾ ಆಗಿ ಬಳಸುವುದು ಹೇಗೆ? ಸಾಮಾಜಿಕ ಮಾಧ್ಯಮಗಳಿಗಾಗಿ ಕಿರು ಸಾಕ್ಷ್ಯಚಿತ್ರ, ಕಿರು ವಿಡಿಯೋಗಳನ್ನು ಮಾಡುವ ಕೌಶಲ ಹಾಗೂ ವಿಡಿಯೋ, ಫೋಟೋಗಳನ್ನು ಬಳಸಿ ಸಾಕ್ಷ್ಯಚಿತ್ರವನ್ನು ನಿರೂಪಿಸುವ ಕೌಶಲ ಇತ್ಯಾದಿಯನ್ನು ಹೇಳಿಕೊಡಲಾಗುವುದು.

    ಈ ಕೋರ್ಸ್‌ ನ್ನು ಹೈಸ್ಕೂಲ್‌ ನಿಂದ ಹಿಡಿದು ಯಾವುದೇ ವಿದ್ಯಾರ್ಥಿಗಳು, ಮಹಿಳೆಯರು ಯಾರೂ ಬೇಕಾದರೂ ಭಾಗವಹಿಸಬಹುದು.

    ಮಾಹಿತಿಗೆ ಮತ್ತು ನೋಂದಣಿಗೆ ಎಫ್‌ ಟಿ ಐ ಐ ನ ವೆಬ್‌ ಸೈಟ್‌ ನ್ನು ಸಂಪರ್ಕಿಸಬಹುದು.

     

    Latest Posts

    spot_imgspot_img

    Don't Miss