ದಶಮುಖ ಮುಗಿಯಿತು ; ಇನ್ನು ರವಿಚಂದ್ರನ್‌ ರ ದಿ ಜಡ್ಜ್‌ ಮೆಂಟ್‌ !

ಕ್ರೇಜಿಸ್ಟಾರ್ ‌ ರವಿಚಂದ್ರನ್ ಅಭಿನಯಿಸಿರುವ ದಿ ಜಡ್ಜ್‌ ಮೆಂಟ್‌ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗಷ್ಟೇ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ವಿಶೇಷವೆಂದರೆ ಡಾ. ರಾಜಕುಮಾರ್‌ ಹುಟ್ಟುಹಬ್ಬದ ದಿನದಂದು ಆರಂಭವಾಗಿ ಹುಟ್ಟುಹಬ್ಬದ ದಿನದಂದೇ ಪೂರ್ಣಗೊಂಡಿರುವುದು ವಿಶೇಷ. ಇದೊಂದು ಕಾಕತಾಳೀಯವೂ ಇರಬಹುದು.

ಚಿತ್ರವನ್ನು ನಿರ್ದೇಶಿಸುತ್ತಿರುವವರು ಗುರುರಾಜ ಕುಲಕರ್ಣಿ (ನಾಡಗೌಡ). ಐವರು ನಿರ್ಮಾಪಕರು ಸೇರಿ ಈ ಸಿನಿಮಾವನ್ನು ರೂಪಿಸಿದ್ದಾರೆ. ಕೋರ್ಟ್‌ ರೂಂ ಥ್ರಿಲ್ಲರ್‌ ಹೊಂದಿರುವ ಚಿತ್ರ ನನ್ನದು ಎಂದವರು ಕುಲಕರ್ಣಿ. ಎಲ್ಲವೂ ಸರಾಗವಾಗಿ ನಡೆದರೆ ಈ ತಿಂಗಳಲ್ಲೇ ಚಿತ್ರ ವೀಕ್ಷಕರಿಗೆ ಸಿನಿಮಾ ಮಂದಿರಗಳಲ್ಲಿ ಲಭ್ಯವಾಗಲಿದೆ.

ಇವುಗಳನ್ನೂ ಓದಿ : ಜಪಾನಿನಲ್ಲೂ ಚಾರ್ಲಿ 777

ಕೋರ್ಟ್‌ ರೂಂ ಎಂದ ಕೂಡಲೇ ನೆನಪಾಯಿತು. ಇಂಗ್ಲಿಷ್‌ ನ 12 ಆಂಗ್ರಿ ಯಂಗ್‌ ಮ್ಯಾನ್‌ ಚಿತ್ರದ ನೆರಳಿನಲ್ಲೇ ರೂಪಿಸಿದ್ದ ದಶಮುಖ ಸಿನಿಮಾದಲ್ಲೂ ರವಿಚಂದ್ರನ್‌ ಅಭಿನಯಿಸಿದ್ದರು. ಶರದ್‌ ನಾಡಗೌಡ, ರಾಮು ರಾಯಚೂರು, ವಿಶ್ವನಾಥ ಗುಪ್ತ, ರಾಜಶೇಖರ್‌ ಪಾಟೀಲ್‌ ಈ ಚಿತ್ರದ ನಿರ್ಮಾಪಕರು.

ರವಿಚಂದ್ರನ್‌ ಜತೆಯಲ್ಲಿ ದಿಗಂತ್ , ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ನವಿಲ ಮುಂತಾದವರು ಅಭಿನಯಿಸಿದ್ದಾರೆ. ಅನೂಪ್ ಸೀಳಿನ್ ರ ಸಂಗೀತವಿದೆ. ಛಾಯಾಗ್ರಾಹಣ ಪಿ.ಕೆ.ಹೆಚ್ ದಾಸ್ ಹಾಗೂ ಸಂಕಲನಕಾರ ಕೆಂಪರಾಜ್‌ ಅವರದ್ದು.

ದಿ ಜಡ್ಜ್‌ ಮೆಂಟ್‌ ಟೀಸರ್‌ ಇಲ್ಲಿ ನೋಡಿ 

ಎರಡು ದಿನಗಳ ಹಿಂದೆ ಬಿಡುಗಡೆಯಾದ ಟೀಸರ್‌ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನೋಡಬೇಕು, ಪೂರ್ತಿ ಸಿನಿಮಾಕ್ಕೆ ಪ್ರೇಕ್ಷಕ ಯಾವ ರೀತಿಯ ಜಡ್ಜ್‌ ಮೆಂಟ್‌ ಕೊಡಬಲ್ಲನೆಂದು.

LEAVE A REPLY

Please enter your comment!
Please enter your name here

spot_img

More like this

Raj B Shetty : ಮೊಟ್ಟೆ ಒಡೆದು ಮರಿ ; ರಾಜ್‌ರದ್ದು...

ಮೊಟ್ಟೆ ಬೆಳೆದು ಒಡೆದು ಹೊರಬಂದರೆ ಮರಿ. ಇದೂ ರೂಪಾಂತರವೇ. ಈಗ ಇಂಥದೊಂದು ಮೊಟ್ಟೆ ಕಥೆ ಹೇಳಿದ ರಾಜ್‌ ಬಿ ಶೆಟ್ಟಿಯವರು ರೂಪಾಂತರಗೊಳ್ಳುತ್ತಿದ್ದಾರೆ. ತಮ್ಮ...

Movie Jigar: ಮತ್ತೊಂದು ಹೊಸ ಚಿತ್ರ ಜಿಗರ್‌ ಜುಲೈ 5 ಕ್ಕೆ...

ಮತ್ತೊಂದು ಹೊಸ ಚಿತ್ರ ಜುಲೈ 5 ರಂದು ಬಿಡುಗಡೆಯಾಗುತ್ತಿದೆ. ಅದರ ಹೆಸರು ಜಿಗರ್.‌ ಪ್ರವೀಣ್‌ ತೇಜ್‌ ಇದರ  ನಾಯಕ ನಟ. ನಾಯಕಿ ವಿಜಯಶ್ರೀ....

New Movie : ನಾ ನಿನ್ನ ಬಿಡಲಾರೆ 2.0 ಗೆ ಹೇಮಂತ್‌...

ನಾ ನಿನ್ನ ಬಿಡಲಾರೆ ಸಿನಿಮಾ ಗೊತ್ತಿರಲೇಬೇಕು. ಹೊಸ ತಲೆಮಾರಿನವರೂ ಹಳೆ ತಲೆಮಾರಿನವರಿಂದ ಕೇಳಿ ತಿಳಿದುಕೊಂಡು ಈ ಸಿನಿಮಾ ನೋಡಿರುತ್ತಾರೆ. ಹೊಸ ತಲೆಮಾರಿನವರೆಂದರೆ ಈ...