ಕಲ್ಕಿ 2898 ಎಡಿ ಸಿನಿಮಾದ ಬಗ್ಗೆ ಕಳೆದ ವರ್ಷ ನಟ ಅಮಿತಾಭ್ ಬಚ್ಚನ್ ಅವರ ಹುಟ್ಟುಹಬ್ಬದ ದಿನದಂದು ಪ್ರಕಟಣೆ ಹೊರಬಿದ್ದಾಗ ಎದ್ದಿದ್ದ ಪ್ರಮುಖ ಪ್ರಶ್ನೆ ಎಂದರೆ ಯಾರು ಯಾರು ಯಾವ ಯಾವ ಪಾತ್ರದಲ್ಲಿ ಇರುತ್ತಾರೆ ಎಂಬ ಪ್ರಶ್ನೆ. ಅದಕ್ಕಿಂತಲೂ ಹೆಚ್ಚು ಅಮಿತಾಭ್ ಅಭಿಮಾನಿಗಳಲ್ಲಿ ಇದ್ದದ್ದು ನಮ್ಮ ಮೆಚ್ಚಿನ ನಟನಿಗೆ ಯಾವ ಪಾತ್ರ? ಯಾವ ಪಾತ್ರ ಕ್ಕೆ ಒಪ್ಪಿರಬಹುದು ಅಥವಾ ಚಿತ್ರ ತಂಡ ಒಪ್ಪಿಸಿರಬಹುದು?
ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ ಅಮಿತಾಭ್ ಅವರು ದ್ರೋಣಾಚಾರ್ಯ ರ ಪುತ್ರ ಅಶ್ವತ್ಥಾಮರಾಗಿ ಅಭಿನಯಿಸುತ್ತಿದ್ದಾರೆ. ಪ್ರಭಾಸ್ ಪ್ರಮುಖ ಪಾತ್ರದಲ್ಲಿದ್ದರೆ, ತಾರಾಗಣದಲ್ಲಿ ಅಮಿತಾಭ್ ಜತೆ ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ತ್ತಿತರರು ಇದ್ದಾರೆ.
ಟೀಸರ್ ಇಲ್ಲಿದೆ : ನೋಡಿ
ನಾಗ್ ಅಶ್ವಿನ್ ರೆಡ್ಡಿ ನಿರ್ದೇಶಿಸುತ್ತಿರುವ ಚಿತ್ರ ಮೊದಲು ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆ ಮಾಡಲು ಆಲೋಚಿಸಲಾಗಿತ್ತು. ಬಳಿಕ ಈ ಭಾಷೆಗಳೊಂದಿಗೆ ಮಲಯಾಳಂ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ. ಸುಮಾರು 600 ಕೋಟಿ ರೂ. ಗಳನ್ನು ವೆಚ್ಚ ಮಾಡಿ ನಿರ್ಮಿಸುತ್ತಿರುವ ಚಿತ್ರವಿದು.
ವೈಜಯಂತಿ ಮೂವೀಸ್ ಇದನ್ನು ನಿರ್ಮಿಸುತ್ತಿದೆ. ರವಿವಾರ ಸಂಜೆ ಬಿಡುಗಡೆ ಮಾಡಿದ 21 ಸೆಕೆಂಡ್ ಗಳ ಟೀಸರ್ ನಲ್ಲಿ ಅಮಿತಾಭರ ಪಾತ್ರವನ್ನು ತಿಳಿಸಿದೆ.
ತಮ್ಮ ಪಾತ್ರದ ಬಗ್ಗೆ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅಮಿತಾಭ್ ಬಚ್ಚನ್, ಇದೊಂದು ಅವಿಸ್ಮರಣೀಯವಾದ ಅನುಭವʼ ಎಂದು ಹೇಳಿದ್ದಾರೆ.
ಕನಸೆಂಬ ಕುದುರೆಯನ್ನೇರಿ; ಕುದುರೆ ಏರುವ ಮೊದಲಿನ ಕಥೆ
ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶಿಸಿದ್ದು, ಜೂನ್ ತಿಂಗಳಲ್ಲಿ ಬಿಡುಗಡೆಯಾಗುವ ಸಂಭವವಿದೆ. ಇದೊಂದು ವಿಶಿಷ್ಟವಾದ ಸಿನಿಮಾವಾಗಿದ್ದು, ಪೌರಾಣಿಕ, ಸೈನ್ಸ್ ಫಿಕ್ಷನ್ ಎಲ್ಲವನ್ನೂ ಅಚ್ಚುಕಟ್ಟಾಗಿ ಸಂಯೋಜಿಸಿ ಕಥೆ ಹೇಳುವ ಪ್ರಯತ್ನವನ್ನು ನಾಗ್ ಅಶ್ವಿನ್ ಮಾಡುತ್ತಿದ್ದಾರೆ.
ಅಮಿತಾಭ್ ರಿಗೂ ಇದೊಂದು ವಿಶಿಷ್ಟ ಪಾತ್ರವಾಗಿದ್ದು, ಅಭಿನಯಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ.