Friday, April 18, 2025
spot_img
More

    Latest Posts

    Bhairava: ಭೈರವನ ಕೊನೆ ಪಾಠ, ಶಿವರಾಜಕುಮಾರ್‌ ರ ಹೊಸ ಚಿತ್ರಪಟ

    ಹಾಗೆ ನೋಡುವುದಾದರೆ ನಟ ಶಿವರಾಜಕುಮಾರ್‌ 2024 ರಲ್ಲಿಹೊಸ ಸಿನಿಮಾಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಯಾಕೋ ಇಂಗ್ಲಿಷ್‌ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಬಳಸುವ ಬ್ಯುಸಿ ಪದ ಸೂಕ್ತವಲ್ಲ. ಬ್ಯುಸಿಗೆ ಹೇಗೂ ಎಂದೂ ಅರ್ಥ ಕಲ್ಪಿಸಬಹುದು.

    ಆದರೆ ಯಾವುದೇ ಸೃಜನಶೀಲ ಮಾಧ್ಯಮದಲ್ಲಿ (ಕ್ರಿಯೇಟಿವ್)‌ ನಟಿಸುವವನಾಗಲೀ ಅಥವಾ ನಿರ್ದೇಶಕನಾಗಲೀ, ಇಡೀ ತಂಡದ ಯಾರೂ ಯಾವುದೇ ಕಾರ್ಯದಲ್ಲಿ ತಲ್ಲೀನರಾಗಲೀ…ಅವೆಲ್ಲವೂ ತೊಡಗಿಸಿಕೊಂಡಿದ್ದಾರೆ ಎಂದೇ ಅರ್ಥ.

    ಎಲ್ಲರೂ ಸೇರಿ ಹೊಸದನ್ನು, ಸೃಜನಶೀಲವಾದದ್ದನ್ನು ಸೃಷ್ಟಿಸುವ ಪ್ರಯತ್ನದಲ್ಲಿರುತ್ತಾರೆ.

    ಹಾಗೆಯೇ ಶಿವರಾಜಕುಮಾರ್‌ ಹೆಚ್ಚು ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಕ್ಯಾಪ್ಟನ್‌ ಮಿಲ್ಲರ್‌, ಕರಟಕ ದಮನಕ, ಭೈರತಿ ರಣಗಲ್‌, ಉತ್ತರಕಾಂಡದ ಜೊತೆಗೆ ಹೊಸ ಚಿತ್ರದ ಶೀರ್ಷಿಕೆ ಜುಲೈ ನಾಲ್ಕರಂದು ಬಿಡುಗಡೆಯಾಗಿದೆ. ಅದು ಭೈರವನ ಕೊನೆ ಪಾಠ.

    Raj B Shetty : ಮೊಟ್ಟೆ ಒಡೆದು ಮರಿ ; ರಾಜ್‌ರದ್ದು ಈಗ ರೂಪಾಂತರದ ಗರಿ

    ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲೂ ಭಿತ್ತಿಪತ್ತವನ್ನು ಲಗತ್ತಿಸಿರುವ ಶಿವರಾಜಕುಮಾರ್‌, ಇನ್ನೂ ಹೇಳಲು ಉಳಿದಿರುವ ಅಥವಾ ಹೇಳಬೇಕಾದ ಬಹಳ ಮುಖ್ಯವಾದ ಪಾಠ ಎಂದು ಅಡಿ ಟಿಪ್ಪಣಿಯನ್ನೂ ಬರೆದುಕೊಂಡಿದ್ದಾರೆ. ಇದು ಕುತೂಹಲ ಮೂಡಿಸಿದೆ.

    ಪ್ರತಿಭಾವಂತ ನಿರ್ದೇಶಕ ಹೇಮಂತ್‌ ಎಂ. ರಾವ್‌ ನಿರ್ದೇಶಿಸುತ್ತಿರುವ ಚಿತ್ರ. ಡಾ. ವೈಶಾಖ್‌ ಜೆ. ಗೌಡ ನಿರ್ಮಿಸುತ್ತಿರುವ ಚಿತ್ರ.

    ಕನ್ನಡವಲ್ಲದೇ ತೆಲುಗು, ತಮಿಳು, ಮಲಯಾಳಂ ನಲ್ಲೂ ಈ ಚಿತ್ರ ರೂಪುಗೊಳ್ಳಲಿದೆ. ದಕ್ಷಿಣ ಭಾಷೆಗಳ ಸಿನಿಮಾ ಲೋಕಕ್ಕೆ ನೀಡುತ್ತಿರುವ ಮೊದಲ ಸಿನಿಮಾವಲ್ಲ.

    ಜೈಲರ್‌ ನಲ್ಲಿನ ನಟನೆಗೆ ದಕ್ಷಿಣ ಭಾರತದ ಭಾಷೆಗಳಲ್ಲೂ ಶಿವರಾಜಕುಮಾರ್‌ ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ ಮತ್ತೊಂದು ಅಂಥದ್ದೇ ಚಿತ್ರಪಟ.

    ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಮೂಲಕ ಬಂದ ಹೇಮಂತ್‌ ರಾವ್‌, ವಿಭಿನ್ನವಾದ ಆಲಾಪ ಹಿಡಿದು ಬಂದವರು. ಅದರ ಯಶಸ್ಸು ಹೊಸ ಸಾಧ್ಯತೆಗಳನ್ನು ತೋರಿಸಿತು.

    ಕವಲುದಾರಿ, ಸಪ್ತಸಾಗರದಾಚೆ ಎಲ್ಲೋ ಮತ್ತಷ್ಟು ಭರವಸೆ ಮೂಡಿಸಿದವು. ಹಂಬಲ್‌ ಪೊಲಿಟಿಷಯನ್‌ ನೊಗ್ರಾಜ್‌, ಭೀಮಸೇನ ನಳಮಹಾರಾಜ ನಿರ್ಮಿಸಿದ ಚಿತ್ರಗಳು. ಈಗ ಹೇಮಂತ್‌ ರಾವ್‌ ನಟ ಶಿವರಾಜಕುಮಾರ್‌ ಗೆ ಚಿತ್ರ ನಿರ್ದೇಶಿಸುತ್ತಿದ್ದಾರೆ.

    New Movie : ನಾ ನಿನ್ನ ಬಿಡಲಾರೆ 2.0 ಗೆ ಹೇಮಂತ್‌ ಹೆಗಡೆ ತಯಾರಿ

    ಹೇಮಂತ್‌ ಮಾಧ್ಯಮಗಳೊಂದಿಗೆ ಹಂಚಿಕೊಂಡಂತೆ, ಇದು ಆಕ್ಷನ್‌ ಸಿನಿಮಾ. ಇದು ಹೇಮಂತ್‌ ರ ಐದನೇ ಸಿನಿಮಾ. ಭೈರವನ ಕೊನೆ ಪಾಠದ ಬಗ್ಗೆ ಹೊರಬಂದಿರುವ ಮಾಹಿತಿ ಕಡಿಮೆ.

    ಲಭ್ಯ ಮಾಹಿತಿ ಪ್ರಕಾರ ಅದು ಚರಿತ್ರೆಯ ಸಂಗತಿಗಳನ್ನು ಆಧರಿಸಿದ ಸಿನಿಮಾ. ಎಲ್ಲವೂ ಅಂದುಕೊಂಡಂತೆ ನಡೆದರೆ 2025 ಕ್ಕೆ ಬಿಡುಗಡೆ.

    ಶಿವರಾಜಕುಮಾರ್‌ ಸಹ ಉಳಿದ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಮಧ್ಯೆ ಹೊಸ ಚಿತ್ರಕ್ಕೂ ಸಮಯ ಮಾಡಿಕೊಳ್ಳಬೇಕಿದೆ.

    Kannada Classics: ಇಂದಿಗೂ ಕ್ಲಾಸಿಕ್‌ ಬೂತಯ್ಯನ ಮಗ ಅಯ್ಯು

    ಹೇಮಂತ್‌ ರಾವ್‌ ಇದುವರೆಗಿನ ಚಿತ್ರಗಳೆಲ್ಲ ತಂಗಾಳಿಯಂತಿವೆ, ಈ ಹೊಸ ಚಿತ್ರದ ಶೀರ್ಷಿಕೆ ಒಂದು ರೀತಿ ಬಿರುಗಾಳಿಯಂತೆ ತೋರುತ್ತಿದೆ. ತಂಗಾಳಿಯ ತಂಪು ಹೆಚ್ಚಿನದೋ, ಬಿರುಗಾಳಿಯ ಅಬ್ಬರ ಹೆಚ್ಚಿನದೋ ಕಾದು ನೋಡಬೇಕಿದೆ.

    Latest Posts

    spot_imgspot_img

    Don't Miss