Wednesday, April 23, 2025
spot_img
More

    Latest Posts

    cannes 2024: ಕನ್ನಡದ ಹುಡುಗನ ಚಿದಾನಂದರಿಗೆ ಕಾನ್ಸ್‌ ಚಿತ್ರೋತ್ಸವ ಪ್ರಶಸ್ತಿ

    ಕನ್ನಡದ ಹುಡುಗ ದೂರದ ಫ್ರಾನ್ಸ್‌ ನ ಕಾನ್ಸ್‌ ನಲ್ಲಿ ಕನ್ನಡದ ಬಾವುಟ ಮತ್ತು ಭಾರತದ ಬಾವುಟ ಹಾರಿಸಿದ್ದಾನೆ ! ಹೌದು. ಕಾನ್ಸ್‌ 2024 ರ ಚಿತ್ರೋತ್ಸವದಲ್ಲಿ ಮೈಸೂರಿನ ಡಾಕ್ಟರ್‌ ಈಗ ಸಿನಿಮಾ ನಿರ್ದೇಶಕ ಚಿದಾನಂದ ಎಸ್.‌ ನಾಯ್ಕ್‌ ಇಂದು ಚಿತ್ರೋತ್ಸವದ ಲಾ ಸಿನೆಫ್‌ ವಿಭಾಗದಲ್ಲಿ ಕಿರುಚಿತ್ರಕ್ಕೆ ಪ್ರಥಮ ಪ್ರಶಸ್ತಿ ಬಂದಿದೆ. ಇದರೊಂದಿಗೆ ಮತ್ತೊಂದು ಖುಷಿಯ ಸಂಗತಿಯೆಂದರೆ ಮೀರಠ್‌ ನ ಮಾನ್ಸಿ ಮಹೇಶ್ವರಿಯವರೂ ಇದೇ ವಿಭಾಗದಲ್ಲಿ ತೃತೀಯ ಪ್ರಶಸ್ತಿ ಪಡೆದಿದ್ದಾರೆ.

    ಇದೊಂದು ವಿಶಿಷ್ಟವಾದ ಗೌರವ. ಇನ್ನೊಂದು ವಿಶೇಷವೆಂದರೆ ಈ ಬಾರಿ ಈ ವಿಭಾಗದಲ್ಲಿ ಎರಡು ಪ್ರಶಸ್ತಿಗಳು ಭಾರತೀಯರ ಪಾಲಾಗಿವೆ. ಹಾಗಾಗಿ ಪ್ರಶಸ್ತಿಯ ಬಾಗಿಲನ್ನು ಈ ಬಾರಿ ಚಿದಾನಂದ ನಾಯ್ಕ್‌ ಮತ್ತು ಮೀರಠ್‌ ನ ಸಿನಿಮಾ ನಿರ್ದೇಶಕಿ ಮಾನ್ಸಿ ಮಹೇಶ್ವರಿಯವರು ತೆರೆದಿದ್ದಾರೆ. ಹಾಗಾಗಿ ಪಾಲ್ಮೇದೋರ್‌ ಪ್ರಶಸ್ತಿಗೆ ಸೆಣಸುತ್ತಿರುವ ಪಾಯಲ್‌ ಕಪಾಡಿಯ ಅವರು ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಮೂವತ್ತು ವರ್ಷಗಳ ಬಳಿಕ ಈ ಪ್ರಶಸ್ತಿಗೆ ಭಾರತೀಯ ಚಿತ್ರ ಸೆಣಸುತ್ತಿದೆ. ಇದೇ ದೊಡ್ಡ ಸಮಾಧಾನ ಎನ್ನುವಷ್ಟರಲ್ಲಿ ಚಿದಾನಂದ್‌ ಹಾಗೂ ಮಾನ್ಸಿ ಮಹೇಶ್ವರಿಯವರು ಹೊಸ ಸಂತೋಷವನ್ನು ತಂದುಕೊಟ್ಟಿದ್ದಾರೆ.

    ದ್ವಿತೀಯ ಪ್ರಶಸ್ತಿಯನ್ನು ಕೊಲಂಬಿಯ ವಿವಿ ಯ ಅಸ್ಯ ಸೆಗಲ್ವೊವಿಚ್‌ ರ ʼಔಟ್‌ ಆಫ್‌ ದಿ ವಿಡೋ ಥ್ರೂ ದಿ ವಾಲ್‌ʼ ಹಾಗೂ ಗ್ರೀಸ್‌ ನ ಥೆಸಲೊನಿಕಿಯ ಅರಿಸ್ಟಾಟಲ್‌ ವಿವಿ ಯ ವಿದ್ಯಾರ್ಥಿ ನಿಕೋಸ್‌ ಕೊಲಿಯೊಕೊಸ್‌ ರ ಪಾಲಾಗಿದೆ.

    ಕಾನ್ ಸಿನಿಮೋತ್ಸವದಲ್ಲಿ ಮೂರು ಭಾರತೀಯರ ಚಿತ್ರಗಳು

    ಚಿದಾನಂದ ನಾಯ್ಕ್‌ ಅವರ ಚಲನಚಿತ್ರ ʼಸನ್‌ ಫ್ಲವರ್ಸ್‌ ವರ್‌ ದಿ ಫರ್ಸ್ಟ್‌ ಒನ್ಸ್‌ ಟು ನೋʼ ಗೆ ಪ್ರಥಮ ಪ್ರಶಸ್ತಿ ಬಂದಿದೆ. ಹಾಗೆಯೇ ತೃತೀಯ ಪ್ರಶಸ್ತಿಯನ್ನು ಮಾನ್ಸಿ ಮಹೇಶ್ವರಿಯವರರ ʼಬನ್ನಿಹುಡ್‌ʼ ಗೆ ದಕ್ಕಿದೆ. ಮಾನ್ಸಿ ಲಂಡನ್‌ ನ ನ್ಯಾಷನಲ್‌ ಫಿಲ್ಮ್‌ ಟೆಲಿವಿಷನ್‌ ಸ್ಕೂಲ್‌ (ಎನ್‌ ಎಫ್‌ ಟಿ ಎಸ್)‌ ನ ವಿದ್ಯಾರ್ಥಿನಿ.

    ಪ್ರಥಮ ಪ್ರಶಸ್ತಿಗೆ 15 ಸಾವಿರ ಯುರೋಗಳು, ದ್ವಿತೀಯ ಪ್ರಶಸ್ತಿಗೆ 11, 250 ಯುರೋಗಳು ಹಾಗೂ ತೃತೀಯ ಪ್ರಶಸ್ತಿಗೆ 7, 500 ಯುರೋಗಳು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವಿಭಾಗದಲ್ಲಿ 555 ಸಿನಿಮಾ ಶಾಲೆಗಳ 2, 263 ವಿದ್ಯಾರ್ಥಿಗಳು ಸಿನಿಮಾಗಳನ್ನು ಕಳಿಸಿದ್ದರು. ಈ ಪೈಕಿ 17 ಸಿನಿಮಾಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. ಈ ಪೈಕಿ ಚಿದಾನಂದ್‌ರಿಗೆ ಪ್ರಥಮ ಪುರಸ್ಕಾರ ಸಂದಾಯವಾಗಿದೆ. ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳು ಜೂನ್‌ 3 ಹಾಗೂ ಜೂನ್‌ 4 ರಂದು ವಿವಿಧ ವಿಭಾಗಗಳಲ್ಲಿ ಪ್ರದರ್ಶನಗೊಳ್ಳಲಿದೆ.

    Shyam Benegal : ಸಿನಿಮಾದಿಂದಲ್ಲ ; ಸಿನಿಮಾ ಮಾಧ್ಯಮದಿಂದ ಸಾಮಾಜಿಕ ಬದಲಾವಣೆ ಸಾಧ್ಯ

    ಇದು ಇತ್ತೀಚಿನ ಐದು ವರ್ಷಗಳಲ್ಲಿ ಭಾರತೀಯರಿಗೆ ಎರಡನೇ ಬಾರಿ ಈ ಪ್ರಶಸ್ತಿ ಸಂದಾಯವಾಗಿದೆ. 2020 ರಲ್ಲಿ ಅಶ್ಮಿತಾ ಗುಹಾ ನ್ಯೋಗಿ ಅವರಿಗೆ ಪುರಸ್ಕಾರ ಸಂದಿದೆ. ಇವರೂ ಎಫ್‌ ಟಿ ಐಐ ನಲ್ಲಿ ಕಲಿತಿದ್ದರು.

    ಚಿದಾನಂದ ಎಸ್‌ ನಾಯ್ಕ್‌ ಪುಣೆಯ ಎಫ್‌ ಟಿ ಐಐ ನ ವಿದ್ಯಾರ್ಥಿ. ಮೂಲತಃ ವೈದ್ಯ ಪದವಿ ಪಡೆದ ಚಿದಾನಂದ ಈಗ ಸಿನಿಮಾ ನಿರ್ದೇಶಕರಾಗಿದ್ದಾರೆ.  ಸನ್‌ ಫ್ಲವರ್ಸ್‌ ವರ್‌ ಎಂಬ ಚಿತ್ರ 16 ನಿಮಿಷಗಳ ಕಿರುಚಿತ್ರ. ಹಳ್ಳಿಯ ಮುದುಕಿಯೊಬ್ಬಳು ಕೋಳಿಯೊಂದನ್ನು ಕದ್ದುಕೊಂಡು ಹೋಗುತ್ತಾಳೆ. ಅಂದಿನಿಂದ ಆ ಊರಿನಲ್ಲಿ ಸೂರ್ಯ ಹುಟ್ಟುವುದೇ ಇಲ್ಲ ಎಂಬ ಸೆಲೆಯ ಒಂದು  ಜಾನಪದ ಕಥೆಯನ್ನು ಸಿನಿಪರದೆಗೆ ಚಿದಾನಂದರು ಅಳವಡಿಸಿದ್ದಾರೆ.

    Latest Posts

    spot_imgspot_img

    Don't Miss