ಕಾನ್ಸ್ : ಫ್ರಾನ್ಸಿನ ಸಿನಿಮಾ ಕಾಶಿ ಕಾನ್ಸ್ ನಲ್ಲಿ ನಡೆಯುತ್ತಿರುವ 77 ನೇ ಚಿತ್ರೋತ್ಸವದಲ್ಲಿ ಭಾರತದ ವಿಜಯಯಾತ್ರೆ ಮುಂದುವರಿದಿದೆ. ಭಾರತೀಯ ಚಿತ್ರನಟಿ ಅನಸೂಯಾ ಸೇನ್ ಗುಪ್ತಾ ಅವರು ದಿ ಶೇಮ್ ಲೆಸ್ (The Shameless) ಸಿನಿಮಾದಲ್ಲಿನ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಅನ್ ಸರ್ಟೇನ್ ರಿಗಾರ್ಡ್ ವಿಭಾಗದಲ್ಲಿ ಪಡೆದಿದ್ದಾರೆ. ಈ ಮೂಲಕ ಕಾನ್ಸ್ ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಭಾರತೀಯ ನಟಿ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದಾರೆ.
ಈ ಚಿತ್ರೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ 7 ಭಾರತೀಯ ಸಿನಿಮಾಗಳು ಸ್ಪರ್ಧಿಸಿವೆ. ಈ ಪೈಕಿ ಈಗಾಗಲೇ ಬುಧವಾರ ಭಾರತದ ವಿಜಯ ಯಾತ್ರೆಗೆ ಮೈಸೂರಿನ ಚಿದಾನಂದ ಎಸ್ ನಾಯಕ್ ಅವರು ಲಾಸಿನೆಫ್ ವಿಭಾಗದಲ್ಲಿ ಸನ್ ಫ್ಲವರ್ಸ್ ವರ್ ದಿ ಫರ್ಸ್ಟ್ ಒನ್ಸ್ ಟು ನೋ ಸಿನಿಮಾ ಪ್ರಥಮ ಪುರಸ್ಕಾರವನ್ನು ಪಡೆಯಿತು. ಅದೇ ವಿಭಾಗದಲ್ಲಿ ಇಂಗ್ಲೆಡ್ ನ ಸಿನಿಮಾ ಶಾಲೆಯಲ್ಲಿ ಕಲಿಯುತ್ತಿರುವ ಭಾರತೀಯ ನಿರ್ದೇಶಕಿ ಮಾನ್ಸಿ ಮಹೇಶ್ವರಿಯವರ ಬನ್ನಿವುಡ್ ಸಿನಿಮಾ ತೃತೀಯ ಪ್ರಶಸ್ತಿ ಪಡೆಯಿತು.
cannes 2024: ಕನ್ನಡದ ಹುಡುಗನ ಚಿದಾನಂದರಿಗೆ ಕಾನ್ಸ್ ಚಿತ್ರೋತ್ಸವ ಪ್ರಶಸ್ತಿ
ಇಂದು ಅದರ ಸಂತೋಷವನ್ನು ಇಮ್ಮಡಿಸುವಂತೆ ಅನಸೂಯ ಗುಪ್ತ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ್ದಾರೆ. ಇದು ಇತಿಹಾಸ ನಿರ್ಮಾಣವಾಗಿರುವ ದಿನ. ಇದುವರೆಗೂ ಕಾನ್ಸ್ ಚಿತ್ರೋತ್ಸವದಲ್ಲಿ ನಟನೆಯಲ್ಲಿ ಅತ್ಯುತ್ತಮ ಪ್ರಶಸ್ತಿಗೆ ಭಾರತೀಯ ಕಲಾವಿದರು ಭಾಜನರಾಗಿಲ್ಲ. ಈಗ ದಿ ಶೇಮ್ ಲೆಸ್ ಚಿತ್ರದಲ್ಲಿನ ತಮ್ಮ ನಟನೆಗಾಗಿ ಅನಸೂಯಾ ಅವರು ಆ ಕೊರತೆಯನ್ನು ಹೋಗಲಾಡಿಸಿದ್ದಾರೆ.
ದಿ ಶೇಮ್ ಲೆಸ್ ಚಲನಚಿತ್ರವನ್ನು ಕಾನ್ ಸ್ಟಾಂಟಿನ್ ಬೊಜನೊವ್ (Konstantin BOJANOV) ನಿರ್ದೇಶಿಸಿದ್ದಾರೆ.
ಅನಸೂಯಾ ಗುಪ್ತ ಕೋಲ್ಕತ್ತಾದವರು. ರೇಣುಕಾ ಪಾತ್ರದಲ್ಲಿ ಅನಸೂಯ ಈ ಚಿತ್ರದಲ್ಲಿ ಅಭಿನಯಿಸಿದ್ದು, ಒಬ್ಬ ಪೊಲೀಸ್ ಅಧಿಕಾರಿಯನ್ನು ಕೊಂದು ವೇಶ್ಯಾಗೃಹದಿಂದ ತಪ್ಪಿಸಿಕೊಂಡು ಹೊಸ ಬದುಕನ್ನು ಹುಡುಕುವ ರೇಣುಕಾಳ ಕಥೆ. ಇದೇ ಚಲನಚಿತ್ರದಲ್ಲಿ ಮತ್ತೊಬ್ಬ ಭಾರತೀಯ ನಟಿ ಒಮರ್ ಶೆಟ್ಟಿ ಕೂಡ ಅಭಿನಯಿಸಿದ್ದಾರೆ.
Manthan at cannes : ಈ ಅಪೂರ್ವ ಘಳಿಗೆಯಲ್ಲಿ ಅವರೆಲ್ಲ ಇರಬೇಕಿತ್ತು
ಈ ವಿಭಾಗದ ಇನ್ನಿತರ ಪ್ರಶಸ್ತಿಗಳ ಪೈಕಿ ವಿಶೇಷ ಪ್ರೋತ್ಸಾಹ- ನೋರಾ ಚಿತ್ರದ ತೌಫಿಕ್ ಆಲ್ಜಾದಿ, ಯೂತ್ ಅವಾರ್ಡ್ ಗೆ ಲೂಯಿಸ್ ಕರ್ವೊಸಿರ್ (ಹೋಲಿ ಕೌ), ಅಬೋ ಸಂಗರೆ ಅತ್ಯುತ್ತಮ ನಟ (ಎಲ್ ಹಿಸ್ಟೊರಿ ದೆ ಸೌಲೆಮನ್), ಬೆಸ್ಟ್ ಡೈರೆಕ್ಟರ್ ಪ್ರಶಸ್ತಿಗೆ ರಾಬರ್ಟೊ ಮಿನರ್ವನಿ (ದಿ ಡ್ಯಾಮ್ಡ್), ಜೂರಿ ಪ್ರಶಸ್ತಿಗೆ ಎಲ್ ಹಿಸ್ಟೊರಿ ದೆ ಸೌಲೆಮನ್ ಪ್ರಶಸ್ತಿ ಗಳಿಸಿದೆ. ಹಾಗೆಯೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೂವಾನ್ ಹೂ ಅವರ ಬ್ಲ್ಯಾಕ್ ಡಾಗ್ ಗೆ ಸಂದಾಯವಾಗಿದೆ.