ನಟ ಅನಿರುದ್ಧ್ ಐದು ವರ್ಷಗಳ ಬಳಿಕ ಬೆಳ್ಳಿತೆರೆಯ ಮೇಲೆ ಚೆಫ್ ಚಿದಂಬರ ಆಗಿ ಬರುತ್ತಿದ್ದಾರೆ. ಜೂನ್ 14 ರಂದು ರಾಜ್ಯಾದ್ಯಂತ ಈ ಸಿನಿಮಾ ವೀಕ್ಷಕರಿಗೆ ಲಭ್ಯವಾಗಲಿದೆ. ಕಿರುತೆರೆಯಲ್ಲೂ ಸಾಕಷ್ಟು ಬ್ಯುಸಿಯಾಗಿದ್ದ ಅನಿರುದ್ಧ್ ರಾಜಾ ಸಿಂಹ ಮತ್ತು ಅಭಯಹಸ್ತದಲ್ಲಿ ನಟಿಸಿದ್ದರು. 2023 ರಲ್ಲಿ ಬಿಡುಗಡೆಯಾದ ಟ್ರಿಪಲ್ ರೈಡಿಂಗ್ ಸಿನಿಮಾದಲ್ಲೂ ನಟಿಸಿದ್ದರು. ಆದರೆ ಪೂರ್ತಿಯಾಗಿ ರಾಜಾ ಸಿಂಹದ ಬಳಿಕ ಬರುತ್ತಿರುವುದೇ ಈ ಚಿತ್ರ.
ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದರಲ್ಲಿ ಅನಿರುದ್ಧರದ್ದು ಚೆಫ್ – ಬಾಣಸಿಗನ ಪಾತ್ರ. ದಮ್ತಿ ಪಿಕ್ಚರ್ಸ್ ನಡಿ ರೂಪ ಡಿ.ಎನ್ ನಿರ್ಮಿಸಿರುವ ಚಿತ್ರವಿದು. ಎಂ ಆನಂದರಾಜ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಅವರದ್ದೇ. ಸಂಭಾಷಣೆ ಒದಗಿಸಿರುವವರು ಗಣೇಶ್ ಪರಶುರಾಮ್. ಉದಯಲೀಲರ ಛಾಯಾಗ್ರಹಣ, ರಿತ್ವಿಕ್ ಮುರಳೀಧರರ ಸಂಗೀತ, ವಿಜೇತ್ ಚಂದ್ರರ ಸಂಕಲನ, ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿಯವರ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನವಿದೆ. ಈ ಚಿತ್ರದ ಪಾತ್ರದ ಕುರಿತ ಟೀಸರ್ ಇಲ್ಲಿ ನೋಡಿ .
ಅನಿರುದ್ಧರಿಗೆ ನಾಯಕಿಯಾಗಿರುವವರು ಮತ್ತೊಬ್ಬ ಕನ್ನಡದ ನಟಿ ನಿಧಿ ಸುಬ್ಬಯ್ಯ ಹಾಗೂ ರಾಚೆಲ್ ಡೇವಿಡ್. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ತಾರಾಗಣದಲ್ಲಿದ್ದಾರೆ.
Cannes 2024: ಗೆಳೆತನವೂ ಕೌಟುಂಬಿಕ ಭಾವದ ಪ್ರತೀಕ-ಪಾಯಲ್ ಕಪಾಡಿಯ
ಮುಂಗಾರಿನಲ್ಲಿ ಹೆಸರು, ಮುಂಗಾರಿನ ನಂತರ ಚಿತ್ರೀಕರಣ
ಸಂಜು ವೆಡ್ಸ್ ಗೀತಾ” ಚಿತ್ರ ನೆನಪಿರಬಹುದು. ಅದೇ ಚಿತ್ರ ನಿರ್ಮಿಸಿದ ನಿರ್ಮಾಪಕರು ಮತ್ತೊಂದು ಸಿನಿಮಾಕ್ಕೆ ಸಜ್ಜಾಗಿದ್ದಾರೆ. ಅದಕ್ಕೆ ರಿಷಿ ನಾಯಕ ನಟ. ಚಿತ್ರ ನಿರ್ಮಾಪಕ ಪ್ರಮೋದ್ ನಾರಾಯಣ್ ಸಂಜು ವೆಡ್ಸ್ ಗೀತಾ, ಹಾಗೇ ಸುಮ್ಮನೆಯಂಥ ಚಿತ್ರ ನಿರ್ಮಿಸಿದವರು. ಹಾಗೆಯೇ ರಿಷಿ ಕವಲುದಾರಿ, ಆಪರೇಷನ್ ಅಲುಮೇಲಮ್ಮ ಚಿತ್ರಗಳ ಮೂಲಕ ಜನಪ್ರಿಯರಾದವರು.
ರಾಕಡ್ ಫಿಲಂಸ್ ಮುಂಬೈ ನಡಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಜೋಯ್ ದೀಪ್ ಬಿಸ್ವಾಸ್ ಹಾಗೂ ಸೋನಾಲಿ ಬಿಸ್ವಾಸ್ ಅವರ ಸಹಕಾರವಿದೆ. ಕಿಶೋರ್ ಭಾರ್ಗವ್ ಇದರ ನಿರ್ದೇಶಕರು. ತೆಲುಗಿನಲ್ಲಿ ಚಿತ್ರ ನಿರ್ದೇಶಿಸಿರುವ ಕಿಶೋರ್ ಗೆ ಇದು ಕನ್ನಡದಲ್ಲಿ ಚೊಚ್ಚಲ ಚಿತ್ರ.
ಮುಂಗಾರು ಮುಗಿಯಬೇಕು. ಆಗಸ್ಟ್ ನಲ್ಲಿ ಚಿತ್ರೀಕರಣದ ಆಲೋಚನೆಯಲ್ಲಿದೆ ಚಿತ್ರತಂಡ. ಮುಂಗಾರು ಮುಗಿಯುವಷ್ಟರಲ್ಲೇ ಹೆಸರು ಬಿಡುಗಡೆಯಾಗಬಹುದು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಡಿಸ್ನಿ ಹಾಟ್ ಸ್ಟಾರ್ ನ ಸೈತಾನ್ ವೆಬ್ ಸೀರಿಸ್ ಮೂಲಕ ರಿಷಿ ತೆಲುಗು, ತಮಿಳಿನಲ್ಲೂ ಜನಪ್ರಿಯರಾಗಿದ್ದಾರೆ. ಅದನ್ನು ನಗದೀಕರಿಸಿಕೊಳ್ಳುವ ಆಲೋಚನೆಯೂ ಚಿತ್ರತಂಡಕ್ಕಿದೆ.
Cannes 2024: ಕನ್ನಡದ ಹುಡುಗನ ಚಿದಾನಂದರಿಗೆ ಕಾನ್ಸ್ ಚಿತ್ರೋತ್ಸವ ಪ್ರಶಸ್ತಿ
ವಿಕಾಸ ಪರ್ವ : ಈ ಚಿತ್ರ ಯಾವುದೇ ರಾಜಕೀಯ ಪಕ್ಷದ್ದಲ್ಲ !
ಸೆನ್ಸಾರ್ ಸಹ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ಚಿತ್ರ ವಿಕಾಸ ಪರ್ವ. ಇನ್ನೇನು ಶೀಘ್ರವೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೊಂದು ಸಾಮಾಜಿಕ ಕಳಕಳಿಯುಳ್ಳ ಚಲನಚಿತ್ರ ಎನ್ನುತ್ತದೆ ಚಿತ್ರತಂಡ. ಉತ್ತಮ ಸಂದೇಶವೂ ಇದೆಯಂತೆ. ಕಿರುತೆರೆಯಲ್ಲಿ ಜನಪ್ರಿಯರಾದ ರೋಹಿತ್ ನಾಗೇಶ್ ಅಭಿನಯಿಸಿದ್ದಾರೆ. ಅವರೊಂದಿಗೆ ಸ್ವಾತಿ, ನಿಶಿತಾ ಗೌಡ, ಅಶ್ವಿನ್ ಹಾಸನ್, ಬಾಲ ರಾಜವಾಡಿ, ಕುರಿ ರಂಗ, ಸಮೀರ್ ನಗರದ್, ವಿಘ್ನೇಶ್, ಬೇಬಿ ಬಿಲ್ವ, ಮಾಸ್ಟರ್ ಅಭಯ್ ಮತ್ತಿತರರು ಅಭಿನಯಿಸಿದ್ದಾರೆ.
ಮೈಂಡ್ ಥಾಟ್ಸ್ ಮೀಡಿಯಾದಡಿ ಸಮೀರ್ ನಿರ್ಮಿಸುತ್ತಿರುವ ಚಿತ್ರವಿದು. ಅನ್ಬು ಅರಸ್ ರ ನಿರ್ದೇಶನ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ವಿಶೃತ್ ನಾಯಕ್ ರದ್ದು. ನವೀನ್ ಸುವರ್ಣರ ಛಾಯಾಗ್ರಹಣ, ಎ ಪಿ ಓರ ಸಂಗೀತ ನಿರ್ದೇಶನವಿದೆ.
ನೆನಪಿರಲಿ. ಇದು ಯಾವುದೇ ರಾಜಕೀಯ ಪಕ್ಷದ್ದಲ್ಲ !