Friday, March 21, 2025
spot_img
More

    Latest Posts

    Father:ಅಪ್ಪ–ಮಗ ಮೋಡಿ ಮಾಡುತ್ತಾರೋ ನೋಡಬೇಕು

    ಕನ್ನಡದ ಕೆಲವು ಒಳ್ಳೆಯ ನಿರ್ದೇಶಕರಲ್ಲಿ ಆರ್‌ ಚಂದ್ರು ಸಹ ಒಬ್ಬರು. ಚಿಕ್ಕಬಳ್ಳಾಪುರ ಮೂಲದ ಆರ್.‌ ಚಂದ್ರಶೇಖರ್‌ ತಾಜಮಹಲ್‌ ಚಿತ್ರದ ಮೂಲಕ ಕನ್ನಡಕ್ಕೆ ಸ್ವತಂತ್ರ ನಿರ್ದೇಶಕರಾದವರು. ತಾಜಮಹಲ್‌, ಚಾರ್‌ ಮಿನಾರ್‌, ಐ ಲವ್‌ ಯು.. ಹೀಗೆ ಪ್ರೀತಿ, ಪ್ರೇಮದ ಜಾಡು ಹಿಡಿದು ಬಂದವರು.

    ಅವರ ಬಹುತೇಕ ಸಿನಿಮಾಗಳ ಶೀರ್ಷಿಕೆಗಳಿಗೆ ಈ ನವಿರಿನ ಲೇಪನ ಇದ್ದೇ ಇರುತ್ತದೆ. ಇದರ ಮಧ್ಯೆ ಮೈಲಾರಿ, ಬ್ರಹ್ಮ, ಕಬ್ಜದಂಥ ಸಿನಿಮಾಗಳನ್ನೂ ಮಾಡಿದವರು.

    ಅವರ ಕಬ್ಜ ಈಗಿನ ಟ್ರೆಂಡ್‌ ರೀತಿಯಲ್ಲಿ ಬಹು ನಟರ ಸಿನಿಮಾ. ದೊಡ್ಡ ಸದ್ದೇನೋ ಮಾಡಿತ್ತು ಚಿತ್ರ ಬಿಡುಗಡೆಯ ಮೊದಲು. ಬಳಿಕ ಎಲ್ಲೋ ಅಡಗಿ ಹೋಯಿತು.

    ಈಗ ಫಾದರ್‌ ಕರೆದುಕೊಂಡು ಬರುತ್ತಿದ್ದಾರೆ. ಅಂದರೆ ಇದು ಅವರು ನಿರ್ಮಾಪಕರಾಗಿ ರೂಪಿಸುತ್ತಿರುವ ಸಿನಿಮಾ. ಕಥೆ ಮತ್ತು ನಿರ್ದೇಶನ ರಾಜ್‌ ಮೋಹನ್‌ ರದ್ದು. ಸಂಭಾಷಣೆಯ ಹೊಣೆ ಮಂಜು ಮಾಂಡವ್ಯರದ್ದು.

    ಆರ್‌ ಸಿ ಸ್ಟುಡಿಯೋಸ್‌ ನಿಂದ ನಿರ್ಮಿಸುತ್ತಿರುವ ಸಿನಿಮಾ. ಪ್ರಕಾಶ್‌ ರೈ ಮತ್ತು ಡಾರ್ಲಿಂಗ್‌ ಕೃಷ್ಣರ ಅಭಿನಯದ ಸಿನಿಮಾ. ಇಬ್ಬರದ್ದೂ ತಂದೆ ಮಗನ ಪಾತ್ರಗಳು. ಮೈಸೂರಿನಲ್ಲಿ ಚಿತ್ರೀಕರಣ ಮುಗಿಸಿರುವ ಸಿನಿಮಾ ಸಿದ್ಧವಾಗುತ್ತಿದೆ. ಇದು ಈ ಸ್ಟುಡಿಯೋದ ಮೊದಲ ಸಿನಿಮಾ. ಮೈಸೂರು, ವಾರಣಾಸಿ, ಮಂಗಳೂರು, ಮತ್ತಿತರ ಕಡೆ ಚಿತ್ರೀಕರಿಸುವ ಸಿನಿಮಾ.

    Raj B Shetty : ಮೊಟ್ಟೆ ಒಡೆದು ಮರಿ ; ರಾಜ್‌ರದ್ದು ಈಗ ರೂಪಾಂತರದ ಗರಿ

    ಕಥೆ ಕೇಳಿದಾಗ ಇಷ್ಟವಾಗಿದ್ದು ಮೊದಲು ನನ್ನ ಪತ್ನಿ ಮಿಲನಾರಿಗೆ. ಅದರಲ್ಲಿ ನಟಿಸಲು ಒಪ್ಪಿಕೊಂಡೆ. ಪ್ರಕಾಶ್‌ ರೈ ಜತೆ ನಟಿಸಬೇಕೆಂಬ ಆಸೆಯೂ ಕೈ ಗೂಡುತ್ತಿದೆ ಈ ಚಿತ್ರದಲ್ಲಿ ಎಂದವರು ಡಾರ್ಲಿಂಗ್‌ ಕೃಷ್ಣ.

    ಕಬ್ಜದಲ್ಲಿ ನಾನು ನಟಿಸಬೇಕಿತ್ತು. ಆಗ ಸಾಧ್ಯವಾಗಲಿಲ್ಲ. ಈಗ ಚಂದ್ರು ಅವರ ಫಾದರ್‌ ಚಿತ್ರದಲ್ಲಿ ನಟಿಸುತ್ತಿರುವೆ. ನನ್ನ ಮನಸ್ಸಿಗೆ ಹತ್ತಿರವಾದ ಕಥೆ ಮತ್ತು ನಮ್ಮ ಪಾತ್ರಗಳ ಮೂಲಕ ಇಂದಿನ ತಂದೆ ಮಕ್ಕಳ ಸಂಬಂಧದ ಬಗ್ಗೆಯೂ ಹೇಳಲಿಕ್ಕೆ ಅವಕಾಶವಿದೆ. ಇಂದಿನ ಸಂದರ್ಭಕ್ಕೆ ಬೇಕಾದ ಸಿನಿಮಾ ಎಂದೆನಿಸಿ ಒಪ್ಪಿಕೊಂಡೆ ಎಂಬುದು ಪ್ರಕಾಶ್‌ ರೈ ಅವರ ಮಾತು.

    ಐದು ಲಕ್ಷ ಪ್ರೊಡ್ಯೂರ್ಸ್‌ಗಳ ಮಂಥನ್‌ ಮರು ಬಿಡುಗಡೆ; ನೋಡದೇ ಇರಬೇಡಿ

    ನೂರು ರೂ. ಗಳೊಂದಿಗೆ ಗಾಂಧಿ ನಗರಕ್ಕೆ ಬಂದವರಂತೆ ಚಂದ್ರು. ಈಗ ಚಿತ್ರ ನಿರ್ಮಿಸುತ್ತಿದ್ದಾರೆ. ಇದೊಂದು ತಾಜಮಹಲ್‌ ರೀತಿ ಭಾವನಾತ್ಮಕ ಸಿನಿಮಾ.

    ತಂದೆ ಮತ್ತು ಮಗನ ನಡುವಿನ ಸಂಬಂಧದ ಕುರಿತಾದದ್ದು. ಕೃಷ್ಣರ ಜತೆ ಸಿನಿಮಾ ಮಾಡಬೇಕೆನಿಸಿತ್ತು. ಈ ಪಾತ್ರಕ್ಕೆ ಪ್ರಕಾಶ್‌ ರೈ ಇದ್ದಿದ್ದರೆ ಚೆನ್ನಾಗಿತ್ತು ಎಂದೆನಿಸಿತು. ಅದೀಗ ನಿಜವಾಗಿದೆ.

    Bhairava: ಭೈರವನ ಕೊನೆ ಪಾಠ, ಶಿವರಾಜಕುಮಾರ್‌ ರ ಹೊಸ ಚಿತ್ರಪಟ

    ಅಮೃತ ಅಯ್ಯಂಗಾರ್‌ ನಟಿಸುತ್ತಿರುವ ಸಿನಿಮಾವೂ ಇದು. ಪ್ರಕಾಶ್‌ ರೈ ಜತೆ ನಟಿಸುವ ಅವಕಾಶ ಸಿಕ್ಕಿದೆ. ಈ ಆಸೆ ಇತ್ತು ಎಂದವರು ಅಮೃತಾ.

    ಸುಜ್ಞಾನ್‌ ರ ಛಾಯಾಗ್ರಹಣ, ಗೌರಾ ಹರಿ ಸಂಗೀತ ನಿರ್ದೇಶನ, ರಘುನಾಥ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮದನ್ ಹರಿಣಿ, ಸಂತೋಷ್ ಅವರ ನೃತ್ಯ ನಿರ್ದೇಶನವಿದೆ.

    The theory of everything: ಬದುಕನ್ನೇ ಮೊದಲ ಅಗಾಧವಾಗಿ ಪ್ರೀತಿಸಬೇಕು

    Latest Posts

    spot_imgspot_img

    Don't Miss