Friday, April 25, 2025
spot_img
More

    Latest Posts

    Film Bazaar: ಪ್ರೊಗ್ರೆಸ್‌ ಇನ್‌ ಲ್ಯಾಬ್‌ ಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

    ಗೋವಾದಲ್ಲಿ ನವೆಂಬರ್‌ 20 ರಿಂದ 28 ರವರೆಗೆ ನಡೆಯುವ 55 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (IFFI) ಸಂದರ್ಭದಲ್ಲೇ ಎನ್‌ ಎಫ್‌ ಡಿಸಿ ಆಯೋಜಿಸುವ ಫಿಲ್ಮ್‌ ಬಜಾರ್‌ ನ ದಿ ವರ್ಕ್‌ ಇನ್‌ ಪ್ರೊಗ್ರೆಸ್‌ ಲ್ಯಾಬ್‌ ನಲ್ಲಿ ನಿಮ್ಮ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾದ ತುಣುಕುಗಳನ್ನು ಪ್ರದರ್ಶಿಸಬಹುದು.

    ಈ ಮೂಲಕ ಅಂತಾರಾಷ್ಟ್ರೀಯ ಸಿನಿಮಾ ನಿರ್ದೇಶಕರು, ನಿರ್ಮಾಪಕರುಳ್ಳ ಪರಿಣಿತರ ತಂಡ ನಿಮ್ಮ ಸಿನಿಮಾದ ಅಂತಿಮ ರೂಪಕ್ಕೆ ಒಂದಿಷ್ಟು ಸಲಹೆ ನೀಡಬಹುದು. ಅದನ್ನು ಆಧರಿಸಿ ಸಿನಿಮಾವನ್ನು ಇನ್ನೂ ಚೆನ್ನಾಗಿ ರೂಪಿಸಬಹುದು. ಬಹಳ ಮುಖ್ಯವಾಗಿ ಈ ಮೂಲಕ ಒಂದಿಷ್ಟು ಅಂತಾರಾಷ್ಟ್ರೀಯ ಸಂಪರ್ಕಗಳು ಸಾಧ್ಯವಾಗಬಹುದು.

    ಈಗ ಇರುವುದು ವರ್ಕ್‌ ಇನ್‌ ಪ್ರೊಗ್ರೆಸ್‌ ಲ್ಯಾಬ್.‌ ನೀವು ಹೊಸ ಸಿನಿಮಾವನ್ನು ರೂಪಿಸುತ್ತಿದ್ದರೆ, ಅದರ ರಫ್‌ ಕಟ್‌ ಗಳನ್ನು ಇಲ್ಲಿ ಪ್ರದರ್ಶಿಸಬಹುದು. ಇಲ್ಲಿರುವ ಸಿನಿಮಾ ಪರಿಣಿತರು ನೀಡುವ ಸಲಹೆ ಪಡೆದು ನಿಮ್ಮ ಸಿನಿಮಾವನ್ನು ಮತ್ತಷ್ಟು ಸೊಗಸುಗೊಳಿಸಬಹುದು. ಇದಕ್ಕೆ ಅರ್ಜಿ ಸಲ್ಲಿಸಲು ಸೆ. 15 ರವರೆಗೆ ಅವಕಾಶವಿದ್ದು, ಈಗ ಸೆಪ್ಟೆಂಬರ್‌ 30 ರವರೆಗೆ ಅವಧಿ ವಿಸ್ತರಿಸಲಾಗಿದೆ. ಹೀಗಾಗಿ ಇನ್ನೂ ಹದಿನೈದು ದಿನಗಳಿವೆ ಅರ್ಜಿ ಸಲ್ಲಿಸಲು. ಒಂದು ವೇಳೆ ನಿಮ್ಮ ಸಿನಿಮಾ ಸಿದ್ಧವಾಗುತ್ತಿದ್ದರೆ ಈಗಲೇ ಅರ್ಜಿ ಸಲ್ಲಿಸಬಹುದು.

    ವೆನಿಸ್‌ ನಲ್ಲಿ ಘಟಶ್ರಾದ್ಧಕ್ಕೆ ಅಭಿನಂದನೆ ; ಜಾಫ್ನಾ ಚಿತ್ರೋತ್ಸವದಲ್ಲಿ ಗಿರೀಶ್‌ ಕಾಸರವಳ್ಳಿಯವರಿಗೆ ಪುರಸ್ಕಾರ

    2022 ರವರೆಗೆ ಕೇವಲ ಕಥಾ ಚಿತ್ರಗಳು (ಫೀಚರ್)‌ ಮಾತ್ರ ಇಲ್ಲಿ ಆಯ್ಕೆಯಾಗುತ್ತಿತ್ತು. 2023 ರ ಬಳಿಕ ಕಥೇತರ (ನಾನ್‌ ಫೀಚರ್)‌ ಚಿತ್ರಗಳಿಗೂ ಅವಕಾಶವಿದೆ. ಅಲ್ಲದೇ, ಈ ವರ್ಷದಿಂದ ಐದು ಸಿನಿಮಾಗಳ ಬದಲು ಎಂಟು ಸಿನಿಮಾಗಳಿಗೆ ಅವಕಾಶವಿದೆ. ಒಂದು ಮಾಹಿತಿ. 2021 ರ ವರ್ಕ್‌ ಇನ್‌ ಪ್ರೊಗ್ರೆಸ್‌ ಲ್ಯಾಬ್‌ ನಲ್ಲಿ ರಿಷಭ್‌ ಶೆಟ್ಟಿ ಫಿಲಂಸ್‌ ನಿರ್ಮಿಸಿ ಜೈ ಶಂಕರ್‌ ನಿರ್ದೇಶಿಸಿದ್ದ ಶಿವಮ್ಮ ಸಿನಿಮಾ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಶುಲ್ಕ, ನಿಯಮ ಇತ್ಯಾದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

    Kannada cinema:ಲಾಂಗುಗಳ ಸಮಾಧಿಯ ಮೇಲೆ ಒಂದಷ್ಟು ಕೆಂಪು ಗುಲಾಬಿಗಳು ಅರಳಲಿ !

    ಹಾಗೆಯೇ ವ್ಯೂವಿಂಗ್‌ ರೂಮ್‌ ಗಳೂ ಲಭ್ಯವಿವೆ. ಸಿನಿಮಾವನ್ನು ಈಗಾಗಲೇ ರೂಪಿಸಿರುವವರು ಅವುಗಳ ಮಾರಾಟ, ಸಿನಿಮಾ ಫೆಸ್ಟಿವಲ್‌ ಗಳಿಗೆ ಸಲ್ಲಿಕೆ ಇತ್ಯಾದಿ ಉದ್ದೇಶಗಳಿಗಾಗಿ ಇರುವುದು ವ್ಯೂವಿಂಗ್‌ ರೂಮ್‌ ಗಳು. ಇಲ್ಲಿ ಸಿನಿಮೋತ್ಸವದ ಕಲಾ ನಿರ್ದೇಶಕರು, ವಿವಿಧ ದೇಶಗಳ ಸಿನಿಮಾ ಮಾರುಕಟ್ಟೆ ಏಜೆಂಟರು, ವಿತರಕಾ ಏಜೆನ್ಸಿಗಳ ಪ್ರತಿನಿಧಿಗಳು ಭಾಗವಹಿಸುವರು. ಇಲ್ಲಿ ಸಿನಿಮಾ ಪ್ರದರ್ಶನವಾದರೆ ಅವುಗಳ ಮಾರುಕಟ್ಟೆಯ ನೆಲೆಯಲ್ಲಿ ಅನುಕೂಲವಾಗಲಿದೆ. ಇದಕ್ಕೂ ಅರ್ಜಿ ಸಲ್ಲಿಕೆಗೆ ಅವಧಿಯನ್ನು ಸೆಪ್ಟೆಂಬರ್‌ 30 ರವರೆಗೆ ವಿಸ್ತರಿಸಲಾಗಿದೆ. ವಿವರಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

    ಮತ್ತೊಂದು ಸ್ಕ್ರೀನ್‌ ರೈಟರ್ಸ್‌ ಲ್ಯಾಬ್.‌ ಇದರಲ್ಲಿ ಹೊಸ ಹುಡುಗರು ತಮ್ಮ ಸ್ಕ್ರಿಪ್ಟ್‌ ಗಳನ್ನು ಸಲ್ಲಿಸಿ, ಅಲ್ಲಿರುವ ಸಿನಿಮಾ ನಿರ್ಮಾಪಕರೊಂದಿಗೆ ಚರ್ಚಿಸಿ ತಮಗೆ ಬೇಕಾದ ಫಂಡ್‌ ನ್ನು ಹುಡುಕಿಕೊಳ್ಳಬಹುದು. ನಿರ್ಮಾಪಕರನ್ನು ಹೊಂದಲು ಇರುವಂಥ ಅವಕಾಶ. ಅದಕ್ಕೂ ಅರ್ಜಿ, ಆಯ್ಕೆ, ಶುಲ್ಕ ಎಂದೆಲ್ಲ ಕ್ರಮಗಳು ಇರುತ್ತವೆ. ಅದಕ್ಕೀಗ ಅರ್ಜಿ ಹಾಕುವ ಅವಧಿ ಮುಗಿದಿದೆ.

    IFFM:ಕಿರುಚಿತ್ರಗಳೆಂದು ಕಡೆಗಣಿಸಬೇಡಿ, ಗಂಭೀರವಾಗಿ ಪರಿಗಣಿಸಿ

    ಗೋವಾ ಚಿತ್ರೋತ್ಸವದ ಹಿನ್ನೆಲೆಯಲ್ಲಿ ಅದೇ ದಿನಾಂಕಗಳಿಗೆ ಹೊಂದಿಕೊಂಡಂತೆ ಗೋವಾದಲ್ಲೇ ನಾಲ್ಕರಿಂದ ಐದು ದಿನಗಳ ಕಾಲ ನಡೆಯುವ ಎನ್‌ ಎಫ್‌ ಡಿಸಿ ಯ ಫಿಲ್ಮ್‌ ಬಜಾರ್‌ ನ ಆವೃತ್ತಿಯಲ್ಲಿ ಇವೆಲ್ಲವೂ ಅಡಕವಾಗಿವೆ.

    ಫಿಲ್ಮ್‌ ಬಜಾರ್‌ನಲ್ಲಿ ದೇಶ ವಿದೇಶಗಳ ಸಿನಿಮಾ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಸಿನಿಮೋತ್ಸವ ಕಲಾ ನಿರ್ದೇಶಕರು, ವಿತರಕರು ಎಲ್ಲ ಪಾಲ್ಗೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಏಷ್ಯಾದಲ್ಲೇ ಬಹಳ ಪ್ರಭಾವಿ ವೇದಿಕೆಯಾಗಿ ಫಿಲ್ಮ್‌ ಬಜಾರ್‌ ರೂಪುಗೊಂಡಿದೆ.

    Latest Posts

    spot_imgspot_img

    Don't Miss