ಫ್ರಾಮ್ ಗ್ರೌಂಡ್ ಜೀರೋ..
ಪ್ಯಾಲೇಸ್ತೀನ್, ಗಾಜಾ, ಇಸ್ರೇಲ್, ಹಮಾಸ್ ಇವೆಲ್ಲವನ್ನೂ ಸುಮಾರು ವರ್ಷಗಳಿಂದ ಕೇಳುತ್ತಿದ್ದೇವೆ. ಕೆಲವು ತಿಂಗಳಿನಿಂದ ಇದರ ಸುದ್ದಿ ಬಹಳ ಚರ್ಚೆಯಲ್ಲಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವೂ ತಿಳಿದದ್ದೇ. ನಮ್ಮ ಪ್ಯಾಲೇಸ್ತೀನ್ ನಲ್ಲಿ ಏನಾಗುತ್ತಿದೆ ಮತ್ತು ಹೇಗಿದೆ ಎಂಬುದನ್ನು ಜಗತ್ತಿಗೆ ಬಿತ್ತರಿಸಲು 22 ನಿರ್ದೇಶಕರು ಕೈಗೊಂಡ ಪ್ರಯತ್ನವೇ ಈ ಫ್ರಾಮ್ ಗ್ರೌಂಡ್ ಜೀರೋ. ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ರಶೀದ್ ಮಶ್ರಾರಾವಿ ತನ್ನ ನೆಲದ 22 ಮಂದಿ ನಿರ್ದೇಶಕರಿಗೆ ಇಡೀ ಪ್ಯಾಲೇಸ್ತೀನ್ ನ ಪ್ರಸ್ತುತ ಸ್ಥಿತಿಯನ್ನು ಕಟ್ಟಿಕೊಡಲು ಅವಕಾಶ ಕಲ್ಪಿಸಿರುವುದು ಈ ಸಿನಿಮಾದಲ್ಲಿ.
ಪ್ಯಾಲೇಸ್ತೀನ್ ನೆಲದಿಂದ ಹಲವಾರು ಸಿನಿಮಾಗಳನ್ನು ಮಾಡಿರುವ ರಶೀದ್, ಈ ಸಿನಿಮಾದ ಬಗ್ಗೆ ಹೇಳುವಾಗಲೂ ಹೇಳಿದ್ದು ಇಷ್ಟೇ. “ನಾನು ಹಲವು ಸಿನಿಮಾಗಳನ್ನು ಈ ನೆಲದಿಂದಲೇ ಮಾಡಿರುವೆ. ಆದರೆ ಈಗ ನಾನು ಸಿನಿಮಾ ಮಾಡುತ್ತಿಲ್ಲ, ನಮ್ಮ ಚಿತ್ರ ನಿರ್ದೇಶಕರು ಮಾಡಿದ್ದಾರೆʼ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
Oscar Race: ಈ ಬಾರಿ ಆಸ್ಕರ್ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಎರಡು ಚಿತ್ರ
ಈ ಇಪ್ಪತ್ತೆರಡೂ ಮಂದಿ ನಿರ್ದೇಶಕರು ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳು, ಕಥಾ ಚಿತ್ರಗಳು, ಅನಿಮೇಷನ್ ಹಾಗೂ ಪ್ರಯೋಗಾತ್ಮಕ ಪ್ರಯತ್ನಗಳ ಮೂಲಕ ಇಸ್ರೇಲ್-ಹಮಾಸ್ ನಡುವಿನ ಜಗಳದಲ್ಲಿ ಗಾಜಾ ಜನರು ಹೇಗೆ ಬಡವಾಗಿದ್ದಾರೆ? ಅವರ ಸ್ಥಿತಿ ಏನು ಎಂಬುದನ್ನು ಚಿತ್ರಿಸಲು ಪ್ರಯತ್ನಿಸಿದ್ದಾರೆ.
ವಿಶೇಷವೆಂದರೆ ಪ್ಯಾಲೇಸ್ತೀನ್ ದೇಶದ ಆಡಳಿತವೂ ಈ ಸಿನಿಮಾವನ್ನು 2025 ರ ಆಸ್ಕರ್ ಪ್ರಶಸ್ತಿಗೆ ಅಂತಾರಾಷ್ಟ್ರೀಯ ಸಿನಿಮಾಗಳ ಸ್ಪರ್ಧೆಗೆ ನಾಮ ನಿರ್ದೇಶನ ಮಾಡಿದೆ.
ಈ ಸಿನಿಮಾ ಇತ್ತೀಚೆಗಷ್ಟೇ ಮುಗಿದ ಕಾನ್ ಚಿತ್ರೋತ್ಸವದಲ್ಲಿ ಪ್ರೀಮಿಯರ್ ಆಗಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಸಿನಿಮೋತ್ಸವವನ್ನು ರಾಜಕೀಯದಿಂದ ಬೇರೆ ಆಗಿ ಇಡಲು ಪ್ರಯತ್ನಿಸುತ್ತಿರುವ ಕಾರಣ ಈ ಸಿನಿಮಾವನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಐದನೇ ಆಮ್ಮನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. ಟೊರೊಂಟೋ ಸಿನಿಮೋತ್ಸವದ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಇದಲ್ಲದೇ ಟೊರ್ಮಿನಾ ಚಿತ್ರೋತ್ಸವ, ಟೊರೆಂಟೊ ಪ್ಯಾಲೇಸ್ತೀನ್ ಸಿನಿಮೋತ್ಸವದಲ್ಲೂ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು.
ಮಲಯಾಳಂ ಚಿತ್ರರಂಗ: ಏನು ದಾಹ ಯಾವ ಮೋಹ ತಿಳಿಯದಾಗಿದೆ, ಉಳಿದವುಗಳ ಕಥೆ ಇನ್ನೂ ತಿಳಿಯಬೇಕಿದೆ !
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಆರಂಭವಾದ ಕೂಡಲೇ ರಶೀದ್, ಮಶ್ರಾರಾವಿ ಒಂದು ನಿಧಿಯನ್ನು ಸ್ಥಾಪಿಸಿ ಪ್ಯಾಲೇಸ್ತೀನ್ ನ ಸಿನಿಮಾ ನಿರ್ದೇಶಕರಿಗೆ ಬೆಂಗಾವಲಾಗಿ ನಿಂತರು. ಇದರಿಂದ ಹೊಸ ಸಿನಿಮಾ ನಿರ್ದೇಶಕರ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಿದರು.
ಔಟ್ ಆಫ್ ಫ್ರೇಮ್ – ನಿದಾ ಅಬು ಹಸ್ನಾ, ಹಿಲ್ ಆಫ್ ಹೆವನ್-ಕರೀಂ ಸತೋಮ್, ಚಾರ್ಮ್ – ಬಶರ್ ಅಲ್-ಬಲ್ಬೇಸಿ, ಅವೇಕ್‌ನಿಂಗ್ – ಮಹ್ದಿ ಕರೀರಾ, ಜದ್ ಅಂಡ್ ನಟಾಲಿ – ಔಸ್ ಅಲ್- ಬನ್ನಾ, ನೊ-ಹನಾ ಅವದ್, ಎವೆರಿಥಿಂಗ್ ಈಸ್ ಫೈನ್ – ನಿದಾಲ್ ದಮೊ, ಟ್ಯಾಕ್ಸಿ ವನ್ನೀಸಾ-ಎತೆಮದ್ ವೀಷಾ, 24 ಹವರ್ಸ್- ಅಲಾ ದಮೊ, ಸೆಲ್ಫೀಸ್- ರೀಮಾ ಮಹಮೌದ್, ನೊ ಸಿಗ್ನಲ್- ಮುಹಮ್ಮದ್ ಅಲಷರೀಫ್, ಸಾಫ್ಟ್‌ಸ್ಕಿನ್ – ಖಮೀಸ್ ಮಶ್ರರಾವಿ, ಫ್ಲ್ಯಾಶ್ ಬ್ಯಾಕ್ – ಇಸ್ಲಾಂ ಅಲ್ ಜ್ರೀಯಲ್, ಫ್ರಾಗ್ಮೆಂಟ್ಸ್ – ಬಸಿಲ್ ಅಲ್ ಮಖೌಸಿ, ಆಫರಿಂಗ್ಸ್ – ಮುಸ್ತಫಾ ಅಲ್ ನಬೀ, ಸ್ಕೂಲ್ ಡೇ – ಅಹ್ಮದ್ ಅಲ್ ದಂಫ್, ಫರಾ ಅಂಡ್ ಮೆರ್ಯಮ್ – ವೀಸಮ್ ಮೌಸಾ, ದಿ ಟೀಚರ್ – ತಮೀರ್ ನಜ್ಮ್, ಓವರ್ ಬರ್ಡನ್ – ಅಲಾ ಅಯೋಬ್, ರೀಸೈಕ್ಲಿಂಗ್ – ರಬಾಬ್ ಖಮೀಸ್, ಎಕೋ-ಮುಸ್ತಫಾ ಖಲ್ಲಬ್ ಹಾಗೂ ಸಾರಿ ಸಿನಿಮಾ ವನ್ನು ಅಹ್ಮದ್ ಹಸೌನಾ ನಿರ್ದೇಶಿಸಿದ್ದಾರೆ.