Friday, April 25, 2025
spot_img
More

    Latest Posts

    Ganesh New movie : ಗಣೇಶರು ಬರುತ್ತಿದ್ದಾರೆ, ಹೊಸ ಸಿನಿಮಾ ತರುತ್ತಿದ್ದಾರೆ

    ಗೋಲ್ಡನ್‌ ಸ್ಟಾರ್‌ ಗಣೇಶ್‌ ರ ಹೊಸ ಚಿತ್ರದ ಬಗ್ಗೆ ಗೊತ್ತೇ ಇದೆ. “ಕೃಷ್ಣಂ ಪ್ರಣಯ ಸಖಿ”. ನಿರ್ದೇಶಕ ಶ್ರೀನಿವಾಸರಾಜು ಅವರ ನಿರ್ದೇಶನದ ಚಿತ್ರವಿದು. ಈಗಾಗಲೇ ಇದರ ಮೊದಲ ನೋಟ ಜನಪ್ರಿಯವಾಗಿದೆ. ಈಗ ಮೊದಲ ಹಾಡೂ ಸಹ ಬಿಡುಗಡೆಯಾಗಿ 1.5 ದಶಲಕ್ಕಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅರ್ಜುನ್‌ ಜನ್ಯರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಹಾಡುಗಳು. ನಿಶಾನ್‌ ರಾಯ್‌ ಹಾಗೂ ಚಂದನ್‌ ಶೆಟ್ಟಿ ಹಾಡಿದ ಹಾಡು ಬಿಡುಗಡೆಯಾದದ್ದು ಮೈಸೂರಿನಲ್ಲಿ. ಇದರ ಮೂಲಕ ಚಿತ್ರದ ಪ್ರಚಾರದ ಅಧ್ಯಾಯವೂ ತೆರೆದುಕೊಳ್ಳಲಿದೆಯಂತೆ.

    ತ್ರಿಶೂಲ್‌ ಎಂಟರೈನ್‌ ಮೆಂಟ್‌ ನಡಿ ರೂಪುಗೊಳ್ಳುತ್ತಿರುವ ಚಿತ್ರವನ್ನು ನಿರ್ಮಿಸಿರುವವರು ಪ್ರಶಾಂತ್ ಜಿ ರುದ್ರಪ್ಪ. ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ. ಬೆಂಗಳೂರು, ವಿಯೆಟ್ನಾಂ ಮತ್ತಿತರ ಕಡೆ ಚಿತ್ರೀಕರಣ ನಡೆಸಲಾಗಿತ್ತಂತೆ.

    ಈ ಚಿತ್ರದಲ್ಲಿ ಗಣೇಶ್‌ ಅವರೊಂದಿಗೆ ಮಾಳವಿಕಾ ನಾಯರ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಗಣೇಶರ 41 ನೇ ಚಿತ್ರವಿದು. ಇನ್ನು ಒಂಬತ್ತು ಚಿತ್ರಗಳಾದರೆ ಅರ್ಧ ಶತಕ. ತಾರಾಗಣದಲ್ಲಿ ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್,  ರಘುರಾಮ್, ಮಾನಸಿ ಸುಧೀರ್‌ ಮತ್ತಿತರರು ಇದ್ದಾರೆ. ಶೀಘ್ರವೇ ಬಿಡುಗಡೆ ದಿನಾಂಕವೂ ಘೋಷಣೆಯಾಗುವ ಸಾಧ್ಯತೆ ಇದೆ.

    NYIFF: ಕನ್ನಡದ ಮಿಥ್ಯದೊಂದಿಗೆ ಭಾರತೀಯ ಚಿತ್ರಗಳ ಸಂಭ್ರಮ ಈ ಸಿನಿಮೋತ್ಸವದಲ್ಲಿ

    *

    ಸಂಭವಾಮಿ ಯುಗೇ ಯುಗೇ

    ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ “ಸಂಭವಾಮಿ ಯುಗೇಯುಗೇ” ಎಂಬ ಶೀರ್ಷಿಕೆಯಲ್ಲೇ ಒಂದು ಚಿತ್ರ ಮೂಡಿ ಬರುತ್ತಿದೆ. ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್‌ ನ ಚಿತ್ರವಿದು. ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಜಯ್ ಶೆಟ್ಟಿ ನಾಯಕ ನಟ. ಈಗಾಗಲೇ ಚಿತ್ರದ ಪಾತ್ರದ ಕುರಿತ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಚೇತನ್ ಚಂದ್ರಶೇಖರ್ ಶೆಟ್ಟಿ ಅವರದ್ದೇ. ಇದೊಂದು ವಾಣಿಜ್ಯಾತ್ಮಕ ಚಿತ್ರವಾಗಿದ್ದು, ಸಾಹಸ, ಕುತೂಹಲ, ಪ್ರೀತಿ, ಭಾವನಾತ್ಮಕ ಸಂಗತಿಗಳೆಲ್ಲವೂ ಸೇರಿಕೊಂಡಿವೆಯಂತೆ.

    chef ಚಿದಂಬರ:  ಅನಿರುದ್ಧರ ಹೊಸ ಚಿತ್ರ ನೋಡಲು ಸಿದ್ಧರಾಗಿ

    ಚನ್ನಪಟ್ಟಣದ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಪುರಾಣ್‌ ಶೆಟ್ಟಿಗಾರ್‌ ಸಂಗೀತ, ಫ್ರಾಂಕ್ರಿನ್‌ ರಾಖಿ ಹಿನ್ನೆಲೆ ಸಂಗೀತ, ರಾಜು ಹೆಮ್ಮಿಗೆಪುರರ ಛಾಯಾಗ್ರಹಣ, ರವೀಶ್ ಆತ್ಮಾರಾಮ್ರ ಸಂಕಲನ, ನರಸಿಂಹರ ಸಾಹಸ ನಿರ್ದೇಶನ ಹಾಗೂ ಗೀತಾ ಮಾಸ್ಟರ್ ಅವರ ನೃತ್ಯ ನಿರ್ದೇಶನವಿದೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ದಿನೇಶ್ ರಾಜನ್.

    ನಾಯಕಿಯಾಗಿ ನಿಶಾ ರಜಪೂತ್ ಅಭಿನಯಿಸುತ್ತಿದ್ದು, ತಾರಾಗಣದಲ್ಲಿ ಪ್ರಮೋದ್ ಶೆಟ್ಟಿ, ಸುಧಾರಾಣಿ, ಭವ್ಯ, ಅಶೋಕ್ ಕುಮಾರ್, ಮಧುರಗೌಡ ಮತ್ತಿತರರು ಇದ್ದಾರೆ.

    Latest Posts

    spot_imgspot_img

    Don't Miss