Wednesday, June 11, 2025
spot_img
More

    Latest Posts

    Ibbani:ಕಥೆಯು ಹಳೆಯದಾದರೇನಂತೆ, ನಿರೂಪಣೆ ನವ ನವೀನವಂತೆ!

    ಎಲ್ಲ ಚೆನ್ನಾಗಿ ಮೂಡಿ ಬಂದಿದೆ. ಮೋಡಿ ಮಾಡೇ ಮಾಡುತ್ತೆ ನೋಡಿ ಎಂಬ ಆತ್ಮವಿಶ್ವಾಸದ ಮಾತುಗಳು ಕೇಳಿಬರುತ್ತಿರುವುದು ಇಬ್ಬನಿ ತಬ್ಬಿದ ಇಳೆಯಲಿ ಶಿಬಿರದಿಂದ. ಇದರೊಂದಿಗೆ ತೇಲಿಬರುತ್ತಿರುವ ಮತ್ತೊಂದು ಮಾತೆಂದರೆ ಕಥೆ ಎಲ್ಲೋ ಕೇಳಿದೆ ಎನಿಸಬಹುದು, ನೋಡಿದೆ ಎನಿಸಲೂ ಬಹುದು, ಆದರೆ ನಿರೂಪಣೆಯನ್ನಲ್ಲ. ಅದು ನವನವೀನ ಎನ್ನುತ್ತಿದೆ ಚಿತ್ರತಂಡ.

    ರಕ್ಷಿತ್‌ ಶೆಟ್ಟಿಯವರ ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಸೆಪ್ಟೆಂಬರ್‌ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಕ್ಷಿತ್‌ ಶೆಟ್ಟಿ ಹಾಗೂ ಜಿ.ಎಸ್.‌ ಗುಪ್ತ ಇದರ ನಿರ್ಮಾಣಕಾರರು. ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ಸುದ್ದಿ ಮಾಡಿದೆ.

    ವಿಹಾನ್‌ ಹಾಗೂ ಅಂಕಿತಾ ಅಮರ್‌ ಈ ಚಿತ್ರದಲ್ಲಿ ನಾಯಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ತೀರಾ ಕ್ಲಾಸಿಕ್‌ ಇರುವ ಸಿನಿಮಾ ಎಂಬಂತೆ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಹೀಗೆ ಅಭಿಪ್ರಾಯವನ್ನು ಹಂಚಿಕೊಂಡ ಚಿತ್ರತಂಡದ ಪ್ರಕಾರ ಈ ಸಿನಿಮಾ ಯಶಸ್ವಿಯಾಗಲಿದೆ.

    Rishab Shetty:ರಿಷಭ್‌ ಶೆಟ್ಟರ ಹೊಸ ಅಡುಗೆ ಮತ್ತು ನವ ವೇಷ

    ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶಿಸಿರುವ ಸಿನಿಮಾ. ಒಂದು ಒಳ್ಳೆಯ ಚಿತ್ರವನ್ನು ಪ್ರೇಕ್ಷಕರು ಕೈಬಿಡುವುದಿಲ್ಲ ಎಂಬ ಅಖಂಡ ವಿಶ್ವಾಸ ಚಿತ್ರತಂಡದ್ದು. ಇರಬಹುದು. ಎರಡು ವಾರಗಳ ಹಿಂದೆಯಷ್ಟೇ ಬಿಡುಗಡೆಯಾದ ನಟ ಗಣೇಶರ ಕೃಷ್ಣ ಪ್ರಣಯ ಸಖಿ ಗೆದ್ದಿದೆ. ಅದರೊಂದಿಗೇ ದುನಿಯಾ ವಿಜಯ್‌ ನಟಿಸಿದ್ದ ಭೀಮ ಸಹ ಗೆದ್ದಿದೆಯಂತೆ. ಇದೇ ವಿಶ್ವಾಸ ಇಬ್ಬನಿ ತಬ್ಬಿದ ಇಳೆಯಲಿ ತಂಡವನ್ನೂ ಹುರಿದುಂಬಿಸಿರಬಹುದು. ಟ್ರೇಲರ್‌ ಇಲ್ಲಿದೆ ನೋಡಿ.

    ಈ ಸಿನಿಮಾ ನಿರ್ಮಾಣದ ಹಿಂದೆ ಒಂದು ಸಂಪರ್ಕ ಕೊಂಡಿಯಿದೆ. ಅದನ್ನು ತಟ್ಟಿದರೆ ಕಥೆ ತೆರೆದುಕೊಳ್ಳುತ್ತದೆ. ಒಂಬತ್ತು ವರ್ಷಗಳ ಹಿಂದೆ ರಕ್ಷಿತ್‌ ಶೆಟ್ಟಿಯವರು ಚಂದ್ರಜಿತ್‌ ರ ಬ್ಲಾಗ್‌ ನಲ್ಲಿ ಒಂದು ಸಂದೇಶವಿತ್ತಂತೆ. ಅದನ್ನು ತಟ್ಟಿದಾಗ ಹೊಸದೇ ಕಥಾ ಲೋಕ ತೆರೆದುಕೊಂಡಿತು. ಬರವಣಿಗೆ ಇಷ್ಟವಾಯಿತು. ಬಳಿಕ ಚಂದ್ರಜಿತ್‌ ಭೇಟಿಯಾದರಂತೆ. ಮತ್ತೆ ಉಳಿದದ್ದು ಕಣ್ಣ ಮುಂದಿದೆ. ಅವರ ಕಥೆ ಸಿನಿಮಾವಾಗಿದೆ. ಕಥೆಯ ತಿರುಳು ಅಥವಾ ಕಥೆಯ ಎಳೆ ಈ ಹಿಂದೆಯೂ ಬಂದಿರಬಹುದಂತೆ. ಆದರೆ ನಿರೂಪಣೆ ಬಂದಿಲ್ಲವಂತೆ.

    ರಾಜಿ ಮಾಡಿಕೊಳ್ಳದ ಸ್ವಭಾವ ನನ್ನದು ಎಂಬುದು ನಿರ್ದೇಶಕ ಚಂದ್ರಜಿತ್‌ ಬೆಳ್ಳಿಯಪ್ಪರ ಮಾತು. ಇದೂ ಒಳ್ಳೆಯದೇ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲೇಬಾರದು. ವಿಹಾನ್‌, ಅಂಕಿತ ಜತೆ ಮಯೂರಿ ನಟರಾಜ್‌, ಗಿರಿಜಾ ಶೆಟ್ಟರ್‌ ಸಹ ಅಭಿನಯಿಸಿದ್ದಾರೆ. ಗಿರಿಜಾ ಶೆಟ್ಟರ್‌ 20 ವರ್ಷಗಳ ಬಳಿಕ ಬಣ್ಣ ಹಚ್ಚಿಕೊಂಡಿದ್ದಾರಂತೆ.

    New Movie:ಇಬ್ಬನಿ ತಬ್ಬಿದ ಇಳೆಯಲಿ; ಪ್ರೇಕ್ಷಕನೆಂಬ ರವಿ ತೇಜ ಕಣ್ಣ ತೆರೆದರೆ…!

    ನಮ್ಮ ಸಿನಿಮಾ ಇನ್ನಷ್ಟು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆ ತರಲಿದೆ ಎಂಬ ಮಾತು ವಿಹಾನ್‌ ರದ್ದಾದರೆ, ಪ್ರತಿಯೊಬ್ಬರಿಗೂ ಇರುವ ಕನಸು ಹೊಸತಲ್ಲ. ಕನಸು ಹೊಂಬಿಸಲಾಗಿ ಮೂಡಿ ಬಂದರೆ ಏನಾಗಬಹುದು? ಅದು ಇಬ್ಬನಿ ತಬ್ಬಿದ ಇಳೆಯಲಿ ಆಗಿದೆ ಎಂಬುದು ಅಂಕಿತ ಅಮರ್‌ ರ ಮಾತು. ಮಯೂರಿ ನಟರಾಜ್‌ ರ ಒಂದು ಮಾತು ಉತ್ಸಾಹ ತುಂಬುವಂತಿದೆ. ಹೊಸಬರ ಸಿನಿಮಾ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ತೆರೆಗೆ ತರುವುದೇ ದೊಡ್ಡ ಸಂಗತಿ. ಹಾಗಾಗಿ ಪ್ರೋತ್ಸಾಹ ಮಾಡಿ. ಇನ್ನು ಪರಂವಃ ಸಂಸ್ಥೆಯ ಸಿಇಒ ಶ್ರೀನಿಶ್‌ ಶೆಟ್ಟಿಯವರ ಪ್ರಕಾರ ಇದು ಬ್ಲಾಕ್‌ ಬಸ್ಟರ್‌ ಸಿನಿಮಾ.

    ಸಂಗೀತ ನಿರ್ದೇಶಕ ಗಗನ್ ಬಡೇರಿಯಾ , ಛಾಯಾಗ್ರಾಹಕ ಶ್ರೀವತ್ಸನ್ ಸೆಲ್ವರಾಜನ್ ಸಂಕಲನಕಾರ ರಕ್ಷಿತ್ ಕಾಪು ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಚಾರ್ಲಿ 777 ಸಿನಿಮಾದ ನಿರ್ದೇಶಕ ಕಿರಣ್‌ ರಾಜಾ ಅವರದ್ದೂ ಚಿತ್ರ ಮೂಡಿ ಬಂದ ಬಗೆ ಕುರಿತು ಒಳ್ಳೆಯ ಅಭಿಪ್ರಾಯವಿದೆ.

    ಸಂಗೀತ ನಿರ್ದೇಶನ ಗಗನ್ ಬಡೇರಿಯಾರದದ್ದು. ಛಾಯಾಗ್ರಾಹಣ ಶ್ರೀವತ್ಸನ್ ಸೆಲ್ವರಾಜನ್ ರದ್ದು. ಸಂಕಲನ ರಕ್ಷಿತ್ ಕಾಪು ಅವರದ್ದು.

    New Movies:ಸಂಜು ವೆಡ್ಸ್‌ ಗೀತಾ: ಭಾಗ 2 ಬಿಡುಗಡೆಗೆ ಯಾವಾಗ ಮುಹೂರ್ತ?

    ನೋಡೋಣ, ಪ್ರೇಕ್ಷಕ ಮಹಾಶಯ ಹೇಗೆ ಚಿತ್ರತಂಡದ ಬೆನ್ನು ತಟ್ಟುತಾನೆಂದು.

    ಕೊನೆ ಮಾತು. ಈ ಲಾಂಗು, ಮಚ್ಚುಗಳ ಬಿರುಗಾಳಿ ಮಧ್ಯೆ ಸಣ್ಣದೊಂದು ತಂಗಾಳಿ ಬಂದರೂ ಓಗೊಡಲೇಬೇಕು. ಇಲ್ಲವಾದರೆ ತಂಗಾಳಿ ಸಾಯುತ್ತದೆ !

    Latest Posts

    spot_imgspot_img

    Don't Miss