Friday, April 25, 2025
spot_img
More

    Latest Posts

    ನಾಗಶೇಖರರ ಪ್ರೇಮ ಕಥೆ ಮತ್ತೊಂದು ಭಾಗದ ಮತ್ತಷ್ಟು ವಿವರ

    ನಿರ್ದೇಶಕ ನಾಗಶೇಖರ್ ತಮ್ಮ ಹಿಂದಿನ ಚಿತ್ರ ಸಂಜು ವೆಡ್ಸ್ ಗೀತಾ ಹೆಸರಿನಲ್ಲೇ ಮತ್ತೊಂದು ಪ್ರೇಮಕಥೆಯನ್ನು ಹೇಳತೊಡತಗಿದ್ದಾರೆ. ಶ್ರೀನಗರ ಕಿಟ್ಟಿ ಜೊತೆ ಇಲ್ಲಿ ರಮ್ಯಾ ಬದಲು ರಚಿತಾರಾಮ್ ನಾಯಕಿ. ಚಿತ್ರದ 3 ಹಂತಗಳ ಚಿತ್ರೀಕರಣ ಹಾಗೂ ಎಡಿಟಿಂಗ್ ಮುಗಿದಿದೆ. ಸಾಧು ಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಮಾತುಗಳ ಮರುಜೋಡಣೆ ಆಗುತ್ತಿದೆ.

    ಬೆಂಗಳೂರು, ಸ್ವಿಟ್ಜರ್ ಲ್ಯಾಂಡ್‌ ಮತ್ತಿತರ ಕಡೆ ಚಿತ್ರೀಕರಣ ನಡೆದಿದೆ. ನಮ್ಮ ರೇಶ್ಮೆ ನೂಲಿಗೆ ಒಳ್ಳೆ ಬೆಲೆ ಬೇಕು ಅಂತ ಹೋರಾಡುವ ಇಬ್ಬರು ಪ್ರೇಮಿಗಳ ಕಥೆ ಇದಂತೆ. ಎಲ್ಲ ಸರಿ ಹೋದರೆ ಮೇ ಅಂತ್ಯಕ್ಕೆ ಚಿತ್ರದ ಮೊದಲ ಪ್ರತಿ ಸಿದ್ಧವಾಗಲಿದೆ.

    ಚಿತ್ರದ ನಿರ್ಮಾಪಕ ಛಲವಾದಿ ಕುಮಾರ್.‌ ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಸಹಯೋಗದಲ್ಲಿ ಮಹಾನಂದಿ ಕ್ರಿಯೇಷನ್ಸ್‌ ನಿರ್ಮಿಸುತ್ತಿರುವ ಚಿತ್ರವಿದು. ಸಂಗೀತ ನಿರ್ದೇಶಕ‌  ಶ್ರೀಧರ ವಿ. ಸಂಭ್ರಮರ ಸಂಗೀತ ಸಂಯೋಜನೆ, ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿಯವರ ಗಾಯನವಿದ್ದರೆ, ರಾಗಿಣಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರಗಳಲ್ಲಿದ್ದಾರಂತೆ.

    **

    ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು

    ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಆರಂಭವಾಯಿತು “ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು”  ಚಿತ್ರ. .

    ಜಮಖಂಡಿ ತಾಲ್ಲೂಕಿನ ಕೃಷ್ಣಾ ನದೀತೀರದ ಹಿಪ್ಪರಗಿಯ ಇಂಚಗೇರಿ ಮಠದ ಕಲ್ಪತರುವಾದ ಶ್ರೀಸಂಗಮೇಶ್ವರ ಮಹಾರಾಜರ ಜೀವನ ಚರಿತ್ರೆ “ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು” ಚಿತ್ರ ಆಗುತ್ತಿದೆ.

    samgameshwara maharajaru

    ಇತ್ತೀಚೆಗೆ ಮುಹೂರ್ತ ಸಮಾರಂಭವೂ ಮುಗಿದಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ ಶುಭ ಹಾರೈಸಿದ್ದರು.

    ಚಿತ್ರವನ್ನು ನಿರ್ಮಿಸುತ್ತಿರುವುದು ನಿರ್ಮಾಪಕ ಮಾಧವಾನಂದ ಯೋಗಪ್ಪ ಶೇಗುಣಸಿ. ಚಿತ್ರವನ್ನು ನಿರ್ದೇಶಿಸುತ್ತಿರುವುದು ರಾಜಾ ರವಿಶಂಕರ್.‌ ನಾಲ್ಕು ಹಂತಗಳಲ್ಲಿ ಚಿತ್ರೀಕರಣ ನಡೆಸುವ ಲೆಕ್ಕಾಚಾರವಿದೆ.ರವಿ ನಾರಾಯಣ್‌ ಪ್ರಧಾನ ಪಾತ್ರದಲ್ಲಿದ್ದಾರೆ. ಹಿರಿಯ ನಟರಾದ ರಾಮಕೃಷ್ಣ, ವಿಜಯಕಾಶಿ, ವಿನಯಪ್ರಸಾದ್, ಸಂದೀಪ್ ಮಲಾನಿ, ನಾರಾಯಣ ಸ್ವಾಮಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಂಗೀತ ನಿರ್ದೇಶನ ಎ.ಟಿ.ರವೀಶ್ ರದ್ದು.

    *

    ಸಾಮ್ರಾಟ್‌ ಮಂಧಾತ ಪೌರಾಣಿಕ ಚಿತ್ರ

    ಹೇಮಂತ್ ಪ್ರೊಡಕ್ಷನ್ಸ್ ಮೂಲಕ ಹೇಮಂತ್ ಕುಮಾರ್ ಅವರು ನಿರ್ಮಿಸಿ ನಿರ್ದೇಶಿಸಿರುವ ಚಿತ್ರ “ಸಾಮ್ರಾಟ್ ಮಂಧಾತ”.

    ಇಕ್ಷ್ವಾಕು ವಂಶದ (ಸೂರ್ಯವಂಶ) ಯುವನಾಶ್ವ ಮಹಾರಾಜನ ಮಗನಾದ ಮಾಂಧಾತ ತನ್ನ  ಸತ್ಯ ಮತ್ತು ಧರ್ಮದಿಂದ ಕೂಡಿದ ಆಡಳಿತದಿಂದಲೇ ಹೆಸರು ಗಳಿಸಿದ್ದ. ಶತಬಿಂದುವಿನ ಮಗಳು ಬಿಂದುಮತಿ ಚೈತ್ರರಥಿಯನ್ನು ವರಿಸಿದ ಮಾಂಧಾತನಿಗೆ ಪುರುಕುತ್ಸ ಅಥವಾ ಸುಸಂಧಿ, ಅಂಬರೀಷ ಮತ್ತು ಮುಚುಕುಂದರೆಂಬ ಮೂವರು ಗಂಡು ಮಕ್ಕಳು ಮತ್ತು ಐವತ್ತು  ಹೆಣ್ಣುಮಕ್ಕಳಿದ್ದರೆಂದು ಹೇಳಲಾಗುತ್ತಿದೆ. ಆತನ ಕಥೆಯನ್ನು “ಸಾಮ್ರಾಟ್ ಮಾಂಧಾತ” ಚಿತ್ರದ ಮೂಲಕ ಹೇಳಲಾಗಿದೆ.

    ಈ  ಚಿತ್ರದಲ್ಲಿ  ಅಭಿನಯಿಸಿರುವ  ಎಲ್ಲರೂ  ರಂಗಭೂಮಿ ಕಲಾವಿದರಾಗಿದ್ದು  ಐದಾರು ತಿಂಗಳವರೆಗೆ ತರಬೇತಿ ನೀಡಲಾಗಿದೆ. ತ್ರೇತಾಯುಗದ ಆದಿಭಾಗದಲ್ಲಿ ಭೂಲೋಕದಲ್ಲಿ ಅಧರ್ಮ ಹೆಚ್ಚಾದಾಗ ಧರ್ಮದೇವ  ಶನಿ ಮಹಾತ್ಮನ ಮೊರೆ ಹೋಗುತ್ತಾನೆ. ಆ ಸಂದರ್ಭದಲ್ಲಿ ಶನಿ‌ ಮತ್ತು ಲಕ್ಷ್ಮಿಯ ನಡುವೆ ಯಾರು ಶ್ರೇಷ್ಠರೆಂದು ನಿರ್ಧರಿಸುವ ಕಥೆಯೇ ಈ ಚಿತ್ರ.

    ಮಾಂಧಾತನಾಗಿ ಬಸವರಾಜು ಅಭಿನಯಿಸಿದ್ದರೆ, ಶನಿದೇವನಾಗಿ ಸುಂದರಬಾಬು, ಬಿಂದುಮತಿಯಾಗಿ  ಭಾರತಿ, ನಾರದನಾಗಿರುವ ನಂಜುಂಡಪ್ಪ, ಶೌಭರಿ ಮಹರ್ಷಿಯಾಗಿ ನರಸಿಂಹಮೂರ್ತಿ, ಯವನಾಶ್ವನಾಗಿರುವ  ಮಂಜುನಾಥ ನಟಿಸಿದ್ದಾರೆ. ಆರ್.ವೀರೇಂದ್ರಕುಮಾರ್ ಸಂಭಾಷಣೆ ಸಾಹಿತ್ಯವಿದ್ದರೆ, ಶಿವರಾಮ್ ಅವರ ಸಂಕಲನವಿದೆ.

    ಕನಸೆಂಬ ಕುದುರೆಯನ್ನೇರಿ; ಕುದುರೆ ಏರುವ ಮೊದಲಿನ ಕಥೆ

    **

    ಉಸಿರೇ ಉಸಿರೇ

    ಮೇ  3 ರಂದು ಬಿಡುಗಡೆಯಾಗುತ್ತಿದೆ ರಾಜೀವ್ ಹನು ಅಭಿನಯದ  “ಉಸಿರೇ ಉಸಿರೇ” ಚಿತ್ರ. ಈ ಚಿತ್ರದಲ್ಲಿ ನಟ ಸುದೀಪ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಪ್ರದೀಪ್ ಯಾದವ್ ನಿರ್ಮಿಸಿರುವ ಚಿತ್ರವಿದು. ಸಿ.ಎಂ.ವಿಜಯ್ ನಿರ್ದೇಶನವಿದೆ. ಈಗಾಗಲೇ ಟ್ರೇಲರ್‌ ಹಾಗೂ ಹಾಡುಗಳು  ಜನಪ್ರಿಯವಾಗಿದೆಯಂತೆ.

    ಚಿತ್ರತಂಡದ ಪ್ರಕಾರ ಇದು ನೈಜ ಘಟನೆ ಆಧಾರಿಸಿದ ಚಿತ್ರ. ಚೆನ್ನಾಗಿ ಮೂಡಿಬಂದಿದೆ. ಚಿತ್ರದ ವಿತರಣೆ ಹೊಣೆಚಂದನ್‌ ಫಿಲಂಸ್‌ ಅವರದ್ದು.

    ಚಿತ್ರದಲ್ಲಿ ನಾಯಕಿಯಾಗಿ ಶ್ರೀಜಿತ ಘೋಶ್‌ ರೊಂದಿಗೆ ಸೀತಾರಾಮ್, ಪ್ರೀತಿ ಗೌಡ, ಡೈನಾಮಿಕ್ ಸ್ಟಾರ್ ದೇವರಾಜ್, ತಾರಾ, ಸುಚೇಂದ್ರ ಪ್ರಸಾದ್, ಬ್ರಹ್ಮಾನಂದಂ, ಅಲಿ, ಸಾಧುಕೋಕಿಲ, ಮಂಜು ಪಾವಗಡ, ಶೈನಿಂಗ್ ಸೀತಾರಾಮ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

    Latest Posts

    spot_imgspot_img

    Don't Miss