Manthan at cannes : ಈ ಅಪೂರ್ವ ಘಳಿಗೆಯಲ್ಲಿ ಅವರೆಲ್ಲ ಇರಬೇಕಿತ್ತು

ಈ ಬಾರಿಯ ಕಾನ್‌ ಚಲನಚಿತ್ರೋತ್ಸವದಲ್ಲಿ ಭಾರತೀಯ ಸಿನಿಮಾಕ್ಕೆ ಮತ್ತೊಮ್ಮೆ ಸಿಕ್ಕ ಗೌರವ ದೊಡ್ಡದು. ಶ್ಯಾಮ್‌ ಬೆನಗಲ್‌ ಅವರ ಮಂಥನ್‌ ರೀಸ್ಟೋರ್ಡ್‌ ಕ್ಲಾಸಿಕ್‌ ವಿಭಾಗದಲ್ಲಿ ಪ್ರದರ್ಶತವಾಯಿತು. ಹೀಗೆ ಕ್ಲಾಸಿಕ್‌ ವಿಭಾಗದಲ್ಲಿ ಪ್ರದರ್ಶಿತವಾದ ಮೂರನೆ ಚಿತ್ರವಾಗಿದೆ. ಈ ಅಪೂರ್ವ ಘಳಿಗೆಗೆ ಸಾಕ್ಷಿಯಾದ ನಟ ನಾಸಿರುದ್ದೀನ್‌ ಷಾ ಭಾವುಕರಾಗಿ ಕಣ್ಣೀರನ್ನು ತಡೆದುಕೊಳ್ಳಲು ಯತ್ನಿಸಿದರೂ ಸಣ್ಣಗೆ ಮೆಲ್ಲಗೆ ಒಂದು ಹನಿ ಇಳಿದು ಹೋಯಿತಂತೆ.

ಇದೊಂದು ಅಪೂರ್ವ, ಅವಿಸ್ಮರಣೀಯ ಘಳಿಗೆ. ಆದರೆ ಇದರ ಭಾಗವಾಗಲು ನನ್ನ ಗೆಳೆಯರೇ ಇಲ್ಲ ! ಎಂದು ಭಾವುಕರಾದರು ನಾಸಿರುದ್ದೀನ್‌ ಷಾ. ಭಾರತೀಯ ಸಿನಿಮಾದ ಅತ್ಯುತ್ತಮ ನಟ ನಾಸಿರುದ್ದೀನ್‌ ಷಾ ಈ ಬಾರಿಯ ಕಾನ್‌ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. 1976 ರಲ್ಲಿ ಶ್ಯಾಮ್‌ ಬೆನಗಲ್‌ ನಿರ್ದೇಶಿಸಿದ ಮಂಥನ್‌ ಚಲನಚಿತ್ರವನ್ನು ಸಂರಕ್ಷಿಸಲಾಗಿದ್ದು ಈ ಬಾರಿಯ ಚಿತ್ರೋತ್ಸವದಲ್ಲಿ ರೀಸ್ಟೋರ್ಡ್‌ ಕ್ಲಾಸಿಕ್‌ ವಿಭಾಗದಲ್ಲಿ ಪ್ರದರ್ಶಿಸಲಾಗಿತ್ತು.

ಚಲನಚಿತ್ರ ಪ್ರದರ್ಶನದ ಬಳಿಕ ಸಿನಿಪ್ರಿಯರಿಂದ ಸುದೀರ್ಘ ಕರತಾಡನದ ಅಭಿನಂದನೆ ದೊರಕಿತು. ಚಿತ್ರತಂಡದ ಪರವಾಗಿ ಸಿನಿ ಪ್ರೇಕ್ಷಕರ ಅಭಿನಂದನೆಯನ್ನು ನಮ್ರತೆಯಿಂದ ಸ್ವೀಕರಿಸಿ ಕೈ ಮುಗಿದು ನಮಸ್ಕರಿಸಿದ ಷಾ ರ ಕಣ್ಣುಗಗಳಷ್ಟೇ ಮಿನುಗುತ್ತಿದ್ದವು. ಕಂಠ ಗದ್ಗದಿತವಾಯಿತು. ಸುಮಾರು 48 ವರ್ಷಗಳ ಹಿಂದೆ ರೂಪಿಸಿದ ವಿಶಿಷ್ಟವಾದ ಕಲಾಕೃತಿ (ಸಿನಿಮಾ) ಕ್ಕೆ ಈಗಲೂ ಸಿಕ್ಕ ಮನ್ನಣೆ, ಮೆಚ್ಚುಗೆಗೆ ಷಾ ಮೂಕರಾದರು. ಈ ಸುದೀರ್ಘ ಕರತಾಡನದ ಅಭಿನಂದನೆ ಸಲ್ಲಬೇಕಾದದ್ದು ಇಡೀ ಚಿತ್ರತಂಡಕ್ಕೆ ಹಾಗೂ ನಿರ್ದೇಶಕ ಶ್ಯಾಮ್‌ ಬೆನಗಲ್‌ ಗೆ, ಕಥೆಗೆ ಸ್ಫೂರ್ತಿಯಾದ ಕ್ಷೀರ ಕ್ರಾಂತಿಯ ಹರಿಕಾರ ವರ್ಗೀಸ್‌ ಕುರಿಯನ್‌ ಅವರಿಗೆ ಎಂದು ಭಾವುಕರಾಗಿ ನುಡಿದರು.

ಕಾನ್‌ ಚಲನಚಿತ್ರೋತ್ಸವ 2024 : ಈ ಬಾರಿ ಕನ್ನಡಿಗರದ್ದೇ ಹವಾ

ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ, ಇದೊಂದು ಅಪೂರ್ವ ಘಳಿಗೆ. ಆದರೆ ಇದನ್ನು ಅನುಭವಿಸುವ ಹೊತ್ತಿನಲ್ಲಿ ನನ್ನ ಗೆಳೆಯರಿಲ್ಲ. ಈ ಚಿತ್ರದಲ್ಲಿ ನನ್ನೊಂದಿಗೆ ನಟಿಸಿದ್ದ ನನ್ನ ಗೆಳೆಯ, ಗುರು ಹಾಗೂ ಎಫ್‌ ಟಿ ಐ ಐ ನ ನಿರ್ದೇಶಕರೂ ಅಗಿದ್ದ ಗಿರೀಶ್‌ ಕಾರ್ನಾಡ್‌, ನನ್ನ ಗೆಳತಿಯಾಗಿದ್ದ ಸ್ಮಿತಾ ಪಾಟೀಲ್‌ ಹಾಗೂ ನಟ ಅಮರೀಶ್‌ ಪುರಿ. ಇವರೂ ಇರಬೇಕಿತ್ತುʼ ಎಂದು ನೆನಪಿಸಿಕೊಂಡರು.

ʼನಾನೆಂದೂ ಈ ರೆಡ್‌ ಕಾರ್ಪೆಟ್‌ ನ ಕನಸು ಕಂಡವನಲ್ಲ. ಆದರೆ ಸದಾ ಚಿತ್ರೋತ್ಸವಗಳಲ್ಲಿ ಈ ಕೆಂಪು ಹಾಸಿನ ಮೇಲೆ ನಡೆದು ಬರುವ ನಟಿಯರು, ಚಿತ್ರತಂಡವನ್ನು ವೀಕ್ಷಿಸಿ ಸಂಭ್ರಮಿಸುತ್ತಿದ್ದೆ. ಒಂದು ಚಿತ್ರತಂಡಕ್ಕೆ ಸಿಕ್ಕ ಗೌರವವದು. ಆದರೆ ಇಂದು ಅದರ ಭಾಗವಾದೆ ಎನ್ನುವುದೇ ಅಚ್ಚರಿ ಎಂದರು. ಷಾ ಮೊದಲ ಬಾರಿಗೆ ಕಾನ್‌ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದಾರೆ.

ಮಂಥನ್‌ ಚಿತ್ರದ ಬಗ್ಗೆಯೂ ಹೇಳುತ್ತಾ, ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿರುವ ಚಿತ್ರವದು. ಎಂದಿಗೂ ಆ ಚಿತ್ರದ ಅನುಭವವನ್ನು ಮರೆಯಲಾರೆ. ಅದು ನನ್ನ ವೃತ್ತಿ ಜೀವನದ ಎರಡನೇ ಸಿನಿಮಾವಾಗಿತ್ತು. ಏನಾಗುತ್ತದೋ, ಜನಪ್ರಿಯವಾಗುತ್ತದೋ, ಯಶಸ್ವಿಯಾಗುತ್ತದೋ ಇಲ್ಲವೋ ಎಂಬ ಗೊಂದಲವಿತ್ತು. ಅದಕ್ಕೂ ಕಾರಣಗಳಿದ್ದವು. ಈ ಚಿದಲ್ಲಿ ಆಗ ಜನಪ್ರಿಯ ಸಿನಿಮಾದಲ್ಲಿರುತ್ತದ್ದಂತೆ ಹಾಡುಗಳು, ಕುಣಿತ, ಹೊಡೆತ ಬಡಿತಗಳ್ಯವುದೂ ಇದರಲ್ಲಿ ಇರಲಿಲ್ಲ. ಆದರೆ ಚಿತ್ರ ಬಿಡುಗಡೆಯಾದ ಮೇಲೆ ನಮ್ಮೆಲ್ಲರನ್ನೂ ಚಕಿತಗೊಳಿಸುವಂತೆ ಯಶಸ್ವಿಯಾಯಿತು. ಹಲವರ ಬದುಕನ್ನು ಬೆಳಗಿಸಿತುʼ ಎಂದು ಹೇಳಲು ಮರೆಯಲಿಲ್ಲ.

ಮೋಡ ಮುಸುಕಿದ ಬಾನಿನಲ್ಲಿ ತಾರೆಗಳು ತೋರುತ್ತಿರಲಿಲ್ಲ; ಎಲ್ಲವೂ ಭೂಮಿ ಮೇಲೆ ಮಿಂಚುತ್ತಿದ್ದವು !

ರೆಡ್‌ ಕಾರ್ಪೆಟ್‌ ನಲ್ಲಿ ಷಾರೊಂದಿಗಿದ್ದ ದಿ ಫಿಲ್ಮ್‌ ಹೆರಿಟೇಜ್‌ ಫೌಂಡೇಷನ್‌ ನ ನಿರ್ದೇಶಕ ಹಾಗೂ ಕ್ಲಾಸಿಕ್‌ ರೀಸ್ಟೋರೇಷನ್‌ ನಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಿವೇಂದ್ರ ಸಿಂಗ್‌ ಡುಂಗರ್‌ ಪುರ್‌ ಸಹ ಮಾತನಾಡಿ, ಇದು ಮೂರನೇ ಬಾರಿ ಕ್ಲಾಸಿಕ್‌ ರೀಸ್ಟೋರೇಷನ್‌ ಕಾರಣಕ್ಕೆ ರೆಡ್‌ ಕಾರ್ಪೆಟ್‌ಮೇಲೆ ನಡೆದು ಬರುತ್ತಿರುವುದಕ್ಕೆ ಹರ್ಷ ಮತ್ತು ಸಂಭ್ರಮವಾಗುತ್ತಿದೆ. ಶ್ಯಾಮ್‌ ಬೆನಗಲ್‌ ಸಹ ನಮ್ಮೊಂದಿಗೆ ಇರಬೇಕಿತ್ತು ಎಂದು ನೆನಪಿಸಿಕೊಂಡರು. ಶ್ಯಾಮ್‌ ಬೆನಗಲ್‌ ಅವರು ಚಿತ್ರೋತ್ಸವದಲ್ಲಿ ಭಾಗವಹಿಸಿರಲಿಲ್ಲ.

ಮಂಥನ್‌ ಚಿತ್ರವು ಶ್ಯಾಮ್‌ ಬೆನಗಲ್‌ ನಿರ್ದೇಶಿಸಿ ಗುಜರಾತ್‌ ಕೋ ಆಪರೇಟಿವ್‌ ಮಿಲ್ಕ್‌ ಮಾರ್ಕೆಟಿಂಗ್‌ ಫೆಡರೇಷನ್‌ ಈ ಸಿನಿಮಾವನ್ನು ನಿರ್ಮಿಸಿತ್ತು. ಗಿರೀಶ್‌ ಕಾರ್ನಾಡ್‌, ನಾಸಿರುದ್ದೀನ್‌ ಷಾ, ಅಮರೀಶ್‌ ಪುರಿ, ಸ್ಮಿತಾ ಪಾಟೀಲ್‌, ಅನಂತನಾಗ್‌ ಮತ್ತಿತರರು ಅಭಿನಯಿಸಿದ್ದರು. ಛಾಯಾಗ್ರಹಣವನ್ನು ಗೋವಿಂದ ನಿಹಲಾನಿ ಪೂರೈಸಿದ್ದರೆ, ಸಂಗೀತವನ್ನು ವನರಾಜ್‌ ಭಾಟಿಯಾ ಕೈಗೊಂಡಿದ್ದರು. ಚಿತ್ರಕಥೆಯನ್ನು ವಿಜಯ್‌ ತೆಂಡುಲ್ಕರ್‌ ರೂಪಿಸಿದ್ದರು.

ವಿಶೇಷವೆಂದರೆ ಈ ಸಿನಿಮಾ ಮೊದಲ ಕ್ರೌಡ್‌ ಫಂಡೆಂಡ್‌ ಸಿನಿಮಾ. ಗುಜರಾತಿನ 5 ಲಕ್ಷ ಮಂದಿ ರೈತರು ತಲಾ 2 ರೂ. ಗಳನ್ನು ದೇಣಿಗೆಯನ್ನು ಸಿನಿಮಾ ನಿರ್ಮಾಣಕ್ಕೆ ನೀಡಿದ್ದರು. ಇದು ಕ್ಷೀರ ಕ್ರಾಂತಿಯ ಹರಿಕಾರ ವರ್ಗೀಸ್‌ ಕುರಿಯನ್‌ ಅವರ ಜೀವನಗಾಥೆಯಿಂದ ಸ್ಫೂರ್ತಿ ಪಡೆದ ಸಿನಿಮಾವಾಗಿತ್ತು.

ಕಾನ್‌ ಚಿತ್ರೋತ್ಸವದ ಪ್ರದರ್ಶನದಲ್ಲಿ ಷಾರೊಂದಿಗೆ ಅವರ ಪತ್ನಿ ರತ್ನ ಪಾಠಕ್‌ ಷಾ, ಸ್ಮಿತಾ ಪಾಟೀಲರ ಪುತ್ರ ಪ್ರತೀಕ್‌ ಬಬ್ಬರ್‌, ವರ್ಗೀಸ್‌ ಕುರಿಯನ್‌ ಪುತ್ರಿ ನಿರ್ಮಲಾ ಕುರಿಯನ್‌, ಸ್ಮಿತಾ ಪಾಟೀಲರ ತತಂತಿ ಅನಿತಾ ಪಾಟೀಲ್‌ ದೇಶಮುಖ್‌ ಮತ್ತು ಮಾನ್ಯ ಪಾಟೀಲ್‌ ಸೇಥ್‌ ಭಾಗವಹಿಸಿದ್ದರು.

ಕಾನ್‌ ಚಿತ್ರೋತ್ಸವದಲ್ಲಿ ರೀಸ್ಟೋರ್ಡ್‌ ಕ್ಲಾಸಿಕ್‌ ವಿಭಾಗದಲ್ಲಿ ಪ್ರದರ್ಶನಗೊಂಡ ಮೂರನೇ ಚಲನಚಿತ್ರ ಇದಾಗಿದೆ. ಇದಕ್ಕಿಂತ ಮೊದಲು 2022 ರಲ್ಲಿ ಮಲಯಾಳಂ ನಿರ್ದೇಶಕ ಅರವಿಂದನ್‌ ಅವರ ಥಂಪು, 2023 ರಲ್ಲಿ ಅರಿಬಮ್‌ ಶ್ಯಾಮ್‌ ಶರ್ಮರ ಮಣಿಪುರಿ ಚಿತ್ರ ಇಶಾನು ಪ್ರದರ್ಶನಗೊಂಡಿತ್ತು.

LEAVE A REPLY

Please enter your comment!
Please enter your name here

spot_img

More like this

Kannappa Movie : ಕಣ್ಣಪ್ಪ…ಕಣ್ಣಪ್ಪ…ಬೇಗ ಬಾರಪ್ಪ

ಕನ್ನಡದಲ್ಲಿ ಬೇಡರ ಕಣ್ಣಪ್ಪ ಇರುವಾಗ ಮತ್ತೊಂದು ಕಣ್ಣಪ್ಪ ಏನಪ್ಪ ಎಂದು ಪ್ರಶ್ನೆ ಕೇಳುವವರಿದ್ದಾರೆ. ಡಾ. ರಾಜಕುಮಾರ್‌ ಬೇಡರ ಕಣ್ಣಪ್ಪ ಪಾತ್ರದಲ್ಲಿ ನಮ್ಮೊಳಗೆ ಉಳಿದ...

Sunayana: ಮೌನರಾಗ- ಹೊಸ ನೀರು ಹಳೆಯ ಕೊಳೆಯನ್ನಷ್ಟೇ ಕೊಚ್ಚಿಕೊಂಡು ಹೋಗಲಿ

ಪತ್ರಕರ್ತರು ಸಿನಿಮಾ ರಂಗಕ್ಕೆ ಬರುವುದು ಹೊಸದೇನಲ್ಲ. ನಿರ್ದೇಶಕರ ಟೊಪ್ಪಿಯನ್ನು ಏರಿಸಿಕೊಂಡಿದ್ದಲ್ಲದೇ ಸಿನಿಮಾದ ವಿವಿಧ ರಂಗಗಳಲ್ಲಿ ಪತ್ರಕರ್ತರು ದುಡಿದಿದ್ದಾರೆ. ನಿರ್ದೆಶನದಿಂದ ಸಂಗೀತ ನಿರ್ದೇಶನದವರೆಗೆ ಹಲವಾರು...

FireFly: ಮೂರು ಮಿಣುಕು ಹುಳಗಳ ಕಥೆ ಬೆಳಕಿನ ಹಬ್ಬಕ್ಕೆ ಫೈರ್‌ ಫ್ಲೈ

ಮಿಣುಕು ಹುಳು ಅಥವಾ ಮಿಂಚುಹುಳು. ಸೀದಾ ಸಾದಾ ಹೇಳುವುದಾದರೆ ಮಿಂಚುಳು. ತುಂಬಿದ ಕತ್ತಲೆಯ ಮಧ್ಯೆ ಅಲ್ಲಲ್ಲಿ ಹಾರುತ್ತಾ ಮಿನುಗುವ ಮಿಂಚು ಹುಳು ಹೇಗೋ...