Friday, March 21, 2025
spot_img
More

    Latest Posts

    Movie Monsoon :ಜೂನ್‌ ನಲ್ಲಿ ಮುಂಗಾರು; ಕನ್ನಡ ಸಿನಿಮಾಗಳದ್ದೂ ಮುಂಗಾರೇ !

    ಜೂನ್‌ ನಲ್ಲಿ ಈಗಾಗಲೇ ಮುಂಗಾರು- ಮಳೆಗಾಲ ಶುರುವಾಗಿದೆ. ಹಾಗೆಯೇ ಈ ತಿಂಗಳಿನಲ್ಲಿ ಕನ್ನಡ ಸಿನಿಮಾಗಳ ಮುಂಗಾರೂ ಸಹ ಪ್ರಾರಂಭವಾಗಿದೆ. ಇದೇ ಜೂನ್‌ ಏಳರಂದು ಶುಕ್ರವಾರ ಎರಡು ವಿಶಿಷ್ಟ ಚಿತ್ರಗಳು ಬಿಡುಗಡೆಯಾಗುತ್ತಿವೆ. ಒಂದು ಸಹಾರ, ಮತ್ತೊಂದು ಯಂಗ್‌ ಮ್ಯಾನ್.‌ ಕಥಾ ಹಂದರದಲ್ಲಿ ಎರಡೂ ಸ್ವಲ್ಪ ವಿಶಿಷ್ಟವಾಗಿವೆ. ಒಂದು ಹಳ್ಳಿ ಹುಡುಗಿ ಕ್ರಿಕೆಟ್‌ ಗಲ್ಲಿಗೆ ಬರುವಂಥದ್ದು, ಮತ್ತೊಂದು ಸೇನೆಯ ಕುರಿತಾದ ಚಿತ್ರ.

    ಕ್ರೀಡಾ ಲೋಕದ ಮಹಿಳಾ ಕಥಾ ವಸ್ತುವಿನ ಚಿತ್ರ

    ಸಹಾರವನ್ನು ನಿರ್ದೇಶಿಸಿರುವುದು ಮಂಜುನಾಥ್‌ ಭಾಗ್ವತ್.‌ ನಿರ್ಮಿಸಿರುವುದು ಶಿವಕುಮಾರ್‌ ಮಾದಯ್ಯ. ಸಾರಿಕಾ ಕುಮಾರ್‌, ಅಂಕುಶ್‌, ಸುಧಾರಾಣಿ, ಮಂಜುನಾಥ ಹೆಗಡೆ ಮತ್ತಿತರರು ಇರುವಂಥ ಚಿತ್ರ.ಹಳ್ಳಿ ಹುಡುಗಿಯೊಬ್ಬಳು ಕ್ರಿಕೆಟ್‌ ಪಟುವಾಗಬೇಕೆಂದು ಕನಸು ಕಾಣುತ್ತಾಳೆ. ಪುರುಷ ಸಾರ್ವಭೌಮತ್ವದ ಜಗತ್ತಿನ ಒಳಹೊಕ್ಕು ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸಿನೊಂದಿಗೆ ಹೊರಬರುತ್ತಾಳೆ. ಇದು ಕಥಾವಸ್ತು. ಚಿತ್ರತಂಡದವರ ಪ್ರಕಾರ ಕನ್ನಡದಲ್ಲಿ ಮಹಿಳೆಯನ್ನು ಕ್ರೀಡಾ ಕಥಾವಸ್ತುವಿನ ಪ್ರಧಾನ ನೆಲೆಯಲ್ಲಿ ಚಿತ್ರಿಸುತ್ತಿರುವ ಮೊದಲ ಸಿನಿಮಾ.

    ಮಾಮಿ- ಮುಂಬಯಿ ಫಿಲ್ಮ್‌ ಫೆಸ್ಟಿವಲ್‌ ಗೆ ಸಿನಿಮಾಗಳಿಗೆ ಆಹ್ವಾನ

    ಸಿಂಗಲ್‌ ಟೇಕ್‌ ಖ್ಯಾತಿಯ ಯಂಗ್‌ ಮ್ಯಾನ್‌

    ಸಿಂಗಲ್ ಟೇಕ್ ನಲ್ಲಿ ಚಿತ್ರೀಕರಣವಾಗಿರುವ “ಯಂಗ್ ಮ್ಯಾನ್” ಚಿತ್ರವೂ ಜೂನ್‌ 7 ರಂದೇ ಬಿಡುಗಡೆಯಾಗುತ್ತಿದೆ.  ಮುತ್ತುರಾಜ್‌ ಈ ಚಿತ್ರವನ್ನು ನಿರ್ದೇಶಿಸಿದ್ದರೆ, ವಿಜಯಲಕ್ಷ್ಮಿ ರಾಮೇಗೌಡರದ್ದು ನಿರ್ಮಾಣ. ನಾಗರಾಜ್‌ ವೀನಸ್‌ ಮೂರ್ತಿಯವರು ಛಾಯಾಗ್ರಹಣ ನಿರ್ವಹಿಸಿದ್ದರೆ, ಸಂಗೀತ ನಿರ್ದೇಶನವನ್ನು ಲೋಕಿ ಪೂರೈಸಿದ್ದಾರೆ.

    ಚಿತ್ರತಂಡ ಹೇಳುವಂತೆ, ಚಿತ್ರರಂಗ ಸಿಂಗಲ್‌ ಟೇಕ್‌ ನಲ್ಲಿ ಪೂರೈಸಿರುವ ಕೆಲವೇ ಕೆಲವು ಸಿನಿಮಾಗಳಲ್ಲಿ ನಮ್ಮದೂ ಒಂದು. ನಟ, ನಿರ್ದೇಶಕ ಮೊದಲ ಬಾರಿಗೆ ಈ ಪ್ರಯತ್ನವನ್ನು ಇದು ಸಾಧ್ಯ ಚಿತ್ರದಲ್ಲಿ ಮಾಡಿದ್ದರು. ಬಳಿಕ ಎಸ್.‌ ನಾರಾಯಣ್‌ ದಕ್ಷ ಚಿತ್ರದಲ್ಲಿ ಮಾಡಿದರಂತೆ. ಈಗ ನಾವೇ ಮಾಡ್ತಿರೋದು ಈ ಯಂಗ್‌ ಮ್ಯಾನ್‌ ಚಿತ್ರದಲ್ಲಿ ಎಂದು ವಿವರಿಸಿದ್ದಾರೆ.

    ಚೆಫ್‌ ಚಿದಂಬರ : ಅನಿರುದ್ಧರನ್ನು ಮತ್ತೆ ಬೆಳ್ಳಿತೆರೆಗೆ ಎಳೆದು ತರಲಿದೆಯೇ?

    ಸುನೀಲ್ ಗೌಡ, ರಾಶಿಕಾ ಕರಾವಳಿ, ಹರೀಶ್ ಆಚಾರ್ಯ, ಶೃತಿ ಗೌಡ, ಋಷಿ ಅನಿತಾ, ಆನಂದ ಕುಮಾರ್, ನಯನ ಪುಟ್ಡಸ್ವಾಮಿ, ತನುಜಾ, ಅನುಕುಮಾರ್, ಜಯರಾಮ್ ಮುಂತಾದವರ ತಾರಾಗಣದಲ್ಲಿ ಮೂಡಿರುವ ಚಿತ್ರವನ್ನು ನೋಡಿ ಎಂದು ವಿನಂತಿಸಿರುವುದು ಚಿತ್ರತಂಡ. ಇನ್ನೊಂದು ಸಂಗತಿಯೆಂದರೆ ದೇಶಪ್ರೇಮ ಕುರಿತಾದ ಕಥಾಹಂದರ ಇದರದ್ದು. DSK Cinema’S ಸಂಸ್ಥೆಯ ಮುಖ್ಯಸ್ಥ ಸುನಿಲ್ ಕುಂಬಾರ್ ಅವರು ಬಿಡುಗಡೆಯ ಹೊಣೆ ನಿರ್ವಹಿಸಿದ್ದಾರೆ.

    ಜೂನ್‌ 14 ಕ್ಕೂ ಧಮಾಕ : ಕೋಟಿ, ಚೆಫ್‌ ಚಿದಂಬರ, ಶಿವಮ್ಮ

    ಜೂನ್‌ 14 ರಂದು ಅನಿರುದ್ಧರ ಚೆಫ್‌ ಚಿದಂಬರ ಬಿಡುಗಡೆಯಾಗುತ್ತಿದೆ. ಡಾರ್ಕ್‌ ಕಾಮಿಡಿ ಚಿತ್ರದ ಟ್ರೇಲರ್‌ ಎಲ್ಲವೂ ಈಗಾಗಲೇ ಬಿಡುಗಡೆಯಾಗಿದೆ. ರೂಪಾ ಡಿ.ಎನ್.‌  ನಿರ್ಮಿಸಿರುವ ಚಿತ್ರವನ್ನು ಎಂ. ಆನಂದರಾಜ್‌ ನಿರ್ದೇಶಿಸಿದ್ಸಾರೆ. ಇದರಲ್ಲಿ ಅನಿರುದ್ಧರದ್ದು ಬಾಣಸಿಗನ ಪಾತ್ರ. ನಿಧಿ ಸುಬ್ಬಯ್ಯ, ರಚೆಲ್‌ ಡೇವಿಡ್‌ ಜತೆಗಿದ್ದಾರೆ. ಇದೂ ಸಹ ಒಂದಿಷ್ಟು ನಿರೀಕ್ಷೆ ಹುಟ್ಟಿಸಿದೆ.

    Ilayaraja : ಸಂಗೀತ ಸಾಮ್ರಾಟ ರಾಸಯ್ಯ ಈ ಇಳೆಯ ರಾಜ !

    ಇದರೊಂದಿಗೆ ಮತ್ತೊಂದು ವಿಶೇಷವೆಂದರೆ ತೀರಾ ಕಮರ್ಷಿಯಲ್‌ ನೆಲೆಗಿಂತ ಭಿನ್ನವಾದ ಶಿವಮ್ಮ ಸಿನಿಮಾ ಥಿಯೇಟರುಗಳಿಗೆ ಬಿಡುಗಡೆಯಾಗುತ್ತಿದೆ. ರಿಷಭ್‌ ಶೆಟ್ಟಿಯವರ ರಿಷಭ್‌ ಫಿಲಂಸ್‌ ನಿರ್ಮಿಸಿರುವ ಚಿತ್ರವನ್ನು ಹೊಸ ನಿರ್ದೇಶಕ ಜೈಶಂಕರ್‌ ನಿರ್ದೇಶಿಸಿದ್ದಾರೆ. ಈಗಾಗಲೇ ಹಲವಾರು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಯನ್ನೂ ಪಡೆದು ಯಶಸ್ವಿಯಾಗಿರುವ ಚಿತ್ರ.

    ಶರಣಮ್ಮ ಚೆಟ್ಟಿ ಇದರ ಪ್ರಮುಖ ಪಾತ್ರಧಾರಿಣಿ. ಬದುಕಿನಲ್ಲಿ ಹೊಸ ಉತ್ಸಾಹವನ್ನು ತುಂಬಬಲ್ಲಂಥ ಚಿತ್ರವಿದು. ಇದೂ ಸಹ ದೊಡ್ಡ ಸಂಗತಿಯೇ.

    ಡಾಲಿ ಕೋಟಿ ಸಿನಿಮಾ

    ಇನ್ನು ಡಾಲಿ ಧನಂಜಯರ ʼಕೋಟಿʼ ಸಿನಿಮಾ ಸಹ ಜೂನ್‌ 14 ರಂದೇ ಬಿಡುಗಡೆಯಾಗಲು ಸಜ್ಜಾಗಿದೆ. ಇದೂ ಸಹ ಅತ್ಯಂತ ನಿರೀಕ್ಷೆಯಲ್ಲಿರುವ ಚಿತ್ರ.

    ಜೂನ್‌ 21 ಕ್ಕೆ ಸಂಭವಾಮಿ ಯುಗೇಯುಗೇ

    ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ನಡಿ ಪ್ರತಿಭಾ ನಿರ್ಮಿಸಿರುವ ಸಂಭವಾಮಿ ಯುಗೇ ಯುಗೇ ಚಿತ್ರ ಬಿಡುಗಡೆಗೆ ಸಜ್ಜಾಗಿದೆ ಜೂನ್‌ 21 ಕ್ಕೆ. ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಜಯ್ ಶೆಟ್ಟಿ ನಾಯಕ ನಟರಾಗಿ ನಟಿಸಿದ್ದಾರೆ. ನಿಶಾ ರಜಪೂತ್‌ ನಾಯಕಿ ನಟಿಯಾಗಿ ನಟಿಸಿದ್ದಾರೆ. ಇದರ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಯಿತು. ವಿಶೇಷವಾಗಿ ನಟಿ ಶ್ರುತಿ ಹರಿಹರನ್‌ ಹಾಡಿರುವ ಹಾಡೂ ಇದೆ.

    Sun Children: ಮಕ್ಕಳ ಕನಸಿನ ಬಣ್ಣ ಬಣ್ಣಿಸಲಿಕ್ಕೆ ಈ ಇರಾನ್‌ ಸಿನಿಮಾ

    ಇದು ಕಮರ್ಷಿಯಲ್‌ ಥ್ರಿಲ್ಲರ್ ಚಿತ್ರವಂತೆ. ಮಂಡ್ಯ, ಚನ್ನಪಟ್ಟಣ, ರಾಮನಗರ ಮತ್ತಿತರ ಕಡೆ ಚಿತ್ರೀಕರಣ ಮುಗಿಸಿತ್ತು. ಹಳ್ಳಿ ಹಿನ್ನೆಲೆಯ ಚಿತ್ರ. ಹಳ್ಳಿ ಹುಡುಗರು ಓದಿ, ಪಟ್ಟಣಕ್ಕೆ ಹೋಗಿ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು? ಹಳ್ಳಿ ಉಳಿಯುವುದು ಹೇಗೆ? ಯುವಕರು ಹಳ್ಳಿಯಲ್ಲೇ ಉಳಿದರೆ ಹೇಗೆ ಎನ್ನುವ ಕುರಿತಾದ ಚಿತ್ರವಂತೆ ಎನ್ನುತ್ತಾರೆ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ.

    ಇದೊಂದು ಕೃಷಿ ಮತ್ತು ರೈತರ ಸಿನಿಮಾ. ತನ್ನೂರಿಗೆ ಏನಾದರೂ ಮಾಡಬೇಕೆಂದು ಶ್ರಮಿಸುವವನ ಕಥೆ ಎಂದವರು ನಟ ಜಯ್‌ ಶೆಟ್ಟಿ. ವಿಜಾಪುರದ ನನ್ನ ಆಸೆ ಕನ್ನಡ ಸಿನಿಮಾದಲ್ಲಿ ನಟಿಸಬೇಕೆಂಬುದು. ಅದೂ ಈಗ ಈಡೇರುತ್ತಿದೆ ಎನ್ನುತ್ತಾರೆ ನಿಶಾ ರಜಪೂತ್.‌ ಅಶೋಕ್ ಕುಮಾರ್, ಮಧುರಗೌಡ, ರಾಜೇಂದ್ರ ಕಾರಂತ್‍ ಮತ್ತಿತರರು ತಾರಾಗಣದಲ್ಲಿದ್ದಾರೆ.

    Latest Posts

    spot_imgspot_img

    Don't Miss