ಯಾರೋ ನಾಡ ಹಾದಿ ಬಿಟ್ಟು ಕಾಡ ಹಾದಿ ಹಿಡಿದರೆಂದರೆ ದುಃಖಿಸುವುದಲ್ಲ, ಖುಷಿ ಪಡಬೇಕು. ಏನೋ ಒಂದಿಷ್ಟು ಹೊಸತನ್ನು ಹಡುಕಿಕೊಂಡು ಬರಬಹುದು ಎಂಬ ನಿರೀಕ್ಷೆಯನ್ನು ಹೊತ್ತು ಇರಬೇಕು. ಕೆಲವೊಮ್ಮೆ ಈ ನಿರೀಕ್ಷೆ ಸುಳ್ಳಾಗಬಹುದು (ಯಾರೋ ಕೆಲವರು ಇದನ್ನು ಓದುವಾಗ ಹಲವು ಬಾರಿ ಎನ್ನುತ್ತಿರಬಹುದು. ಅದು ಬಿಡಿ). ಆದರೂ ಮತ್ತೆ ನಿರೀಕ್ಷೆ ಇಟ್ಟುಕೊಳ್ಳಬೇಕು. ಯಾಕೆಂದರೆ ನಮ್ಮಲ್ಲಿ ಬೇರೆ ಉಪಾಯವಿಲ್ಲ ! ನಾವು ನಿರ್ಮಾಪಕರೂ ಅಲ್ಲ, ನಿರ್ದೇಶಕರೂ ಅಲ್ಲ!
ಫಾರೆಸ್ಟ್ ಎನ್ನುವ ಶೀರ್ಷಿಕೆಯ ಸಿನಿಮಾ ಸಿದ್ಧವಾಗುತ್ತಿದೆ. ಸಾಹಸ ಪ್ರಧಾನವಾಗಿ ಹಾಸ್ಯವನ್ನು ಹುದುಗಿಸಿಕೊಂಡಿರುವ ಚಿತ್ರವಂತೆ. ಆರಂಭದಿಂದಲೂ ಕುತೂಹಲ ಮೂಡಿಸುತ್ತಂತೆ. ಈ ಸಿನಿಮಾದಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಸುನಿಲ್ ಕುಮಾರ್ ಅಭಿನಯಿಸುತ್ತಿದ್ದಾರೆ. ಅವರು 7.8 ಅಡಿ ಎತ್ತರ ಇದ್ದಾರೆ. ಬಾಲಿವುಡ್ ನ ಕೆಲವು ಚಿತ್ರಗಳಲ್ಲೂ ನಟಿಸಿರುವವರು ಸುನಿಲ್.
New Movie:ದೀಪಾವಳಿ ಮಾಸದಲ್ಲಿ ಭೈರತಿ ರಣಗಲ್ ಬಿಡುಗಡೆ : ನ. 15 ರಂದು ಪಟಾಕಿ ಶಬ್ದ ಮಾಡುತ್ತಾ?
ಈಗಾಗಲೇ ಸಾಹಸ ದೃಶ್ಯಗಳೂ ಸೇರಿದಂತೆ ಚಿತ್ರೀಕರಣ ನಡೆದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಹದೇಶ್ವರ ಬೆಟ್ಟ ಮತ್ತಿತರ ಸ್ಥಳಗಳು ಇದರ ಲೋಕೇಷನ್. ಇದರ ನಿರ್ದೇಶಕ ಚಂದ್ರ ಮೋಹನ್.
ಎನ್.ಎಂ.ಕೆ. ಸಿನಿಮಾಸ್ ನಡಿ ಎನ್.ಎಂ. ಕಾಂತರಾಜ್ ನಿರ್ಮಿಸುತ್ತಿರುವ ಚಿತ್ರವಿದು. ಇನ್ನು ನಿರ್ದೇಶಕ ಚಂದ್ರಮೋಹನ್ ಈ ಹಿಂದೆ ಡಬಲ್ ಇಂಜಿನ್ ಚಿತ್ರ ನಿರ್ದೇಶಿಸಿದ್ದರು. ಇವರೊಂದಿಗೆ ಸತ್ಯ ಶೌರ್ಯ ಸಾಗರ್ ಕಥೆ ಬರೆದಿದ್ದಾರೆ. ಸತ್ಯರದ್ದೇ ಸಂಭಾಷಣೆ ಸಹ.
ಮಲಯಾಳಂ ಚಿತ್ರರಂಗ: ಏನು ದಾಹ ಯಾವ ಮೋಹ ತಿಳಿಯದಾಗಿದೆ, ಉಳಿದವುಗಳ ಕಥೆ ಇನ್ನೂ ತಿಳಿಯಬೇಕಿದೆ !
ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಅವರು ಪ್ರಮುಖಪಾತ್ರದಲ್ಲಿದ್ದಾರೆ. ಅಲ್ಲದೇ ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್ ಮತ್ತಿತರರಿದ್ದಾರೆ.