ಕನ್ನಡದ ಮಟ್ಟಿಗೆ ಪ್ರೇಮಕಥೆಗಳಿಗೆ ಬರವಿಲ್ಲ. ಇದರಲ್ಲಿ ಎರಡೂ ವಿಧಗಳದ್ದೂ ಸಾಕಷ್ಟಿವೆ. ಸುಮ್ಮನೆ ಮಾಮೂಲಿ ಸೂತ್ರಗಳ (ಫಾರ್ಮುಲಾ) ಮರ ಸುತ್ತುವ ಪ್ರೇಮಿಗಳಕಥೆಯೂ ಬಂದಿವೆ. ಹಾಗೆಯೇ ನಿಜವಾದ ಪ್ರೇಮದ, ತೀರಾ ಮನಸ್ಸಿಗೆ ತಟ್ಟುವಂಥ ಪ್ರೇಮ ಕಥೆಗಳೂ ಸಾಕಷ್ಟಿವೆ. ದುಃಖಾಂತ್ಯವಿದ್ದರೂ ಮನಸ್ಸಿಗೆ ಗಾಢವಾಗಿ ತಟ್ಟಿ ಅತ್ಯುತ್ತಮ ಚಿತ್ರಗಳ ಸಾಲಿಗೆ ಸೇರಿದ ಸಿನಿಮಾಗಳು ಸಾಕಷ್ಟು ಬಂದಿವೆ.
ಮೊನ್ನೆ ಮೊನ್ನೆಯಷ್ಟೇ ಪರಂವಃ ಸ್ಟುಡಿಯೋ ನಿರ್ಮಿಸಿದ ಇಬ್ಬನಿ ತಬ್ಬಿದ ಇಳೆಯಲಿ ಸಹ ಪ್ರೇಮ ಕಥೆಯೇ. ವಿಪರ್ಯಾಸವೆಂದರೆ ನಮ್ಮ ರೌಡಿಸಂ ನ ಚಿತ್ರಗಳೂ ಬಂದು ಕೊನೆಗೆ ನಿಲ್ಲುವುದು ಅಥವಾ ಸಿನಿಮಾ ಶುರುವಾಗುವುದು ಇಂಥದ್ದೇ ಪ್ರೇಮದ ಎಳೆಯ ಮೇಲೆಯೇ.
ಆದರೆ ಕಲ್ಟ್ ಲವ್ ಸ್ಟೋರಿಯಂತೆ, ಬಂದಿರುವುದು ಕಡಿಮೆಯಂತೆ. ಅದಕ್ಕೇ ನಾವು ತೆರೆಗೆ ತರುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕ ಕೆ. ಗುರುಸಾವನ್.
swarajya :ಸ್ವರಾಜ್ಯ 1942; ಲಾಂಗುಗಳ ಭ್ರಾಂತಿ ಮಧ್ಯೆ ಒಂದು ಕ್ರಾಂತಿಗೀತೆಯಂತೆ
ಮನೋರಮಾ ಚಿತ್ರದ ಹೆಸರು. ಅದರ ಮೊದಲ ನೋಟ ನೋಡಲು ಇತ್ತೀಚಗೆ ಸಿಕ್ಕಿದೆ. ಕೆ. ಗುರುಸಾವನ್ ರಿಗೆ ಇದು ಮೂರನೇ ಚಿತ್ರ.
ಇದು ಒಂದು ರಾತ್ರಿಯಲ್ಲೇ ನಡೆಯುವ ಪ್ರೇಮದ ಕಥೆಯಂತೆ. ಇದು ಶರದ್ರುತುವಿನ ಒಂದು ರಾತ್ರಿಯ ಪ್ರೇಮ ಕಥೆ. ಅದಕ್ಕೇ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಚಿತ್ರೀಕರಣ ಪೂರೈಸುವ ಲೆಕ್ಕಾಚಾರ ಸಿನಿಮಾ ತಂಡದ್ದು. ಇನ್ನೊಂದು ವಿಶೇಷವೆಂದರೆ ಹಗಲಿಲ್ಲದ ಸಿನಿಮಾವಿದು. ಪೂರ್ತಿ ರಾತ್ರಿಯ ಸನ್ನಿವೇಶಗಳೇ.
Shankar Nag:ಇಂಥ ಇನ್ನೊಬ್ಬ ಹೀರೊ ಈಗ ಯಾರಾದರೂ ಸಿಕ್ಕರೆ ಹುಡುಕಿಕೊಡಿ !
ಮಿನಿಮಲಿಸಂ ನ ಪರಿಕಲ್ಪನೆಯಂತೆ ಕೇವಲ ಐದೇ ಪಾತ್ರಗಳಿರುವ ಸಿನಿಮಾ. ಕಥಾ ನಾಯಕ, ನಾಯಕಿ ಇಬ್ಬರು, ಉಳಿದವರು ಮೂವರು. ಪ್ರೇಮ ಮಾಡಲಿಕ್ಕೆ ನಾಯಕ-ನಾಯಕಿ ಬೇಕೇ ಬೇಕು. ಅನಿವಾರ್ಯ. ಅವರು ಮಾಡುವ ಪ್ರೇಮ ನೋಡಲಿಕ್ಕೆ ಕನಿಷ್ಠ ಮೂರು ಮಂದಿಯಾದರೂ ಬೇಡವೇ? ಅದರಂತೆಯೇ ಪಾತ್ರಗಳನ್ನು ನಿರ್ಧರಿಸಲಾಗಿದೆ.
ಮನು ಯು ಬಿ ಇದರ ನಾಯಕ. ನಾಯಕಿಯ ತಲಾಶ್ ನಲ್ಲಿದೆ ಚಿತ್ರ ತಂಡ. ಈ ಐದು ಪಾತ್ರಗಳಲ್ಲಿ ಒಂದನ್ನು ಹಿರಿಯ ನಟ ರಮೇಶ್ ಭಟ್ ನಿರ್ವಹಿಸುವರು. ಉಳಿದವರ ಹೆಸರು ಸದ್ಯವೇ ಬೆಳಕಿಗೆ ಬರಲಿದೆ.
ವೆನಿಸ್ ನಲ್ಲಿ ಘಟಶ್ರಾದ್ಧಕ್ಕೆ ಅಭಿನಂದನೆ ; ಜಾಫ್ನಾ ಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿಯವರಿಗೆ ಪುರಸ್ಕಾರ
ಪ್ರೇಮ ಕಥೆ, ಶರದ್ರುತು, ತಂಗಾಳಿ ಬೀಸುವ ಕಾಲ- ಎಂದೆಲ್ಲ ಹೇಳಿದ ಮೇಲೆ ಸಂಗೀತವೂ ಬಿರುಗಾಳಿಯಂತೆ ಇದ್ದರೆ ಆಗದು. ಅದೂ ಸಹ ತಂಪಾಗಿರಬೇಕು. ಸಂಗೀತ ನಿರ್ದೇಶನ ಮಣಿಕಾಂತ್ ಕದ್ರಿಯವರದ್ದು.
ಎನ್ ಆರ್ ಐ ಪ್ರೊಡಕ್ಷನ್ಸ್ ನಡಿ ರೂಪುಗೊಳ್ಳುತ್ತಿರುವ ಚಿತ್ರವನ್ನು ಜೈ ಬೋಳೂರು ಹಾಗೂ ವೆಂಕಟ್ ಸೂರ್ಯದೇವರ ನಿರ್ಮಿಸುತ್ತಿದ್ದಾರೆ. ನಾಲ್ಕು ಹಾಡುಗಳಿರುವ ಪ್ರೇಮ ಚಿತ್ರ ʼಇದು ರಮ್ಯ ಚೈತ್ರ ಕಾಲʼ ಎನ್ನುತ್ತಾ ಚೈತ್ರ-ವಸಂತಕ್ಕೆ ಚಿತ್ರಮಂದಿರಗಳಿಗೆ ಬರುತ್ತದೆಯೋ ಕಾದು ನೋಡಬೇಕು.