New Movie : ಸ್ವಪ್ನ ಮಂಟಪದಲ್ಲಿ ವಿಜಯ ರಾಘವೇಂದ್ರ, ರಂಜಿನಿ ಇಬ್ಬರದ್ದೂ ದ್ವಿಪಾತ್ರ

ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪನವರು ಬರೆದು ನಿರ್ದೇಶಿಸಿರುವ ಚಲನಚಿತ್ರ ಸ್ವಪ್ಮ ಮಂಟಪ ಬಿಡುಗಡೆಗೆ ಸಜ್ಜಾಗುತ್ತಿದೆ. ಇದು ನಟ ವಿಜಯ ರಾಘವೇಂದ್ರರ ಹೊಸ ಚಿತ್ರವೂ ಸಹ. ವಿಜಯ ರಾಘವೇಂದ್ರರ ಜತೆಗೆ ರಂಜಿನಿ ರಾಘವನ್‌ ಅಭಿನಯಿಸಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಮತ್ತು ವಿಜಯ ರಾಘವೇಂದ್ರ. ರಂಜಿನಿ ರಾಘವನ್‌ ಮತ್ತು ರಂಜಿನಿ ರಾಘವನ್.‌ ಇಬ್ಬರದ್ದೂ ದ್ವಿಪಾತ್ರ.

ಸಾಮಾನ್ಯವಾಗಿ ನಾಯಕಿಯ ದ್ವಿಪಾತ್ರ ಅಥವಾ ನಾಯಕ ನಟನ ದ್ವಿಪಾತ್ರದ ಸಿನಿಮಾ ನೋಡಿದ್ದೇವೆ. ಆದರೆ ಒಂದೇ ಸಿನಿಮಾದಲ್ಲಿ ಇಬ್ಬರದ್ದೂ ದ್ವಿಪಾತ್ರ ತೀರಾ ಅಪರೂಪ. ಬರಗೂರು ರಾಮಚಂದ್ರಪ್ಪನವರ ಇದೊಂದು ಹೊಸ ಪ್ರಯೋಗ.

ಮೈಸೂರಿನ ಬಾಬುನಾಯ್ಕ್ ತಮ್ಮ ಮಲೈಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವು ಬರಗೂರರ ಅದೇ ಕಾದಂಬರಿ ಆಧರಿಸಿದ್ದು. ಚಿತ್ರಕತೆ, ಸಂಭಾಷಣೆ, ಗೀತರಚನೆ ಹಾಗೂ ನಿರ್ದೇಶನ ಬರಗೂರರದ್ದೇ.

ಕನಕಪುರ ರಸ್ತೆಯ ಒಂದು ಹಳ್ಳಿಯೇ ಇದರ ಬಹುತೇಕ ಲೋಕೇಷನ್.‌ ಹೊಸಮನೆ ಮೂರ್ತಿಯರದ್ದು ಕಲಾರಚನೆ. ಈ ಚಿತ್ರದ ಕಥಾವಸ್ತು ಪಾರಂಪರಿಕ ಸ್ಥಳಗಳ ರಕ್ಷಣೆಯನ್ನು ಪ್ರತಿಪಾದಿಸುವುದಂತೆ. ರಾಜನೊಬ್ಬ ನಿರ್ಮಿಸಿದ ಸ್ವಪ್ನಮಂಟಪವನ್ನು ಕೆಡವಿ ಹಾಕುವ ಪ್ರಯತ್ನವನ್ನು ಕೆಲವರು ಮಾಡಿದಾಗ , ಕಥಾನಾಯಕ ಮತ್ತು ನಾಯಕಿ ಜನರನ್ನು ಸಂಘಟಿಸಿ ಅದನ್ನು ಉಳಿಸುತ್ತಾರಂತೆ. ಇದೊಂದು ಸಾಮಾಜಿಕ ಚಿತ್ರವಾದರೂ ರಾಜ ರಾಣಿಯರು ಬರುತ್ತಾರಂತೆ (ಹಿನ್ನೋಟದಲ್ಲಿ).

ತಾರಾಗಣದಲ್ಲಿ ಸುಂದರರಾಜ್, ಶೋಭಾ ರಾಘವೇಂದ್ರ, ರಜನಿ, ಮಹಾಲಕ್ಷ್ಮೀ, ಸುಂದರರಾಜ ಅರಸು, ರಾಜಪ್ಪದಳವಾಯಿ, ಅಂಬರೀಶ ಸಾರಂಗಿ, ಮೈಸೂರು ಮಂಜುಳ, ಉಮ್ಮತ್ತೂರು ಬಸವರಾಜು, ವೆಂಕಟರಾಜು, ಶಿವಲಿಂಗಪ್ರಸಾದ್, ಭಾರತಿರಮೇಶ್, ಗುಂಡಿ ರಮೇಶ್‌ ಮುಂತಾದವರಿದ್ದಾರೆ.

Indian 2 movie : ಕಮಲ್‌ ರ ಇಂಡಿಯನ್‌ 2 ಜುಲೈ 12 ರಂದು ಟಾಕೀಸಿಗೆ

ನಾಗರಾಜ ಆದವಾನಿಯವರ ಛಾಯಾಗ್ರಹಣ, ಸುರೇಶ್ ಅರಸು ಸಂಕಲನ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮತ್ತು ತ್ರಿಭುವನ್ ನೃತ್ಯ ಸಂಯೋಜಿಸಿದ್ದಾರೆ. ನಟರಾಜ್ ಶಿವು ಮತ್ತು ಪ್ರವೀಣ್ ಸಹನಿರ್ದೇಶಕರು. ಸಿನಿಮಾದ ಚಿತ್ರೀಕರಣ ಮತ್ತು ಡಬ್ಬಿಂಗ್‌ ಮುಗಿಸಿದೆ. ಇನ್ನೇನಿದ್ದರೂ ಉಳಿದ ಕಲಾಪಗಳು. ಅದಾದ ಬಳಿಕ ಬಿಡುಗಡೆ.

**

ದೀಕ್ಷಿತ್‌ ಶೆಟ್ಟಿ ಮತ್ತು ಬೃಂದಾರ ಹೊಸ ಚಿತ್ರ ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ

ದೀಕ್ಷಿತ್‌ ಶೆಟ್ಟಿ ಅಭಿನಯಿಸಿ, ಬೃಂದಾ ಆಚಾರ್ಯ ನಾಯಕಿಯಾಗಿ ಜತೆಗೂಡಿರುವ ಚಿತ್ರ ಬ್ಯಾಂಕ್‌ ಆಫ್ ಭಾಗ್ಯಲಕ್ಷ್ಮಿ. ‘ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿರ್ಮಿಸಿದ ಹೆಚ್.ಕೆ ಪ್ರಕಾಶ್ ರವರದ್ದೇ ಈ ನಿರ್ಮಾಣ.

ದಿಯಾ , ದಸರಾ, KTM  ಹಾಗೂ ಬ್ಲಿಂಕ್ ಅಭಿನಯದಿಂದ ಹೆಸರು ಮಾಡಿದ ದೀಕ್ಷಿತ್‌ ಶೆಟ್ಟಿ ಈಗ ತೆಲುಗು, ಮಲಯಾಳಂನಲ್ಲೂ ಸ್ವಲ್ಪ ಬ್ಯುಸಿ. ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಹೊಸ ನಿರ್ದೇಶಕ ಅಭಿಷೇಕ ಎಂ.

ಅಭಿಷೇಕ ಎಂ ಅವರು, ನಿರ್ದೇಶಕ ಸಿಂಪಲ್ ಸುನಿ ಜೊತೆ ‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’, ‘ಬಹುಪರಾಕ್’ ಮತ್ತು ‘ಆಪರೇಷನ್ ಅಲಮೇಲಮ್ಮ’ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದವರು. ‘ಪಿನಾಕ’ ಎಂಬ VFX ಸ್ಟುಡಿಯೋ ಕೂಡ ಹೊಂದಿರುವ ಅಭಿಷೇಕ್ ಎಂ ರವರದ್ದು ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿʼ ನಿರ್ದೇಶನದ ಪ್ರಯತ್ನ.

Cannes 2024 : ಪಾಯಲ್‌ ಕಪಾಡಿಯರ ಚಲನಚಿತ್ರಕ್ಕೆ ಗ್ರ್ಯಾಂಡ್‌ ಪ್ರಿಕ್ಸ್‌ ಪುರಸ್ಕಾರ

ಬ್ಯಾಂಕ್ ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಹಾಸ್ಯ ಪ್ರಧಾನ ಕಥಾಹಂದರವಿದೆಯಂತೆ ಚಿತ್ರಕ್ಕೆ. ತಾರಾಗಣದಲ್ಲಿ ಸಹಕಲಾವಿದರಾಗಿ ಸಾಧುಕೋಕಿಲ, ಗೋಪಾಲ ಕೃಷ್ಣ ದೇಶಪಾಂಡೆ, ಉಷಾ ಭಂಡಾರಿ, ಭರತ್, ವಿಶ್ವನಾಥ್, ಹರೀಶ್ ಸಮಷ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಸ್ ಶರ್ಮಾ, ಶ್ರೀ ವತ್ಸ, ವಿನುತ್ ಮುಂತಾದವರಿದ್ದಾರೆ.
ಬೆಂಗಳೂರು, ತುಮಕೂರು ಹಾಗು ಚಿತ್ರದುರ್ಗ ಸುತ್ತ ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದೆ. ಮುಂದಿನ ತಿಂಗಳಿನೊಳಗೆ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಲಿದೆ ಈ ಚಿತ್ರ. ನಿರ್ಮಾಪಕರ ಲೆಕ್ಕದಂತೆ ಈ ಚಿತ್ರ ತೆಲುಗಿನಲ್ಲೂ ಬಿಡುಗಡೆಯಾಗಲಿದೆ.

ಛಾಯಾಗ್ರಹಣದ ಹೊಣೆ ಅಭಿಷೇಕ್‌ ಜಿ ಕಾಸರಗೋಡರದ್ದು. ಸಂಗೀತ ನಿರ್ದೇಶನ ಜ್ಯೂಡಾ ಸ್ಯಾಂಡಿ, ಕಲಾ ನಿರ್ದೇಶನ ರಘು ಮೈಸೂರ್ ಹಾಗೂ ನೃತ್ಯ ಸಂಯೋಜನೆ ಭೂಷಣ್ ಮಾಸ್ಟರ್‌ ರದ್ದು.

LEAVE A REPLY

Please enter your comment!
Please enter your name here

spot_img

More like this

Raj B Shetty : ಮೊಟ್ಟೆ ಒಡೆದು ಮರಿ ; ರಾಜ್‌ರದ್ದು...

ಮೊಟ್ಟೆ ಬೆಳೆದು ಒಡೆದು ಹೊರಬಂದರೆ ಮರಿ. ಇದೂ ರೂಪಾಂತರವೇ. ಈಗ ಇಂಥದೊಂದು ಮೊಟ್ಟೆ ಕಥೆ ಹೇಳಿದ ರಾಜ್‌ ಬಿ ಶೆಟ್ಟಿಯವರು ರೂಪಾಂತರಗೊಳ್ಳುತ್ತಿದ್ದಾರೆ. ತಮ್ಮ...

Movie Jigar: ಮತ್ತೊಂದು ಹೊಸ ಚಿತ್ರ ಜಿಗರ್‌ ಜುಲೈ 5 ಕ್ಕೆ...

ಮತ್ತೊಂದು ಹೊಸ ಚಿತ್ರ ಜುಲೈ 5 ರಂದು ಬಿಡುಗಡೆಯಾಗುತ್ತಿದೆ. ಅದರ ಹೆಸರು ಜಿಗರ್.‌ ಪ್ರವೀಣ್‌ ತೇಜ್‌ ಇದರ  ನಾಯಕ ನಟ. ನಾಯಕಿ ವಿಜಯಶ್ರೀ....

New Movie : ನಾ ನಿನ್ನ ಬಿಡಲಾರೆ 2.0 ಗೆ ಹೇಮಂತ್‌...

ನಾ ನಿನ್ನ ಬಿಡಲಾರೆ ಸಿನಿಮಾ ಗೊತ್ತಿರಲೇಬೇಕು. ಹೊಸ ತಲೆಮಾರಿನವರೂ ಹಳೆ ತಲೆಮಾರಿನವರಿಂದ ಕೇಳಿ ತಿಳಿದುಕೊಂಡು ಈ ಸಿನಿಮಾ ನೋಡಿರುತ್ತಾರೆ. ಹೊಸ ತಲೆಮಾರಿನವರೆಂದರೆ ಈ...