ನಾಳೆ ಸೆ. 5. ಇಬ್ಬನಿ ತಬ್ಬಿದ ಇಳೆಯಲಿ ಪ್ರೀಮಿಯರ್ ಪ್ರದರ್ಶನದ ದಿನ. ಸೆ. 6- ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ದಿನ. ನಟ ರಕ್ಷಿತ್ ಶೆಟ್ಟಿಯವರ ಪರಂವಃ ಸ್ಟುಡಿಯೋಸ್ ನಡಿ ನಿರ್ಮಾಣವಾಗಿರುವ ಚಿತ್ರ. ರಕ್ಷಿತ್ ಶೆಟ್ಟಿ ಹಾಗೂ ಜಿಎಸ್ ಗುಪ್ತಾ ಇದರ ನಿರ್ಮಾಪಕರು.
ಅಲ್ಲಿ ಇಲ್ಲಿ ನೋಡಬೇಡಿ, ಚಿತ್ರಮಂದಿರಕ್ಕೆ ಬನ್ನಿ ಎಂಬುದು ಚಿತ್ರತಂಡದ ಮನವಿ. ಈ ಮಾತನ್ನೇ ಪ್ರತಿಧ್ವನಿಸುವಂತೆ ಚಿತ್ರದ ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪನವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ʼಸೇ ನೋ ಟು ಪೈರೆಸಿʼ ಎಂದು ಚಿತ್ರದ ಪೋಸ್ಟರ್ ಹಾಕಿ ಮನವಿ ಮಾಡಿದ್ದಾರೆ. ನಿಜಕ್ಕೂ ಇದೊಂದು ಪ್ರಾಮಾಣಿಕ ಮನವಿ.
ಇದೂ ಇಷ್ಟವಾಗಬಹುದು, ಓದಿ : Laughing Buddha: ಲಾಫಿಂಗ್ ಬುದ್ಧನಿಗೆ ಮತ್ತೊಂದು ವೀಕೆಂಡ್ !
ಪ್ರೇಕ್ಷಕರೂ ಇದಕ್ಕೆ ಓಗೊಡಲೇಬೇಕು. ನಕಲಿಗಳ ಹಾವಳಿ ಇಡೀ ಚಿತ್ರರಂಗವನ್ನು ಕಿತ್ತು ತಿನ್ನುತ್ತಿದೆ. ಅತೀವ ಹಿಂಸೆ ಇರುವ ಚಿತ್ರಗಳಿಗೆ ಎಲ್ಲೋ ಮಾರುಕಟ್ಟೆ ಕುದುರುತ್ತದೆ. ಆದರೆ ಒಳ್ಳೆಯ ಚಿತ್ರಗಳಿಗೆ ಪ್ರೇಕ್ಷಕರೇ ನಿಜವಾದ ಆಸರೆ. ಹಾಗಾಗಿಯೇ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಬೇಕು, ನಕಲಿಗಳನ್ನು ತಿರಸ್ಕರಿಸಬೇಕು ಎಂಬುದು ಚಿತ್ರತಂಡದ ಮನವಿ.
ಇದೂ ಇಷ್ಟವಾಗಬಹುದು, ಓದಿ : New Movie:ದೀಪಾವಳಿ ಮಾಸದಲ್ಲಿ ಭೈರತಿ ರಣಗಲ್ ಬಿಡುಗಡೆ : ನ. 15 ರಂದು ಪಟಾಕಿ ಶಬ್ದ ಮಾಡುತ್ತಾ?
ಒಂದು ಒಳ್ಳೆಯ ಚಿತ್ರ ಬಂದಿದೆ ಅಥವಾ ಬರುತ್ತದೆ ಎಂದರೆ ಪ್ರೇಕ್ಷಕರು ಖಂಡಿತಾ ಚಿತ್ರಮಂದಿರಕ್ಕೆ ಹೋಗಿ ನೋಡಿ ಬೆಂಬಲಿಸಿದರೆ ಚಿತ್ರತಂಡಕ್ಕೆ ಸಿಗುವ ನೈತಿಕ ಬೆಂಬಲವೇ ಬೇರೆ. ಜನರಿಗೆ ಇಷ್ಟವಾಗುವ ಸಿನಿಮಾ ಮಾಡಿದ್ದಕ್ಕೆ ಖುಷಿಯೂ ಸಿಗುತ್ತದೆ. ಒಂದುವೇಳೆ ನಿಮಗೆ ಈ ಚಿತ್ರ ಹೇಗೆ ಎಂಬ ಸಂಶಯ ಅಥವಾ ಒಳ್ಳೆಯದಿದೆ ಎನ್ನುವ ಗ್ಯಾರಂಟಿ (ಈಗ ಏನಿದ್ದರೂ ಗ್ಯಾರಂಟಿಗಳ ಕಾಲವಲ್ಲವೇ? ಗ್ಯಾರಂಟಿ ಅಥವಾ ವಾರಂಟಿ ಎರಡೇ) ಸಿಗಬೇಕು ಎಂದು ನಿರೀಕ್ಷಿಸಬೇಡಿ. ಅದು ಕಷ್ಟ.
ಇನ್ನು ಬಾಯಿಗೆ ಬಾಯಿಗೆ ಒಳ್ಳೆಯ ಅಭಿಪ್ರಾಯ ಹರಡಿ ನಾವು ಸಿನಿಮಾ ವೀಕ್ಷಣೆಗೆ ನಿರ್ಧರಿಸುವ ಹೊತ್ತಿಗೆ ಅಥವಾ ವೀಕೆಂಡ್ ಗೆ ಕಾಯುವ ಹೊತ್ತಿಗೆ ಕೆಲವೊಮ್ಮೆ ಸಿನಿಮಾಗಳು ಕಾಣೆಯಾಗಿರುತ್ತದೆ. ಅದೂ ಒಂದು ಸಮಸ್ಯೆಯೇ. ಅದಕ್ಕೆ ಮೊದಲ ವೀಕೆಂಡ್ ಹೊಸ ಸಿನಿಮಾ ವೀಕ್ಷಣೆಗೆ ಕಾದಿರುಸುವುದು ಉತ್ತಮ. ಅದರಂತೆಯೇ ಗಣೇಶನ ಹಬ್ಬದ ಹಿನ್ನೆಲೆಯಲ್ಲಿ ಬರುತ್ತಿರುವ ಸಿನಿಮಾ ಇದು.
ಆರಂಭದ ವೀಕೆಂಡ್ ಭರ್ಜರಿಯಾಗಿರಬಹುದೆಂಬ ನಿರೀಕ್ಷೆಯಿದೆ. ಯಾಕೆಂದರೆ ಚಲನಚಿತ್ರ ಶುಕ್ರವಾರ ಬಿಡುಗಡೆಯಾಗುತ್ತಿದ್ದು, ಶನಿವಾರ, ಭಾನುವಾರಗಳಿವೆ. ಶನಿವಾರ ಗಣೇಶನ ಹಬ್ಬ. ಶುಕ್ರವಾರ ಜನ ಕಡಿಮೆ ಬರಬಹುದೆಂಬ ಒಂದು ಅಡ್ಡಪಟ್ಟಿ ಇಟ್ಟುಕೊಂಡರೂ ಭಾನುವಾರ ಆ ಕೊರತೆಯನ್ನು ಎಳೆದುಕೊಳ್ಳಬಹುದು ಎಂಬ ಲೆಕ್ಕಾಚಾರವಿದೆ.
ಇದೂ ಇಷ್ಟವಾಗಬಹುದು, ಓದಿ : Rishab Shetty:ರಿಷಭ್ ಶೆಟ್ಟರ ಹೊಸ ಅಡುಗೆ ಮತ್ತು ನವ ವೇಷ
ಇದು ಸಾಧ್ಯವಾಗಬೇಕಾದರೆ ಚಿತ್ರದ ಕುರಿತು ಶುಕ್ರವಾರ, ಶನಿವಾರ ಒಂದಿಷ್ಟು ಸಕಾರಾತ್ಮಕ ಪ್ರತಿಕ್ರಿಯೆಗಳು ಬರಬೇಕು. ಆಗ ರವಿವಾರ ಎಲ್ಲ ಚಿತ್ರಮಂದಿರಗಳೂ ಭರ್ತಿಯಾಗಬಹುದು. ಇನ್ನು ರಕ್ಷಿತ್ ಶೆಟ್ಟಿಯವರ ಬಗ್ಗೆ ಪ್ರೇಕ್ಷಕರಿಗೆ ಅದರಲ್ಲೂ ಯುವಜನರಿಗೆ ಒಂದು ಬಗೆಯ ಪ್ರೀತಿಯಿದೆ. ಸ್ವಲ್ಪವಾದರೂ ಸೆಳೆಯುವ ಕಥಾವಸ್ತು ಇರುತ್ತದೆಂಬ ಭಾವನೆಯೂ ಇದೆ.
ಒಮ್ಮೆ ನೋಡಲಡ್ಡಿಯಿಲ್ಲ, ದುಡ್ಡು ನಷ್ಟವಲ್ಲ ಎಂಬ ಭಾವನೆಯೂ ಬಹಳಷ್ಟು ಜನರಲ್ಲಿದೆ. ಅದು ರಕ್ಷಿತ್ ರ ನಟನೆಯ ಚಿತ್ರದ ಕುರಿತಾದದ್ದು. ಚಾರ್ಲಿ ಸಿನಿಮಾ ಗೆಲ್ಲಿಸಿದ್ದೇ ಅದು. ಈ ಭಾವನೆ ಮತ್ತು ನಾಯಿ. ಕಥಾವಸ್ತು ಅವೆರಡನ್ನೂ ಸಮಪ್ರಮಾಣದಲ್ಲಿ ಹದವಾಗಿ ಬೆಸೆದಿತ್ತು ಎಂಬುದು ಉಲ್ಲೇಖನೀಯ. ಇದು ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರ. ಹೇಗಿರುತ್ತೋ ಎಂಬ ಸಣ್ಣದೊಂದು ಅಳುಕು ಇರಲೂಬಹುದು. ಆದರೆ ಅಭಿರುಚಿಯಲ್ಲಿ ಬಹಳಷ್ಟು ವ್ಯತ್ಯಾಸವಾಗಬಹುದು ಎಂಬ ವಿಶ್ವಾಸವೂ ಇದೆ. ಇವೆಲ್ಲವೂ ಗಳಿಕೆಯಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೋ ಕಾದು ನೋಡಬೇಕಿದೆ.
ಉಳಿದಂತೆ ಟ್ರೇಲರ್, ಪೋಸ್ಟರ್ ಇತ್ಯಾದಿಗಳನ್ನು ಕಂಡರೆ ನವಿರಾದ ಚಿತ್ರ ಎಂಬಂತಿದೆ. ರಕ್ಷಿತ್ ಶೆಟ್ಟಿ ಇತ್ತೀಚೆಗೆ ಒಲವು ತೋರಿಸುತ್ತಿರುವುದೂ ಇಂಥದ್ದೇ ತಂಗಾಳಿ ಬೀಸುವ ಚಿತ್ರಗಳ ಮಾದರಿಯನ್ನೇ. ವಿಹಾನ್ ಗೌಡ ಹಾಗೂ ಅಂಕಿತಾ, ಮಯೂರಿ ನಟರಾಜ್, ಗಿರಿಜಾ ಶೆಟ್ಟರ್ ಮತ್ತಿತರ ತಾರಾಗಣವಿದೆ. ಗಗನ್ ಬಡೇರಿಯಾರದ್ದು ಸಂಗೀತ. ಶ್ರೀವತ್ಸನ್ ಸೆಲ್ವರಾಜನ್ ಋ ಛಾಯಾಗ್ರಾಹಣ. ರಕ್ಷಿತ್ ಕಾಪು ಅವರ ಸಂಕಲನ. ಒಟ್ಟೂ ತಂಡ ಸ್ಫೂರ್ತಿಯ ಕೆಲಸ ಹೇಗೆ ಬಂದಿದೆ ಎಂಬುದನ್ನು ಸಿನಿಮಾ ನೋಡಿಯೇ ಹೇಳಬೇಕು.
ಇದೂ ಇಷ್ಟವಾಗಬಹುದು, ಓದಿ : ಮಲಯಾಳಂ ಚಿತ್ರರಂಗ: ಏನು ದಾಹ ಯಾವ ಮೋಹ ತಿಳಿಯದಾಗಿದೆ, ಉಳಿದವುಗಳ ಕಥೆ ಇನ್ನೂ ತಿಳಿಯಬೇಕಿದೆ !
ಚಿತ್ರ ನಿರ್ಮಾಣಕಾರರದ್ದು ಹಾಗೂ ಚಿತ್ರತಂಡದ ಅಭಿಪ್ರಾಯದಂತೆ ಗೆಲ್ಲುವ ಕುದುರೆ. ಆಗಲಿ, ಕುದುರೆ ಗೆಲ್ಲಲಿ. ಪ್ರೇಕ್ಷಕರು ಕುದುರೆಯನ್ನು ಗೆಲ್ಲಿಸಲಿ. ಒಳ್ಳೆಯ ಚಲನಚಿತ್ರಗಳ ಚಳವಳಿ ಆರಂಭವಾಗಲಿ, ಒಳ್ಳೆಯ ಚಿತ್ರಗಳನ್ನು ಬೆಂಬಲಿಸುವ ಚಳವಳಿಯೂ ಪ್ರಾರಂಭವಾಗಲಿ.