ಇದು ಎಂಥಾ ಲೋಕವಯ್ಯ ಅತ್ಯಂತ ಜನಪ್ರಿಯವಾದ ಹಾಡು. ನಾರದ ವಿಜಯ ಸಿನಿಮಾದಲ್ಲಿ ಅನಂತನಾಗ್ ಹಾಡಿ ಕೊಂಡು ಬರುವ ಹಾಡು.
ಅದೇ ಹೆಸರಿನ ಸಿನಿಮಾ ಬಂದು ಬಿಟ್ಟರೆ ಇನ್ನು ಹೇಗೆ ಇರಬಹುದು? ಹೇಗೆ ಇರಬಹುದು ಎಂಬುದನ್ನು ಸಿನಿಮಾ ಬಂದ ಮೇಲೆ ನೋಡಬೇಕು ಮತ್ತು ಹೇಳಬೇಕು, ಅಷ್ಟೇ.
Any Day Now: ನಮ್ಮಲ್ಲಿ ಉಳಿಯುವುದು ಅವರ ನಗೆ-ಬದುಕಿನ ಬಗೆ
ಆದರೆ ಇಂಥದೊಂದು ಹೆಸರಿನಲ್ಲಿ ನಿರ್ಮಾಣವಾಗಿರುವ ಸಿನಿಮಾ ಆಗಸ್ಟ್ 9 ರಂದು ಸಿನಿಮಾ ಮಂದಿರಗಳಲ್ಲಿ ಸಿನಿಮಾ ಪ್ರೇಕ್ಷಕರಿಗೆ ವೀಕ್ಷಣೆಗೆ ಲಭ್ಯವಾಗಲಿದೆ.
ಮಲಯಾಳಂ ಭಾಷೆಯ ಚಿತ್ರ ನಿರ್ದೇಶಕ ಜಿಯೋ ಬೇಬಿ ಅರ್ಪಿಸುತ್ತಿರುವ ಚಿತ್ರ. ಸಿತೇಶ್ ಸಿ ಗೋವಿಂದ್ ನಿರ್ದೇಶಿಸುತ್ತಿರುವ ಈ “ಇದು ಎಂಥಾ ಲೋಕವಯ್ಯ” ಚಿತ್ರ ನಿರ್ಮಾಣಗೊಳ್ಳುತ್ತಿರುವುದು ಕಡ್ಲೆಕಾಯಿ ಫಿಲ್ಮ್ಸ್ ಬ್ಯಾನರ್ ಅಡಿ.
ಈ ಕಡ್ಲೆಕಾಯಿಗೂ ಒಂದು ಜನಪ್ರಿಯವಾದ ಹಾಡಿದೆ, ಗೊತ್ತಲ್ಲ. ಡಾ. ರಾಜಕುಮಾರ್ ಮತ್ತು ಕಲ್ಪನಾ ಅಭಿನಯದ ಚಿತ್ರ ಕರುಳಿನ ಕರೆಯ ಜನಪ್ರಿಯವಾದ ಹಾಡು ಕಳ್ಳೇಕಾಯ್..ತಾಜಾ ತಾಜಾ ಕಳ್ಳೇಕಾಯಿ..ಬಡವರ ಬಾದಾಮಿ ಕಳ್ಳೇಕಾಯ್. ಅದೇ ಹೆಸರಿನ ಬ್ಯಾನರ್ ಅಡಿ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ಇದರ ನಿರ್ಮಾಪಕರು.
ಚಿತ್ರತಂಡ ಹೇಳುವಂತೆ ಈ ಚಿತ್ರ ಪ್ರಾದೇಶಿಕ ಪ್ರತಿಭೆಗಳ ಸಂಗಮ. ಈ ಚಿತ್ರವು ಹೊಸತನದ ಮತ್ತು ವಿಶಿಷ್ಟ ಅನುಭವದ ಸಿನಿಮಾವಂತೆ.
ಜಿಯೋಬೇಬಿ ಅವರ ಬಗ್ಗೆ ಹೇಳಬೇಕಾದ ಎರಡು ಮಾತಿದೆ. “ದಿ ಗ್ರೇಟ್ ಇಂಡಿಯನ್ ಕಿಚನ್”, “ಕಾದಲ್-ದಿ ಕೋರ್” ನಂತಹ ವಿಶಿಷ್ಟವಾದ ಚಿತ್ರಗಳನ್ನು ನಿರ್ದೇಶಿಸಿದವರು. ಆ ಮೂಲಕ ಒಂದು ಹೊಸ ಕಥೆಯನ್ನು ಅತ್ಯಂತ ಪ್ರಭಾವಶಾಲಿಯಾಗಿ ಹೇಳಬಲ್ಲೆ ಎಂದು ಸಾಬೀತು ಪಡಿಸಿದವರು. ಅವರು ಈ ಚಿತ್ರವನ್ನು ಅರ್ಪಿಸಿದ್ದಾರೆ.
ಸಂಜು ವೆಡ್ಸ್ ಗೀತಾ ೨ ರಲ್ಲಿ ರಾಗಿಣಿ ಜತೆ ರಚಿತಾ ರಾಮ್
ಕರ್ನಾಟಕ ಮತ್ತು ಕೇರಳ ಗಡಿಯಲ್ಲಿನ ಹಳ್ಳಿಗಳಲ್ಲಿ ನಡೆಯುವ ಕತೆಯಂತೆ. ಸಾಮಾಜಿಕ ವಿಡಂಬನೆಯ ಗುಣ ಇದರಲ್ಲಿದೆಯಂತೆ. ಎರಡು ದಿನಗಳಲ್ಲಿ ನಡೆಯುವ ಘಟನೆಗಳೊಂದಿಗೆ ತೆರೆದುಕೊಳ್ಳುವ ಚಿತ್ರ, ಅದರ ಪರಿಣಾಮವನ್ನು ಪಾತ್ರಗಳ ಬದುಕಿನಲ್ಲಿಘಟಿಸುವ ಘಟನೆಗಳೊಂದಿಗೆ ಮೇಳೈಸಿ ಕಥೆಯನ್ನುಹೇಳಲು ಪ್ರಯತ್ನಿಸಿದ್ದಾರಂತೆ.
ಇನ್ನೊಂದು ವಿಶಿಷ್ಟವಾದ ಸಂಗತಿಯೆಂದರೆ ಇದು ದಕ್ಷಿಣ ಕನ್ನಡ ಹಾಗೂ ಕೇರಳದ ಗಡಿ ಪ್ರದೇಶದಲ್ಲಿ ನಡೆಯುವ ಕಥೆಯಾದ್ದರಿಂದ ಬಹು ಭಾಷಾ ಸಂಗಮ. ದಕ್ಷಿಣ ಕನ್ನಡವೆಂದರೆ ಬಹುಭಾಷೆಗಳ ಸಂಗಮ ಕ್ಷೇತ್ರ. ಕನ್ನಡ, ತುಳು, ಕೊಂಕಣಿ, ಬ್ಯಾರಿ ಭಾಷೆಗಳೊಟ್ಟಿಗೆ ಪಕ್ಕದ ರಾಜ್ಯದ ಮಲಯಾಳಂ ಸಹ ಸೇರಿಕೊಳ್ಳುತ್ತದೆ. ಈ ಚಿತ್ರದಲ್ಲೂ ಈ ಎಲ್ಲ ಭಾಷೆಗಳ ಝಲಕ್ ಕಾಣ ಸಿಗಬಹುದು. ಅದರೊಂದಿಗೆ ಗಡಿ ಪ್ರದೇಶದ ವೈವಿಧ್ಯಮಯ ಸಾಂಸ್ಕೃತಿಕ ಚಿತ್ರಣವನ್ನೂ ಸಿನಿಮಾ ಪ್ರತಿಬಿಂಬಿಸಲಿದೆಯಂತೆ.
ಕೆಲವು ಕುಟುಂಬಗಳ ಮಧ್ಯದಲ್ಲಿನಡೆಯುವ ಒಂದು ಘಟನೆ, ಸ್ಥಳೀಯ ಮೂಢನಂಬಿಕೆಗಳಿಂದ ಪ್ರಭಾವಿತವಾದ ಘಟನೆಗಳ ಸರಣಿಯನ್ನು ಹೇಳುತ್ತದೆ. ಎಲ್ಲದಕ್ಕೂ ತಿಳಿಯಾದ ಹಾಸ್ಯದ ಲೇಪನವಿದೆಯಂತೆ.
ಕೃಷ್ಣಂ ಪ್ರಣಯ ಸಖಿ ಗಣೇಶರ ಮೇಲೆ ಆನಂದದ ಮಳೆ ಸುರಿಸುತ್ತದೆಯೇ?
ಜಿಯೋ ಬೇಬಿಯವರ ಸಹಯೋಗ ಈ ಚಿತ್ರಕ್ಕೆ ಹೊಸ ಶಕ್ತಿಯನ್ನು ತುಂಬುತ್ತದೆಯೋ ಕಾದು ನೋಡಬೇಕಿದೆ.