ಹಗ್ಗ ಸಿನಿಮಾ ಪ್ರೇಕ್ಷಕರನ್ನು ತನ್ನ ಭಯಾನಕ ರಸದಿಂದ ರಂಜಿಸಲು ಸಿದ್ಧವಾಗುತ್ತಿದೆಯಂತೆ.
ಈ ಚಿತ್ರವನ್ನು ಬರೆದು ನಿರ್ಮಿಸುತ್ತಿರುವವರು ರಾಜ್ ಭಾರದ್ವಾಜ್. ವಸಂತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿಸಿದ್ಧವಾಗುತ್ತಿರುವ ಚಿತ್ರವನ್ನು ನಿರ್ದೇಶಿಸುತ್ತಿರುವವರು ಅವಿನಾಶ್ ಎನ್.
ಚಿತ್ರರಂಗಕ್ಕೆ ಅವಿನಾಶ್ ಹೊಸ ಪ್ರತಿಭೆ. ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಅವಿನಾಶ್ ರದ್ದು ಚಿತ್ರ ನಿರ್ದೇಶಕನಾಗುವ ಹಂಬಲ. ಅದೀಗ ಈ ಚಿತ್ರದ ಮುಖೇನ ಈಡೇರುತ್ತಿದೆ.
ಅನು ಪ್ರಭಾಕರ್, ಹರ್ಷಿಕಾ ಪೂಣಚ್ಛ, ವೇಣು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೇ ಇದರ ಟೀಸರ್ ಬಿಡುಗಡೆಯಾಯಿತು. ಚಿತ್ರ ನಿರ್ದೇಶಕ ಆರ್ ಚಂದ್ರು ಟೀಸರ್ ಅನಾವರಣಗೊಳಿಸಿದರು. ಈ ಚಿತ್ರದಲ್ಲಿ ನಾಯಕ ನಟನೇ ಹಗ್ಗವಂತೆ ! ಭಯಾನಕ ರಸದ ಚಿತ್ರವಾದರೂ ಅದರಲ್ಲೊಂದು ಪ್ರಮುಖ ಸಂದೇಶವಿದೆಯಂತೆ.
ಆಗಸ್ಟ್ ನಲ್ಲೇ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆಯಂತೆ. ಮೋಷನ್ ಪೋಸ್ಟರ್ ಬಳಿಕ ಟೀಸರ್ ಬಿಡುಗಡೆಯಾಗಿದೆ. ಇನ್ನೇನಿದ್ದರೂ ಚಿತ್ರ ಬಿಡುಗಡೆಯಷ್ಟೇ.
New Release : ಇದು ಎಂಥಾ ಲೋಕವಯ್ಯ; ಆಗಸ್ಸ್ 9 ಕ್ಕೆ ತಿಳಿಯಲಿದೆ !
ಕಥೆ ಇಷ್ಟವಾಯಿತು. ಒಳ್ಳೆ ಪಾತ್ರ ಎನಿಸಿತು. ಒಪ್ಪಿಕೊಂಡೆ. ಪಾತ್ರದ ಬಗ್ಗೆ ಕೇಳುವುದಕ್ಕಿಂತ ನೋಡಿ. ಸೂಪರ್ ಹೀರೋ ರೀತಿ ಇದ್ದೇನೆ ಎಂದು ಟೀಸರ್ ಬಿಡುಗಡೆ ಹೊತ್ತಿನಲ್ಲಿ ಹೇಳಿದವರು ಅನು ಪ್ರಭಾಕರ್.
ಹರ್ಷಿಕಾ ಪೂಣಚ್ಚರದ್ದು ಪತ್ರಕರ್ತೆಯ ಪಾತ್ರವಂತೆ. ಯಾವುದೋ ಒಂದು ವಿಷಯದ ಶೋಧನೆಯಲ್ಲಿ ಹಳ್ಳಿಗೆ ಹೋಗುವ ಹರ್ಷಿಕಾಳಿಗೆ ಕುತೂಹಲ ಕಾದಿರುತ್ತದಂತೆ.
ತಬಲನಾಣಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯ ಹೆಗ್ಡೆ, ಮೈಕೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ ಮುಂತಾದವರು ತಾರಾಗಣದಲ್ಲಿದ್ದಾರೆ.
ಕೃಷ್ಣಂ ಪ್ರಣಯ ಸಖಿ ಗಣೇಶರ ಮೇಲೆ ಆನಂದದ ಮಳೆ ಸುರಿಸುತ್ತದೆಯೇ?
ರಾಜ್ ಭಾರದ್ವಾಜ್ ಅವರದ್ದೇ ಕಥೆ. ಚಿತ್ರಕಥೆಗೆ ಕೈ ಜೋಡಿಸಿರುವ ಅವರಿಗೆ ಅವಿನಾಶ್, ಮನೋಹರ್ ಸಾಥ್ ನೀಡಿದ್ದಾರೆ. ಮನೋಹರ್ ರದ್ದೇ ಸಂಭಾಷಣೆ ಕೂಡ. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ ಹಾಗೂ ಎನ್ ಎಂ ವಿಶ್ವ ಅವರ ಸಂಕಲನವಿದೆಯಂತೆ.
ನೋಡಬೇಕು, ಹಗ್ಗ ಯಾರು ಯಾರನ್ನು ಉಳಿಸುತ್ತದೋ? ಅಂದ ಹಾಗೆ ಒಂದುವೇಳೆ ಅನು ಪ್ರಭಾಕರ್ ದೆವ್ವವಾದರೆ, ದೆವ್ವಿಣಿ ಯಾರು ಎನ್ನುವುದೇ ಕುತೂಹಲ. ಅನು ಭಯಾನಕಿಯಾದರೆ !