ನ್ಯೂಯಾರ್ಕ್ ಭಾರತೀಯ ಸಿನಿಮೋತ್ಸವ (NYIFF) ಮತ್ತೆ ಬಂದಿದೆ. ಮೇ 31 ರಿಂದ ಜೂನ್ 2 ರವರೆಗೆ ನಡೆಯುವ ಚಿತ್ರೋತ್ಸವದಲ್ಲಿ ಹಲವು ಭಾರತೀಯ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದು 24 ನೇ ಆವೃತ್ತಿ. ಈ ಆವೃತ್ತಿಯ ವಿಶೇಷವೆಂದರೆ ನಟಿ ಶಬಾನಾ ಅಜ್ಮಿಯವರ ಚಿತ್ರ ಬದುಕಿನ 50 ವರ್ಷದ ಸಂಭ್ರಮವನ್ನು ಉತ್ಸವದಲ್ಲಿ ಆಚರಿಸಲಾಗುತ್ತಿದೆ. ಅವರ ಅಭಿನಯದ ದೀಪಾ ಮೆಹ್ತಾ ನಿರ್ದೇಶನದ ಫೈರ್ ಚಿತ್ರವು ಪ್ರದರ್ಶನಗೊಳ್ಳಲಿದೆ. ಚಿತ್ರೋತ್ಸವದಲ್ಲಿ 49 ಕ್ಕೂ ಹೆಚ್ಚು ಕಥಾ ಸಿನಿಮಾಗಳು, ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳು, ಅನಿಮೇಷನ್ ಚಿತ್ರಗಳ ಪ್ರದರ್ಶನವಿರಲಿದೆ.
ವಿಶೇಷವೆಂದರೆ ಈ ಬಾರಿಯ ಉತ್ಸವದಲ್ಲಿ ಕನ್ನಡದ ಮಿಥ್ಯವೂ ಪ್ರದರ್ಶನಗೊಳ್ಳುತ್ತಿದೆ. ಸುಮಂತ್ ಭಟ್ ಬರೆದು ನಿರ್ದೇಶಿಸಿರುವ ಚಿತ್ರವನ್ನು ನಟ ರಕ್ಷಿತ್ ಶೆಟ್ಟಿಯವರ ಪರಂ ವಃ ಸ್ಟುಡಿಯೋಸ್ ನಿರ್ಮಿಸಿದೆ. ಇದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿತ್ತು. ಇದಲ್ಲದೇ ಅಸ್ಸಾಮಿ, ತಮಿಳು, ಮರಾಠಿ, ಗುಜರಾತಿ, ಬಂಗಾಳಿ, ಕಾಶ್ಮೀರಿ, ಹಿಂದಿ, ಒರಿಯಾ, ಪಂಜಾಬಿ ಭಾಷೆಯ ಚಲನಚಿತ್ರಗಳೂ ಪ್ರದರ್ಶಿತವಾಗುತ್ತಿವೆ. ಒಟ್ಟಿನಲ್ಲಿ ಭಾರತೀಯ ಭಾಷೆಗಳ ಸಿನಿಮಾಗಳ ದೊಡ್ಡ ವೇದಿಕೆ.
MIFF 2024: ಮುಂಬಯಿ ಸಿನಿಮೋತ್ಸವಕ್ಕೆ ಪ್ರತಿನಿಧಿಗಳ ನೋಂದಣಿ ಆರಂಭ
ಉತ್ತರ ಅಮೆರಿಕಾ ವ್ಯಾಪ್ತಿಯ ಅತ್ಯಂತ ಬೃಹತ್ ಮತ್ತು ಪ್ರತಿಷ್ಠಿತ ಚಿತ್ರೋತ್ಸವವಾಗಿದೆ. ಖ್ಯಾತ ನಟ ನಾಸಿರುದ್ದೀನ್ ಷಾ ಅವರ ಕಿಡಕಿ ಚಿತ್ರವೂ ಇಲ್ಲಿ ಪ್ರದರ್ಶನವಾಗಲಿದೆ. ಅಮಿತಾಭ್ ಬಚ್ಚನ್ ಅವರ ಸಿನಿಮಾದ ಪ್ರದರ್ಶನವಿದೆ. ಅಜ್ಮಿಯವರ ಚಿತ್ರ ಬದುಕು ಆರಂಭವಾದುದೇ ಶ್ಯಾಮ್ ಬೆನಗಲ್ ಅವರ ಅಂಕುರ್ ಸಿನಿಮಾದಿಂದ. ಇಡೀ ಚಿತ್ರ ಬದುಕಿನಲ್ಲಿ ಹಲವು ರಾಷ್ಟ್ರೀಯ ಪುರಸ್ಕಾರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಅಜ್ಮಿ, ಪದ್ಮಶ್ರೀ, ಪದ್ಮ ಭೂಷಣ್ ಪುರಸ್ಕಾರಗಳನ್ನೂ ಪಡೆದಿರುವ ಖ್ಯಾತ ನಟಿ.
Cannes Palme d’or movies : ಪಾಮ್ ದೋರ್ ಪ್ರಶಸ್ತಿ ಪಡೆದ ಈ ಐದು ಚಿತ್ರಗಳನ್ನು ತಪ್ಪದೇ ವೀಕ್ಷಿಸಿ
ಇಂಡೋ ಅಮೆರಿಕನ್ ಆರ್ಟ್ಸ್ ಕೌನ್ಸಿಲ್ ಸಂಘಟಿಸುವ ಈ ಚಿತ್ರೋತ್ಸವದ ಈ ಬಾರಿಯ ಆರಂಭಿಕ ಚಿತ್ರ ಡಿಯರ್ ಜಸ್ಸಿ. ಇಂಡೋ ಅಮೆರಿಕನ್ ನಿರ್ದೇಶಕರಾದ ತರ್ಸೀಮ್ ಸಿಂಗ್ ನಿರ್ದೇಶಿಸಿದ್ದಾರೆ. ಸಮಾರೋಪ ಚಿತ್ರವಾಗಿ ಆರತಿ ಕದವ್ ನಿರ್ದೇಶನದ ಮಿಸ್ಟರ್ಸ್ ಸಿನಿಮಾ ಪ್ರದರ್ಶನಗೊಳ್ಳಲಿದೆ.
ಅಮಿತಾಭ್ ಬಚ್ಚನ್, ಅದಿಲ್ ಹುಸೇನ್ ಮತ್ತಿತರ ನಟರ ಅಭಿನಯದ ದಿ ಉಮೇಶ್ ಕ್ರಾನಿಕಲ್ಸ್ ಚಿತ್ರವೂ ಇಲ್ಲಿ ಪ್ರದರ್ಶಿತವಾಗುತ್ತಿದೆ. ಇದರೊಂದಿಗೆ ನಾಸಿರುದ್ದೀನ್ ಷಾ ಅಭಿನಯದ ಕಿಡಕಿ, ಸಾಕ್ಷ್ಯಚಿತ್ರಗಳಾದ ಮರ್ಚೆಂಟ್ ಐವೊರಿ, ಸಿನಿಮಾಗಳಾದ ಯೆಲ್ಲೋ ಬಸ್, ಗೊಥೊ, ಇಂಪಾಸ್ಸೆ, ಯೆಲ್ಲೋ ಕಲರ್, ಲುಲ್ಲಬಿ, ಆಕ್ಯುಪೈಡ್, ಪ್ಯಾರಡೈಸ್, ಸ್ಕ್ಯಾವೆಂಜರ್ ಆಫ್ ಡ್ರೀಮ್ಸ್, ಸ್ಥಳ್, ಥ್ರೀ ಸನ್ಸ್ ಆಫ್ ನಾರಾಯಣಿ ಮತ್ತಿತರ ಚಲನಚಿತ್ರಗಳು ವಿಜೃಂಭಿಸಲಿವೆ.
Cannes 2024 : ಪಾಯಲ್ ಕಪಾಡಿಯರ ಚಲನಚಿತ್ರಕ್ಕೆ ಗ್ರ್ಯಾಂಡ್ ಪ್ರಿಕ್ಸ್ ಪುರಸ್ಕಾರ
ಐಎಎಸಿ ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, ಭಾರತೀಯ ನೆಲೆಯ ಸಮಕಾಲೀನ ಸಿನಿಮಾಗಳನ್ನು, ಸಾಕ್ಷ್ಯಚಿತ್ರಗಳನ್ನು, ಕಿರುಚಿತ್ರಗಳನ್ನು ತೋರಿಸುವುದು ನಮ್ಮ ಪ್ರಯತ್ನ. ಕಾನ್ಸ್, ಟೊರೊಂಟೊ ಸಿನಿಮೋತ್ಸವದಲ್ಲೂ ಪ್ರದರ್ಶಿತವಾಗುವಂಥ ಚಿತ್ರಗಳನ್ನೂ ಇಲ್ಲಿ ವೀಕ್ಷಿಸಲು ಅವಕಾಶವಿದೆʼ ಎಂದಿದೆ.
ಸಂಕಥನದ ಮೊದಲು – ಗಿರೀಶ ಕಾಸರವಳ್ಳಿಯವರ ಬಿಂಬ ಬಿಂಬನ
ಐಎಎಸಿ ಯ ಅಧ್ಯಕ್ಷರಾಗಿ ಡಾ. ನಿರ್ಮಲ್ ಮಟ್ಟೂ ಕಾರ್ಯ ನಿರ್ವಹಿಸುತ್ತಿದ್ದರೆ, ಉತ್ಸವದ ನಿರ್ದೇಶಕರಾಗಿ ಅಸೀಮ್ ಛಾಬ್ರಾ ಅವರು ಕಾರ್ಯ ನಿರ್ವಹಿಸಿದ್ದಾರೆ. ಛಾಬ್ರಾರ ಪ್ರಕಾರ ಭಾರತದ ವೈವಿಧ್ಯತೆ ಹಾಗೂ ಸಾಂಸ್ಕೃತಿಕ ಬದ್ಧತೆಗೆ ಮೌಲ್ಯವನ್ನು ಕಟ್ಟುವಂಥ ಉತ್ಸವವಿದು.
ಈ ಉತ್ಸವವು ಭಾರತದ ಸ್ವತಂತ್ರ ಸಿನಿಮಾ ಕ್ಷೇತ್ರದ ಅತ್ಯುನ್ನತ ಕೃತಿಗಳನ್ನು ಪ್ರಸ್ತುತ ಪಡಿಸುವ ವೇದಿಕೆಯಾಗಿ ಬೆಳೆದಿದೆ. ಚಿತ್ರಗಳ ಪ್ರದರ್ಶನದೊಂದಿಗೆ ಸಿನಿಮಾಗಳ ಕುರಿತ ಚರ್ಚೆ, ಸಿನಿಮೋದ್ಯಮದವರೊಂದಿಗೆ ಚರ್ಚೆ ಹಾಗೂ ಪ್ರಶಸ್ತಿ ಪುರಸ್ಕಾರಗಳ ಪ್ರದಾನವೂ ನಡೆಯಲಿದೆ.