Thursday, April 3, 2025
spot_img
More

    Latest Posts

    Oscar Race: ಈ ಬಾರಿ ಆಸ್ಕರ್‌ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಎರಡು ಚಿತ್ರ

    ಹಾಗೆ ನೋಡುವುದಾದರೆ ಅಥವಾ ಹೇಳುವುದಾದರೆ ಮುಂದಿನ ಆಸ್ಕರ್‌ ಪ್ರಶಸ್ತಿಯಲ್ಲಿ ಎರಡು ಭಾರತೀಯ ಸಿನಿಮಾಗಳು ಪ್ರಶಸ್ತಿಗೆ ಸೆಣಸಲಿವೆ.

    ಒಂದು ಭಾರತದ್ದು, ಮತ್ತೊಂದು ಭಾರತೀಯ ಮೂಲರದ್ದು. ಈ ಪೈಕಿ ಒಂದು ಕಿರಣ್‌ ರಾವ್‌ ನಿರ್ದೇಶನದ ಲಾಪತಾ ಲೇಡೀಸ್.‌ ಭಾರತದಿಂದ ಆಸ್ಕರ್‌ ನ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ. ಇನ್ನೊಂದು ಭಾರತೀಯ ಮೂಲದ ಸಂಧ್ಯಾ ಸೂರಿ ನಿರ್ದೇಶನದ ಸಂತೋಷ್‌ ಎಂಬ ಚಲನಚಿತ್ರ. ಇದನ್ನು ಯುನೈಟೆಡ್‌ ಕಿಂಗ್‌ಡಂ ತನ್ನ ದೇಶದ ಚಿತ್ರವಾಗಿ ಆಯ್ಕೆ ಮಾಡಿ ನಾಮ ನಿರ್ದೇಶನ ಮಾಡಿದೆ.

    ಕಾನ್‌ ಚಿತ್ರೋತ್ಸವದ ಸರ್ಟೇನ್‌ ರಿಗಾರ್ಡ್‌ ವಿಭಾಗದಲ್ಲಿ ಪ್ರದರ್ಶಿತವಾಗಿ ಒಳ್ಳೆಯ ಪ್ರತಿಕ್ರಿಯೆಯನ್ನು ಸಂತೋಷ್‌ ಚಲನಚಿತ್ರ ಪಡೆದಿತ್ತು. ಇದನ್ನು ಸಂಧ್ಯಾ ಸೂರಿ ನಿರ್ದೇಶಿಸಿದ್ದರು.

    IFFI55: ಇಫಿ ಚಿತ್ರೋತ್ಸವಕ್ಕೆ ಸಜ್ಜಾಗಿ; ಪ್ರತಿನಿಧಿಯಾಗಿ ನೋಂದಾಯಿಸಿ

    ಸಿನಿಮಾ ಒಬ್ಬಳು ಪೊಲೀಸ್‌ ಅಧಿಕಾರಿಯ ಕುರಿತಾದದ್ದು. ಪೊಲೀಸ್‌ ಇಲಾಖೆಯಲ್ಲಿದ್ದ ತನ್ನ ಪತಿ ಸತ್ತ ಕಾರಣಕ್ಕೆ ಪೊಲೀಸ್‌ ಉದ್ಯೋಗ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಕರಣವೊಂದರ ಯುವತಿಯೊಬ್ಬಳ ಕೊಲೆಯ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಾಳೆ. ಅನಂತರ ಎದುರಾಗುವ ಸನ್ನಿವೇಶಗಳನ್ನು ಕುರಿತಾಗಿದೆ ಚಿತ್ರ. ಈ ಎಳೆಯೇ ಚಿತ್ರದ ಮೂಲ. ಇದೊಂದು ಕ್ರೈಮ್‌ ಥ್ರಿಲ್ಲರ್‌ ಸಿನಿಮಾ.

    ಸಂತೋಷ್‌ ಸಹಾನಿಯಾಗಿ (ಕಥಾನಾಯಕಿ) ಸಹನಾ ಗೋಸ್ವಾಮಿ ಅಭಿನಯಿಸಿದ್ದಾರೆ. ಸುನೀತಾ ರಾಜ್ವಾರ್‌, ಸಂಜಯ್‌ ಬಿಷ್ಣೋಯ್‌, ಕುಶಲ್‌ ದುಬೆ ಮತ್ತಿತರರು ತಾರಾಗಣದಲ್ಲಿದ್ದಾರೆ. 98 ನಿಮಿಷಗಳ ಸಿನಿಮಾ.

    Any Day Now: ನಮ್ಮಲ್ಲಿ ಉಳಿಯುವುದು ಅವರ ನಗೆ-ಬದುಕಿನ ಬಗೆ

    ಹಿಂದಿ ಸಿನಿಮಾವಾಗಿದ್ದು, ಈಗಾಗಲೇ ಹಲವಾರು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ವಿಮರ್ಶಾ ವಲಯದಿಂದಲೂ ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ.

    Latest Posts

    spot_imgspot_img

    Don't Miss