ಚಾರ್ಲಿ 777 ಇನ್ನು ಜಪಾನಿಗರ ಮನಸೆಳೆಯಲಿದೆ. ಪರಮ್ ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರವೀಗ ಜಪಾನಿನ ಭಾಷೆಯಲ್ಲೂ ರೂಪುಗೊಂಡಿದೆ.ಜೂನ್ 28 ರಂದು ಟೋಕಿಯೋ ಸೇರಿದಂತೆ ಜಪಾನಿನ ಪ್ರಮುಖ ನಗರಗಳ ಚಿತ್ರಮಂದಿರಗಳಲ್ಲಿ ಸಿನಿಪ್ರಿಯರಿಗೆ ವೀಕ್ಷಣೆಗೆ ಲಭ್ಯವಾಗಲಿದೆ.
ಜಪಾನಿನ ಅತೀ ದೊಡ್ಡ ಹಾಗೂ ಜಪಾನಿ ಚಿತ್ರರಂಗದಲ್ಲಿ 1೦೦ ವರ್ಷಕ್ಕೂ ಹಳೆಯದಾದ “ಶೋಚಿಕೋ ಮೂವೀ” ಎಂಬ ಸಂಸ್ಥೆ ಈ ಚಿತ್ರವನ್ನು ಜಪಾನಿನಲ್ಲಿ ವಿತರಿಸುತ್ತಿರುವುದು ವಿಶೇಷ. ಈ ಸಂಸ್ಥೆ ಹಿಂದೆ “Hachi: A Dog’s Tale” ಎಂಬ ಚಿತ್ರವನ್ನೂ ಜಪಾನಿನಲ್ಲಿ ವೀಕ್ಷಕರಿಗೆ ಲಭ್ಯವಾಗುವಂತೆ ಮಾಡಿತ್ತು.
ಇದಲ್ಲದೇ ಚಾರ್ಲಿ 777 ಲ್ಯಾಟಿನ್ ಅಮೆರಿಕ, ರಷ್ಯನ್, ತೈವಾನ್, ಜರ್ಮನಿ ಮತ್ತಿತರ ದೇಶಗಳಲ್ಲೂ ಬಿಡುಗಡೆಗೆ ಸಜ್ಜಾಗಿದೆ. ಕಳೆದ ವರ್ಷ ಥೈಲ್ಯಾಂಡ್ ನಲ್ಲೂ ಈ ಚಿತ್ರ ಬಿಡುಗಡೆಯಾಗಿತ್ತು.
ಇದನ್ನೂ ಓದಿ : ಕನಸೆಂಬ ಕುದುರೆಯನ್ನೇರಿ; ಕುದುರೆ ಏರುವ ಮೊದಲಿನ ಕಥೆ
ಎರಡು ವರ್ಷದ ಹಿಂದೆ ಜೂನ್ 10 ಕ್ಕೆ ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ರಕ್ಷಿತ್ ಶೆಟ್ಟಿ ಅಭಿನಯಿಸಿ, ಕಿರಣ್ ರಾಜ್ ನಿರ್ದೇಶಿಸಿದ್ದರು. ಈ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿತ್ತು.
**
ಕಲ್ಕಿ ಜೂನ್ 27 ಕ್ಕೆ ವೀಕ್ಷಣೆಗೆ ಲಭ್ಯ
ನಾಗ್ ಅಶ್ವಿನ್ ನಿರ್ದೇಶಿಸಿ ಪ್ರಭಾಸ್, ಅಮಿತಾಭ್ ಬಚ್ಚನ್ ಮತ್ತಿತರರು ಆಭಿನಯಿಸುತ್ತಿರುವ ಕಲ್ಕಿ ಸಿನಿಮಾ ಜೂನ್ 27 ಕ್ಕೆ ಬಿಡುಗಡೆಯಾಗಲಿದೆ. ಬಹುಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಈ ಸೈನ್ಸ್ ಫಿಕ್ಷನ್ ಚಿತ್ರ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ. ಉತ್ತಮ ನಾಳೆಗಾಗಿ ಎಲ್ಲಾ ಶಕ್ತಿಗಳು ಒಗ್ಗೂಡುತ್ತವೆ ಎಂಬುದು ಇದರ ಅಡಿ ಟಿಪ್ಫಣಿ. ವೈಜಯಂತಿ ಮೂವೀಸ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ.
ಇದನ್ನೂ ಓದಿ : ಅಮಿತಾಭ್ ಇನ್ನು ಅಶ್ವತ್ಥಾಮ !
ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಮತ್ತಿತರರು ತಾರಾಗಣದಲ್ಲಿದ್ದಾರೆ. ಪುರಾಣ ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ ನಮ್ಮದು ಎನ್ನುತ್ತಿದೆ ನಿರ್ಮಾಣ ಸಂಸ್ಥೆ.