“ಜಸ್ಟ್ ಮ್ಯಾರೀಡ್ʼ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆಯಂತೆ. ಆಬ್ಸ್ ಸ್ಟುಡಿಯೋ ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಅವರು ನಿರ್ಮಿಸುತ್ತಿರುವ ಚಿತ್ರಕ್ಕೆ ಬಾಬಿಯವರದ್ದೇ ನಿರ್ದೇಶನ. ಶೈನ್ ಶೆಟ್ಟಿ – ಅಂಕಿತ ಅಮರ್ ಅಭಿನಯ. ಬೆಂಗಳೂರು, ಮೈಸೂರು ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮುಗಿಸಿ ಮುಂದಿನ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ.
ಈ ಚಿತ್ರದ ಮೂಲಕ ಇಬ್ಬರಿಗೆ ಮುಂಬಡ್ತಿ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥರು ನಿರ್ಮಾಪಕರಾಗುತ್ತಾರೆ. ಮತ್ತೊಬ್ಬ ಸಂಗೀತ ಕ್ಷೇತ್ರದ ಸಿ. ಆರ್. ಬಾಬಿಯವರು ನಿರ್ದೇಶಕರಾಗುತ್ತಾರೆ.
ಚಿತ್ರದಲ್ಲಿ ಆರು ಹಾಡುಗಳಿವೆಯಂತೆ. ಅಜನೀಶ್ ಲೋಕನಾಥರದ್ದೇ ಸಂಗೀತ ಸಂಯೋಜನೆಯಂತೆ. ವಿಜಯ್ ಪ್ರಕಾಶ್ ಹಾಡಿರುವ ಹಾಡುಗಳೂ ಇವೆ.
ಈಗಷ್ಟೇ ಮದುವೆಯಾದರು ಎನ್ನುವುದು ಈ ಚಿತ್ರದ ಕನ್ನಡ ಶೀರ್ಷಿಕೆ ಎನ್ನಬಹುದು. ಇದೂ ಪ್ರೇಮಕಥೆಯಂತೆ. ಸಿ. ಆರ್ ಬಾಬಿಯವರೊಂದಿಗೆ ಧನಂಜಯ್ ರಂಜನ್ ಚಿತ್ರಕಥೆಗೆ ಸೇರಿದ್ದರೆ, ಸಂಭಾಷಣೆ ಒದಗಿಸಿದವರು ರಘು ನಿಡುವಳ್ಳಿ.
ನಾಗಶೇಖರರ ಪ್ರೇಮ ಕಥೆ ಮತ್ತೊಂದು ಭಾಗದ ಮತ್ತಷ್ಟು ವಿವರ
ದೇವರಾಜ್, ಅಚ್ಯುತಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ ಮತ್ತಿತರು ಇದ್ದಾರೆ ತಾರಾಗಣದಲ್ಲಿ.
*
ಗುರು ದೇಶಪಾಂಡೆಯವರ ರಾಮರಸ
ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ತಮ್ಮ ಜಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಚಿತ್ರ ರಾಮರಸ. ನಿರ್ದೇಶಕ ಬಿ.ಎಂ. ಗಿರಿರಾಜ್ ನಿರ್ದೇಶಿಸುತ್ತಿರುವ ಚಿತ್ರವಿದು.
ಶ್ರೀರಾಮನವಮಿಯ ಮಾರನೇ ದಿನ ಶೀರ್ಷಿಕೆ ಬಿಡುಗಡೆಯಾದರೂ ಸ್ವಲ್ಪ ರಾಮನವಮಿಯ ಪ್ರಭಾವ ಇರಬಹುದು. ನಟ ಧ್ರುವ ಸರ್ಜಾ ಶುಭ ಹಾರೈಸಿದರು.
ಈ ಚಿತ್ರ ಹಾಸ್ಯ ಎಳೆಯದ್ದಂತೆ. ಹಲವಾರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆಯಂತೆ. ಮೇ ಎರಡನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದೆಯಂತೆ.
ಹೊಸ ಪ್ರತಿಭೆಗಳೆಂದು ಮೂಗು ಮುರಿಯಬೇಕಿಲ್ಲ. ಅವರಿಗೆಲ್ಲ ತರಬೇತಿ ನೀಡಲಾಗಿದೆಯಂತೆ. ಬಿ.ಜೆ.ಭರತ್ ಹಾಡುಗಳಿಗೆ ರಾಗ ಸಂಯೋಜನೆ ಮಾಡುತ್ತಿದ್ದಾರೆ. ಪುನೀತ್ ಆರ್ಯ ಹಾಡುಗಳನ್ನು ಬರೆದಿದ್ದಾರೆ.
*