Monday, December 23, 2024
spot_img
More

    Latest Posts

    ತಲ್ಲಣ: ತಂಗಾಳಿಯೊಳಗಿನ ಬೀಸಿ ಬರುವ ಬಿಸಿಗಾಳಿ

    ಎನ್‌ ಸುದರ್ಶನ್‌ ಅವರು 2013 ರಲ್ಲಿ ಬಿಡುಗಡೆ ಮಾಡಿದ ಚಿತ್ರ ತಲ್ಲಣ. ಸಮಾಜ, ಕುಟುಂಬ ಹಾಗು ಮನೆಯನ್ನು ಸಮಗ್ರವಾಗಿ ನೋಡುತ್ತಲೇ ಒಂದು ಘಟನೆಯ ನಂತರದ ಬೆಳವಣಿಗೆಗಳನ್ನು ವಿಶ್ಲೇಷಿಸುವ ಪ್ರಯತ್ನ ಈ ಚಿತ್ರದ್ದು. ತೀರಾ ವಾಣಿಜ್ಯೋದ್ದೇಶವಲ್ಲದ ಸಿನಿಮಾಗಳ ಗುಚ್ಛ ಒಂದೇ ಕಡೆಯಲ್ಲಿ ಓದಲು ಲಭ್ಯವಾಗಲೆಂದು ಸಿನಿಮಾಯೆ ಇಲ್ಲಿ ಪ್ರಕಟಿಸುತ್ತಿದೆ. ಸುದರ್ಶನ್ ಅವರ “ತಲ್ಲಣ” ಚಲನಚಿತ್ರ ಸಮಾಜದಲ್ಲಿ ಪ್ರಚಲಿತದಲ್ಲಿರುವ ಕಥಾವಸ್ತುವಿನ ಬಗ್ಗೆ ಒಂದು ನೋಟ ಹರಿಸುವ ಪ್ರಯತ್ನ.

    ಸಮಾಜದಲ್ಲಿ ಘಟಿಸುವ ಒಂದು ಘಟನೆ ಜನಜೀವನದ ವಿವಿಧ ಹಂತಗಳಲ್ಲಿ ಸೃಷ್ಟಿಸುವ ತಲ್ಲಣದ ಅಲೆಗಳ ಕುರಿತು ಸಾಕಷ್ಟು ಸಿನಿಮಾಗಳು ಬಂದಿವೆ. ಆ ಪೈಕಿ ಬಹುಪಾಲು ಕೋಮುದಳ್ಳುರಿಯ ಕುರಿತಾಗಿಯೂ ಬಂದಿವೆ. “ಬಾಂಬೆ” ಯಿಂದ ಹಿಡಿದು “ಮುಂಬಯಿ ಮೇರಾ ಜಾನ್”, ಕನ್ನಡದ “ತಮಸ್” ವರೆಗೂ ಹಲವಾರು ಚಿತ್ರಗಳಿವೆ. ಆ ನೆಲೆಯಿಂದ ಹೊರತಾದ ಹೊರಗೆಲ್ಲೋ ಕೇಳಿಬರುವ ಒಂದು ಘಟನೆ ಮನೆಯೊಳಗೆ ನಡೆದಾಗ ಉಂಟಾಗಬಹುದಾದ ತಲ್ಲಣದ ಬಗ್ಗೆ ಬಂದದ್ದು ಕಡಿಮೆ. ವಿದೇಶಿ ಭಾಷೆಯ (ಇಂಗ್ಲಿಷ್‍ಗಿಂತ) ಚಿತ್ರಗಳು ಸುಮಾರು ಈ ನೆಲೆಯಲ್ಲಿವೆ.

    ಸಮಕಾಲೀನ ಕಥಾ ವಸ್ತುಗಳಿಗೆ ದೃಶ್ಯಗಳನ್ನು ಹೆಣೆದು ಸಿನಿಮಾ ಮಾಡುವುದು ಸ್ವಲ್ಪ ಸವಾಲಿನ ಮಾತು. ಇದಕ್ಕೆ ಹಲವಾರು ಕಾರಣಗಳಿವೆ. ಒಂದು ಸಮಕಾಲೀನ ಕಥಾ ವಸ್ತು ಚಲನಶೀಲತೆಯನ್ನು ಹೊಂದಿರುವಂಥದ್ದು. ಒಂದು ಕಥಾವಸ್ತು ಸಿನಿಮಾವಾಗಿ ಪರದೆಯ ಮೇಲೆ ಮೂಡುವಷ್ಟರಲ್ಲಿ ಯಾವ ತಿರುವನ್ನಾದರೂ ಪಡೆಯಬಹುದು. ಅಷ್ಟೇ ಅಲ್ಲ, ಆ ಸಮಕಾಲೀನ ಕಥಾ ವಸ್ತುವಿಗೆ ಸಮಾಜ ವಿವಿಧ ರೀತಿಯಲ್ಲಿ ಕ್ಷಿಪ್ರಗತಿಯಲ್ಲಿ ಸ್ಪಂದಿಸಿಯೇ ತೀರುತ್ತದೆ. ನಿತ್ಯದ ಬದುಕಿನ ಘಟನೆಗಳಾಗಿರುವುದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ನೆಲೆಯಲ್ಲಿ ಪ್ರತಿಕ್ರಿಯಿಸಲು ಪ್ರಯತ್ನಿಸಿದಾಗ ಒಬ್ಬರಿಗೆ ಇಷ್ಟವಾಗಬಹುದು, ಇನ್ನೊಬ್ಬರಿಗೆ ಇಷ್ಟವಾಗದೇ ಇರಬಹುದು..ಹೀಗೆ ಹಲವು ಕಾರಣಗಳಿಂದ “ರಿಸ್ಕ್” ಯಾಕೆ ಎಂದು ಬಹುಪಾಲು ನಿರ್ದೇಶಕರು ಅದರ ಉಸಾಬರಿಗೇ ಹೋಗುವುದಿಲ್ಲ.

    ಹಾಗೆಯೇ ಬಹಳ ಬಾರಿ ಚರ್ಚಿತವಾಗಿರುವ ವಿಷಯಗಳನ್ನು ಮtallana ತ್ತೊಮ್ಮೆ ಚಿತ್ರವಾಗಿಸುವುದೂ ಸ್ವಲ್ಪ ಕಷ್ಟದ್ದೇ. ಆದ ಚರ್ಚೆಯ ಮೇಲೆ ಚಿತ್ರವನ್ನು ಕೇಂದ್ರೀಕರಿಸಿದರೆ “ಇದರಲ್ಲೇನು ಹೊಸತಿಲ್ಲ” ಎಂಬ ಅಪವಾದ ಬಂದೀತು. ಹಾಗೆಂದು ಹೊಸದೇನನ್ನೋ ಹೇಳಲು ಹೋದಾಗ “ಹೈಪೋಥೀಸೀಸ್” ಎನಿಸಿಯೂ ಜನರಿಂದ ತಿರಸ್ಕøತಗೊಳ್ಳುವ ಅಪಾಯವೇ ಹೆಚ್ಚು. ಬರಿದೇ ವಾಣಿಜ್ಯೋದ್ದೇಶವಲ್ಲದ ಸಿನಿಮಾಗಳು ಯಾವಾಗಲೂ ಸಮಾಜದಲ್ಲಿ ಒಂದು ವಿಷಯದ ಚರ್ಚೆಯನ್ನು ಆರಂಭಿಸುವ, ಮುಂದುವರಿಸುವ ಅಥವಾ ಒಂದು ತಾರ್ಕಿಕ ಹಂತಕ್ಕೆ ತಲುಪಿಸುವ ಹೊಣೆಯನ್ನೂ ಹೊಂದಿರುತ್ತವೆ.

    ಇವುಗಳನ್ನೂ ಓದಿ : ಅಕಿರಾ ಕುರಸೋವಾ: ವಿಶ್ವ ಚಿತ್ರ ಜಗತ್ತಿನ ಪ್ರಖರ ಸೂರ್ಯ

    ಸುದರ್ಶನರ “ತಲ್ಲಣ”ದ ಕಥೆಯ ಎಳೆ ಇಷ್ಟೇ. ಪಾತ್ರದಲ್ಲಿ ಬರುವವರು ಶ್ರೀಧರ್, ಜಯಮ್ಮ, ಜಯಮ್ಮನ ಮಗಳು, ಆಕೆಯ ಕುಡುಕ ಗಂಡ, ಶ್ರೀಧರರ ಪತ್ನಿ ಮತ್ತು ಮಗಳು. ಜಯಮ್ಮ ಇಲ್ಲಿ ಶ್ರೀಧರ್ ಅವರ ಮನೆಯ ಆಳು. ಒಟ್ಟು ಸಿನಿಮಾದ ಅವಧಿ 109 ನಿಮಿಷ. ಜಯಮ್ಮನ ಮಗಳಿಗೆ 12 ವರ್ಷ. ಒಮ್ಮೆ ಶಾಲೆಗೆ ಹೋದವಳು ವಾಪಸು ಬರುವುದಿಲ್ಲ. ಅವಳು ಏನಾಗಿರಬಹುದು, ಎಲ್ಲಿ ಹೋಗಿರಬಹುದು? ಇದರ ಹಿಂದೆಯೇ ಸಿನಿಮಾ ವೇಗ ಪಡೆದುಕೊಳ್ಳುತ್ತದೆ. ಆ ಘಟನೆಯನ್ನು ಎದುರಿಸುವಾಗ ಎದುರಾಗುವ ಸನ್ನಿವೇಶಗಳು, ಸಮಾಜ ಪ್ರತಿಕ್ರಿಯಿಸುವ ರೀತಿ, ವ್ಯವಸ್ಥೆ ಅಂಥ ಸಂತ್ರಸ್ತ ಕುಟುಂಬದೊಂದಿಗೆ ವ್ಯವಹರಿಸುವ ರೀತಿ ಎಲ್ಲವೂ ಕಥೆಯ ಹಂದರ. ಚಿಕ್ಕದೊಂದು ಘಟನೆಯ ಹೊರಗುಳಿದೇ ಗಮನಿಸುವ ನಾವು, ಅದರ ಭಾಗವಾದಾಗ ಉಂಟಾಗಬಹುದಾದ ಮತ್ತು ಧುತ್ತನೆ ಕಣ್ಣೆದುರು ನಿಲ್ಲಬಹುದಾದ ಸನ್ನಿವೇಶಗಳ ಸರಣಿಯೇ ತಲ್ಲಣ. ಹಾಗೆಂದು ಇಡೀ ಚಿತ್ರ ಒಂದು “ನೆಗೆಟಿವ್ ನೋಟ್” (ಋಣಾತ್ಮಕ ಟಿಪ್ಪಣಿ)ಯಾಗಿಯೂ ತೋರುವುದಿಲ್ಲ. ಬದುಕಲೇ ಬೇಕಾದ ಅನಿವಾರ್ಯತೆಯಲ್ಲಿ ನಾವಾಗಿಯೇ ಹುಡುಕಿಕೊಳ್ಳುವ “ಧನಾತ್ಮಕ” ಪರ್ಯಾಯ ರೂಪಕಗಳನ್ನು ಹೇಳುತ್ತದೆ. ಆ ಪಯಾರ್ಯಗಳೊಂದಿಗೆ ನಮ್ಮದನ್ನು ಸಮೀಕರಿಸಿಕೊಂಡು ಬದುಕುವ ಮನಸ್ಥಿತಿ ಎಲ್ಲರದ್ದು. ಇಲ್ಲಿ ಜಯಮ್ಮಳದ್ದೂ ಸಹ. ಇದು ಬದುಕಿನ ಅತ್ಯಂತ ಕಟು ವಾಸ್ತವವೂ ಹೌದು.

    ಇದರೊಂದಿಗೇ ಮಣ್ಣೇ ಸಂಬಂಧಗಳ ತಾಯಿ ಮತ್ತು ತವರು. ಅದರಂತೆಯೇ ಭಾವನೆಗಳು ಮತ್ತು ಸಂದರ್ಭ ಮೊಳಕೆಯೊಡೆದಿರಬಹುದಾದ ಸಂಬಂಧಗಳನ್ನು ಬೆಳೆಸುವಂಥದ್ದು. ಅಂಥದೊಂದು ಎಳೆಯೂ ಈ ಸಿನಿಮಾದಲ್ಲಿ ಕಥಾಎಳೆಯಾಗಿ ಮೂಡಿ ಬಂದಿದೆ. ಒಂದು ಕಡೆ ಉಂಟಾದ ಕೊರತೆಯನ್ನು ಮತ್ತೊಂದು ಕಡೆ ತುಂಬಿಸಿಕೊಳ್ಳುವ ಪ್ರಯತ್ನ ಎಲ್ಲರದ್ದೂ. ಇಲ್ಲಿಯೂ ಪಾತ್ರಗಳು ಅದನ್ನೇ ಮಾಡುತ್ತವೆ. ಅದು ಬದುಕಿನ ಅನಿವಾರ್ಯತೆಯನ್ನು ಎದುರಿಸುವ ಪ್ರಯತ್ನವೇ ಹೊರತು ಮತ್ತೇನೂ ಅಲ್ಲ.

    tallana

    ಇಡೀ ಸಿನಿಮಾ ಎಲ್ಲೂ ಬೇಸರ ಬಾರದಂತೆ ಎಚ್ಚರ ವಹಿಸಿದ್ದಾರೆ ಸುದರ್ಶನರು. ಹಾಗೆಯೆ ಎಷ್ಟೋ ಬಾರಿ ಸನ್ನಿವೇಶಗಳು ಪುನರಾವರ್ತನೆಯಾಗದಂತೆ (ಮಗಳನ್ನು ಹುಡುಕುವ ಸಂದರ್ಭ ಮತ್ತು ಪೊಲೀಸ್ ಇನ್ಸ್‍ಪೆಕ್ಟರ್ ಸನ್ನಿವೇಶ) ಮುಂಜಾಗ್ರತೆ ವಹಿಸಿದ್ದಾರೆ. ಜಯಮ್ಮ ತನ್ನ ಮಗಳ ಕಾಣೆಯಿಂದ ವ್ಯಸ್ತಳಾಗಿ ದೇವರಿಗೆ ಹರಕೆ ಹೊರುವುದು, ಜ್ಯೋತಿಷಿಯನ್ನು ಭೇಟಿಯಾಗುವುದು, ಸಾಧುವನ್ನು ಭೇಟಿಯಾಗುವುದು..ಈ ಸನ್ನಿವೇಶಗಳಲ್ಲಿ ಆ ಪುನರಾವರ್ತನೆಯ ಸಾಧ್ಯತೆಯನ್ನು ತಡೆಯಬಹುದಿತ್ತು. ಅಲ್ಲಿ ಸ್ವಲ್ಪ ಏಕತಾನತೆ ಕಾಣುತ್ತದೆ.

    ಇವುಗಳನ್ನೂ ಓದಿ : ದಶಮುಖ ಮುಗಿಯಿತು ; ಇನ್ನು ರವಿಚಂದ್ರನ್‌ ರ ದಿ ಜಡ್ಜ್‌ ಮೆಂಟ್‌ !

    ಒಂದು ಸನ್ನಿವೇಶದಿಂದ ಮತ್ತೊಂದು ಸನ್ನಿವೇಶದಲ್ಲಿನ ಬೆಳವಣಿಗೆ ಕಥೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವಂತಿರಬೇಕು. ಇಲ್ಲದಿದ್ದರೆ ಎರಡು ಸನ್ನಿವೇಶಗಳು ಒಂದರ ಪುನರಾವರ್ತನೆಯೆನ್ನಿಸುತ್ತದೆಯೇ ಹೊರತು ಮತ್ತೇನನ್ನೂ ಹೇಳದು. ಕೆಲವೊಮ್ಮೆ ಈ ಎರಡು ಸನ್ನಿವೇಶಗಳ ಒಂದು ಸಂದರ್ಭವನ್ನು ಒತ್ತಿ ಹೇಳುತ್ತವೆ ಎನ್ನಬಹುದಾದರೂ ಅಂಥ ಸಾಧ್ಯತೆ ತೀರಾ ಕಡಿಮೆ. ಇರಾನಿನ ಚಿತ್ರ ನಿರ್ದೇಶಕ ಮಜಿದ್ ಮಜಿದಿಯ “ದಿ ಚಿಲ್ಡ್ರರ್ನ್ ಆಫ್ ಹೆವನ್” ಸಿನಿಮಾದಲ್ಲಿ ಆ ಹುಡುಗ ಮತ್ತು ಹುಡುಗಿ (ಅಣ್ಣ-ತಂಗಿ) ಹಲವು ಬಾರಿ ಶಾಲೆಗೆ ಓಣಿಗಳಲ್ಲಿ ಓಡುತ್ತಾರೆ. ಪ್ರತಿ ಬಾರಿಯೂ ನಿರ್ದೇಶಕ ಒಂದಲ್ಲಾ ಒಂದು ಸಣ್ಣ ಸೂಕ್ಷ್ಮ ವ್ಯತ್ಯಾಸವನ್ನು ಇಡೀ ಘಟನೆಗೆ ಅಂಟಿಸಿದ್ದಾನೆ. ಒಮ್ಮೆ ಅವನು ಓಡುವಾಗ ಚಪ್ಪಲಿ ಹರಿದಿರುತ್ತದೆ, ಮತ್ತೊಮ್ಮೆ ತಡವಾಗಿರುತ್ತದೆ..ಹೀಗೆ. ಆದರೂ ವೀಕ್ಷಕರಿಗೆ ಆ ಸೂಕ್ಷ್ಮ ವ್ಯತ್ಯಾಸಗಳು ಮುಖ್ಯವಾಗದೇ, ದೃಶ್ಯದ ಪುನರಾವರ್ತನೆಯೇನೋ ಎನ್ನಿಸುವುದುಂಟು. ಆದರೆ, “ತಲ್ಲಣ”ದಲ್ಲಿ ಸಾಧುವಿನ ಭೇಟಿಯ ಸನ್ನಿವೇಶಗಳು ವೃಥಾ ಎಳೆದಂತೆ ಎನಿಸುವುದುಂಟು.

    ಉಳಿದಂತೆ ಸಿನಿಮಾ ಚೆನ್ನಾಗಿದೆ. ಸೂರ್ಯಕಾಂತ್ ಹೊನ್ನಾಳಿಯವರ ಕ್ಯಾಮೆರಾ ಸಹ ಅರ್ಥಪೂರ್ಣವಾಗಿ ಕೆಲಸ ಮಾಡಿದೆ. ಆರಂಭದಲ್ಲಂತೂ ಪಾತ್ರ ಪರಿಚಯದ ಸಂದರ್ಭದಲ್ಲಿ ಅವರ ಜಾಣ್ಮೆ ಸ್ಪಷ್ಟವಾಗಿ ತೋರುತ್ತದೆ. ಅವರು ರೂಪಿಸಿದ ದೃಶ್ಯಗಳು ಮನದಲ್ಲಿ ಉಳಿಯುವಂಥದ್ದು. ಎಸ್ ಆರ್ ರಾಮಕೃಷ್ಣರ ಸಂಗೀತವೂ ಕೆಲವು ಸನ್ನಿವೇಶಗಳಲ್ಲಿ ಅಗತ್ಯವಿರಲಿಲ್ಲವೇನೋ ಎಂದೆನಿಸಿದರೂ ಒಟ್ಟಂದವನ್ನು ಕೆಡಿಸಿಲ್ಲ.

    ಇವುಗಳನ್ನೂ ಓದಿ : ಕನ್ನಡ ಚಿತ್ರರಂಗದ ಸ್ಥಿತಿಗತಿ ಚೆನ್ನಾಗಿಯೇ ಇದೆಯಲ್ಲ :ಶೇಷಾದ್ರಿ

    sudarshan

    ಹಾಗೆಯೇ ಸ್ವಾಮಿಯವರ ಸಂಕಲನವೂ ಪೂರಕವಾಗಿದೆ. ಮೇಲೆ ಹೇಳಲಾದ ದೃಶ್ಯದ ಪುನರಾವರ್ತನೆಯನ್ನು ಸ್ವಾಮಿಯವರು ತಡೆಯಬಹುದಿತ್ತೇನೋ? ಆದರೆ ಕೆಲವೆಡೆ ಕೈಗೊಂಡಿರುವ ಕ್ಷಿಪ್ರ ಸಂಕಲನ ದೃಶ್ಯಗಳಿಗೆ ಅಂದ ತುಂಬಿದೆ. ವಸ್ತ್ರವಿನ್ಯಾಸ-ವಸುಂಧರಾ ಕುಲಕರ್ಣಿ, ಮೇಕಪ್ –ಮು.ಚಿ. ರಾಮಕೃಷ್ಣರದ್ದು ಪೂರಕವಾಗಿಯೆ ಇದೆ.

    ಪಾತ್ರಧಾರಿಗಳಾಗಿಯೂ ನಿರ್ಮಲಾ ಚೆನ್ನಪ್ಪ (ಜಯಮ್ಮ), ಅನಿಲ್ ಕುಮಾರ್ (ಅವಳ ಗಂಡ), ಮಮತಾ ಜಿ (ಜಯಮ್ಮನ ಮಗಳು) ಕೆ ಎಸ್ ಶ್ರೀಧರ್ (ಮನೆ ಮಾಲೀಕ ಸದಾನಂದ), ನಾಗೇಂದ್ರ ಷಾ (ಪೊಲೀಸ್ ಇನ್ಸ್‍ಪೆಕ್ಟರ್) ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ. ಇಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಪಾತ್ರ, “ದಿನಾ ಸಾಯೋರಿಗೆ ಅಳೋರ್ಯಾರು” ಎನ್ನುವ ಮನಸ್ಥಿತಿಯ ವ್ಯವಸ್ಥೆಯನ್ನಷ್ಟೇ ಹೇಳುವುದಿಲ್ಲ. ತನ್ನ ಉಳಿವಿಗೇ ಸಮಸ್ಯೆ, ಆತಂಕ ಎದುರಾದಲ್ಲಿ ಹೊಸ ಸುಳ್ಳು-ಸಮಸ್ಯೆಗಳನ್ನು ಸೃಷ್ಟಿಸುವಂಥ ಕುತ್ಸುಕ ಮನಸ್ಥಿತಿಯನ್ನೂ ಅನಾವರಣಗೊಳ್ಳುತ್ತದೆ. ಅರುಣಾ ಬಾಲರಾಜ್ (ಸದಾನಂದ ಪತ್ನಿ), ಸುರಭಿ ವಸಿಷ್ಠ (ಸದಾನಂದ ಮಗಳಾಗಿ), ರಶ್ಮಿ (ಪೊಲೀಸ್ ಇನ್ಸ್ ಪೆಕ್ಟರ್ ಹೆಂಡತಿಯಾಗಿ) ಮತ್ತಿತರರ ತಾರಾಗಣವಿದೆ.

    ಇಡೀ ಕಥಾ ಎಳೆ ಸೃಷ್ಟಿಸಬಹುದಾದ “ತಲ್ಲಣ” ಸಿನಿಮಾದಲ್ಲಿ ಅಷ್ಟೊಂದು ಸಾಂದ್ರವಾಗಿ ಬಂದಿಲ್ಲ ಎಂದು ಮೊದಲಿಗೆ ಅನಿಸುತ್ತದೆ. ಆದರೆ, “ತಲ್ಲಣ”ದ ತೀವ್ರತೆಯನ್ನು ಹೇಳಲು (ಸಾಂದ್ರಗೊಳಿಸುವತ್ತ) ಹೆಚ್ಚು ಗಮನ ಕೇಂದ್ರೀಕರಿಸಿದ್ದರೆ, ಅದು ಮತ್ತೊಂದು ಭಾವನಾತ್ಮಕ ಮೆಲೊಡ್ರಾಮಾ ಆಗಿಬಿಡುತ್ತಿತ್ತೇನೋ ಎಂಬ ಅಪಾಯದಿಂದ ನಿರ್ದೇಶಕ ವಹಿಸಿರಬಹುದಾದ ಎಚ್ಚರವಿರಬಹುದೇನೋ. ಮರಾಠಿಯ ಇತ್ತೀಚಿನ ಖೇಲ್ ಮಂಡಲ್, ಟಪಾಲ್ ಸಿನಿಮಾ (ಬಹುತೇಕ ಮರಾಠಿ ಮತ್ತು ಮಲಯಾಳಂ)ವೂ ಸಹ ಒಂದು ಗಂಭೀರ ವಿಷಯವನ್ನು ಹೇಳುತ್ತಲೇ ಎಲ್ಲೋ ಭಾವನಾತ್ಮಕ ನೆಲೆಯಲ್ಲಿ ಒಂದೆಡೆ ನಿಂತು ಬಿಡುತ್ತೇನೋ ಎನ್ನಿಸುವುದುಂಟು.

    ಸಿನಿಮಾ ತನ್ನ ಓಘವನ್ನು ಕಳೆದುಕೊಳ್ಳದೇ, ಚೆನ್ನಾದ ರೀತಿಯಲ್ಲಿ ವಿಷಯವನ್ನು ಮನದಟ್ಟು ಮಾಡುವ “ತಲ್ಲಣ” ಹಲವು ನೆಲೆಯಲ್ಲಿ ಚಿಂತನೆಗೆ ಕಾರಣವಾಗುತ್ತದೆ. ತನ್ನ ಮನಸ್ಸಿನಲ್ಲಿನ ಆಲೋಚನೆಯನ್ನು ದೃಶ್ಯೀಕರಿಸುವ ನೆಲೆಯಲ್ಲಿ ನಿರ್ದೇಶಕ ಸುದರ್ಶನರು ನೂರಕ್ಕೆ ನೂರರಷ್ಟು ಯಶಸ್ವಿಯಾಗದಿದ್ದರೂ, ಶೇ. 80 ರಷ್ಟು ಯಶಸ್ವಿಯಾಗಿರುವುದು ಸ್ಪಷ್ಟ. ಕನ್ನಡದ ನೆಲೆಯಲ್ಲಿ ಒಂದು ಒಳ್ಳೆಯ ಪ್ರಯತ್ನ.

    Latest Posts

    spot_imgspot_img

    Don't Miss

    [tdn_block_newsletter_subscribe title_text="Stay in touch" description="VG8gYmUgdXBkYXRlZCB3aXRoIGFsbCB0aGUgbGF0ZXN0IG5ld3MsIG9mZmVycyBhbmQgc3BlY2lhbCBhbm5vdW5jZW1lbnRzLg==" input_placeholder="Email address" tds_newsletter2-image="5" tds_newsletter2-image_bg_color="#c3ecff" tds_newsletter3-input_bar_display="row" tds_newsletter4-image="6" tds_newsletter4-image_bg_color="#fffbcf" tds_newsletter4-btn_bg_color="#f3b700" tds_newsletter4-check_accent="#f3b700" tds_newsletter5-tdicon="tdc-font-fa tdc-font-fa-envelope-o" tds_newsletter5-btn_bg_color="#000000" tds_newsletter5-btn_bg_color_hover="#4db2ec" tds_newsletter5-check_accent="#000000" tds_newsletter6-input_bar_display="row" tds_newsletter6-btn_bg_color="#da1414" tds_newsletter6-check_accent="#da1414" tds_newsletter7-image="7" tds_newsletter7-btn_bg_color="#1c69ad" tds_newsletter7-check_accent="#1c69ad" tds_newsletter7-f_title_font_size="20" tds_newsletter7-f_title_font_line_height="28px" tds_newsletter8-input_bar_display="row" tds_newsletter8-btn_bg_color="#00649e" tds_newsletter8-btn_bg_color_hover="#21709e" tds_newsletter8-check_accent="#00649e" embedded_form_code="JTNDIS0tJTIwQmVnaW4lMjBNYWlsQ2hpbXAlMjBTaWdudXAlMjBGb3JtJTIwLS0lM0UlMEElMEElM0Nmb3JtJTIwYWN0aW9uJTNEJTIyaHR0cHMlM0ElMkYlMkZ0YWdkaXYudXMxNi5saXN0LW1hbmFnZS5jb20lMkZzdWJzY3JpYmUlMkZwb3N0JTNGdSUzRDZlYmQzMWU5NGNjYzVhZGRkYmZhZGFhNTUlMjZhbXAlM0JpZCUzRGVkODQwMzZmNGMlMjIlMjBtZXRob2QlM0QlMjJwb3N0JTIyJTIwaWQlM0QlMjJtYy1lbWJlZGRlZC1zdWJzY3JpYmUtZm9ybSUyMiUyMG5hbWUlM0QlMjJtYy1lbWJlZGRlZC1zdWJzY3JpYmUtZm9ybSUyMiUyMGNsYXNzJTNEJTIydmFsaWRhdGUlMjIlMjB0YXJnZXQlM0QlMjJfYmxhbmslMjIlMjBub3ZhbGlkYXRlJTNFJTNDJTJGZm9ybSUzRSUwQSUwQSUzQyEtLUVuZCUyMG1jX2VtYmVkX3NpZ251cC0tJTNF" descr_space="eyJhbGwiOiIxNSIsImxhbmRzY2FwZSI6IjE1In0=" tds_newsletter="tds_newsletter3" tds_newsletter3-all_border_width="0" btn_text="Sign up" tds_newsletter3-btn_bg_color="#ea1717" tds_newsletter3-btn_bg_color_hover="#000000" tds_newsletter3-btn_border_size="0" tdc_css="eyJhbGwiOnsibWFyZ2luLWJvdHRvbSI6IjAiLCJiYWNrZ3JvdW5kLWNvbG9yIjoiI2E3ZTBlNSIsImRpc3BsYXkiOiIifSwicG9ydHJhaXQiOnsiZGlzcGxheSI6IiJ9LCJwb3J0cmFpdF9tYXhfd2lkdGgiOjEwMTgsInBvcnRyYWl0X21pbl93aWR0aCI6NzY4fQ==" tds_newsletter3-input_border_size="0" tds_newsletter3-f_title_font_family="445" tds_newsletter3-f_title_font_transform="uppercase" tds_newsletter3-f_descr_font_family="394" tds_newsletter3-f_descr_font_size="eyJhbGwiOiIxMiIsInBvcnRyYWl0IjoiMTEifQ==" tds_newsletter3-f_descr_font_line_height="eyJhbGwiOiIxLjYiLCJwb3J0cmFpdCI6IjEuNCJ9" tds_newsletter3-title_color="#000000" tds_newsletter3-description_color="#000000" tds_newsletter3-f_title_font_weight="600" tds_newsletter3-f_title_font_size="eyJhbGwiOiIyMCIsImxhbmRzY2FwZSI6IjE4IiwicG9ydHJhaXQiOiIxNiJ9" tds_newsletter3-f_input_font_family="394" tds_newsletter3-f_btn_font_family="" tds_newsletter3-f_btn_font_transform="uppercase" tds_newsletter3-f_title_font_line_height="1" title_space="eyJsYW5kc2NhcGUiOiIxMCJ9"]