Monday, December 23, 2024
spot_img
More

    Latest Posts

    ದಿ ಥಿಯರಿ ಆಫ್ ಎವೆರಿಥಿಂಗ್ : ಜೀವನ ಪ್ರೀತಿಯ ರಾಗ

    ಸ್ಟೀಫನ್ ಹಾಕಿಂಗ್ಸ್ ಬದುಕೊಂದರ ಭರವಸೆಯಾಗಿ ನಮ್ಮ ಮುಂದೆ ಇದ್ದವರು. ದೇಹದ ಬಹುಭಾಗ ನಿಷ್ಕ್ರಿಯಗೊಂಡರೂ ಮನಸ್ಥೈರ್ಯದಿಂದ ಬದುಕಿದ್ದವರು. ತನ್ನಸೀಮಿತತೆಯಲ್ಲೂ ಅನಂತವನ್ನು ಕಾಣಲು ಹಂಬಲಿಸಿದವರು. ಅವರ ಅಗಲಿಕೆ ಹಿನ್ನೆಲೆಯಲ್ಲಿ ಅವರನ್ನೇ ಕುರಿತಾಗಿ ರೂಪಿಸಿದ ದಿ ಥಿಯರಿ ಆಫ್ ಎವೆರಿಥಿಂಗ್ ಚಿತ್ರದ ಬಗ್ಗೆ ಒಂದು ನೆನಪು.

    ದಿ ಥಿಯರಿ ಆಫ್ ಎವೆರಿಥಿಂಗ್ ಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನ ಕುರಿತಾದ ಕಥೆ. ಬದುಕು ಮುರುಟಿಕೊಳ್ಳುತ್ತಿದ್ದಾಗಲೂ ತಾನು ಬದುಕದೇ ಇರಲಾರೆ ಎಂಬ ಅಖಂಡ ಆತ್ಮವಿಶ್ವಾಸವನ್ನು ಪ್ರದರ್ಶಿಸಿದವರು ಹಾಕಿಂಗ್. ಅವೆಲ್ಲವೂ ಈ ಸಿನಿಮಾದಲ್ಲಿ ಬಿಚ್ಚಿಕೊಳ್ಳುತ್ತದೆ.

    ಬದುಕಬೇಕೆಂದರೆ ಬದುಕಿನ ಬಗ್ಗೆ ಪ್ರೀತಿ ಇರಬೇಕು ಎಂಬುದು ಬಹಳ ಸತ್ಯವೆಂಬುದಕ್ಕೆ ಹಾಕಿಂಗ್ ಅವರ ಬದುಕು ನಿದರ್ಶನ. ಹಾಕಿಂಗ್ ನ ಪತ್ನಿಯಾಗಿದ್ದ ಜೇನ್ ಹಾಕಿಂಗ್ ಳ (ಕೊನೆಗೆ ಇಬ್ಬರ ನಡುವೆ ವಿಚ್ಛೇದನವಾಯಿತು) ಬರೆದಿದ್ದ ಪುಸ್ತಕ ‘ಟ್ರಾವೆಲಿಂಗ್ ಟು ಇನ್ಫಿನಿಟಿ : ಮೈಲೈಫ್ ವಿಥ್ ಹಾಕಿಂಗ್’ ನ್ನು ಆಧರಿಸಿ 2014 ರಲ್ಲಿ ‘ದಿ ಥಿಯರಿ ಆಫ್ ಎವೆರಿಥಿಂಗ್’ ಚಲನಚಿತ್ರ ಬಿಡುಗಡೆಗೊಂಡಿತು. ಇದೊಂದು ಆತ್ಮಕಥೆಯನ್ನಾಧರಿಸಿದ ಚಲನಚಿತ್ರ. ಜೇಮ್ಸ್ ಮಾರ್ಷ್ ಇದನ್ನು ನಿರ್ದೇಶಿಸಿದ್ದರು. ಎಡ್ಡಿ ರೆಡ್‍ಮೈನ್ ಹಾಕಿಂಗ್ ಪಾತ್ರವನ್ನು ನಿರ್ವಹಿಸಿದ್ದರೆ, ಫೆಲಿಸಿಟಿ ಜೋನ್ಸ್ ಜೇನ್ ಳ ಪಾತ್ರ ನಿರ್ವಹಿಸಿದ್ದರು. ಚಾರ್ಲಿ ಕಾಕ್ಸ್ ಜೇನ್ ಳ ಎರಡನೇ ಗಂಡ ಜೋನಾಥನ್ ಪಾತ್ರವನ್ನು ಪೂರೈಸಿದ್ದರು.

    ಇಡೀ ಸಿನಿಮಾಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸಿನಲ್ಲೂ ದಾಖಲೆ ನಿರ್ಮಿಸಿತು. ಹಿನ್ನೆಲೆ ಸಂಗೀತ, ಸಿನೆಛಾಯಾಗ್ರಹಣ ಹಾಗೂ ಹಾಕಿಂಗ್-ಜೇನ್ ಪಾತ್ರದ ಅಭಿನಯಕ್ಕೆ ಸಾರ್ವತ್ರಿಕ ಪ್ರಶಂಸೆ ಕೇಳಿಬಂದಿತು. ವಿವಿಧ ಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನಗೊಂಡಿತು. ಟೊರೆಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅದರ ವಲ್ರ್ಡ್ ಪ್ರೀಮಿಯರ್ ಆಯಿತು. ಆಸ್ಕರ್ ನ ಅತ್ಯುತ್ತಮ ನಟ ಪ್ರಶಸ್ತಿ ಬಂದಿತು. ಎರಡು ವಿಭಾಗಗಲ್ಲಿ ಗೋಲ್ಡನ್ ಗ್ಲೋಬ್ ಹಾಗೂ 3 ವಿಭಾಗಗಳಲ್ಲಿ ಬಾಪ್ಟಾ ಪ್ರಶಸ್ತಿ ಪಡೆಯಿತು.

    ಉಳಿದಂತೆ ಸಿನಿಮಾ ಒಂದು ಬಗೆಯಲ್ಲಿ ಅರ್ಧ ಜೀವನಗಾಥೆಯಾಗಿಯೂ, ಇನ್ನರ್ಧ ಪ್ರೇಮಕಥೆಯಾಗಿಯೂ ತೆರೆದುಕೊಳ್ಳುತ್ತದೆ. ಇದೇ ಅಭಿಪ್ರಾಯವನ್ನು ಹಲವು ವಿಮರ್ಶಕರೂ ವ್ಯಕ್ತಪಡಿಸಿದ್ದಾರೆ. ಪುಸ್ತಕದ ಭಾಗವನ್ನು ಕಥೆಗೆ ಅಳವಡಿಸುವಾಗ ನಿರ್ದೇಶಕ ಹಾಗೂ ಚಿತ್ರಕಥೆಗಾರ ಸಾಕಷ್ಟು ಸ್ವಾತಂತ್ರ್ಯ ಅನುಭವಿಸಿದ್ದಾರೆಂಬುದು ಚಿತ್ರ ಕಂಡಾಗ ತೋರುವ ಪ್ರಮುಖ ಅಂಶ. ಇಡೀ ಚಿತ್ರದಲ್ಲಿ ನೋಡಿಸಿಕೊಂಡು ಹೋಗುವ ಸಾಕಷ್ಟು ಅಂಶಗಳಿದ್ದವು. ಇತ್ತ ಸ್ಫೂರ್ತಿ ಕಥೆಯಾಗಿಯೂ, ವಿಷಾದದ ಛಾಯೆಯುಳ್ಳ ಪ್ರೇಮಕಥೆಯಾಗಿಯೂ ಹಾಗೂ ನವಿರಾದ ಹಾಸ್ಯ ಅಂಶಗಳಿಂದಲೂ ಚಿತ್ರ ಮುದ ನೀಡುವುದರಲ್ಲಿ ಸೋಲುವುದಿಲ್ಲ.

    ಒಂದು ಖುಷಿಯ ಅಂಶವೆಂದರೆ ಇಡೀ ಚಿತ್ರದಲ್ಲಿ ಜೇನ್ ಮತ್ತು ಹಾಕಿಂಗ್ಸ್ ನ ನಡುವಿನ ಸಂಬಂಧವನ್ನು ಎಲ್ಲೂ ಯಾವ ಅತಿರೇಕಕ್ಕೂ ಹೋಗದೇ ಗೌರವಯುತವಾಗಿ ನಡೆಸಿಕೊಳ್ಳುವ ಜಾಣ್ಮೆಯನ್ನು ನಿರ್ದೇಶಕ ತೋರಿದ್ದಾನೆ. ಈ ಎಚ್ಚರದ ಅಂಶ ಅಥವಾ ಒಂದು ಸಂಬಂಧಕ್ಕೆ ನೀಡಬೇಕಾದ ನಿರ್ದಿಷ್ಟ ಗೌರವ ನಮ್ಮ ಬಾಲಿವುಡ್ ಸೇರಿದಂತೆ ಇತರೆ ಸಿನಿಮಾಗಳಲ್ಲಿ ನೋಡುವುದು ತೀರಾ ಕಷ್ಟವಾದುದು.

    ಹಾಕಿಂಗ್ಸ್ ಇಷ್ಟವಾಗುವುದೂ ಇದೇ ಕಾರಣಕ್ಕೆ. ಬದುಕಿನ ಬಗೆಗಿನ ಅದಮ್ಯ ಪ್ರೀತಿಯನ್ನು ದುಡಿಸಿಕೊಳ್ಳಲು ಪ್ರಯತ್ನಿಸಿದವರು. ಹಾಕಿಂಗ್ಸ್ ಕೇಂಬ್ರಿಡ್ಜ್ ವಿವಿ ಯಲ್ಲಿ ಓದುತ್ತಿದ್ದಾಗ ಒಬ್ಬ ಸಾಹಿತ್ಯ ತರಗತಿಯ ಸಹಪಾಠಿಯೊಬ್ಬಳಲ್ಲಿ ಅನುರಕ್ತರಾಗಿದ್ದರು. ಇವರ ಪ್ರೌಢ ಪ್ರಬಂಧಕ್ಕೆ ವಿಷಯವನ್ನು ಹುಡುಕುತ್ತಿದ್ದಾಗ ಒಮ್ಮೆ ಕಪ್ಪು ರಂಧ್ರ ಕುರಿತಾದ ಉಪನ್ಯಾಸವನ್ನು ಹಾಕಿಂಗ್ಸ್ ತನ್ನ ಗುರುವಿನೊಂದಿಗೆ ಕೇಳಿ ಸಂತುಷ್ಟರಾಗಿ ಆದರ ಕುರಿತೇ ಸಂಶೋಧನೆಗೆ ತೊಡಗುತ್ತಾರೆ. ಈ ಮಧ್ಯೆ ಹಾಕಿಂಗ್ಸ್ ತಮ್ಮ ತೋಳುಗಳ ಸ್ವಾಧೀನವನ್ನು ಕಳೆದುಕೊಳ್ಳತೊಡಗುತ್ತಾರೆ. ಕೊನೆಗೆ ಮಾತನಾಡಲಾಗದ, ಏಳಲಾಗದ ಸ್ಥಿತಿಯನ್ನು ತಲುಪುತ್ತಾರೆ. ಆ ಸಂದರ್ಭದಲ್ಲಿ ಜೇನ್ ಸಹಾಯಕ್ಕೆ ಬರುತ್ತಾಳೆ. ಅಂಥದೊಂದು ಅಧೀರಗೊಳ್ಳುವ ಸ್ಥಿತಿಯಲ್ಲೂ ಹಾಕಿಂಗ್ಸ್ ವೈದ್ಯರಲ್ಲಿ ಕೇಳುವ ಪ್ರಶ್ನೆ, ‘ಸರಿ, ಇಡೀ ದೇಹ ನಿಷ್ಕ್ರಿಯಗೊಂಡರೂ ಮೆದುಳು ನಿಷ್ಕ್ರಿಯಗೊಳ್ಳುತ್ತದೆಯೇ?’ ಎಂಬುದು. ವೈದ್ಯರು ಮೆದುಳಿಗೆ ಯಾವ ಸಮಸ್ಯೆಯೂ ಇರದು ಎಂದಾಗ ಹಾಕಿಂಗ್ಸ್ ಗೆ ಮತ್ತೊಂದು ಬದುಕು ಸಿಕ್ಕಂತಾಗುತ್ತದೆ. ಬಳಿಕ ಆವರು ಇಂದಿನವರೆಗೂ ಬದುಕಿದ್ದು ಮೆದುಳು ಹಾಗೂ ಆತ್ಮಸ್ಥೈರ್ಯದ ಮೂಲಕ. ತನ್ನ ಬದುಕಿನ ಸೀಮಿತತೆಯನ್ನು ಅರ್ಥ ಮಾಡಿಕೊಂಡ ಮೇಲೂ ಅವರು ಕಂಡಿದ್ದು ಅನಂತವನ್ನೇ. ಇಂದಿಗೂ ಕಪ್ಪು ರಂಧ್ರದ ಬಗೆಗಿನ ಅವರ ಪ್ರತಿಪಾದನೆಗೆ ಹಲವು ಪುರಸ್ಕಾರಗಳು ಬಂದಿವೆ. ಒಬ್ಬ ಶ್ರೇಷ್ಠ ಭೌತಶಾಸ್ತ್ರಜ್ಞರಾಗಿ ಪ್ರಸಿದ್ಧರಾಗಿದ್ದವರು.

    ಕೆಲ ವರ್ಷಗಳ ಬಳಿಕ ಪುರಸ್ಕಾರವೊಂದನ್ನು ಸ್ವೀಕರಿಸಿ ನೀಡಿದ ಉಪನ್ಯಾಸದಲ್ಲಿ ಹೇಳಿದ ಮಾತು-“ಮನುಷ್ಯನ ಗುರಿ ಸಾಧನೆಗೆ ಯಾವುದೇ ಅಡ್ಡಿಗಳಿಲ್ಲ. ನಾವೆಲ್ಲರೂ ವಿಭಿನ್ನವೇ. ಎಷ್ಟೇ ಕೆಟ್ಟದಾದ, ಕಷ್ಟವಾದ ಬದುಕನ್ನು ನೀವು ಕಂಡಿದ್ದರೂ ಅದರಲ್ಲಿ ಏನಾದರೂ ಮಾಡಲಿಕ್ಕೆ, ಸಾಧಿಸಲಿಕ್ಕೆ ಅವಕಾಶವಿದ್ದೇ ಇದೆ. ಎಲ್ಲಿ ಬದುಕಿದೆಯೋ, ಅಲ್ಲಿ ಭರವಸೆ ಖಂಡಿತಾ ಇದೆ’. ಇದೇ ಸಾಲು ಈ ಚಲನಚಿತ್ರ ನೋಡಿದ ಮೇಲೂ ಅನಿಸುವಂಥದ್ದು ಎನ್ನುವುದೇ ಇದರ ವಿಶೇಷ. (ಲೇಖನ ಕೃಪೆ – ಸಾಂಗತ್ಯ ಬ್ಲಾಗ್)

    Latest Posts

    spot_imgspot_img

    Don't Miss

    [tdn_block_newsletter_subscribe title_text="Stay in touch" description="VG8gYmUgdXBkYXRlZCB3aXRoIGFsbCB0aGUgbGF0ZXN0IG5ld3MsIG9mZmVycyBhbmQgc3BlY2lhbCBhbm5vdW5jZW1lbnRzLg==" input_placeholder="Email address" tds_newsletter2-image="5" tds_newsletter2-image_bg_color="#c3ecff" tds_newsletter3-input_bar_display="row" tds_newsletter4-image="6" tds_newsletter4-image_bg_color="#fffbcf" tds_newsletter4-btn_bg_color="#f3b700" tds_newsletter4-check_accent="#f3b700" tds_newsletter5-tdicon="tdc-font-fa tdc-font-fa-envelope-o" tds_newsletter5-btn_bg_color="#000000" tds_newsletter5-btn_bg_color_hover="#4db2ec" tds_newsletter5-check_accent="#000000" tds_newsletter6-input_bar_display="row" tds_newsletter6-btn_bg_color="#da1414" tds_newsletter6-check_accent="#da1414" tds_newsletter7-image="7" tds_newsletter7-btn_bg_color="#1c69ad" tds_newsletter7-check_accent="#1c69ad" tds_newsletter7-f_title_font_size="20" tds_newsletter7-f_title_font_line_height="28px" tds_newsletter8-input_bar_display="row" tds_newsletter8-btn_bg_color="#00649e" tds_newsletter8-btn_bg_color_hover="#21709e" tds_newsletter8-check_accent="#00649e" embedded_form_code="JTNDIS0tJTIwQmVnaW4lMjBNYWlsQ2hpbXAlMjBTaWdudXAlMjBGb3JtJTIwLS0lM0UlMEElMEElM0Nmb3JtJTIwYWN0aW9uJTNEJTIyaHR0cHMlM0ElMkYlMkZ0YWdkaXYudXMxNi5saXN0LW1hbmFnZS5jb20lMkZzdWJzY3JpYmUlMkZwb3N0JTNGdSUzRDZlYmQzMWU5NGNjYzVhZGRkYmZhZGFhNTUlMjZhbXAlM0JpZCUzRGVkODQwMzZmNGMlMjIlMjBtZXRob2QlM0QlMjJwb3N0JTIyJTIwaWQlM0QlMjJtYy1lbWJlZGRlZC1zdWJzY3JpYmUtZm9ybSUyMiUyMG5hbWUlM0QlMjJtYy1lbWJlZGRlZC1zdWJzY3JpYmUtZm9ybSUyMiUyMGNsYXNzJTNEJTIydmFsaWRhdGUlMjIlMjB0YXJnZXQlM0QlMjJfYmxhbmslMjIlMjBub3ZhbGlkYXRlJTNFJTNDJTJGZm9ybSUzRSUwQSUwQSUzQyEtLUVuZCUyMG1jX2VtYmVkX3NpZ251cC0tJTNF" descr_space="eyJhbGwiOiIxNSIsImxhbmRzY2FwZSI6IjE1In0=" tds_newsletter="tds_newsletter3" tds_newsletter3-all_border_width="0" btn_text="Sign up" tds_newsletter3-btn_bg_color="#ea1717" tds_newsletter3-btn_bg_color_hover="#000000" tds_newsletter3-btn_border_size="0" tdc_css="eyJhbGwiOnsibWFyZ2luLWJvdHRvbSI6IjAiLCJiYWNrZ3JvdW5kLWNvbG9yIjoiI2E3ZTBlNSIsImRpc3BsYXkiOiIifSwicG9ydHJhaXQiOnsiZGlzcGxheSI6IiJ9LCJwb3J0cmFpdF9tYXhfd2lkdGgiOjEwMTgsInBvcnRyYWl0X21pbl93aWR0aCI6NzY4fQ==" tds_newsletter3-input_border_size="0" tds_newsletter3-f_title_font_family="445" tds_newsletter3-f_title_font_transform="uppercase" tds_newsletter3-f_descr_font_family="394" tds_newsletter3-f_descr_font_size="eyJhbGwiOiIxMiIsInBvcnRyYWl0IjoiMTEifQ==" tds_newsletter3-f_descr_font_line_height="eyJhbGwiOiIxLjYiLCJwb3J0cmFpdCI6IjEuNCJ9" tds_newsletter3-title_color="#000000" tds_newsletter3-description_color="#000000" tds_newsletter3-f_title_font_weight="600" tds_newsletter3-f_title_font_size="eyJhbGwiOiIyMCIsImxhbmRzY2FwZSI6IjE4IiwicG9ydHJhaXQiOiIxNiJ9" tds_newsletter3-f_input_font_family="394" tds_newsletter3-f_btn_font_family="" tds_newsletter3-f_btn_font_transform="uppercase" tds_newsletter3-f_title_font_line_height="1" title_space="eyJsYW5kc2NhcGUiOiIxMCJ9"]