Friday, March 21, 2025
spot_img
More

    Latest Posts

    New Movie: ಅನ್ನದಾತನ ಹೆಸರಿನಲ್ಲಲ್ಲ; ಬದುಕಿನ ಬಗೆಗಿನ ಸಿನಿಮಾವಂತೆ ಇದು !

    ರೈತರ ಕಥಾವಸ್ತು ಬಗೆಗಿನ ಸಿನಿಮಾ ಮತ್ತು ಸಾಹಿತ್ಯ ಕನ್ನಡದಲ್ಲಿ ಕಡಿಮೆ ಏನಿಲ್ಲ. ಅದರಲ್ಲೂ ಸಿನಿಮಾ ಎಂದರೆ ರೈತರ ಬಗ್ಗೆ ಉಲ್ಲೇಖಿಸುವಾಗೆಲೆಲ್ಲ ಡಾ. ರಾಜಕುಮಾರ್‌ ಅವರ ಬಂಗಾರದ ಮನುಷ್ಯ ಉಲ್ಲೇಖಿಸದೇ ಇರುವುದಿಲ್ಲ. ಹಾಗೆಯೇ 1950 ರಿಂದ ಇಂದಿನವರೆಗೆ ಸಾಕಷ್ಟು ರೈತರ ಕಥಾವಸ್ತು ಆಧರಿತ ಸಿನಿಮಾಗಳು ಬಂದಿವೆ. ಹೂ ಬೆಳೆಗಾರರ ಕುರಿತು ಬಂದ ವಿಷ್ಣುವರ್ಧನ್‌ ಅವರ ಮಾತಾಡ್‌ ಮಾತಾಡ್‌ ಮಲ್ಲಿಗೆ..ಹಲವು ಸಿನಿಮಾಗಳು ಇವೆ.

    ಈಗ ಮತ್ತೊಂದು ರೈತರ ಕುರಿತಾದ ಸಿನಿಮಾ ಸಿದ್ಧವಾಗತೊಡಗಿದೆಯಂತೆ. ನಟ ವಿಜಯ ರಾಘವೇಂದ್ರ ಕಥಾನಾಯಕರಾಗಿರುವ ಚಿತ್ರವಂತೆ.

    ಇದೂ ಇಷ್ಟವಾಗಬಹುದು, ಓದಿ : Ibbani:ಕಥೆಯು ಹಳೆಯದಾದರೇನಂತೆ, ನಿರೂಪಣೆ ನವ ನವೀನವಂತೆ!

    ಆಕಾಶ ಪಿಕ್ಚರ್ಸ್ ನಡಿ ರೂಪುಗೊಳ್ಳುತ್ತಿರುವ ಈ ಚಿತ್ರವನ್ನು ನಿರ್ಮಿಸುತ್ತಿರುವವರು ಪ್ರಕಾಶ್‌ ಸಿದ್ಧಪ್ಪ. ನಿರ್ದೇಶನ ಪಿ.ಸಿ. ಶೇಖರ್‌ ರದ್ದು. ಪಿ. ಸಿ. ಶೇಖರ್‌ ಈಗಾಗಲೇ ಹಲವು ಸಿನಿಮಾಗಳನ್ನು ನಿರ್ದೇಶಿಸಿದವರು.

    ಸದ್ಯವೇ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಬಹುತೇಕ ಚಿತ್ರೀಕರಣ ಹಳ್ಳಿಯಲ್ಲೇ ಅಂತೆ. ತಾರಾಗಣವೂ ಸಿದ್ಧಗೊಳ್ಳುತ್ತಿದೆ. ರೈತನ ಮಹತ್ವವನ್ನು ದೇಶಕ್ಕೆ ಎತ್ತಿ ತೋರಿಸುವ ಕಥೆಯಂತೆ ಇದು. ದೇಶಕ್ಕೇನು, ಹೊಸ ತಲೆಮಾರಿನವರಿಗೂ(ಯಾಕೆಂದರೆ ಹೊಸ ತಲೆಮಾರಿನವರಿಗೆ ಅಕ್ಕಿ ಮಾಲ್‌ ಗಳಲ್ಲಿ ಸಿಗುವುದು ಬಿಟ್ಟರೆ ಎಲ್ಲಿಂದ ಬರುತ್ತದೆ, ಯಾರು ಬೆಳೆಯುತ್ತಾರೆ ಎಂಬ ಮಾಹಿತಿಯೇ ಇರದು) ತೋರಿಸಬೇಕಿದೆ.

    ಒಬ್ಬ ವ್ಯಾಪಾರಿ ಅಂಗಡಿ ಮುಚ್ಚಿದರೆ ಅವನ ಕುಟುಂಬ ಕಷ್ಟಕ್ಕೆ ಸಿಲುಕಬಹುದು. ಆದರೆ ಒಬ್ಬ ರೈತ ಕೃಷಿ ಕೈ ಬಿಟ್ಟರೆ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಅದೇ ಈಗ ಆಗುತ್ತಿರುವುದು. ಹಾಗಾಗಿ ಒಳ್ಳೆಯ ಕಥೆ ಎನ್ನಬಹುದ. ಆದರೆ ಎಷ್ಟು ಪರಿಣಾಮಕಾರಿಯಾಗಿ ತಲೆಯಲ್ಲಿ ಹುಟ್ಟಿಕೊಂಡ ಕಥೆಯನ್ನು ಒಂದು ಆಲೋಚನೆಯನ್ನಾಗಿ ಮಾಡಿ ಜನರ ತಲೆಯೊಳಗೆ ಬಿತ್ತುತ್ತಾರೆ ಎಂಬುದೇ ಇಲ್ಲಿ ಮುಖ್ಯ.

    ಇದೂ ಇಷ್ಟವಾಗಬಹುದು, ಓದಿ : New Movies:ಸಂಜು ವೆಡ್ಸ್‌ ಗೀತಾ: ಭಾಗ 2 ಬಿಡುಗಡೆಗೆ ಯಾವಾಗ ಮುಹೂರ್ತ?

    ಕಥೆ ಪಿಸಿ ಶೇಖರರದ್ದೇ. ಅದೂ ವಿಜಯ ರಾಘವೇಂದ್ರರನ್ನೇ ಗಮನದಲ್ಲಿಟ್ಟುಕೊಂಡು ಬರೆದಿದ್ದರಂತೆ. ಕಥೆಗಾರರು ಅದರಲ್ಲೂ ಸಿನಿಮಾದ ಕಥೆಗಾರರು ಒಂದಿಷ್ಟು ಹೀರೋಗಳನ್ನು ತಲೆಯಲ್ಲಿಟ್ಟುಕೊಂಡು ಕಥೆಯೇನೋ ಬರೆಯುತ್ತಾರೆ. ಕೊನೆಗೆ ಹೀರೋಗಳ ದಿನಾಂಕ ಸಿಗದೇ ಅದನ್ನು ಸಿಕ್ಕಿದವರಿಗೆ ಹೊಂದಿಸುತ್ತಾ ಹೊಂದಿಸುತ್ತಾ ಕಥೆಗಾರರೂ ಬಸವಳಿಯುತ್ತಾನೆ, ಕಥೆಯೂ ಸೊರಗುತ್ತದೆ. ಅಂಥದ್ದರಲ್ಲಿ ವಿಜಯ ರಾಘವೇಂದ್ರರೇ ಕಥಾ ನಾಯಕರಾಗಿ ಸಿಕ್ಕಿರುವುದು ಒಂದು ಲೆಕ್ಕದಲ್ಲಿ ಅದೃಷ್ಟ ಎನ್ನಬಹುದು.

    ಇದೂ ಇಷ್ಟವಾಗಬಹುದು, ಓದಿ : Thangalan Review: ವಿಕ್ರಮರ ನಿರೀಕ್ಷೆಯ ಬಲೂನು ಅನುಭವದ ದೃಷ್ಟಿಯಿಂದ ಠುಸ್ಸಾಗಿಲ್ಲ !

    ತಾರಾಗಣದ ಸದಸ್ಯರು, ತಾಂತ್ರಿಕ ಸಿಬಂದಿಯನ್ನು ಹೊಂದಿಸಲಾಗುತ್ತಿದೆ. ಸ್ವತಃ ನಿರ್ದೇಶಕ ಪಿ.ಸಿ. ಶೇಖರ್‌ ಅವರೇ ಹೇಳಿಕೊಳ್ಳುವಂತೆ ಅವರ ಸಿನಿಮಾ ಜೀವನದಲ್ಲಿ ಇದು ವಿಭಿನ್ನವಾದ ಸಿನಿಮಾವಂತೆ.

    ವಿಜಯ ರಾಘವೇಂದ್ರರಿಗೆ ಖುಷಿಯಾಗಿರುವುದು ರೈತರ ಕಥಾವಸ್ತು ಕೇಳಿ. ನೋಡೋಣ, ಅನ್ನದಾತನ ಕಥೆ ಹೇಗೆ ಮೂಡಿಬರುತ್ತದೆ ಎಂದು. ಚೆನ್ನಾಗಿ ಮೂಡಿ ಬಂದರೆ ಕೈ ಹಿಡಿಯಲಿಕ್ಕೆ ಪ್ರೇಕ್ಷಕರಂತೂ ಸಿದ್ಧರಿದ್ದಾರೆ. ಯಾಕೆಂದರೆ ಪ್ರಾಮಾಣಿಕ ಸೃಜನಶೀಲ ಪ್ರಯತ್ನ ಸೋತದ್ದಿಲ್ಲ. ಅದೇ ಈ ಹೊತ್ತಿನ ಸ್ಫೂರ್ತಿ. . ಇದೊಂದು ಒಳ್ಳೆಯ ಪ್ರಯತ್ನವಾಗಲಿ ಎಂದು ಹಾರೈಸೋಣ.

    Latest Posts

    spot_imgspot_img

    Don't Miss