ಕಾನ್ಸ್ : ಕಾನ್ಸ್ ಚಿತ್ರೋತ್ಸವ 2024 ರ 77 ನೇ ಆವೃತ್ತಿಯಲ್ಲಿ ಭಾರತೀಯ ಸಿನಿಮಾ ಜಗತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಬಹಳ ಪ್ರಮುಖವಾಗಿ ತೀರ್ಪುಗಾರರ ವಿಶೇಷ ಗ್ರ್ಯಾಂಡ್ ಪ್ರಿಕ್ಸ್ ಪುರಸ್ಕಾರವನ್ನು ಪಾಯಲ್ ಕಪಾಡಿಯ ಅವರ “ಆಲ್ ವಿ ಇಮ್ಯಾಜಿನ್ ಆಸ್ ಲೈಟ್ʼ ಚಲನಚಿತ್ರವು ಪಡೆದುಕೊಂಡಿದೆ. ಈ ಪುರಸ್ಕಾರ ಆರಂಭವಾದಾಗಿನಿಂದ (1968) ಇದುವರೆಗೂ ಭಾರತೀಯ ಚಲನಚಿತ್ರ ಪಡೆದಿಲ್ಲ. ಇದೇ ಮೊದಲು.
ವಾಸ್ತವವಾಗಿ ಪಾಯಲ್ ಕಪಾಡಿಯ ಅವರ ಚಿತ್ರವು ಅತ್ಯುತ್ತಮ ಚಿತ್ರಕ್ಕೆ ಪಡೆಯುವ ಚಿತ್ರೋತ್ಸವದ ಪರಮೋಚ್ಚ ಪ್ರಶಸ್ತಿ ಪಾಲ್ಮೆದೋರ್ ಗೆ ಪ್ರಯತ್ನ ಪಟ್ಟಿದ್ದರು. ಎಲ್ಲ ಮಾಧ್ಯಮಗಳಲ್ಲೂ ಒಳ್ಳೆ ಅಭಿಪ್ರಾಯ ವ್ಯಕ್ತವಾಗಿತಲ್ಲದೇ, ಪ್ರಶಸ್ತಿಯ ಸೆಣಸಿಗೆ ಮುಂಚೂಣಿಯಲ್ಲಿರಿಸಿದ್ದವು. ಅಂತಿಮವಾಗಿ ಈ ಪ್ರಶಸ್ತಿಗೆ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಅಲ್ಲದೇ, ಸೀನ್ ಬೇಕರ್ ರ ಅನೋರಾ ಹಾಗೂ ಮೊಹಮ್ಮದ್ ರಸೋಲ್ಫ್ ರ ದಿ ಸೀಡ್ ಆಫ್ ಸೇಕ್ರೆಡ್ ಪಿಗ್ ಅಂತಿಮ ಸುತ್ತಿನಲ್ಲಿದ್ದವು.
Cannes2024: ಅತ್ಯುತ್ತಮ ನಟಿ ಪ್ರಶಸ್ತಿಯೊಂದಿಗೆ ಇತಿಹಾಸ ನಿರ್ಮಿಸಿದ ಅನಸೂಯಾ ಗುಪ್ತ
ಈ ಬಾರಿ ಒಟ್ಟು ನಾಲ್ಕು ಮಂದಿ ವಿವಿಧ ವಿಭಾಗಗಳಲ್ಲಿ ಭಾರತೀಯರು ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿದಂತಾಗಿದೆ. ಪಾಯಲ್ ಕಪಾಡಿಯ ಅವರ ಸಿನಿಮಾದ ಜತೆಗೆ ಲಾ ಸಿನೆಫ್ ವಿಭಾಗದಲ್ಲಿ ಮೈಸೂರಿನ ಚಿದಾನಂದರ ಚಿತ್ರಕ್ಕೆ ಪ್ರಥಮ ಪುರಸ್ಕಾರ ಲಭಿಸಿದೆ. ಇದೇ ವಿಭಾಗದಲ್ಲಿ ಮಾನ್ಸಿ ಮಹೇಶ್ವರಿಯವರ ಬನ್ನಿಹುಡ್ ಚಿತ್ರ ಸಹ ತೃತೀಯ ಪ್ರಶಸ್ತಿ ಪಡೆದಿದೆ.
ಇವೆಲ್ಲಕ್ಕಿದ್ದಂತಲೂ ಕಿರೀಟವೆಂಬಂತೆ ಪ್ರಥಮ ಬಾರಿಗೆ ಅನ್ ಸರ್ಟೇನ್ ರಿಗಾರ್ಡ್ ವಿಭಾಗದಲ್ಲಿ ದಿ ಶೇಮ್ ಲೆಸ್ ಚಿತ್ರದ ನಟನೆಗೆ ಅನಸೂಯ ಸೇನ್ ಗುಪ್ತಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಈ ಪ್ರಶಸ್ತಿ ಪಡೆದಿರುವ ಮೊದಲ ಭಾರತೀಯ ಕಲಾವಿದೆ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದಾರೆ.
Cannes 2024: ಕನ್ನಡದ ಹುಡುಗನ ಚಿದಾನಂದರಿಗೆ ಕಾನ್ಸ್ ಚಿತ್ರೋತ್ಸವ ಪ್ರಶಸ್ತಿ
ಉಳಿದಂತೆ ಪ್ರಶಸ್ತಿ ವಿವರ ಇಂತಿದೆ:
Palme d’or
ANORA
Sean BAKER
Grand Prix
ALL WE IMAGINE AS LIGHT
Payal KAPADIA
Jury Prize
EMILIA PÉREZ
Jacques AUDIARD
Best Director
Miguel GOMES
for GRAND TOUR
Special Award
MOHAMMAD RASOULOF
for THE SEED OF THE SACRED FIG
Best performance by an actor
Jesse PLEMONS
in KINDS OF KINDNESS directed by Yorgos LANTHIMOS
Best performance by an actress
Adriana PAZ
Zoe SALDAÑA
Karla Sofía GASCÓN
Selena GOMEZ
in EMILIA PÉREZ directed by Jacques AUDIARD
Best Screenplay
Coralie FARGEAT
for THE SUBSTANCE
Short Films
Palme d’or
THE MAN WHO COULD NOT REMAIN SILENT
Nebojša SLIJEPČEVIĆ
Special Mention
BAD FOR A MOMENT
Daniel SOARES
Un Certain Regard
Un Certain Regard Prize
BLACK DOG
Guan Hu
Jury Prize
L’HISTOIRE DE SOULEYMANE
Boris Lojkine
Best Director ex-aequo
ROBERTO MINERVINI
The Damned
RUNGANO NYONI
On Becoming a Guinea Fowl
Best Actress
ANASUYA SENGUPTA
The Shameless
Best Actor
ABOU SANGARÉ
L’Histoire de Souleymane
Youth Award
HOLY COW
Louise Courvoisier
1st film
Special mention
NORAH
Tawfik Alzaidi
1st film
Caméra d’or
Caméra d’or Prize
ARMAND
HALFDAN ULLMANN TØNDEL
Un Certain Regard
Special Mention
MONGREL
WEI LIANG CHIANG & YOU QIAO YIN
Quinzaine des Cinéastes
La Cinef
First Prize
SUNFLOWERS WERE THE FIRST ONES TO KNOW…
Chidananda S Naik
FTII, Pune, India
Joint Second Prize
OUT THE WINDOW THROUGH THE WALL
Asya Segalovich
Columbia University, United States
THE CHAOS SHE LEFT BEHIND
Nikos Kolioukos
Aristotle University of Thessaloniki, Greece
Third Prize
BUNNYHOOD
Mansi Maheshwari
NFTS, United Kingdom