Shyam Benegal : ಸಿನಿಮಾದಿಂದಲ್ಲ ; ಸಿನಿಮಾ ಮಾಧ್ಯಮದಿಂದ ಸಾಮಾಜಿಕ ಬದಲಾವಣೆ ಸಾಧ್ಯ

ಗಿರೀಶ್‌ ಕಾರ್ನಾಡರು ಭಾರತದ ಅತ್ಯುತ್ತಮ ನಾಟಕಕಾರ, ನಿರ್ದೇಶಕ, ನಟ. ಹತ್ತಾರು ಒಳ್ಳೆಯ ಪ್ರಯೋಗಗಳನ್ನು ಕೊಟ್ಟು, ನಿರ್ದೇಶಿಸಿ, ಹತ್ತಾರು ಒಳ್ಳೆಯ ಚಿತ್ರಗಳಲ್ಲಿ ನಟಿಸಿ ಹೆಸರಾದವರು ಕಾರ್ನಾಡರು. ಅಂಥ ನಿರ್ದೇಶಕರು ಮತ್ತೊಬ್ಬ ಮಹಾನ್‌ ನಿರ್ದೇಶಕರೊಂದಿಗೆ ಚರ್ಚಿಸಿದ್ದು, ಸಂದರ್ಶಿಸಿದ್ದು ವಿಶೇಷ. ಆ ಮಹಾನ್‌ ನಿರ್ದೇಶಕ ಶ್ಯಾಮ್‌ ಬೆನಗಲ್.‌ ಕೆಲವು ಒಳನೋಟಗಳುಳ್ಳ ಈ ಸಂದರ್ಶನ ಹೀಗೆ ಒಂದು ಕಡೆ ಸಿಕ್ಕಿತು. ಈಗ ಶ್ಯಾಮ್‌ ಬೆನಗಲ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ವಿಶಿಷ್ಟವಾದ ಚಲನಚಿತ್ರ ಮಂಥನ್‌ ಈ ಬಾರಿಯ ಕಾನ್ಸ್‌ ಚಿತ್ರೋತ್ಸವದಲ್ಲಿ ರೀಸ್ಟೋರ್ಡ್‌ ಕ್ಲಾಸಿಕ್‌ ವಿಭಾಗದಲ್ಲಿ ಪ್ರದರ್ಶಿತಗೊಂಡಿತು. ಅದನ್ನು ಕಂಡ ಸಿನಿಪ್ರೇಮಿಗಳು ಸಿನಿಮಾ ಮುಗಿದ ಮೇಲೆ ಸುದೀರ್ಘ ಕರತಾಡನದ ಮೂಲಕ ಇಡೀ ಚಿತ್ರತಂಡವನ್ನು ಅಭಿನಂದಿಸಿದರು. ಆ ಘಳಿಗೆಗೆ ಸಾಕ್ಷಿಯಾದ ಮಂಥನ್‌ ಚಿತ್ರದ ನಟ ನಾಸಿರುದ್ದೀನ್‌ ಷಾ ತೀರಾ ಭಾವುಕರಾಗಿ “ಈ ಘಳಿಗೆಯಲ್ಲಿ ಅವರೆಲ್ಲ ಇರಬೇಕಿತ್ತು” ಎಂದು ನುಡಿದರು. ಈ ಅವರೆಲ್ಲ ಎನ್ನುವ ಪಟ್ಟಿಯಲ್ಲಿ ಗಿರೀಶ್‌ ಕಾರ್ನಾಡರೂ ಒಬ್ಬರು. ಇದೇ ಕಾರಣಕ್ಕೆ ಈ ಪುಟ್ಟ ಸಂದರ್ಶನವನ್ನು ಇಲ್ಲಿ ಪ್ರಕಟಿಸಲಾಗಿದೆ.  ಶ್ಯಾಮ್‌ ಬೆನಗಲ್‌ ಅವರ ದೊಡ್ಡ ನಂಬಿಕೆಯೆಂದರೆ ಸಿನಿಮಾಕ್ಕಿಂತಲೂ ಸಿನಿಮಾ ಮಾಧ್ಯಮ ಬಗೆಗಿನದ್ದು. ಅದೇ ವಿಶೇಷ.

ನಿಮ್ಮ ಮೊದಲ ಚಿತ್ರ ಅಂಕುರ್ ಪ್ರಾರಂಭವಾಗಲು ಸಾಕಷ್ಟು ವರ್ಷಗಳೇ ಬೇಕಾಯಿತಲ್ಲವೇ?

ಹೌದು, ನಾನು 18 ವರ್ಷದವನಿದ್ದಾಗ ನಾನು ಇಪ್ಪತ್ತಕ್ಕೆ ಕಾಲಿಟ್ಟ ಕೂಡಲೆ ಮೊದಲ ಚಿತ್ರ ನಿರ್ದೇಶಿಸುವ ಎಂಬ ವಿಶ್ವಾಸವಿತ್ತು. 20ಕ್ಕೆ ಕಾಲಿಟ್ಟಾಗ ಇನ್ನೆರಡು ವರ್ಷದಲ್ಲಿ ಚಿತ್ರ ನಿರ್ದೇಶಿಸಲೇಬೇಕು ಇಲ್ಲವಾದರೆ ನಾನು ಸತ್ತು ಬಿಡುತ್ತೇನೆ ಎಂದುಕೊಂಡಿದ್ದೆ. ಇದೂ ಹೀಗೆ ಸಾಗಿತು ನನ್ನ ಆಸೆ ಕೈಗೂಡಿದ್ದು 30ನೇ ವಯಸ್ಸಿನಲ್ಲಿ ನನ್ನ ಆಸೆ ಕೈಗೂಡಿತು. ಅದಕ್ಕೆ ಕಾರಣವೂ ಇತ್ತು, ನಾನು ಕಾಲೇಜಿನಲ್ಲಿದ್ದಾಗ ಅಂಕುರ್ ಚಿತ್ರದ ಕತೆ ಬರೆದಿದ್ದೆ. ಅದನ್ನು ಉಜ್ಜಿ, ತೀಡಿ ಮುಂಬೈನ ಪ್ರತಿ ನಿರ್ಮಾಪಕರ ಬಳಿಯೂ ತೆರಳಿದೆ. ನಾನು ನಿರ್ಮಾಪಕನನ್ನು ಹುಡುಕಲು ಭರ್ತಿ ಇಪ್ಪತ್ತು ವರ್ಷ ಬೇಕಾಯಿತು.

shyam benagal

ಆದರೆ ಈ ಅವಧಿಯಲ್ಲಿ ನೀವು ಯಶಸ್ವಿ ಜಾಹೀರಾತು ನಿರ್ಮಾಪಕರಾಗಿದ್ದೀರಿ…

ನಾನು ಜಾಹೀರಾತು ಪ್ರಪಂಚದಲ್ಲಿ ಯಶಸ್ವಿ ನಿರ್ಮಾಪಕ, ನಿರ್ದೇಶಕನಾಗಿದ್ದೆ. ಹಲವಾರು ಸಾಕ್ಷ್ಯ ಚಿತ್ರಗಳನ್ನೂ ನಿರ್ಮಿಸಿದ್ದೆ. ಸಿನಿಮಾ ಪ್ರಪಂಚದ ಬಗ್ಗೆ ನನಗೆ ಅರಿವಿತ್ತು. ಆದರೆ ಜಾಹೀರಾತು ನಿರ್ಮಾಣದಲ್ಲಿ ತೃಪ್ತಿಯಿರಲಿಲ್ಲ, ಪರಿಣಾಮ ಚಿತ್ರ ನಿರ್ದೇಶಿಸುವುದಕ್ಕಾಗಿ ಜಾಹೀರಾತು ನಿರ್ಮಾಣ ಕೈಬಿಟ್ಟೆ.

Manthan at cannes : ಈ ಅಪೂರ್ವ ಘಳಿಗೆಯಲ್ಲಿ ಅವರೆಲ್ಲ ಇರಬೇಕಿತ್ತು

ನಿಮ್ಮ ಮೊದಲ ಚಿತ್ರ ಅಂಕುರ್ ನಿರ್ಮಿಸಿದ್ದು ಜಾಹೀರಾತುಗಳ ನಿರ್ಮಾಪಕರು, ಯಾಕೆ ?

ಹೌದು ಬ್ಲೇಸ್ ಅಡ್ವರ್ಟೈಸಿಂಗ್‌ನ ಲಲಿತ್ ಬಿಜಲಾನಿ ಆ ಚಿತ್ರ ನಿರ್ಮಿಸಿದ್ದು. ಆಗ ಅವರು ಜಾಹೀರಾತುಗಳ ದೇಶದ ಮುಂಚೂಣಿಯ ವಿತರಕರಾಗಿದ್ದರು, ೩ ಸಾವಿರ ಸಿನೆಮಾ ಮಂದಿರಗಳ ನೆಟ್‌ವರ್ಕ್ ಅವರಲ್ಲಿತ್ತು. ನೀನು ಜಾಹೀರಾತು ಬಿಟ್ಟು ಸಿನಿಮಾ ಯಾಕೆ ಮಾಡಬಾರದು ಎಂಬುದು ಅವರ ಪ್ರಶ್ನೆ. ನೀವೆ ಯಾಕೆ ನಿರ್ಮಾಪಕರಾಗಬಾರದು ಎಂಬುದು ನನ್ನ ಮರು ಪ್ರಶ್ನೆ. ಅವರು ಹೂ ಎಂದರು, ಆದರೆ ಚಿತ್ರ ನಿರ್ಮಾಣಕ್ಕೆ ಕಡಿಮೆ ಹಣ ಇದೆ ಎಂಬುದು ಉತ್ತರ. ಏನಾದರಾಗಲೀ ನಾನು ಚಿತ್ರ ನಿರ್ದೇಶಿಸುತ್ತೇನೆ ಎಂಬುದು ನನ್ನ ನಂಬಿಕೆ. ಅವರ ಭರವಸೆಯನ್ನು ಪ್ರತಿ ದಿನವೂ ನೆನಪಿಸುತ್ತಿದೆ, ಕೊನೆಗೆ ಅವರೇ ನಿರ್ಮಾಣದ ಹೊಣೆ ಹೊತ್ತುಕೊಂಡರು.

ನಿಮ್ಮ ಚಿತ್ರ ಪೂರ್ಣಗೊಂಡಾಗ ನಿಮ್ಮ ಪತ್ನಿ ಈ ಚಿತ್ರ ವೈಯಕ್ತಿಕವಾಗಿದೆ ಎಂದಿದ್ದರು, ಆದರೆ ಅದು ಅದ್ಭುತ ಯಶಸ್ಸು ಕಂಡಿತು ಅಲ್ಲವೆ ?

ಹೌದು, ಅಂಕುರ್ ಭಾರಿ ಯಶಸ್ಸು ಕಂಡಿತು. ನಾನು ಮೊದಲು ಚಿತ್ರ ತೋರಿಸಿದ್ದು ಸತ್ಯಜಿತ ರೇ ಅವರಿಗೆ. ಈ ಚಿತ್ರ ಮುಂಬೈನ ಎರೋಸ್ ಸಿನಿಮಾ ಮಂದಿರದಲ್ಲಿ ವೀಕೆಂಡ್‌ನಲ್ಲಿ ಚೆನ್ನಾಗಿ ಓಡಬೇಕು ಎನ್ನುವುದು ನನ್ನ ಬಯಕೆ ಎಂದು ಹೇಳಿದ್ದೆ. ಅದಕ್ಕವರು ಇದು ಹಲವು ವೀಕೆಂಡ್‌ಗಳವರೆಗೆ ಓಡುತ್ತದೆ, ಚಿಂತೆ ಬಿಡಿ ಎಂದು ಭವಿಷ್ಯ ನುಡಿದಿದ್ದರು. ಚಿತ್ರ ೨೫ ವಾರಗಳವರೆಗೆ ಯಶಸ್ವಿ ಪ್ರದರ್ಶನ ಕಂಡಿತು.

ನಿಮ್ಮ ಚಿತ್ರ ಜೀವನದ ಅದ್ಭುತ ಚಿತ್ರಗಳಲ್ಲೊಂದು ಭೂಮಿಕಾ…

ಈ ಚಿತ್ರ ಮರಾಠಿ ಚಿತ್ರ ನಟಿ ಹಂಸಾ ವಾಡಕರ್ ಜೀವನ ಆಧಾರಿತ. ಆಕೆ ಉತ್ತಮ ನಟಿಯಾಗಿದ್ದರೂ ಹಿಂದಿ ಚಿತ್ರಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಆಕೆ ಒಳ್ಳೆಯ ಡ್ಯಾನ್ಸರ್ ಕೂಡ. ಆಕೆಯ ಜೀವನ ಚರಿತ್ರೆ ಓದಿದಾಗ ಆ ಬಗ್ಗೆ ಚಿತ್ರ ನಿರ್ಮಿಸುವ ಬಯಕೆ ಮೂಡಿತು. ಪುಸ್ತಕದ ಕತೆಯಂತೆ ಚಿತ್ರ ಮೂಡಿಬರದೆ ವಿಭಿನ್ನವಾಗಿರಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ನೀವು ಕೂಡ ಚಿತ್ರಕತೆಯನ್ನು ತಿದ್ದುವಲ್ಲಿ ಸಹಕರಿಸಿದಿರಿ.

ಕಾನ್‌ ಚಲನಚಿತ್ರೋತ್ಸವ 2024 : ಈ ಬಾರಿ ಕನ್ನಡಿಗರದ್ದೇ ಹವಾ

ವಿಶ್ವದ ಅತ್ಯುತ್ತಮ ನಿರ್ದೇಶಕರ ಬಗ್ಗೆ…

ಕೈರೊತ್ಸಾಮಿ, ಮೆಕ್‌ಬಲ್ ಹಾಗೂ ಆತನ ಪುತ್ರಿ ಸಮೀರಾ. ಸಮೀರಾ ಒಳ್ಳೆಯ ಚಿತ್ರ ನಿರ್ದೇಶಕಿ. ಮಾರ್ಟಿನ್ ಸೊರ್ಸೆಸೆ ನನ್ನ ನೆಚ್ಚಿನ ನಿರ್ದೇಶಕ, ಫ್ರಾನ್ಸಿಸ್ ಕೊಪೊಲಾ ಕೂಡ. ಕೊಪೊಲಾ ಇತ್ತೀಚೆಗೆ ಅಷ್ಟು ಸಕ್ರಿಯವಾಗಿಲ್ಲ. ಕಿಟಾನೊ, ಜಾಂಗ್ ಯಿಮೋ ಚಿತ್ರಗಳೂ ಅಚ್ಚುಮೆಚ್ಚು. ಯುವ ನಿರ್ದೇಶಕರಲ್ಲಿ ರುತುಪರ್ಣೋ ಘೋಷ್ ಕ್ರಿಯಾಶೀಲರು, ಅವರ ಕಾರ್ಯದ ಬಗ್ಗೆ ನನಗೆ ಮೆಚ್ಚುಗೆಯಿದೆ. ಆಡೂರು ಗೋಪಾಲಕೃಷ್ಣನ್ ನನ್ನ ನೆಚ್ಚಿನ ಭಾರತೀಯ ನಿರ್ದೇಶಕ, ಇನ್ನೂ ಹಲವು ನಿರ್ದೇಶಕರ ಚಿತ್ರಗಳೂ ಇಷ್ಟ.

ಸಿನಿಮಾಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯವೇ ?

ಒಂದೇ ಸಿನಿಮಾದಿಂದ ಬದಲಾವಣೆ ಸಾಧ್ಯವಿಲ್ಲ, ಆದರೆ ಸಿನಿಮಾ ಮಾಧ್ಯಮದಿಂದ ಬದಲಾವಣೆ ಸಾಧ್ಯ. ಸಾಮಾಜಿಕ ಬದಲಾವಣೆಯಲ್ಲಿ ಸಿನಿಮಾಗಳ ಪ್ರಭಾವವಿದೆ. 70 ಹಾಗೂ 80 ರ ದಶಕದಲ್ಲಿ ಸಿನಿಮಾ ಯುವಜನತೆಯ ಮೇಲೆ ಮಾಡಿದ ಪ್ರಭಾವ ಕಣ್ಣ ಮುಂದಿದೆ. ಆದರೆ ದೇಶದ ಎಲ್ಲ ಬದಲಾವಣೆಗೂ ಸಿನಿಮಾ ಕಾರಣವಾಗಲಿಲ್ಲ. ಉದಾರೀಕರಣ, ಜಾಗತೀಕರಣ ಎಲ್ಲವನ್ನೂ ಬದಲಾಯಿಸಿದೆ. ಈಗ ಪ್ರಚಲಿತ ಸಂಸ್ಕೃತಿಗೆ ಮಣೆ ಹಾಕಲಾಗುತ್ತದೆ.

(ಲೇಖನ ಕೃಪೆ : ಸಾಂಗತ್ಯ)

LEAVE A REPLY

Please enter your comment!
Please enter your name here

spot_img

More like this

Kannappa Movie : ಕಣ್ಣಪ್ಪ…ಕಣ್ಣಪ್ಪ…ಬೇಗ ಬಾರಪ್ಪ

ಕನ್ನಡದಲ್ಲಿ ಬೇಡರ ಕಣ್ಣಪ್ಪ ಇರುವಾಗ ಮತ್ತೊಂದು ಕಣ್ಣಪ್ಪ ಏನಪ್ಪ ಎಂದು ಪ್ರಶ್ನೆ ಕೇಳುವವರಿದ್ದಾರೆ. ಡಾ. ರಾಜಕುಮಾರ್‌ ಬೇಡರ ಕಣ್ಣಪ್ಪ ಪಾತ್ರದಲ್ಲಿ ನಮ್ಮೊಳಗೆ ಉಳಿದ...

Sunayana: ಮೌನರಾಗ- ಹೊಸ ನೀರು ಹಳೆಯ ಕೊಳೆಯನ್ನಷ್ಟೇ ಕೊಚ್ಚಿಕೊಂಡು ಹೋಗಲಿ

ಪತ್ರಕರ್ತರು ಸಿನಿಮಾ ರಂಗಕ್ಕೆ ಬರುವುದು ಹೊಸದೇನಲ್ಲ. ನಿರ್ದೇಶಕರ ಟೊಪ್ಪಿಯನ್ನು ಏರಿಸಿಕೊಂಡಿದ್ದಲ್ಲದೇ ಸಿನಿಮಾದ ವಿವಿಧ ರಂಗಗಳಲ್ಲಿ ಪತ್ರಕರ್ತರು ದುಡಿದಿದ್ದಾರೆ. ನಿರ್ದೆಶನದಿಂದ ಸಂಗೀತ ನಿರ್ದೇಶನದವರೆಗೆ ಹಲವಾರು...

FireFly: ಮೂರು ಮಿಣುಕು ಹುಳಗಳ ಕಥೆ ಬೆಳಕಿನ ಹಬ್ಬಕ್ಕೆ ಫೈರ್‌ ಫ್ಲೈ

ಮಿಣುಕು ಹುಳು ಅಥವಾ ಮಿಂಚುಹುಳು. ಸೀದಾ ಸಾದಾ ಹೇಳುವುದಾದರೆ ಮಿಂಚುಳು. ತುಂಬಿದ ಕತ್ತಲೆಯ ಮಧ್ಯೆ ಅಲ್ಲಲ್ಲಿ ಹಾರುತ್ತಾ ಮಿನುಗುವ ಮಿಂಚು ಹುಳು ಹೇಗೋ...