Friday, March 21, 2025
spot_img
More

    Latest Posts

    Kannappa and Bujji : ಕಣ್ಣಪ್ಪನಿಗೆ ಕಾಜಲ್‌, ಕಲ್ಕಿಗೆ ಬುಜ್ಜಿ ಸೇರಿಕೊಂಡರು !

    ವಿಷ್ಣು ಮಂಚು “ಕಣ್ಣಪ್ಪ” ಚಿತ್ರದ ಬಳಗಕ್ಕೆ ಕಾಜಲ್‌ ಅಗರವಾಲ್‌ ಸೇರಿಕೊಂಡಿದ್ದಾರೆ. ಇನ್ನೊಂದು ಕಡೆ ಕಲ್ಕಿ ಗೆ ಬುಜ್ಜಿ ಸೇರಿದ್ದಾರೆ. ಎರಡೂ ಹೆಚ್ಚು ನಿರೀಕ್ಷಿತ ಚಿತ್ರಗಳು. ದಿನೇದಿನೆ ತಾರಾಗಣದ ಭಾರ ಹೆಚ್ಚಾಗುತ್ತಿದೆ. ವಿಷ್ಣು ಮಂಚು ಜೊತೆಗೆ ಈ ಹಿಂದೆ ಕಾಜಲ್‌ ಮೊಸಗಲ್ಲು ತೆಲುಗು ಚಿತ್ರದಲ್ಲಿ ನಟಿಸಿದ್ದರು. ಇದೀಗ ಎರಡನೇ ಚಿತ್ರ ಹೀಗೆ ಒಂದಾಗಿ ನಟಿಸುತ್ತಿರುವುದು. ಕಾಜಲ್‌ ಗೆ ಪಾತ್ರವೇನು ಎಂಬ ಕುತೂಹಲ ಇರುವುದು ಸಹಜ. ಸದ್ಯವೇ ಹೇಳುತ್ತಾರಂತೆ, ಅಲ್ಲಿವರೆಗೆ ಕಾಯೋಣ ಬಿಡಿ.

    ಸಿನಿಮಾ ಚಿತ್ರೀಕರಣ ಪ್ರಗತಿಯಲ್ಲಿದೆ. ಈ ಚಿತ್ರದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಶರತ್‌ಕುಮಾರ್ ಸೇರಿ ಭಾರೀ ತಾರಾಗಣವಿದೆ. ಈ ಚಿತ್ರದ ನಿರ್ದೇಶನ ಮುಖೇಶ್‌ ಕುಮಾರ್‌ ಸಿಂಗ್ ರದ್ದು. ತೆಲುಗು ಮೂಲ ಆವೃತ್ತಿಯಾದರೂ, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಹಲವು ಭಾರತೀಯ ಭಾಷೆಗಳಲ್ಲಿ ಈ ಚಿತ್ರ ಸಿದ್ಧವಾಗುತ್ತಿದೆ.

    Cannes Palme d’or movies : ಪಾಲ್ಮೆದೋರ್‌ ಪ್ರಶಸ್ತಿ ಪಡೆದ ಈ ಐದು ಚಿತ್ರಗಳನ್ನು ತಪ್ಪದೇ ವೀಕ್ಷಿಸಿ

    ಈಗ ಕಲ್ಕಿ 2898 ಎಡಿ ಚಿತ್ರದ ಬಗೆಗಿನ ಮಾತು. ಮೊನ್ನೆಯಷ್ಟೇ ಬುಜ್ಜಿ ಅನಾವರಣವಾದರು. ಇದು ಪ್ಯಾನ್‌ ಇಂಡಿಯಾ ಸಿನಿಮಾವಂತೆ. ಬಿಡುಗಡೆಗೆ ದಿನ ಹತ್ತಿರವಾಗುತ್ತಿದೆ. ಆದರೆ ಪಾತ್ರಗಳೂ ಬೆಳೆಯುತ್ತಿವೆ. ಈಗ ಐದನೇ ಸೂಪರ್‌ ಸ್ಟಾರ್‌ ಸೇರಿದ್ದಾರಂತೆ.

    ಹೆಸರು ಬುಜ್ಜಿಯಂತೆ. ನಾಯಕ ಭೈರವನ ನಂಬಿಕಸ್ಥ ಗೆಳೆಯನಂತೆ. ಈ ಕುರಿತು ವೈಜಯಂತಿ ನೆಟ್‍ವರ್ಕ್ ಚಾನಲ್‍ನಲ್ಲಿ ಹೊಸ ವೀಡಿಯೋ ಬಿಡುಗಡೆ ಮಾಡಿತ್ತು. ನಾಗ ಚೈತನ್ಯ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ವೀಡಿಯೊದ ಮೂಲಕ ‘From Skratch: Building A Superstar’ ನ ಬಗ್ಗೆ ಪರಿಚಯಿಸಲಾಗಿತ್ತು.

    chef ಚಿದಂಬರ:  ಅನಿರುದ್ಧರ ಹೊಸ ಚಿತ್ರ ನೋಡಲು ಸಿದ್ಧರಾಗಿ

    ಹಿರಿಯ ನಟ ಅಮಿಬಾಭ್‌ ಬಚ್ಚನ್‌, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ಈಗಾಗಲೇ ಇದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ ಅಡಿ ಅಶ್ವಿನಿ ದತ್‍ ನಿರ್ಮಿಸಿರುವ ಚಿತ್ರವಿದು. ಇಂಥ ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ. ಹೇಳಲು ಮರೆತೇ ಹೋಗಿತ್ತು. ಅದೇ ಬುಜ್ಜಿ. ಬುಜ್ಜಿಯನ್ನು ಭವಿಷ್ಯದ ವಾಹನ ಎಂದೇ ಚಿತ್ರತಂಡ ಹೇಳಿಕೊಂಡಿದೆ.

    Latest Posts

    spot_imgspot_img

    Don't Miss