ಗೋಲ್ಡನ್ ಸ್ಟಾರ್ ಗಣೇಶರ ಚಿತ್ರ “ಕೃಷ್ಣಂ ಪ್ರಣಯ ಸಖಿ” ಬಿಡುಗಡೆಗೆ ದಿನ ಹತ್ತಿರವಾಗುತ್ತಿದೆ. ಈ ಮಧ್ಯೆ ಅದರ ಮತ್ತೊಂದು ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಆಗಸ್ಟ್ ೧೫ ರಂದ ಚಿತ್ರ ಬಿಡುಗಡೆಯಾಗಲಿದೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ.
ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶಿಸುತ್ತಿರುವ ಚಿತ್ರವಿದು. “ಕೃಷ್ಣಂ ಪ್ರಣಯ ಸಖಿ” ಒಂದಿಷ್ಟು ಭರವಸೆ ಮೂಡಿಸಿರುವ ಚಿತ್ರ. ನಟ ಗಣೇಶರಿಗೂ ಒಂದು ಯಶಸ್ಸು ತಂದುಕೊಡಬೇಕಿದೆ.
Manorathangal:ಬಹುನಟರ, ಬಹು ನಿರ್ದೇಶಕರ ಕಥಾ ಗುಚ್ಛ ಆಗಸ್ಟ್ ನಲ್ಲಿ ಬಿಡುಗಡೆ ಜೀ5 ನಲ್ಲಿ
ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿರುವ ಹಾಡುಗಳಿವೆ. ಒಟ್ಟು ಆರು ಹಾಡುಗಳು. ಈಗಾಗಲೇ “ಮೈ ಮ್ಯಾರೇಜ್ ಇಸ್ ಫಿಕ್ಸ್ಡ್” ಹಾಗೂ “ಚಿನ್ನಮ್ಮ” ಹಾಡುಗಳು ಬಿಡುಗಡೆಯಾಗಿವೆ. ಮೂರನೇ ಹಾಡು ದ್ವಾಪರ ದಾಟುತ ಸಹ ಬಿಡುಗಡೆಯಾಯಿತು. ವಿ.ನಾಗೇಂದ್ರಪ್ರಸಾದ್ ಬರೆದ ಹಾಡಿದು. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ವಿಶೇಷವೆಂದರೆ “ಸರಿಗಮಪ” ಖ್ಯಾತಿಯ ಜಸ್ಕರಣ್ ಸಿಂಗ್ ಈ ಹಾಡನ್ನುಹಾಡಿದ್ದಾರೆ.
ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ತ್ರಿಶೂಲ್ ಎಂಟರ್ಟೈನ್ಮೆಂಟ್ ನಡಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿದ್ದಾರೆ. ಬೆಂಗಳೂರು, ವಿಯೆಟ್ನಾಂ ಸೇರಿದಂತೆ ಹಲವೆಡೆ ಚಿತ್ರೀಕರಣ ಮುಗಿದಿದೆ. ಬಿಡುಗಡೆಗಡೆ ಪೂರಕವಾದ ಕೆಲಸಗಳು ಚಾಲ್ತಿಯಲ್ಲಿವೆ.
Kannada Classics: ಇಂದಿಗೂ ಕ್ಲಾಸಿಕ್ ಬೂತಯ್ಯನ ಮಗ ಅಯ್ಯು
ಮತ್ತೊಂದು ಸಂಗತಿ. ಈ ಚಿತ್ರ ಗಣೇಶರ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ತಾರಾಗಣದಲ್ಲಿದ್ದಾರೆ.
ಕೃಷ್ಣಂ ಪ್ರಣಯ ಸಖಿ ಚಿತ್ರವು ಮುಂಗಾರು ಮಳೆಯ ಖ್ಯಾತಿಯ ಗಣೇಶರ ಮೇಲೆ ಆನಂದದ ಮಳೆ ಸುರಿಸುತ್ತದೋ ಕಾದು ನೋಡಬೇಕು.