Saturday, September 28, 2024
spot_img
More

    Latest Posts

    ಕನಸೆಂಬ ಕುದುರೆಯನ್ನೇರಿ; ಕುದುರೆ ಏರುವ ಮೊದಲಿನ ಕಥೆ

    ಕಥೆಗಾರ ಅಮರೇಶ್ ನುಗಡೋಣಿಯವರು ತಮ್ಮ ಕಥೆ ಚಿತ್ರವಾಗುವುದರ ಬಗೆ ಕುರಿತು ಸಾಂಗತ್ಯ ಬ್ಲಾಗ್‌ ನಲ್ಲಿ ಈ ಹಿಂದೆ ಬರೆದ ಲೇಖನ. ಒಳ್ಳೆಯ ಓದಿಗೆ ನಿಲುಕುವಂಥದ್ದು ಎನಿಸಿ ಇಲ್ಲಿ ಪ್ರಕಟಿಸಲಾಗಿದೆ. ಹೆಸರಾಂತ ಭಾರತೀಯ ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿಯವರು ನುಗಡೋಣಿಯವರ ಕಥೆಯನ್ನು ಸಿನಿಮಾ ರೂಪಕ್ಕೆ ಆಳವಡಿಸಿದರು. ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದ ಈ ಚಿತ್ರ ವಿಭಿನ್ನವಾದ ನಿರೂಪಣೆ ಶೈಲಿಯನ್ನು ಹೊಂದಿದ್ದು, ಹೆಚ್ಚು ಚರ್ಚೆಗೀಡಾಗಿತ್ತು.

    ಆ ದಿನಮುಂಜಾನೆ 8 ಗಂಟೆಗೆಹೊಸಪೇಟೆ ರೈಲುನಿಲ್ದಾಣಕ್ಕೆಬರುವ ಹಂಪಿಎಕ್ಸ್‌ಪ್ರೆಸ್ ಹತ್ತಿ, ಎರಡು ತಾಸಿನ ಒಳಗೆಅಣ್ಣಿಗೇರಿ ನಿಲ್ದಾಣದಲ್ಲಿ ಇಳಿದೆ. ರೈಲಿನಿಂದಹತ್ತಾರುಮಂದಿಇಳಿದು ಗಂಟುಮೂಟೆಹೊತ್ತುಕೊಂಡುಹೊರಹೋದರು. ನಾಲ್ಕು ನಿಮಿಷದಲ್ಲಿ ರೈಲುನಿಲ್ದಾಣವು ಉದ್ದಕ್ಕೂ ಖಾಲಿಯಾಯ್ತು. ಹತ್ತಾರು ಹೆಜ್ಜೆ ಎಡಕ್ಕೆ-ಬಲಕ್ಕೆ ತಿರುಗಾಡಿದೆ. ಯಾಕೋ ಖುಷಿಯಾಯ್ತು. ರೈಲುಹಳಿದಾರಿ ಆಚೆ ಕಪ್ಪು ಭೂಮಿಯಲ್ಲಿ ಹಸಿರು ಪೈರಿನ ಸಿರಿ. ಅದರಾಚೆ ಆಕಾಶವು ಬಯಲೋ ಬಯಲು! ಬಹುಶಃ ಒಂದು ತಿಂಗಳೂ ಆಗಿರಲಿಕ್ಕಿಲ್ಲ…! ಉತ್ತರ ಕರ್ನಾಟಕದಲ್ಲಿ ರಣಮಳೆ ಸುರಿದು, ಜನ ಎಂದೂ ಇಷ್ಟು ತುಂಬಿ ಹರಿದಿದ್ದನ್ನು ನೋಡಿರದ ಹಳ್ಳ-ಕೊಳ್ಳ-ನದಿಗಳೆಲ್ಲ ಒಡಲಿಡಿಯದೆ ನೀರನ್ನು ಹೊರಚಾಚಿಕೊಂಡು ಭೋರ್ಗರೆಯುತ್ತ, ‘ನಿಮ್ಮ ಹಳ್ಳ-ಕೊಳ್ಳ-ನದಿಗಳನ್ನೆಲ್ಲ ಬಳಿದುಕೊಂಡು ಹೋಗ್ತೀನಿ ಅಂಬಂತೆ ನೀರೇ ಓಡುತ್ತಿತ್ತು ವಾರಗಟ್ಟಲೆ. ಈಗ ಎಲ್ಲ ತಣ್ಣಗಾಗಿತ್ತು. ಅದರ ಭಯ ಬಿಸಿಯಾಗೇ ಜನರಲ್ಲಿತ್ತು. ಅಣ್ಣಿಗೇರಿ ರೈಲು ನಿಲ್ದಾಣದಲ್ಲಿ ನಿಂತಾಗ ಮೈ-ಮನಸ್ಸಿನಿಂದ ಹುಟ್ಟಿ ಹೊರಬರಲು ಹಾತೊರೆಯುತ್ತಿದ್ದ ವಿಚಾರವೊಂದು ಕಾಡಿತು. ನಾನು ನಿಂತ ಊರು ಅಣ್ಣಿಗೇರಿಯು ಆದಿಕವಿ ಪಂಪನ ಹೆತ್ತವ್ವನದು.

    ಪಂಪನು ತಾಯಿಯ ಈ ಊರಲ್ಲಿ ಹುಟ್ಟಿ ಬೆಳೆದು ಓಡಾಡಿರಬಹುದಲ್ಲ ಎಂದು ಬೆರಗು ಮೂಡಿತು. ಈ ಊರಲ್ಲಿ ಓಡಾಡಿಕೊಂಡಿದ್ದ ಪಂಪ ಹೇಗಿದ್ದನೋ? ಹತ್ತಿಬಟ್ಟೆಯ ಬಿಳಿ ಅಂಗಿ-ಪಂಜೆ ತೊಟ್ಟು ಚೂರು ಕಪ್ಪಗೆ, ದುಂಡುದುಂಡಗೆ ಇದ್ದಿರಬಹುದೆ? ಆಚೆ ಹೊಲದಲ್ಲಿ ದುಡಿಯಲು ನಿಂತ ರೈತರ ಹಾಗೇ? ನನಗೆ ಯಾವಾಗಲೂ ಪಂಪನನ್ನು ನೆನೆದರೆ ಕುವೆಂಪು, ಕುವೆಂಪು ನೆನೆದರೆ ಪಂಪ ನೆನಪಾಗುತ್ತಾರೆ. ಒಮ್ಮೊಮ್ಮೆ ಅಭಿನ್ನರಾಗಿ ನನ್ನನ್ನು ಕಾಡುತ್ತಾರೆ. ಬಹುಶಃ 20 ನಿಮಿಷ ಪಂಪನನ್ನು ನೆನೆಯುತ್ತ ಖುಷಿಯಿಂದ ಪ್ಲಾಟ್‌ಫಾರ್ಮ ಮೇಲೆ ಓಡಾಡಿದೆ. ತಕ್ಷಣ ನೆನಪಾಯ್ತು; ಪ್ರಸನ್ನಕುಮಾರ್ ಅವರಿಗೆ ಫೋನ್ ಮಾಡಿದೆ. ರೈಲ್ವೆಸ್ಟೇಶನ್‌ಗೆ ವಾಹನ ಕಳಿಸುವುದಾಗಿ ಅವರು ಹೇಳಿದರು. ನಾನು ನಿಲ್ದಾಣದ ಹೊರಗೆ ಬಂದು ಬಯಲಲ್ಲಿ ನಿಂತುಕೊಂಡು ವಾಹನಕ್ಕಾಗಿ ಕಾಯತೊಡಗಿದೆ.

    ನನ್ನ ಸವಾರಿ ಕಥೆಯನ್ನಾಧರಿಸಿ, ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ‘ಕನಸೆಂಬೋ ಕುದುರೆಯನ್ನೇರಿ ಹೆಸರಿನಲ್ಲಿ ಸಿನಿಮಾನಿರ್ಮಾಣವಾಗುತ್ತಿತ್ತಲ್ಲ… ಅದರ ಚಿತ್ರೀಕರಣ ಅಣ್ಣಿಗೇರಿ ವಾಡೆಯೊಂದರಲ್ಲಿನಡೆದಿತ್ತು. ಗಿರೀಶ ಕಾಸರವಳ್ಳಿ ಅವರು ಚಿತ್ರೀಕರಣ ಶುರುವಾದಂದಿನಿಂದ ‘ಅಮರೇಶ್ ಬನ್ನಿ ಎಂದು ಯಾವ ಸ್ಥಳದಲ್ಲಿ, ಎಷ್ಟುದಿನ ಚಿತ್ರೀಕರಣ ನಡೆಯುತ್ತದೆ ಎಂಬ ಮಾಹಿತಿ ನೀಡುತ್ತಿದ್ದರು. ನನಗೆ ಹೋಗುವುದಾಗಿರಲಿಲ್ಲ. ಈಗ ಅವಕಾಶ ಸಿಕ್ಕಿತ್ತು. ಈ ಸಿನಿಮಾದ ನಿರ್ಮಾಪಕರಾದ ಬಸಂತಕುಮಾರ ಪಾಟೀಲ್ ಜೊತೆ ಒಂದು ದಿನ ಹುಬ್ಭಳ್ಳಿಯ ಅವರ ಹೋಟಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದಾಗ ನಾನೂ ಇದ್ದೆ. ಉತ್ತರ ಕರ್ನಾಟಕದ ಕಲಾವಿದರ ಆಯ್ಕೆಯೂ ಆ ದಿನ ನಡೆದಿತ್ತು. ಪಾಟೀಲರ ಸಹಾಯಕ ಪ್ರಸನ್ನಕುಮಾರ್ ಈ ಹಿಂದೆ ಬೆಂಗಳೂರಿಗೆ ನಾನು ಹೋಗಿದ್ದಾಗ, ಕನ್ನಡ ಭವನಕ್ಕೆ ಬಂದು ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಗೌರವ ಧನದ ಚಕ್ ಕೊಟ್ಟಿದ್ದರು. ಹೆಸರಿಗೆ ತಕ್ಕಹಾಗೆ ಅವರು ಯಾವಾಗಲೂ ಪ್ರಸನ್ನವಾಗಿ ನಗುತ್ತ ಇರುವುದು ಕಂಡು ನನಗೆ ಖುಷಿಯಾಗಿತ್ತು.

    ಸಂಕಥನದ ಮೊದಲು – ಗಿರೀಶ ಕಾಸರವಳ್ಳಿಯವರ ಬಿಂಬ ಬಿಂಬನ

    ಪತ್ರಿಕೆಗಳಲ್ಲಿ ಮಾತ್ರ ಗಿರೀಶ್ ಕಾಸರವಳ್ಳಿ ಅವರನ್ನು ನಾನು ನೋಡುತ್ತಿದ್ದೆ. ಪತ್ರಿಕೆಗಳಲ್ಲಿ ಕಂಡರೂ ಅವರನ್ನು ಒಮ್ಮೆ ನೋಡಿದರೆ ಸಾಕು ನೆನಪಿನಲ್ಲಿ ಉಳಿಯುವ ಚಹರೆ ಅವರದು. ಕಥೆಯನ್ನು ಆಯ್ಕೆ ಮಾಡಿಕೊಂಡು, ಅದರ ಚಿತ್ರಕಥೆಯನ್ನು ಸಿದ್ಧಪಡಿಸಿ ನನ್ನನ್ನು ಚರ್ಚೆಗೆ ಕರೆದಿದ್ದಾಗ, ನಾನು ವಸುಧೇಂದ್ರರ ಜೊತೆ ಗಿರೀಶ ಕಾಸರವಳ್ಳಿ ಅವರ ಮನೆಗೆ ಹೋಗಿದ್ದೆ. ಅವರ ಮನೆ ಕಲಾತ್ಮಕವಾಗಿದೆ. ಅವರ ಜೊತೆ ಅಂದು ಕಥೆ-ಕಾದಂಬರಿಕಾರ ಗೋಪಾಲಕೃಷ್ಣ ಪೈ ಇದ್ದರು. ಚಿತ್ರಕತೆಯನ್ನು ಕಾಸರವಳ್ಳಿ ಜೊತೆ ಪೈ ಅವರು ಬರೆದಿದ್ದರು. ಅದರ ಪ್ರತಿಯನ್ನು ನನಗೆ ನೀಡಿ ಓದಲು ಸೂಚಿಸಿದರು. ಬಲ್ಲವರಾದ ಅವರ ಜತೆ ಚರ್ಚೆ ಔಪಚಾರಿಕವಾಗಿತ್ತು. ಆದರೂ ಕಾಸರವಳ್ಳಿ ಅವರು ಕಥೆಯನ್ನು ಕುರಿತು ದೀರ್ಘವಾಗಿ ಚರ್ಚಿಸಿದರು. ನನ್ನ ಕತೆ ಸವಾರಿ ಯನ್ನು ಸಿನಿಮಾಕ್ಕಾಗಿ ಬದಲಾವಣೆ ಮಾಡಿಕೊಂಡಿದ್ದರು. ನನ್ನ ಕತೆಯಲ್ಲಿ ಆಧ್ಯಾತ್ಮ ಮತ್ತು ವ್ಯಕ್ತಿಗಳ ಇಚ್ಚಾಶಕ್ತಿಯ ಮೇಲುಗೈ ಇತ್ತು. ಗಿರೀಶ ಕಾಸರವಳ್ಳಿ ಅವರು ಆಧುನಿಕತೆ ಬಗ್ಗೆ ಒಲವು ಇರುವವರು. ಸಿನಿಮಾದಲ್ಲಿ ವ್ಯಕ್ತಿಯೊಬ್ಬನ ಬದುಕಿನಲ್ಲಿ ಬದಲಾವಣೆ ಕಾಣಿಸಿಕೊಳ್ಳುವ ನೆಲೆ ತಂದಿದ್ದಾರೆ. ನನಗೆ ಇದರ ಬಗ್ಗೆ ಸಹಮತ ಇತ್ತು. ಸಿನಿಮಾ ಚಿತ್ರೀಕರಣದ ಪೂರ್ವ ಸಿದ್ಧತೆಗಳ ಕಾರ್ಯಾಗಾರವೇ ಅವರ ಮನೆಯಲ್ಲಿ ನಡೆದಿತ್ತು. ಸಿನಿಮಾದ ಕ್ಯಾಮರಾಮ್ಯಾನ ರಾಮಚಂದ್ರ ಬಂದಿದ್ದರು. ಉಡುಪುಗಳ ಕುರಿತು ಸಿದ್ಧತೆ ನಡೆದಿತ್ತು. ಮುಖ್ಯ ಪಾತ್ರಧಾರಿ ನಟ ಬಿರಾದಾರ ಅವರನ್ನು ಕರೆಸಿದರು. ಬಿರಾದಾರ ಅವರಿಗೆ ತಮ್ಮ ಅಂಗಿಯ ಸೈಜ್ ಎಷ್ಟು ಎಂದು ಗೊತ್ತಿರಲಿಲ್ಲ. ಅಂಗಿಯನ್ನೇ ಬಿಚ್ಚಿ ತೋರಿಸಿದರು. ಅವರ ಮುಗ್ಧತೆ ಕಂಡಿತು. ಬಹಳ ಮಾತನಾಡದ ನನ್ನನ್ನು ಮಾತುಗಾರನನ್ನಾಗಿ ಗೋಪಾಲಕೃಷ್ಣ ಪೈ ಮಾಡಿಬಿಟ್ಟರು. ಒಂದೇ ಭೇಟಿಗೆ ಐದಾರು ತಾಸುಗಳಲ್ಲಿ ನಾವು ಆಪ್ತರಾಗಿಬಿಟ್ಟಿದ್ದೆವು.

    ಚಿತ್ರಕತೆ ಚರ್ಚೆನಡೆದು ಕೆಲವುದಿನಕಳೆದ ಮೇಲೆ ಕಥೆಯಲ್ಲಿ ಬರುವ ಗೌಡನ ಮನೆಯಂಥದ್ದನ್ನು ಶೋಧಿಸಲು ಉತ್ತರ ಕರ್ನಾಟಕಕ್ಕೆ ಗಿರೀಶ ಕಾಸರವಳ್ಳಿ, ವಸಂತ ಪುಣೇಕರ್, ರಾಮಚಂದ್ರ ಬಂದಿದ್ದರು. ಮೊದಲ ಹಂತದಲ್ಲಿ ರಾಯಚೂರು, ಯಾದಗಿರಿ, ಗುಲಬರ್ಗಾ, ಬೀದರ್ ಜಿಲ್ಲಾ ಊರುಗಳಲ್ಲಿ ಸುತ್ತಲಾಯಿತು. ಎರಡನೇ ಹಂತದಲ್ಲಿ ಗದಗ, ಬಾಗಲಕೋಟೆ, ಧಾರವಾಡ ಜಿಲ್ಲಾ ಊರುಗಳಲ್ಲಿ ಶೋಧಿಸಲಾಯಿತು. ಆಗ ಉತ್ತರ ಕರ್ನಾಟಕದ ದೇಸಾಯಿ, ಜಾಗೀರದಾರ, ನಾಡಗೌಡ ಮುಂತಾದ ಪುಟ್ಟ ಪಾಳೆಗಾರರ ಮನೆಗಳನ್ನು ನೋಡುವ ಅವಕಾಶ ನಮಗೆ ಸಿಕ್ಕಿತು. ನೆನಪಿನಲ್ಲಿ ಮುಳುಗಿದ್ದ ನನ್ನನ್ನು ವ್ಯಾನೊಂದು ನನ್ನ ಬಳಿಬಂದು ಎಚ್ಚರಿಸಿತು. ಆ ವ್ಯಾನ್ ಬಳಿ ನಾನೇ ಹೋಗಿ ವಿಚಾರಿಸಿಕೊಂಡು ಹತ್ತಿ ಕುಳಿತೆ. ಅದರೊಳಗೆ ಕೆಟ್ಟ ಹಾಡುಗಳನ್ನು ಕಿವಿ ಕೊರೆಯುವ ಹಾಗೆ ಸೌಂಡ್ ಬಿಟ್ಟು ಹಾಕಿದ್ದರು. ನನಗೇ ಕೂಡಲು ಸ್ಥಳವಿಲ್ಲದಷ್ಟು ಹುಡುಗರು ತುಂಬಿದ್ದರು.

    ‘ನೀವ್ಯಾರು ಎಂದು ಯಾರು ಕೇಳಲಿಲ್ಲ. ಒಂದೇ ಉಸಿರಿಗೆ ಅಣ್ಣಿಗೇರಿ ಓಣಿಯಲ್ಲಿ ನಮ್ಮದೇ ರಾಜ್ಯ ಎಂಬಂತೆ ಓಡಿಸಿ, ವಾಡೇ ಒಳಗೆ ತಂದು ನಿಲ್ಲಿಸಿದರು. ಪ್ರಸನ್ನಕುಮಾರ ಅದೇ ಪ್ರಸನ್ನ ಮುಖದಲ್ಲಿ ನಗುತ್ತ ಬಂದು ವಿಚಾರಿಸಿದರು. ‘ಅಂತೂ ಬಂದೀರಿ; ಬನ್ನಿ ಎಂದು ಗಿರೀಶ ಕಾಸರವಳ್ಳಿ ಕರೆದುಕೊಂಡು ಹೋದರು. ಆಗಲೇ ಚಿತ್ರೀಕರಣ ನಡೆದಿತ್ತು. ಚಿತ್ರತಂಡವು ತಮತಮಗೆ ನಿಗದಿಯಾಗಿದ್ದ ಕೆಲಸದಲ್ಲಿ ಮುಳುಗಿ ಹೋಗಿದ್ದರು. ನನಗೆ ಚಿತ್ರೀಕರಣವನ್ನು ನೋಡಲು ಕುರ್ಚಿ ಹಾಕಿದರು. ನನಗೆ ವಿಪರೀತ ಮುಜುಗರವಾಗಿ ಕುಳಿತಂತೆ ಮಾಡಿ ಎದ್ದುಬಿಟ್ಟು, ಶೂಟಿಂಗ್ ನೋಡುವವರಲ್ಲಿ ಸೇರಿಕೊಳ್ಳಲು ಪ್ರಯತ್ನಿಸಿದೆ. ಅಷ್ಟರಲ್ಲಿ ಗಿರೀಶ ಕಾಸರವಳ್ಳಿ ಅವರ ಸಹಾಯಕರೀರಬೇಕು ಸಾವನ್ ಅವರು ಬಂದು ಪರಿಚಯ ಮಾಡಿಕೊಂಡು, ಈಗಾಗಲೇ ಶೂಟಿಂಗ್ ಮುಗಿದ ದೃಶ್ಯಗಳಲ್ಲಿ ಪಾತ್ರಗಳ ಕೆಲವು ಗೆಶ್ಚರ್‌ಗಳನ್ನು ಹೀಗೆ ಮಾಡಿಸಿದ್ದೀವಿ. ಸರಿಯೇ? ಎಂದು ಕೇಳಿದರು. ‘ಸರಿಯಿದೆ ಎಂದು ಸುಮ್ಮನಾದೆ. ಗಿರೀಶ ಕಾಸರವಳ್ಳಿ, ರಾಮಚಂದ್ರ, ಸಾವನ್ ಚಿತ್ರೀಕರಣದಲ್ಲಿ ತುಂಬಾ ತನ್ಮಯರಾಗಿದ್ದರು. ನಾನು ಅವರ ಸಿದ್ಧತೆಯನ್ನು ನೋಡುತ್ತ ನಿಂತೆ. ಬೆಳಗಿನಿಂದ ಏನೂ ತಿಂದಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ನನ್ನ ಬಳಿ ಕುಡಿಯಲು ನೀರಿರಲಿಲ್ಲ. ಹುಡುಗನೊಬ್ಬ ಚಹಾ ತಂದು ಕೊಟ್ಟನು. ಅವನಿಗೆ ನೀರು ಬೇಕೆಂದು ಕೇಳಿದೆ. ಅವನು ತಂದುಕೊಟ್ಟ ನೀರು ರುಚಿಸಲಿಲ್ಲ. ನನ್ನ ಕಡೆ ಬಂದ ಪ್ರಸನ್ನಕುಮಾರ ಅವರಿಗೆ ಪುನಃ ನೀರು ಬೇಕೆಂದು ಕೇಳಿದೆ. ಕ್ಯಾಮರಾ ಸ್ಟಾಂಡಿಗೆ ಜೋತು ಹಾಕಿದ್ದ ಚೀಲದಿಂದ ಒಂದು ಬಾಟಲ್ ಎಳೆದು ತಂದು “ಸದ್ಯ ಕುಡಿರಿ ಎಂದು ಹೇಳಿ, ಒಬ್ಬ ಹುಡುಗನನ್ನು ಕರೆದು, “ಸರ್‌ಗೆ ಮಿನರಲ್ ವಾಟರ್ ಬಾಟಲ್ ತಂದುಕೊಡು ಎಂದು ಕಳಿಸಿ ಅವರೂ ಹೋದರು. ಕೊಟ್ಟ ಬಾಟಲಲ್ಲಿ ನೀರು ಸ್ವಲ್ಪ ಇದ್ದವು. ಕುಡಿದು ನಿಂತುಕೊಂಡೆ.

    ಚಿತ್ರೀಕರಣ ನಡೆದಿತ್ತುಎಂದಿದ್ದೆನಲ್ಲ… ಗೌಡರವಾಡೇಯ ಮುಂದೆ ಇನ್ನೋವ ಕಾರು ನಿಂತಿತ್ತು. ಅದರ ಮೈಯನ್ನು ಇಬ್ಬರು ಜೀತದಾಳುಗಳು ನೀರಾಕಿ ತೊಳೆಯುತ್ತಿದ್ದರು. ಅಲ್ಲೇ ಕಟ್ಟಿಯ ಮೇಲೆ ಒಬ್ಬ ಹೆಂಗಸು ಬಾರಿಗೆ ಹಿಡಿದು ಕಸ ಬಳಿಯುತ್ತಿದ್ದಳು. ನಟ ಬಿರಾದಾರ ವಾಡೇಯ ಮುಂದೆ ಬಂದುಕುಂತು “ತಾತ ಎಂದು ಕೂಗುತ್ತಾನೆ. ಅದನ್ನು ನೋಡಿ ಬೆರಗಾದ ಜೀತದಾಳುಗಳು “ಏನು ಎಂಬಂತೆ ಕೇಳುತ್ತಾರೆ. ಈ ದೃಶ್ಯದ ಚಿತ್ರೀಕರಣ ನಡೆದಿತ್ತು. start, action ಎಂದ ಕೂಡಲೇ ಎಲ್ಲರಿಗೂ ಉಸಿರು ಬಿಗಿ ಹಿಡಿದು ನಿಂತಂತೆ ಅನುಭವ. ‘cut’ ಅಂದ ಕೂಡಲೇ ಉಸಿರು ಬಿಟ್ಟು ನಿರುಮ್ಮಳಾಗುವುದು ಕಂಡಿತು. ಇನ್ನೊವಾ ಕಾರ್ ಪಕ್ಕದ ಕಟ್ಟೆಯ ಮೇಲೆ ನಿಂತು ಕಸಬಳಿಯುವ ಹೆಂಗಸು sಣಚಿಡಿಣ ಂಛಿಣoiಟಿ,‘ಛಿuಣ ಕೇಳಿಕೊಂಡು ಅಭಿನಯಿಸುವುದು, ಬಾರಿಗೆ ಕೆಳಗೆ ಹಾಕಿ ನಿಲ್ಲುವುದು, ಮತ್ತೆ ಅಭಿನಯಕ್ಕೆ ತೊಡಗುವದನ್ನು ನೋಡಿ ಗಾಭರಿಯಾಯ್ತು. ಆಕೆ ಏಳೆಂಟು ಸಲ ಇವರ ಸೂಚನೆಗೆ ಅನುಗುಣವಾಗಿ ಅಭಿನಯ ಮಾಡುತ್ತಿದ್ದಳು. ಆ ದೃಶ್ಯದ ಚಿತ್ರೀಕರಣ ಒಂದು ತಾಸು ನಡೆಯಿತು. ಗಿರೀಶ ಕಾಸರವಳ್ಳಿ ನನ್ನ ಬಳಿ ಬಂದು “ಹೇಗನಸ್ತೀದೆ? ಎಂದು ಕೇಳಿದರು. ‘ಬಹಳ ಸಲ ಅಭಿನಯ ಮಾಡಿಸಿದಿರಿ. ಅದನ್ನ ಶೂಟ್ ಮಾಡಿದ್ರಿ. ಸರ್, ಆದ್ರೆ ಯಾವುದು ಓ.ಕೆ. ಆಯ್ತು ಅಂತ ತಿಳಿಲಿಲ್ಲ ಎಂದು ಕೇಳಿದೆ. ‘ಅಯ್ಯೋ ಅದೆಲ್ಲ ಎಡಿಟಿಂಗ್ ಟೈಮ್ ನಿರ್ಧಾರ ಆಗುತ್ತೆ ಎಂದು ಹೇಳಿ ‘ನಿಮಗೆ ಬೋರಾಯ್ತೇನು? ಹಿಂದೆ ಯು.ಆರ್. ಅನಂತಮೂರ್ತಿ, ಕೆ.ವಿ. ಸುಬ್ಬಣ್ಣನವರೂ ಶೂಟಿಂಗ್ ನೋಡಲು ಬಂದು, ‘ಬೋರಾಯ್ತು ಎಂದು ಹೋಗಿದ್ದರು ಎಂದು ನಕ್ಕರು. ಹೊಸ ದೃಶ್ಯದ ಚಿತ್ರೀಕರಣ ಆರಂಭಿಸಲು ಗಿರೀಶ ಕಾಸರವಳ್ಳಿ, ಸಾವನ್, ರಾಮಚಂದ್ರ ಅವರೆಲ್ಲ ಸೇರಿಕೊಂಡು ಚರ್ಚೆಗೆ ನಿಂತರು. ವಾಡೆಯಲ್ಲಿ ಪಡಸಾಲೆಯೊಳಗೆ ಚಿತ್ರೀಕರಣಕ್ಕೆ ಸಿದ್ಧತೆಗಳು ನಡೆದಿದ್ದವು. ಕೆಲಸಗಾರರೆಲ್ಲ ಯಂತ್ರದಂತೆ ಕೆಲಸಕ್ಕೆ ತೊಡಗಿದರು. ಶೂಟಿಂಗ್ ನೋಡಲು ಬಹಳ ಜನ ವಾಡೆಯ ಕಾಂಪೌಂಡ್ ಒಳಗೆ ಬಂದಿರಲಿಲ್ಲ. ನಿನ್ನೆ, ಮೊನ್ನೆ ಬಂದು ಹೋಗಿದ್ದಿರಬಹುದು. ಆದರೂ ಯುವಕರು, ರೈತರು, ಹೆಂಗಸರು ಬಂದಿದ್ದರು. ‘ಈ ಸಿನಿಮಾದಾಗ ಹೀರೋ ಯಾರ್ರೀ ಎಂದು ಯುವಕರು ಕೂಗಿ ಕೇಳುತ್ತಿದ್ದರು. ಅವರ ಜೊತೆಗಿದ್ದ ನನಗೆ ಇದು ಹೀರೋ, ಹೀರೋಯಿನ್ ಇರುವ, ಹಾಡು, ಹೊಡೆದಾಟ, ಪ್ರೇಮ ಇರುವ ಸಿನಿಮಾ ಅಲ್ಲ ಎಂದು ವಿವರಿಸಲು ಮನಸ್ಸಾಗಲಿಲ್ಲ. ನನಗೆ ನೀರು ಕುಡಿಯಬೇಕೆನಿಸಿತು. ವಾಡೇಯಿಂದ ಹೊರ ಬಂದೆ. ಅಲ್ಲಿ ಅಂಗಡಿಗಳು ಕಾಣಿಸಲಿಲ್ಲ. ಅಷ್ಟರಲ್ಲಿ ಸತ್ತವನ ಹೆಣದ ಮೆರವಣಿಗೆ ಬಂತು. ನಾನು ವಾಡೆಯೊಳಗೆ ಸರಿದುಕೊಂಡೆ.

    ಅಕ್ಟೋಬರ್‌ 2 ರಿಂದ ಬೂಸಾನ್‌ ಚಿತ್ರೋತ್ಸವ ಆರಂಭ

    ಸಿನಿಮಾ ತಂಡದ ಒಂದು ಹುಡುಗಿ ಪ್ಯಾಂಟ್, ಟೀಶರ್ಟ ಧರಿಸಿದ್ದ ಆಕೆ ಕೈಯಲ್ಲಿ ಕ್ಯಾಮೆರಾ ಹಿಡಿದು ಮೆರವಣಿಗೆ ಕಡೆಗೆ ಓಡಿದಳು. ಗಿರೀಶ ಕಾಸರವಳ್ಳಿ ಅವರು ಆ ಮೆರವಣಿಗೆಯನ್ನು ಶೂಟ್ ಮಾಡಲು ಹೇಳಿ ಕಳಿಸಿರಬಹುದೆಂದು ಭಾವಿಸಿದೆ. ಯಾಕೆಂದರೆ ನನ್ನ ಕಥೆಯಲ್ಲಿ ಆ ಸನ್ನಿವೇಶ ಇತ್ತು. ಅಲ್ಲಿಗೆ ಯಾಕೋ ಬಂದು ನನ್ನನ್ನು ನೋಡಿದ ಪ್ರಸನ್ನಕುಮಾರ್ ‘ಬನ್ನಿ ಸರ್, ಒಳಗೆ ಕುಳಿತುಕೊಳ್ಳಿ ಅಂದರು. ‘ನನಗೆ ನೀರುಬೇಕಾಗಿತ್ತು ಎಂದು ಬಹಳ ಸಂಕೋಚದಿಂದ ಮತ್ತೆ ಕೇಳಿದೆ. ಒಂದು ಹುಡುಗನನ್ನು ಕರೆದು ‘ಸರ್‌ಗೆ ಹೊಸ ಬಾಟಲ್ ನೀರು ತಂದುಕೊಡು, ಬೇಗ ತಂದಕೊಡು ಎಂದು ಆಜ್ಞೆ ಮಾಡಿ ಅವರು ಹೋದರು.ಆ ಹುಡುಗ ‘ಸರ್, ಎರಡು ಲೀಟರ್ ನೀರಿನ ಬಾಟಲ್ ತರ‍್ತೀನಿ ಅಂತ ಹೇಳಿ ಹೋದ. ಅತ್ತಕಡೆ ಚಿತ್ರೀಕರಣ ನಡೆದಿತ್ತು. ಅದನ್ನು ನೋಡುತ್ತ ನಿಂತೆ. ಹತ್ತಾರು ಟೇಕ್‌ಗಳಾದವು. ಚಹಾ ಬಂತು. ಕುಡಿಯುತ್ತಲೇ ಮುಂದಿನ ದೃಶ್ಯದ ಚರ್ಚೆ ನಡೆಯಿತು. ಸಾವನ್ ಸ್ಥಳದಲ್ಲಿ ಏನೇನಿರಬೇಕು ಎಂದು ಹೇಳುತ್ತಿದ್ದರು. ಆ ದೃಶ್ಯದಲ್ಲಿ ಏಳೆಂಟು ನಟರು ಕಾಣಿಸಿಕೊಳ್ಳಬೇಕಿತ್ತು. ಅವರೆಲ್ಲ ಸಾವನ್ ನಿರ್ದೇಶನದಂತೆ ಅಭಿನಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆ ನಟರು ಸ್ಥಲೀಯ ಕಲಾವಿದರಾಗಿದ್ದರು. ಅವರು ಆಡುವ ಮಾತುಗಳು ಅಣ್ಣಿಗೇರಿಯ ಆಡು ನುಡಿಗಳಾಗಿದ್ದವು. ಬಿಳಿ ಅಂಗಿ, ಬಿಳಿ ಪಂಜೆ, ಹೆಗಲಿಗೊಂದು ಸೆಲ್ಲೆ ಧರಿಸಿದ್ದರು. ‘ಈ ಡ್ರಸ್ ನಡಿತೈತೇನ್ರೀ ಸರ ಎಂದು ಸಾವನ್ ಅವರನ್ನು ಕೇಳುತ್ತಿದ್ದರು. ಒಬ್ಬ ನಟ ಬಂದು, ‘ನಂದು ಡ್ರಸ್ ಮಾಸ್ಯಾದ ಸರ, ಮನಿಗೆ ಹೋಗಿ ಹೊಸದು ತರ‍್ತೀನ್ರೀ ಅಂದ. ‘ಬೇಡ್ರಿ. ಶೂಟಿಂಗ್ ಸ್ಟಾರ್ಟ ಆಗುತ್ತೆ. ನೀವು ಮನೆಗೆ ಹೋದ್ರೆ ಹೇಗೆ? ಡ್ರಸ್ ಸರಿಯಿದೆ ಸಾಕು ಎಂದು ಹೇಳಿದರು. ಚಿತ್ರೀಕರಣಕ್ಕೆ ಸಿದ್ಧತೆ ನಡೆದಿತ್ತು.

    ಕಥೆಯಲ್ಲಿ, ಗೌಡರಿಗೆ ಊರಿನ ಕೆಲವು ಜನ ಭೂಮಿ ಮಾರುವ ಬಗ್ಗೆ ಚರ್ಚೆ ಬರುತ್ತದೆ. ಆ ದೃಶ್ಯದ ಚಿತ್ರೀಕರಣ ನಡೆಯಬೇಕಿತ್ತು. ಕ್ಯಾಮರಾ ಚಲಿಸಲು ಹಳಿ ಹಾಕಿದ್ದರು. ಕ್ಯಾಮರಾ ಫಿಕ್ಸ ಮಾಡಿ ನೋಡುತ್ತದ್ದರು. ಆ ದೃಶ್ಯದಲ್ಲಿ ಬರುವ ನಟರನ್ನು ಕೂಡಿಸಿ, ಅವರ ನಟನೆ ಬಗ್ಗೆ ಎಲ್ಲ ಸೂಚನೆಗಳನ್ನು ನೀಡಲಾಯಿತು. ಗಿರೀಶ ಕಾಸರವಳ್ಳಿ, ಸಾವನ್ ಸೇರಿ ಅವರವರ ಅಭಿನಯ ಹೀಗಿರಬೇಕು ಎಂಬುದನ್ನು ಅರ್ಧ ಗಂಟೆ ಹೇಳಿದರು. ಗಿರೀಶ ಕಾಸರವಳ್ಳಿ ಅವರು ಅಭಿನಯ ಮಾಡಿ ತೋರಿಸುತ್ತ್ತಿರಲಿಲ್ಲ. ಸಂದರ್ಭವನ್ನು ಹೇಳಿ, ಅಲ್ಲಿ ಅವರ ಅಭಿನಯ ಹೀಗಿರಬೇಕು ಎಂದು ವಿವರಿಸುತ್ತಿದ್ದರಷ್ಟೆ. ಆ ದೃಶ್ಯದಲ್ಲಿ ಹೆಚ್ಚು ಉತ್ತರ ಕರ್ನಾಟಕದ ನಟರು ಪಾಲ್ಗೊಂಡಿದ್ದರು. ಎಲ್ಲರೂ ಹಳ್ಳಿಗರು. ‘start’ಅಂದಾಗ ಅಲ್ಲಿ ಎಲ್ಲರಿಗೂ ಅಭಿನಯಿಸುವುದಿತ್ತು. ಆದರೆ ಕ್ಯಾಮರಾವು ಅದರ ಪಾಡಿಗೆ ಅದು, ಅದರ ಒಡೆಯ ರಾಮಚಂದ್ರನ ನೇತೃತ್ವದಲ್ಲಿ, ಕಾಸರವಳ್ಳಿಯ ಆಣತಿಯಂತೆ ಕೆಲಸ ಶುರು ಮಾಡಿತ್ತು. ಆ ದೃಶ್ಯದಲ್ಲಿ ಒಬ್ಬ, ಎದ್ದು ಬಂದು ಬಾಯಿಯಲ್ಲಿದ್ದ ಎಲೆಅಡಿಕೆಯನ್ನು ಉಗುಳುವುದಿತ್ತು. ಇನ್ನೊಬ್ಬ ಎಲೆಅಡಿಕೆ ತಟ್ಟಿಯನ್ನು ಹಿಡಿದು ಕುಂತವರಿಗೆ ಸರಬರಾಜು ಮಾಡುವುದಿತ್ತು. ಒಂದು ಕಡೆ ಇಬ್ಬರು ಕುಂತು ಮಾತಾಡುವುದಿತ್ತು. ಏನೇನೋ ಹಲವರಿಗೆ, ಅಲ್ಲಿ ಅವರದೇ ಆದ ಅಭಿನಯವಿತ್ತು. ‘start’ ಅಂದಾಗ ಕೆಲವರು ಅಭಿನಯ ಮಾಡುತ್ತಿದ್ದರೆ, ಕೆಲವರು ಕ್ಯಾಮರಾ ನೋಡುತ್ತ ನಟನೆ ಮರೆಯುವುದು ಮಾಡುತ್ತಿದ್ದರು. ಗಿರೀಶ ಕಾಸರವಳ್ಳಿ ಅವರು ‘ನಿಮಗೆ ಏನು ಮಾಡಲು ಹೇಳಿತ್ತು? ಬೇರೆ ಕಡೆ ಗಮನಕೊಡಬೇಡಿ. ನಿಮ್ಮ ನಟನೆ ಏನೆಂದು ನಾನು ಹೇಳಿದ್ದೇನೆ. ಅದನ್ನು ನಿಮ್ಮ ಪಾಡಿಗೆ ‘ಂಛಿಣioಟಿ ಅಂದ ಕೂಡಲೇ ಶುರು ಮಾಡಿ ಎಂದು ಕೋಪದಲ್ಲಿ ತಾಳ್ಮೆ ಸೇರಿಸಿ ಹೇಳುತ್ತಿದ್ದರು. ಅದು ನಡದೇ ಇತ್ತು. ನಾನು ವಾಡೆಯ ಮುಂದಿನ ಬಯಲಲ್ಲಿ, ಹುಡುಗರು ಹಿಡಿದಿದ್ದ ಬಿಳಿಯ ಅಗಲವಾದ ಬೋರ್ಡುಗಳ ನೆರಳಿಗೆ ನಿಂತು ನೋಡುತ್ತಿದ್ದೆ. ಆ ಬಿಳಿಯ ಬೋರ್ಡುಗಳನ್ನು ಬೆಳಕಿಗಾಗಿ ನಿಲ್ಲಿಸಿದ್ದರು. ಅಷ್ಟರಲ್ಲಿ ಸತ್ತ ಹೆಣದ ಮೆರವಣಿಗೆಯನ್ನು ಶೂಟ್ ಮಾಡಲು ಹೋದ ಹುಡುಗಿ ವಾಡೆಗೆ ಬಂದು, ಇಲ್ಲಿ ನಡೆದ ಶೂಟಿಂಗ್ ಕೆಲಸಕ್ಕೆ ನಿಂತಳು. ನಿರ್ದೇಶಕರಿಗೆ, ಕ್ಯಾಮರಾಮನ್‌ಗೆ ನೀರು, ಚಹಾದ ಸರಬರಾಜು ಆಗಾಗ ನಡೆಯುತ್ತಿತ್ತು. ಅವರಿಬ್ಬರು ಯಂತ್ರದಂತೆ ಕಂಡರು. ಬೆಳಕು ಬೀಳಲು ಬಿಳಿ ಬಣ್ಣದ ದೊಡ್ಡ ಬೋರ್ಡುಗಳನ್ನು ಹಿಡಿದಿದ್ದ ಇಬ್ಬರು ಹುಡುಗರು, ಶೂಟಿಂಗ್ ಕೆಲಸದಲ್ಲಿ ಪಾಲ್ಗೊಂಡಿದ್ದ ಇನ್ನೊಬ್ಬ ಹುಡುಗನನ್ನು ಕುರಿತು ಗೇಲಿ ಮಾಡುತ್ತಿದ್ದರು. ಆ ಹುಡುಗನೂ ಸಿನಿಮಾ ಚಿತ್ರೀಕರಣದ ಗುಂಪಿನವನೇ. ಮೊನ್ನೆ ಮೊನ್ನೆವರೆಗೆ ಬೆಳಕು ಹಿಡಿವ ಕೆಲಸದಲ್ಲಿದ್ದು, ಈಗ ಬಡ್ತಿ ಪಡೆದು, ಶೂಟಿಂಗ್ ನಡೆವ ಸ್ಥಳದಲ್ಲಿ ಏನೇನಿರಬೇಕು ಅದನ್ನು ಚಿತ್ರಕಥೆಯಲ್ಲಿದ್ದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ. ಸಾವನ್ ಅಂಥವರನ್ನು ಪ್ರೀತಿಯಿಂದ, ಸಲಿಗೆಯಿಂದ ಗದರಿಸಿ ಕೆಲಸ ಮಾಡುತ್ತಿದ್ದರೆಂದು ಕಾಣುತ್ತದೆ. ಆ ಹುಡುಗನ ಪರದಾಟವನ್ನು ನನ್ನ ಪಕ್ಕದಲ್ಲಿದ್ದ ಬೆಳಕು ಹಿಡಿದಿದ್ದ ಹುಡುಗರು ನೋಡುತ್ತ ಬಿದ್ದು ಬಿದ್ದು ನಗುತ್ತಿದ್ದರು. ನಾನು ಶೂಟಿಂಗ್ ನೋಡದೆ, ಈ ಹುಡುಗರ ತಮಾಷೆ ನೋಡತೊಡಗಿದೆ.

    ಹಳ್ಳಿಗರು ಮತ್ತು ಗೌಡರನಡುವೆ ಭೂಮಿ ಮಾರುವ-ಕೊಳ್ಳುವ ಮಾತು ಕಥೆನಡೆದಾಗಮನೆಯೊಳಗಿನಿಂದ ಮಠದಯ್ಯನಪಾತ್ರಧಾರಿ ಬಂದು ಇಣುಕಿ ನೋಡುವ ದೃಶ್ಯದ ಶೂಟಿಂಗ್ ಶುರುವಾಯ್ತು. ಆ ಪಾತ್ರವನ್ನು ಬ್ರಹ್ಮಾನಂದ ಅವರು ಮಾಡಿದ್ದರು. ವಾಡೆಯ ಬಲಗಡೆ ಕೋಣೆಯಿಂದ ಅವರು ಬಂದು ನೋಡಿ ಹೋಗುವುದನ್ನು ಹತ್ತಾರು ಸಲ ಶೂಟ್ ಮಾಡಿದರು. ಅದಾದ ಮೇಲೆ ಊಟಕ್ಕೆಂದು ಕೆಲಸ ಬಿಟ್ಟು ಎದ್ದರು. ಆಗ ನಾನು ಅಣ್ಣಿಗೇರಿಯ ಆ ವಾಡೆಯನ್ನು ಸ್ವಲ್ಪ ಒಳ-ಹೊರಗೆ ನೋಡಿದೆ. ನಮ್ಮ ಉತ್ತರ ಕರ್ನಾಟಕವು ಸಾಂಸ್ಕೃತಿಕವಾಗಿ ಶ್ರೀಮಂತ ನಾಡು ಎಂದು ಹೇಳುವುದು ನೆನಪಾಯಿತು. ಈ ವಾಡೆ ಈಗಲೂ ಸುಂದರವಾಗಿ ನಿಂತಿದೆ. ಆದರೆ ಅದರ ಕಾಳಜಿಯನ್ನು ಅದರ ಸಂಬಂಧಿಕರು ಯಾರೂ ಮಾಡಿದಂತೆ ಕಾಣಲಿಲ್ಲ. ವಾಡೆಯ ಮುಂದಿನ ಬಯಲ ಅಂಗಳವಂತೂ ಹಾಳುಹಾಳು. ಅದಕ್ಕೊಂದು ಕಾಂಪೌಂಡ್ ಗೋಡೆ ಇಲ್ಲ. ರಸ್ತೆ ಬಂದಿಯ ಮಣ್ಣಿನ ಚಿಕ್ಕ ಮನೆಗಳ ಸಾಲುಗಳ ಹಿಂದೆ ವಾಡೆಯಿದೆ. ಈ ಸಾಲು ಮನೆಗಳೇ ಕಾಂಪೌಂಡ್ ಗೋಡೆಯಾಗಿದೆ. ಆದರೆ ಈಗ ಈ ಮನೆಗಳು ಬಿದ್ದು ಹೋಗಿವೆ. ಅಣ್ಣಿಗೇರಿಯ ಈ ವಾಡೆಯನ್ನು ಕಾಳಜಿಯಿಂದ ರಕ್ಷಿಸಿ ಪ್ರೇಕ್ಷಣಿಯ ಸ್ಥಳ ಮಾಡಬಹುದಲ್ಲ ಅನ್ನಿಸಿತು. ಉತ್ತರ ಕರ್ನಾಟಕದ ಜನರು ಮೈಗಳ್ಳರು. ಮನೆ ಮುಂದಿನ ಅಂಗಳವನ್ನು ಹಸನವಾಗಿ ಇಟ್ಟುಕೊಳ್ಳುವುದಿಲ್ಲ ಎಂದು ನನಗೆ ಗೊತ್ತು. ಈ ಸಿನಿಮಾದ ಶೂಟಿಂಗ್ ಪೂರ್ವದಲ್ಲಿ ದೊಡ್ಡ ಮನೆಗಳನ್ನು ನೋಡಲು ಹೋದಾಗ ಕೃಷ್ಣಾನದಿ ದಂಡೆಯ ಮೇಲೆ ಬೆಂಡೆಗಂಬಳಿ ಎಂಬ ಊರಿದೆ. ಅಲ್ಲಿ ಒಂದೇ ಊರಲ್ಲಿ ದೊಡ್ಡದೊಡ್ಡ ಎಂಟು ಕಲ್ಲಿನ ಮನೆಗಳಿವೆ. ಒಂದೊಂದು ಮನೆಯನ್ನು ಹೊಕ್ಕರೆ ನೋಡಲು ಎರಡು ತಾಸುಬೇಕು. ಆದರೆ ಆ ಮನೆಗಳನ್ನು ಒಟ್ಟಿಗೇ ಆ ಊರಲ್ಲಿ ಯಾಕೆ ಕಟ್ಟಿಸಲಾಯಿತು? ಯಾರು ಕಟ್ಟಿಸಿದರು? ಯಾವಾಗ ಕಟ್ಟಿಸಿದರು? ಎಂಬ ಮಾಹಿತಿಗೆ ಯಾರಿಂದ ಉತ್ತರವಿಲ್ಲ. ಓಡಾಡುತ್ತಿದ್ದರೆ ಪುರಾತನ ನಗರದಲ್ಲಿ ಓಡಾಡಿದ ಕಲ್ಪನೆ ಬರುತ್ತಿತ್ತು. ಆದರೆ ಈಗ ಮನೆಗಳಲ್ಲಿ ಮನೆಮಂದಿಯಿಲ್ಲ. ಮನೆಕಾಯಲು ಒಂದೋ ಎರಡೋ ಆಳುಗಳು. ಕೆಲವು ಮನೆಗಳಲ್ಲಿ ಸಂಸಾರ ಇದ್ದರೂ ನಿಟ್ಟುಸಿರು ಬಿಡುತ್ತಿದ್ದರು.ಅವರಿಗೆ ಆ ದೊಡ್ಡ ಮನೆಗಳೇ ಶಾಪವಾಗಿದ್ದವು. ಕೆಲವು ಮನೆಗಳಲ್ಲಿ ಇಸ್ಪೀಟ್ ಆಟಗಳು ನಡೆಯುತ್ತಿದ್ದವು. ಆ ಊರನ್ನು ಸಂರಕ್ಷಿಸಿದರೆ ದೊಡ್ಡ ಪ್ರವಾಸಿ ತಾಣ ಆಗುತ್ತದೆ. ಆದರೆ ಇದನ್ನು ಮಾಡುವವರ‍್ಯಾರು? ಎಂದು ಚಿಂತಿಸಿದ್ದೆ. ಅಣ್ಣಿಗೇರಿ ವಾಡೆಗೂ ಸಂರಕ್ಷಣೆ ಎಂಬುದೇ ಇರಲಿಲ್ಲ. ಹೀಗೆ ನಿಂತು ಯೋಚಿಸುತ್ತಿದ್ದಾಗ ಗಿರೀಶ ಕಾಸರವಳ್ಳಿ, ರಾಮಚಂದ್ರ ಊಟಕ್ಕೆ ಕರೆದುಕೊಂಡು ಹೋದರು. ಊಟ ಮಾಡುತ್ತ ಮುಂದಿನ ಸನ್ನಿವೇಶದ ಶೂಟಿಂಗ್ ಕುರಿತು ಅವರಿಬ್ಬರು ಚರ್ಚೆ ಮಾಡುತ್ತಿದ್ದರು. ಅಲ್ಲಿ ನನಗೆ ನೀರಿನ ಬಾಟ್ಲಿ ಕೊಡುತ್ತೇನೆಂದ ಹುಡುಗ ಊಟದ ಉಸ್ತುವಾರಿ ನೋಡುತ್ತಿದ್ದನೆಂದು ಕಾಣುತ್ತಿತ್ತು. ಆತ ನನ್ನ ಬಳಿ ಬರಲು ಹಿಂಜರಿಯುತ್ತಿದ್ದ. ಊಟ ಮುಗಿದು ನೀರಿಗಾಗಿ ಕಾಯ್ದೆ. ಪ್ರಸನ್ನಕುಮಾರ ಅವರ ನಿರ್ದೇಶನದಂತೆ ಅದೇ ಹುಡುಗ ನೀರಿನ ಬಾಟಲ್ ತಂದು ಮೆತ್ತಗೆ, ‘ಈ ಬಾಟಲ್ ಇಟ್ಟುಕೊಳ್ಳಿ ಸರ್ ಅಂದ. ಅದರ ತಳದಲ್ಲದ್ದ ನೀರು ಕುಡಿದು, ಖಾಲಿ ಬಾಟಲ್‌ನ್ನು ಅಲ್ಲೇ ಇಟ್ಟೆ. ಅಷ್ಟರೊಳಗೆ ಗಿರೀಶ ಕಾಸರವಳ್ಳಿ, ರಾಮಚಂದ್ರ ಹೋಗಿದ್ದರು. ಊಟಕ್ಕೆ ವ್ಯವಸ್ಥೆ ಮಾಡಿದ್ದ ಮನೆಯಲ್ಲಿ ನಟ ಬಿರಾದಾರ ಇದ್ದರು. ಆತ ಮೇಕಪ್ಪಿನಲ್ಲಿಯೇ ಇದ್ದ. ನನ್ನ ಕಥೆಯ ವಜ್ರಪ್ಪ ನೆನಪಿಗೆ ಬರಲಿಲ್ಲ. ಬದಲಾಗಿ ವಜ್ರಪ್ಪ (ಸಿನಿಮಾದಲ್ಲಿ ಈರ‍್ಯಾ)ನೇ ಕಂಡಂತಾಯ್ತು. ಅಷ್ಟೇ ಅಲ್ಲ ನನ್ನೂರಿನಲ್ಲಿ ನಾನು ಚಿಕ್ಕವನಿದ್ದಾಗ ಬದುಕಿದ್ದ ವಜ್ರಪ್ಪನನ್ನೇ ನೋಡಿದಂತಾಯ್ತು, ಆ ಬಿರಾದಾರ ನಟನನ್ನು ನೋಡಿದಾಗ. ನಾನು ನಟ ಬಿರಾದಾರ ಅವರನ್ನು ಮಾತಾಡಿಸಲಿಲ್ಲ. ಅಲ್ಲೇ ಬ್ರಹ್ಮಾನಂದ ಇದ್ದರು. ಕೆಲವರು ಸ್ಥಳೀಯ ನಾಟಕ ಕಲಾವಿದರೂ ಇದ್ದರು. ನಾನು ಈ ಸಿನಿಮಾದ ಕಥೆಗಾರ ಎಂದು ಯಾರಿಗೂ ಹೇಳಲಿಲ್ಲ, ಇರಲಿ.

    ಊಟದ ನಂತರಪುನಃ ವಾಡೇಯ ಪಡಸಾಲೆಯಲ್ಲಿ ಈ ಹಿಂದಿನ ದೃಶ್ಯದ ಮುಂದುವರಿದ ಚಿತ್ರೀಕರಣ ನಡೆದಿತ್ತು. ಮಾತಾಡುವ ಪಾತ್ರದ ಮುಖ ಮಾತ್ರ ಶೂಟ್ ಮಾಡುತ್ತಿದ್ದರು. ಆಗ ಆ ದೃಶ್ಯದಲ್ಲಿದ್ದ ಇನ್ನತರ ನಟರ ದೇಹದ ಅರೆ ಭಾಗಗಳೂ ಕಾಣಿಸುವಂತೆ ಕೂಡಿಸಿ ಶೂಟ್ ಮಾಡುತ್ತಿದ್ದರು. ಅದೂ ದೀರ್ಘವಾಗಿ ಚಿತ್ರೀಕರಣ ನಡೆಯಿತು. ನಂತರ ಬೇರೆ ದೃಶ್ಯದ ಚಿತ್ರೀಕರಣಕ್ಕೆ ಸಿದ್ಧತೆ ನಡೆದಾಗ, ನಾನು ಜನರ ನಡುವಿದ್ದೆ. ಅಲ್ಲಿ ನಟರೂ ಬಂದರು. ‘ಇವನಪ್ಪನ, ಅದೆಷ್ಟತ್ತು ತೆಗಿತಾರ ನೋಡ್ರಿ? ನನ್ನ ಭೂಜ ಮಾತ್ರ ಕಾಣತೈತಂತ. ಅಷ್ಟಕ್ಕ ಎಷ್ಟು ಹೊತ್ತು ಕುಂತ್ಗಬೇಕು? ಸಿನಿಮಾದಾಗ ಅಂದೆಂಗ ಪಾರ್ಟು ಮಾಡ್ತರೋ. ನಾಟಕದಾಗ ಪಟ್‌ಪಟ್ ಅಂತ ಮಾತು, ನಟನೆ ಎಲ್ಲ ಪಟಗದಿಸೆ ಮುಗುತ್ಯಾವ್ರಿ ಅಂತ ಬೇಸರದಿಂದ ಹೇಳುತ್ತಿದ್ದ. ಆ ನಟರನ್ನು ಶೂಟಿಂಗ್ ನೋಡಲು ಬಂದವರು ನೋಡಿ ನಿರಾಶೆಯಿಂದ, ‘ಹೀರೋ ಯಾರ್ರೀ ಈ ಸಿನಿಮಾದಾಗ? ಎಂದು ಹೇಳುವ ಪ್ರಶ್ನೆಗೆ ಉತ್ತರ ಸಂಜೆಯಾದರೂ ಸಿಕ್ಕಿರಲಿಲ್ಲ. ನನಗೆ ಅಚ್ಚರಿ ಮೂಡಿಸಿದ ವಿಷಯವೆಂದರೆ, ಚಿತ್ರೀಕರಣ ನಡೆಯುವ ಸ್ಥಳದಲ್ಲಿ ನೆಲಕ್ಕೆ ನೀರು ಹಾಕುವುದು. ಒಬ್ಬ ಪೈಪನಿಂದ ನೆಲಕ್ಕೆ ತಳಿ ಹೊಡೆಯುವಂತೆ ನೆಲ ತೋಯಿಸುವುದನ್ನು ಆಗಾಗ ಮಾಡುತ್ತಲೇ ಇದ್ದ.ನೆಲಕ್ಕೆ ನೀರು ಯಾಕೆ ಹೊಡೆಯುತ್ತಾರೆಂದು ಕೇಳಿ ತಿಳಿದುಕೊಂಡೆ.

    ಮನೆಯೊಳಗಿನಿಂದ ಚಂಡೊಂದು ಉರಳಿಕೊಂಡು ಹೊರಗೆ ಬರುತ್ತದೆ. ಅದನ್ನು ನೋಡಿದ ಇಬ್ಬರು ರೈತರು, ಬಗ್ಗಿ ಚಂಡನ್ನು ಎತ್ತಿಕೊಂಡು ಮನೆಯಿಂದ ಎದುರಿಗೆ ಬರುವ ಗೌಡನಿಗೆ ಚಂಡು ಕೊಡುತ್ತಾರೆ. ಗೌಡ ಚಂಡನ್ನು ‘ಪಿಂಕಿ ಎಂದು ಕರೆದು ಒಳಗೆ ಎಸೆಯುತ್ತಾನೆ. ಇಷ್ಟನ್ನು ಚಿತ್ರಿಸಲು ಗಿರೀಶ ಕಾಸರವಳ್ಳಿ, ರಾಮಚಂದ್ರ ಒಂದು ಗಂಟೆ ತೆಗೆದುಕೊಂಡರು. ಆ ದಿನ ಗಾಳಿಯಿತ್ತು. ಉಳಿದ ಚಂಡು ಗಾಳಿಗೆ ಮುಂದೋಡಿ ಬಿಡುತ್ತಿತ್ತು; ಕ್ಯಾಮರಾದ ನಿರ್ದಿಷ್ಟ ಅಳತೆ ಮೀರಿ ಹೋದರೆ ಅಲ್ಲಿಗೆ ‘ಕಟ್ ಎಂಬ ಎಚ್ಚರಿಕೆ ಕೊಡುತ್ತಿದ್ದರು. ಗೌಡನ ಪಾತ್ರ ಮಾಡಿದ ವ್ಯಕ್ತಿ ಯಾರೆಂದು ನನಗೆ ತಿಳಿದಿರಲಿಲ್ಲ. ಶೂಟಿಂಗ್ ನೋಡಲು ಬಂದ ಅಣ್ಣಿಗೇರಿ ಹುಡುಗರು ‘ಯಾರ್ರೀ ಈ ಹೀರೋ? ಅಂತ ಕೇಳುತ್ತಲೇ ಇದ್ದರು. ನಾನು ‘ಹೀರೋ ಅಲ್ಲ. ಗೌಡ ಅಂದೆ. ಆಫ್ ಶರ್ಟ, ಪ್ಯಾಂಟ್ ಹಾಕಿದ್ದ ಆತ ಚೂರು ಹೀರೋ ಥರ ಇದ್ದರು. ಬಿಡುವು ಸಿಕ್ಕಾಗಲೆಲ್ಲ ಮೊಬೈಲ್ ಹಿಡಿದು ಕರೆ ಮಾಡುತ್ತ, ಕರೆ ಸಿಕ್ಕರೆ ಮಾತಾಡುವುದು ಮಾಡುತ್ತಿದ್ದ. ‘ಇವರ ಹೆಸರೇನ್ರೀ ಅಂತ ಶೂಟಿಂಗ್ ನೋಡಲು ಬಂದ ಹುಡುಗರು ಮತ್ತೆ ನನ್ನ ಕೇಳಿದರು. ‘ನನ್ಗ ಗೊತ್ತಿಲ್ಲ. ನೀವು ಕೇಳ್ರೀ ಅಂದೆ. ಅಷ್ಟರಲ್ಲಿ ಆ ನಟ ನನ್ನ ಕಡೆ ಚೂರು ನೋಡಿದ. ‘ತಾವು ರಂಗ ಕಲಾವಿದರೇನು? ಎಂದು ಕೇಳಿದೆ. ‘ಏನ್ ರಂಗರ್ರೀ? ಅಂತ ಅನ್ನುತ್ತ ಸಾವನ್ ಅವರು ಕರೆದದ್ದಕ್ಕೆ ಹೋದರು. ‘ಹೀರೋ ಅಲ್ಲ ಬಿಡ್ರಿ, ವಯಸ್ಸಾಗೇತಿ ಅಂದ ಒಬ್ಬ. ಕನ್ನಡ ಸಿನಿಮಾದ ಹೀರೋಗಳು ಚಿಕ್ಕವರು ಇರ‍್ತಾರೇನೋ ಅಂದೆ. ಅವರೆಲ್ಲ ನಕ್ಕರು.

    ಇನ್ನೊಂದು ದೃಶ್ಯದಚಿತ್ರೀಕರಣಕ್ಕೆಸಿದ್ಧತೆಗಳು ನಡೆದವು. ವಾಡೆಯ ಒಳಗೆಜನರನ್ನು ಕೂಡಿಸಿಕೊಂಡು ಜೀಪುಬರುವ ದೃಶ್ಯ.ನೆಲಕ್ಕೆ ನೀರುಬಿಡುವವನ ಕಾಟಹೆಚ್ಚಾಯಿತು. ಪ್ಯಾಂಟಿಗೆ ನೀರು ಸಿಡಿಯುತ್ತವೆಂದು ನಾನು ಅಲ್ಲಿಂದ ದೂರ ಸರಿದು ಬಂದೆ. ವಾಡೆಯ ಒಂದು ಮೂಲೆಯಲ್ಲಿ ಸ್ಥಳೀಯ ಕೆಲಸಗಾರರು ಚಟ್ಟ ವನ್ನು ಕಟ್ಟುತ್ತಿದ್ದರು. ಚಿತ್ರೀಕರಣದ ಹುಡುಗರು ಅಲ್ಲಿಗೆ ಬಂದು ಚಟ್ಟ ದಲ್ಲಿ ಹೆಣ ಸರಿಯಾಗಿ ಕೂತುಕೊಳ್ಳುತ್ತಿದೆಯೋ ಇಲ್ಲವೋ ಎಂಬುದನ್ನು ಟೆಸ್ಟ ಮಾಡಲು, ಒಬ್ಬ ಹುಡುಗನನ್ನು ಅದರಲ್ಲಿ ಕುಳಿತುಕೊಳ್ಳಲು ಕರೆದರು. ಅವನು ಭಯದಿಂದ ಬೇಡವೋ ಎಂದು ದೂರ ಸರಿದ. ಇನ್ನೊಬ್ಬನನ್ನು ಕರೆಯಲಾಯಿತು. ಅವನು ದೂರ ಸರಿಯುತ್ತ, ನಾನು ಬದುಕಿರುವುದು ನಿಂಗೆ ಇಷ್ಟ ಇಲ್ಲ ಕಣೋ ಎಂದ. ಚಟ್ಟದ ಬಗ್ಗೆ ಏನೇನೋ ದಂತ ಕತೆಗಳ ಪ್ರಸ್ತಾಪ ನಡೆಯಿತು. ನನ್ನ ಕತೆಯಲ್ಲಿಯೂ ಮತ್ತು ಸಿನಿಮಾದಲ್ಲ್ಲಿಯೂ ಹೀರೆಗೌಡ ಸಾಯುತ್ತಾನೆ. ಅದರ ದೃಶ್ಯ ಚಿತ್ರೀಕರಣ ನಡೆಯುವದರಲ್ಲಿತ್ತು. ನನಗೆ ಊರಿಗೆ ಹೋಗುವ ನೆನಪಾಯಿತು. ಹುಬ್ಬಳ್ಳಿಯಿಂದ ಹೊಸಪೇಟೆಗೆ ಹೋಗುವ ಹಂಪಿಎಕ್ಸಪ್ರೆಸ್ ಬರುವ ಟೈಮ್ ಆಯ್ತು. ಯಾರಿಗೂ ಹೇಳಲು ಅವಕಾಶ ಸಿಗಲಿಲ್ಲ. ಅವರೆಲ್ಲ ಬಿಜಿ ಇದ್ದರು. ವಾಡೆಯಿಂದ ಹೊರಗೆ ಬಂದೆ. ನಡೆಯುತ್ತ ಬರುವಾಗ ಎಳೆನೀರು ಕಂಡವು, ಕುಡಿದೆ. ಪಂಪ ಬೆಳೆದ ಊರು! ನೆನಪಾಗಿ ನನಗೆ ಮತ್ತೇ ಪುಳಕ. ಊರು ನೋಡಲು ಸಮಯ ಇರಲಿಲ್ಲ. ಆದರೂ ಅರ್ಧಗಂಟೆಯಿತ್ತು. ಇಪ್ಪತ್ತು ರೂಪಾಯಿಗೆ ಒಂದು ಕುದುರೆಟಾಂಗದಲ್ಲಿ ಒಬ್ಬನೇ ಕುಂತು ರೈಲುನಿಲ್ದಾಣಕ್ಕೆ ಬಂದೆ. ಆಗಲೂ ನಿಲ್ದಾಣವು ನಿರ್ಜನವಾಗಿತ್ತು. ರೈಲಿಗಾಗಿ ಕಾಯುತ್ತ ಕುಳಿತೆ.

    ಗಿರೀಶ ಕಾಸರವಳ್ಳಿ, ರಾಮಚಂದ್ರ ಅವರು ದೃಶ್ಯದ ಚಿತ್ರೀಕರಣದಲ್ಲಿತನ್ಮಯ ಆಗುತ್ತಿದ್ದುದು ನನ್ನಕಣ್ಣಿನಮುಂದಮೂಡಿ ಬಂತು. ನಟರಿಗೆಅವರನಟನೆಯನ್ನು ಅಭಿನಯಿಸಿ ತೋರಿಸದೇ, ಸಂದರ್ಭವನ್ನು, ಆ ಸಂದರ್ಭದಲ್ಲಿ ಪಾತ್ರಧಾರಿಯಮನಸ್ಥಿತಿಯನ್ನುವಿವರಿಸಿ ಹೇಳುವುದು ಅದ್ಬುತವಾಗಿ ಕಾಣಿಸಿತು. ಚಿತ್ರೀಕರಣವು ಮನಸ್ಸಿನಲ್ಲಿಪುನಃಮೂಡುವಾಗ ರೈಲುಬರುವಸೂಚನೆಕಂಡಿತು.

    Latest Posts

    spot_imgspot_img

    Don't Miss

    Stay in touch

    To be updated with all the latest news, offers and special announcements.